For Quick Alerts
ALLOW NOTIFICATIONS  
For Daily Alerts

ಸೊಂಪಾದ ಕೂದಲಿಗೆ ಮನೆಯಲ್ಲೇ ತಯಾರಿಸಿ ಕೇಶ ತೈಲ

|

ಬಹುತೇಕ ಹೆಣ್ಣುಮಕ್ಕಳಿಗೂ ನೀಳವಾಗಿ, ಕಪ್ಪಾಗಿ, ದಪ್ಪವಾದ, ಸೊಂಪಾದ ಕೂದಲನ್ನು ಹೊಂದಬೇಕು ಎಂಬ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಅಂಗಡಿಗಳಲ್ಲು ಸಿಗುವ ಎಲ್ಲಾ ತೆರನಾದ ತೈಲಗಳನ್ನು ಖರೀದಿಸಿ ಪ್ರಯೋಗಿಸಿಯೂ ಇರುತ್ತಾರೆ, ಆದರೆ ಇದೆಲ್ಲಾ ಎಷ್ಟು ಸುರಕ್ಷಿತ ಎಂಬ ಗೊಂದಲವೂ ಅವರಲ್ಲಿರುತ್ತದೆ.

Homemade Hair Oils to get Long Hair

ಈ ಎಲ್ಲಾ ಪ್ರಯೋಗಗಳ ನಡುವೆ ಕೆಲವು ತೈಲಗಳು ಕೆಲವರಿಗೆ ಹೊಂದದೆ ಕೂದಲು ಉದುರುವ ಸಮಸ್ಯೆ ಸಹ ಎದುರಾಗಬಹುದು.

ಇದಕ್ಕೆಲ್ಲ ಕಾರಣ ಅವುಗಳಲ್ಲಿರುವ ಸಂರಕ್ಷಕಗಳ ಪ್ರಮಾಣ, ಅವುಗಳ ರಾಸಾಯನಿಕ ಸಂಯೋಜನೆ ಅಥವಾ ಹಾನಿಕಾರಕ ಕೃತಕ ಸುಗಂಧಗಳಾಗಿರಬಹುದು.

ಆದ್ದರಿಂದ ಮನೆಯಲ್ಲೇ ನೀವೆ ಸುಲಭವಾಗಿ ಮನೆಮದ್ದುಗಳ ಮೂಲಕವೇ ಯಾವುದೇ ಹಾನಿ ಇಲ್ಲದೆ ತೈಲಗಳನ್ನು ತಯಾರಿಸಬಹುದು. ಯಾವೆಲ್ಲಾ ಮನೆಮದ್ದುಗಳು ಕೂದಲ ಪೋಷಣೆಗೆ ಹೇಗೆ ಸಹಕಾರಿ ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

1. ಮೆಂತ್ಯ ಎಣ್ಣೆ

1. ಮೆಂತ್ಯ ಎಣ್ಣೆ

ಮೆಂತ್ಯವನ್ನು ಮಸಾಲೆ ಪದಾರ್ಥವಾಗಿ ಬಳಸುವ ಒಂದು ಪ್ರಮುಖ ಅಂಶವಾಗಿದೆ. ಇದರಲ್ಲಿ ಸಾಕಷ್ಟು ಒಔಷಧೀಯ ಗುಣಗಳಿವೆ. ಅಡುಗೆ, ಪಾನೀಯಗಳು ಮತ್ತು ತಂಬಾಕಿನಲ್ಲಿ ಪರಿಮಳಯುಕ್ತವಾಗಿ ಸಹ ಇದನ್ನು ಬಳಸಲಾಗುತ್ತದೆ. ಮೆಂತ್ಯ ಅಥವಾ ಮೆಥಿ ಉತ್ತಮ ಪ್ರಮಾಣದ ಲೆಸಿಥಿನ್ ಅನ್ನು ಹೊಂದಿರುತ್ತದೆ, ಇದು ಕೂದಲನ್ನು ಮೂಲದಿಂದ ಬಲಪಡಿಸುತ್ತದೆ ಮತ್ತು ಮೃದುಗೊಳಿಸಿ ಹೊಳೆಯುವಂತೆ ಮಾಡುತ್ತದೆ.

ಅಲ್ಲದೆ, ಕೂದಲಿನ ಉದ್ದವನ್ನು ಹೆಚ್ಚಿಸಿ, ತಲೆಹೊಟ್ಟು ಸಹ ತೆಗೆದುಹಾಕುತ್ತದೆ.

ಮೆಂತ್ಯ ಎಣ್ಣೆ ತಯಾರಿಸುವ ವಿಧಾನ

ಮೆಂತ್ಯ ಎಣ್ಣೆ ತಯಾರಿಸುವ ವಿಧಾನ

ಸ್ವಲ್ಪ ಪುಡಿ ಮಾಡಿದ ಮೆಂತ್ಯ ಬೀಜಗಳನ್ನು ತೆಗೆದುಕೊಂಡು ಶುದ್ಧ ತೆಂಗಿನ ಎಣ್ಣೆಗೆ ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಸ್ವಲ್ಪ ಬೆಚ್ಚಗೆ ಇರುವಾಗಲೇ ಕೂದಲ ಬುಡಕ್ಕೆ ಇದನ್ನು ಅನ್ವಯಿಸಿ ಉತ್ತಮ ಮಸಾಜ್ ಮಾಡಿ. ಇದನ್ನು ವಾರಕ್ಕೆ ಎರಡು ಬಾರಿ ಅನ್ವಯಿಸುವುದರಿಂದ ನೀಳವಾದ, ಹೊಳಪಿನ ಮೃದು ಕೂದಲು ನಿಮ್ಮದಾಗುತ್ತದೆ.

2. ಮೆಹೆಂದಿ ಎಣ್ಣೆ

2. ಮೆಹೆಂದಿ ಎಣ್ಣೆ

ಗೋರಂಟಿ ಅಥವಾ ಮೆಹೆಂದಿಯಿಂದ ಸಾರದಿಂದ ತೆಗೆದ ಎಣ್ಣೆಯನ್ನು ‘ಮೆಹೆಂದಿ ಎಣ್ಣೆ' ಅಥವಾ ‘ಹಚ್ಚೆ ಎಣ್ಣೆ' ಎಂದೂ ಕರೆಯುತ್ತಾರೆ, ಇದು ಗೋರಂಟಿ ಎಲೆಗಳಿಂದ ತೆಗೆದ ಎಣ್ಣೆಯಾಗಿದೆ. ನೆತ್ತಿ ಮತ್ತು ಕೂದಲಿಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗಳಿಗೂ ಇದು ಹೆಚ್ಚು ಬೇಡಿಕೆಯ ಗಿಡಮೂಲಿಕೆಯ ಪರಿಹಾರವಾಗಿದೆ. ಇದು ಅದ್ಭುತ ನೈಸರ್ಗಿಕ ಕಂಡಿಷನರ್ ಆಗಿದ್ದು ಕೂದಲನ್ನು ದಪ್ಪವಾಗಿಸುತ್ತದೆ.

ಮೆಹೆಂದಿ ಎಣ್ಣೆ ತಯಾರಿಸುವ ವಿಧಾನ

ಮೆಹೆಂದಿ ಎಣ್ಣೆ ತಯಾರಿಸುವ ವಿಧಾನ

ನೀವು ಗೋರಂಟಿ ಪುಡಿಯನ್ನು ಮನೆಯಲ್ಲಿ ಮಾಡಲು ಸಾಧ್ಯವಾಗದಿದ್ದರೆ, ನೀವು ಅದನ್ನು ನಿಮ್ಮ ಹತ್ತಿರದ ಕಿರಾಣಿ ಅಂಗಡಿಯಿಂದ ಖರೀದಿಸಬಹುದು. ತೆಂಗಿನಕಾಯಿ, ಸಾಸಿವೆ, ಎಳ್ಳು (ನಿಮ್ಮ ಆಯ್ಕೆಯ ಪ್ರಕಾರ) ಸುಮಾರು 3 ಸಣ್ಣ ಕಪ್ ಬೇಸ್ ಎಣ್ಣೆಯಲ್ಲಿ ಒಂದು ಅಥವಾ ಎರಡು ಚಮಚ ಗೋರಂಟಿ ಪುಡಿಯನ್ನು ಹಾಕಿ ಮತ್ತು ಅದನ್ನು ಕುದಿಸಿ. ಅದನ್ನು ತಣ್ಣಗಾಗಿಸಿ ಮತ್ತು ಗಾಜಿನ ಜಾರ್ನಲ್ಲಿ ಸುರಿಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೊಮ್ಮೆ ಬಳಸಿ.

3. ನೆಲ್ಲಿಕಾಯಿ ಎಣ್ಣೆ

3. ನೆಲ್ಲಿಕಾಯಿ ಎಣ್ಣೆ

ಸಾಮಾನ್ಯ ಶೀತ, ಕ್ಯಾನ್ಸರ್ ಅಥವಾ ಬಂಜೆತನದಂಥಹ ಅಸಂಖ್ಯಾತ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುವ ನೆಲ್ಲಿಕಾಯಿ ಸಾಮಾನ್ಯವಾದ ಮನೆಮದ್ದಲ್ಲ. ಕೂದಲಿನ ಆರೋಗ್ಯದಲ್ಲುಇದು ತಮ್ಮ ಚಮತ್ಕಾರ ತೋರಬಲ್ಲ ನೈಸರ್ಗಿಕ ಎಣ್ಣೆಯಾಗಿದೆ. ಇನ್ನು ಭಾರತೀಯ ನೆಲ್ಲಿಕಾಯಿಯಲ್ಲಿ (ಫಿಲಾಂಥಸ್ ಎಂಬಿಕಾ) ಎಂಬ ಸಾರಗಳನ್ನು ಹೊಂದಿರುತ್ತದೆ, ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಉದುರುವುದು ಮತ್ತು ಅಕಾಲಿಕ ಬಳಿಕೂಲನ್ನು ತಡೆಯುತ್ತದೆ.

ನೆಲ್ಲಿಕಾಯಿ ಎಣ್ಣೆ ತಯಾರಿಸುವುದು ಹೇಗೆ

ನೆಲ್ಲಿಕಾಯಿ ಎಣ್ಣೆ ತಯಾರಿಸುವುದು ಹೇಗೆ

ಕೆಲವು ಒಣಗಿದ ನೆಲ್ಲಿಕಾಯಿ ತುಂಡುಗಳನ್ನು ಅಥವಾ ಹೊಸದಾಗಿ ಕತ್ತರಿಸಿದ ನೆಲ್ಲಿಕಾಯಿ ತುಂಡುಗಳು ಮತ್ತು ಉತ್ತಮ ಗುಣಮಟ್ಟದ ಸಾಸಿವೆ ಎಣ್ಣೆ ಅಗತ್ಯ ವಸ್ತುಗಳು. ಎರಡನ್ನೂ ಒಟ್ಟಿಗೆ ಕಬ್ಬಿಣದ ಪಾತ್ರೆಯಲ್ಲಿ ಹಾಕಿ ನೆಲ್ಲಿಕಾಯಿ ತುಂಡುಗಳು ಗಾಢ ಕಂದು ಬಣ್ಣ ಬರುವವರೆಗೆ ಕುದಿಸಿ. ಬಾಟಲಿಯಲ್ಲಿ ಸಂಗ್ರಹಿಸಿ ಮತ್ತು ಅಗತ್ಯವಿದ್ದಾಗ ಬಳಸಿ.

4. ತೆಂಗಿನಕಾಯಿ ಮತ್ತು ನಿಂಬೆ ಎಣ್ಣೆ

4. ತೆಂಗಿನಕಾಯಿ ಮತ್ತು ನಿಂಬೆ ಎಣ್ಣೆ

ತೆಂಗಿನ ಎಣ್ಣೆ ಅಥವಾ ಕೊಪ್ರಾ ಎಣ್ಣೆ ಕೊಬ್ಬರಿಯಿಂದ ತೆಗೆದ ಶುದ್ಧ ಎಣ್ಣೆ, ಇದನ್ನು ಅಡುಗೆಗೆ ಸಹ ಬಳಸುತ್ತಾರೆ. ತಾಜಾ ನಿಂಬೆಹಣ್ಣಿನ ಸಿಪ್ಪೆಯಿಂದ ಹೊರತೆಗೆಯಲಾದ ನಿಂಬೆ ಸಾರಭೂತ ತೈಲವು ಸಂಪೂರ್ಣವಾಗಿ ನೈಸರ್ಗಿಕ ಘಟಕಾಂಶವಾಗಿದೆ.

ನಿಂಬೆ ಸಾರಭೂತ ತೈಲವು ಬಳಲಿಕೆಯ ವಿರುದ್ಧ ಹೋರಾಡುತ್ತದೆ, ಖಿನ್ನತೆಗೆ ಸಹಾಯ ಮಾಡುತ್ತದೆ. ನಿಮ್ಮ ಚರ್ಮದ ಹಾನಿಕಾರಕ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ತೆಂಗಿನಕಾಯಿ ಮತ್ತು ನಿಂಬೆ ಎಣ್ಣೆ ತಯಾರಿಸುವುದು ಹೇಗೆ

ತೆಂಗಿನಕಾಯಿ ಮತ್ತು ನಿಂಬೆ ಎಣ್ಣೆ ತಯಾರಿಸುವುದು ಹೇಗೆ

ನಿಮ್ಮ ಅಗತ್ಯಕ್ಕೆ ತಕ್ಕಂತೆ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ತದನಂತರ ಅದಕ್ಕೆ ಕೆಲವು ಹನಿ ನಿಂಬೆ ಎಣ್ಣೆ ಸೇರಿಸಿ. ಇದನ್ನು ಚೆನ್ನಾಗಿ ಬೆರೆಸಿ ಮತ್ತು ಕೂದಲಿನ ಬೇರುಗಳಿಗೆ ವಾರಕ್ಕೆ ಮೂರು ಬಾರಿ ಮಸಾಜ್ ಮಾಡಿ. ಒಂದು ವಾರದೊಳಗೆ, ನೀವು ತಲೆಹೊಟ್ಟು ಮಾಯವಾಗುವುದನ್ನು ನೋಡುತ್ತೀರಿ.

5. ಕರಿಬೇವಿನ ಎಣ್ಣೆ

5. ಕರಿಬೇವಿನ ಎಣ್ಣೆ

ಕರಿಬೇವಿನ ಎಲೆಗಳು ಬೀಟಾ-ಕ್ಯಾರೋಟಿನ್ ಮತ್ತು ಪ್ರೋಟೀನ್‌ಗಳ ಸಮೃದ್ಧ ಮೂಲವಾಗಿದ್ದು, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದು ಅಮೈನೋ ಆಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತವೆ, ಇದು ಕೂದಲ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ನೆತ್ತಿಯನ್ನು ತೇವಗೊಳಿಸುತ್ತದೆ. ಕರಿಬೇವಿನ ಎಲೆಗಳು ಸತ್ತ ಕೂದಲು ಕಿರುಚೀಲಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ, ಇದು ತಲೆಹೊಟ್ಟುಗೆ ಕಾರಣವಾಗಬಹುದು.

ಕರಿಬೇವಿನ ಎಣ್ಣೆ ತಯಾರಿಸುವುದು ಹೇಗೆ

ಕರಿಬೇವಿನ ಎಣ್ಣೆ ತಯಾರಿಸುವುದು ಹೇಗೆ

ಬೆರಳೆಣಿಕೆಯಷ್ಟು ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಸಾಸಿವೆ ಎಣ್ಣೆಯ ಡಬ್ಬದಲ್ಲಿಹಾಕಿ ನಿಮ್ಮದೇ ಸ್ವಂತ ಕರಿಬೇವಿನ ಎಣ್ಣೆಯನ್ನು ತಯಾರಿಸಬಹುದು. ಈ ಮಿಶ್ರಣವನ್ನು ಒಂದು ತಿಂಗಳು ಹಾಗೇ ಇಡಿ, ಸ್ವಲ್ಪ ಸೂರ್ಯನ ಬೆಳಕಿನಲ್ಲಿ ಇಟ್ಟರೆ ಎಣ್ಣೆ ಬಳಸಲು ಸಿದ್ಧವಾಗಿದೆ.

English summary

Homemade Hair Oils to get Long Hair

Here we are discussing about Homemade Hair Oils to get Long Hair. While you cannot be sure of the store-bought hair oil treatments as regard to the amount of preservatives they contain, their chemical composition, or harmful artificial fragrances, you can definitely get better results using these DIY oils for hair care. Read more.
X
Desktop Bottom Promotion