For Quick Alerts
ALLOW NOTIFICATIONS  
For Daily Alerts

ಗುಂಗುರು ಕೂದಲನ್ನು ಇನ್ನಷ್ಟು ಸುಂದರವಾಗಿಸುವ ನೈಸರ್ಗಿಕ ಹೇರ್ ಕಂಡೀಷನರ್

|

ಅನೇಕರು ಗುಂಗುರು ಕೂದಲನ್ನು ಇಷ್ಟಪಡ್ತಾರೆ. ಸ್ಟ್ರೈಟ್ ಕೂದಲು ಇರುವವರು ತಮ್ಮ ಕೂದಲನ್ನು ಕೃತಕವಾಗಿ ಗುಂಗುರು ಮಾಡಿಸಿಕೊಂಡು ಖುಷಿ ಪಡುತ್ತಾರೆ. ಆದರೆ ಅತಿಯಾದ ಸುರುಳಿ ಕೂದಲು ಇರುವವರು ಅದರ ಆರೈಕೆ ಮಾಡಲು ಕಷ್ಟ ಪಡುತ್ತಾರೆ. ಗುಂಗುರು ಕೂದಲಿನ ನಿರ್ವಹಣೆ ಮಾಡಲು ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಅದು ಸಿಕ್ಕು ಗಟ್ಟಿ ಕೂದಲು ತುಂಡಾಗಿ ಹೋಗಬಹುದು, ಸ್ಪ್ಲಿಟ್ಸ್ ಹೇರ್ ಸಮಸ್ಯೆ ಎದುರಾಗಬಹುದು, ಕೂದಲು ಡ್ರೈ ಆಗಿ ಹೊಳಪು ಕಡಿಮೆ ಆಗಬಹುದು. ಅದಕ್ಕಾಗಿ ಗುಂಗುರು ಕೂದಲಿನ ಅರೈಕೆ ಅತಿ ಅವಶ್ಯಕ. ಅದಕ್ಕಾಗಿ ಕೂದಲಿಗೆ ಶ್ಯಾಂಪೂ ಹಾಕಿ ತೊಳೆದ ಬಳಿಕ ಕಂಡೀಷನರ್ ಬಳಸಲೇಬೇಕು.

 Homemade Conditioners For Curly Hair in Kannada

ಆದರೆ ಮಾರುಕಟ್ಟೆಯಲ್ಲಿ ಸಿಗುವ ಹೇರ್ ಕಂಡೀಷನರ್ ಬಳಸಿದರೆ ಅದರಲ್ಲಿರುವ ಕೆಮಿಕಲ್ ನಿಂದ ನಿಮ್ಮ ಕೂದಲ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅದಕ್ಕಾಗಿ ನೀವು ನೈಸರ್ಗಿಕವಾದ ಕಂಡೀಷನರ್ ಬಳಸಿ ಗುಂಗುರು ಕೂದಲ ಆರೈಕೆಯನ್ನು ಸುಲಭವಾಗಿ ಮಾಡಬಹುದು. ನೈಸರ್ಗಿಕವಾದ ಹೇರ್ ಕಂಡೀಷನರ್ ಬಳಸಿದರೆ ಗುಂಗುರು ಕೂದಲಿಗೆ ಬೇಕಾದ ತೇವಾಂಶ ಸಿಗುತ್ತದೆ, ಸ್ಪ್ಲಿಟ್ಸ್ ಹೇರ್ ಸಮಸ್ಯೆಯನ್ನು ತಡೆಗಟ್ಟುತ್ತದೆ. ರೂಟ್ ನಿಂದಲೇ ಗಟ್ಟಿಗೊಳಿಸುವುದರ ಜೊತೆಗೆ ಹೊಳೆಯುವಂತೆ ಮಾಡಿ ಆರೋಗ್ಯಕರ ಕೂದಲನ್ನು ನಿಮ್ಮದಾಗಿಸುತ್ತದೆ.

ಹಾಗಾದರೆ ನಿಮ್ಮ ಸುರುಳಿ ಆಕಾರದ ದಟ್ಟ ಗುಂಗುರು ಕೂದಲನ್ನು ಇನ್ನಷ್ಟು ಸುಂದರವಾಗಿಸುವ ನೈಸರ್ಗಿಕ ಹೇರ್ ಕಂಡೀಷನರ್ ತಯಾರಿಸುವುದು ಹೇಗೆ ? ಇಲ್ಲಿದೆ ಟಿಪ್ಸ್

1. ಮೊಸರು ಮತ್ತು ಕೊಬ್ಬರಿ ಹಾಲು ಡೀಪ್ ಕಂಡಿಷನರ್

1. ಮೊಸರು ಮತ್ತು ಕೊಬ್ಬರಿ ಹಾಲು ಡೀಪ್ ಕಂಡಿಷನರ್

ಮೊಸರು ಹಾಗೂ ಕೊಬ್ಬರಿ ಹಾಲಿನಲ್ಲಿರುವ ಪೋಷಕಾಂಶಗಳು ಮತ್ತು ಹೇರಳವಾಗಿರುವ ತೇವಾಂಶವು ಹಾನಿಯಾದ ಗುಂಗುರು ಕೂದಲಿಗೆ ಉತ್ತಮ ಆರೈಕೆ ನೀಡುತ್ತದೆ. ಒರಟಾಗಿರುವ ಗುಂಗುರು ಕೂದಲಿಗೆ ಅಗತ್ಯವಾಗಿ ಬೇಕಾದ ಡೀಪ್ ಕಂಡಿಷನರ್ ಒದಗಿಸಿ, ಸುಂದರವಾದ ಗುಂಗುರು ಕೂದಲನ್ನು ನಿಮ್ಮದಾಗಿಸುತ್ತದೆ.

ಮೊಸರು ಹಾಗೂ ಕೊಬ್ಬರಿ ಹಾಲಿನಿಂದ ಕಂಡಿಷನರ್ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

  • 1 ಚಮಚ ಮೊಸರು
  • ¼ ಕಪ್ ತೆಂಗಿನ ಹಾಲು
  • 1 ಚಮಚ ತೆಂಗಿನ ಎಣ್ಣೆ
  • 2 ಚಮಚ ಜೇನುತುಪ್ಪ
  • 4 ಹನಿ ಲ್ಯಾವೆಂಡರ್ ತೈಲ
  • ಹೇಗೆ ಮಾಡುವುದು?

    ಒಂದು ಬೌಲ್ ಗೆ ಎಲ್ಲಾ ವಸ್ತುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಆ ನಂತರ ನಿಮ್ಮ ಕೂದಲು ತುಂಬಾ ದಪ್ಪ ಇದ್ದರೆ 6 ರಿಂದ 8 ಭಾಗಗಳಾಗಿ ವಿಂಗಡಣೆ ಮಾಡಿ, ತಯಾರಾದ ನೈಸರ್ಗಿಕ ಕಂಡೀಷರ್ ಅನ್ನು ಕೂದಲ ಬುಡದಿಂದ ತುದಿವರೆಗೆ ಲೇಪಿಸಿ. ಆ ನಂತರ ಎಲ್ಲಾ ಕೂದಲನ್ನು ಸುತ್ತಿ, ಅದರ ಮೇಲೆ ಶವರ್ ಕ್ಯಾಪ್ ಹಾಕಿಕೊಂಡು 45 ನಿಮಿಷಗಳ ಕಾಲ ಬಿಡಿ. ಆ ನಂತರ ಶ್ಯಾಂಪೂವಿನಿಂದ ತೊಳೆಯಿರಿ.

    2. ಮೊಟ್ಟೆ ಮತ್ತು ಆಲಿವ್ ಹೇರ್ ಕಂಡಿಷನರ್

    2. ಮೊಟ್ಟೆ ಮತ್ತು ಆಲಿವ್ ಹೇರ್ ಕಂಡಿಷನರ್

    ಮೊಟ್ಟೆಯು ನಿಮ್ಮ ಕೂದಲಿಗೆ ಅದ್ಭುತವಾದ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಮೊಟ್ಟೆಯಲ್ಲಿರುವ ವಿಟಮಿನ್ ಎ ಕೂದಲಿಗೆ ಬೇಕಾದ ತೇವಾಂಶ ಹಾಗೂ ಕೂದಲಿನ ಬೇರಿನಿಂದ ಮೇದೋ ಗ್ರಂಥಿಗಳ ಸ್ರಾವವನ್ನು ಉತ್ಪಾದಿಸುವಂತೆ ಮಾಡುತ್ತದೆ. ಇದು ನಿಮ್ಮ ಒರಟಾಗಿದ್ದ ಕೂದಲಿಗೆ ತೇವಗೊಳಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅದೇ ರೀತಿ ಆಲಿವ್ ಎಣ್ಣೆ ನಿಮ್ಮ ಕೂದಲನ್ನು ಹೈಡ್ರೇಟ್ ಮಾಡುತ್ತದೆ. ಹೀಗಾಗಿ ಮೊಟ್ಟೆ ಹಾಗೂ ಆಲೀವ್ ಎರಡೂ ಪದಾರ್ಥಗಳು ನಿಮ್ಮ ಗುಂಗುರು ಕೂದಲಿಗೆ ಅಗತ್ಯವಾಗಿ ಬೇಕಾದ ಪೋಷಣೆಯನ್ನು ನೀಡುತ್ತದೆ.

    ಬೇಕಾಗುವ ಸಾಮಾಗ್ರಿಗಳು

    • 1 ಮೊಟ್ಟೆ
    • 1 ಚಮಚ ಆಲಿವ್ ಎಣ್ಣೆ
    • ಹೇಗೆ ತಯಾರಿಸುವುದು ?

      ಮೊಟ್ಟೆಯ ಬಿಳಿಯ ಲೊಳೆ ಮತ್ತು ಆಲಿವ್ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ, ಅದನ್ನು ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೆ ಚೆನ್ನಾಗಿ ಹಚ್ಚಬೇಕು. ಆ ನಂತರ ಶವರ್ ಕ್ಯಾಪ್ ಹಾಕಿ ಮೈಲ್ಡ್ ಆದ ಶಾಖ ಕೊಟ್ಟು 10 ನಿಮಿಷ ಒಣಗಿಸಿ. ಆ ನಂತರ ತಣ್ಣೀರಿನಿಂದ ಶ್ಯಾಂಪೂ ಹಾಕಿ ಕೂದಲು ತೊಳೆಯಿರಿ.

      3. ತೆಂಗಿನ ಹಾಲು ಮತ್ತು ಜೇನು ತುಪ್ಪದ ಹೇರ್ ಕಂಡಿಷನರ್

      3. ತೆಂಗಿನ ಹಾಲು ಮತ್ತು ಜೇನು ತುಪ್ಪದ ಹೇರ್ ಕಂಡಿಷನರ್

      ನಿಮ್ಮ ಗುಂಗುರು ಕೂದಲು ಈ ಕೆಟ್ಟ ಪೊಲ್ಯುಷನ್ ನಿಂದ ಹಾಳಾಗಿದ್ದರೆ ಅಥವಾ ಒರಟಾಗಿದ್ದರೆ ಈ ಕೊಬ್ಬರಿ ಹಾಲು ಉತ್ತಮ ಪೋಷಣೆ ನೀಡಿ ನಿಮ್ಮ ಕೂದಲನ್ನು ಮತ್ತೆ ಸುಂದರವಾಗಿ ಹೊಳೆಯುವಂತೆ ಮಾಡುತ್ತದೆ, ಜೇನುತುಪ್ಪವು ಕೂದಲನ್ನು ಸಾಫ್ಟ್‌ ಮಾಡುತ್ತದೆ ಹಾಗೂ ಅಗತ್ಯವಾದ ತೇವಾಂಶ ನೀಡುತ್ತದೆ.

      ಬೇಕಾಗುವ ಸಾಮಾಗ್ರಿಗಳು

      • 1 ಕಪ್ ತೆಂಗಿನ ಹಾಲು
      • 4 ಚಮಚ ಜೇನುತುಪ್ಪ
      • ಹೇಗೆ ತಯಾರಿಸುವುದು?

        ಒಂದು ಕಪ್ ತೆಂಗಿನ ಹಾಲು ಮತ್ತು ನಾಲ್ಕು ಚಮಚ ಜೇನುತುಪ್ಪವನ್ನು ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಇದನ್ನು ನೀವು ತಲೆಗೆ ಶ್ಯಾಂಪೂವಿನಿಂದ ಸ್ನಾನ ಮಾಡಿದ ಬಳಿಕೆ ಹಚ್ಚಿ ಒಂದು 10 ನಿಮಿಷ ಹಾಗೆಯೇ ಬಿಡಬೇಕು. ಆ ನಂತರ ತಣ್ಣೀರಿನಿಂದ ತೊಳೆಯಬೇಕು.

        4. ಹರಳೆಣ್ಣೆ ಮತ್ತು ಮೊಟ್ಟೆ ಕಂಡಿಷನರ್

        4. ಹರಳೆಣ್ಣೆ ಮತ್ತು ಮೊಟ್ಟೆ ಕಂಡಿಷನರ್

        ನಿಮ್ಮ ಕೂದಲು ಅತಿಯಾಗಿ ಉದುರುತ್ತಿದ್ದರೆ ಅಥವಾ ಹೇರ್ ಡ್ಯಾಮೇಜ್ ಆಗಿದ್ದರೆ ನೈಸರ್ಗಿಕ ಕಂಡಿಷನರ್ ಬಳಸಲೇಬೇಕು. ಯಾಕೆಂದರೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಹೊಸ ಕೂದಲು ಹುಟ್ಟುವಂತೆ ಮಾಡಲು ಕ್ಯಾಸ್ಟರ್ ಆಯಿಲ್ ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿರುವ ಪ್ರೋಟೀನ್ ಗಳು ಮತ್ತು ಅಮೈನೋ ಆಮ್ಲಗಳು ನಿಮ್ಮ ಕೂದಲಿಗೆ ಬೇಕಾದ ನೈಸರ್ಗಿಕ ತೇವಾಂಶವನ್ನು ಕಾಪಾಡುವಂತೆ ಮಾಡುತ್ತದೆ.

        ಬೇಕಾಗುವ ಸಾಮಾಗ್ರಿಗಳು

        • 1 ಚಮಚ ಕ್ಯಾಸ್ಟರ್ ಆಯಿಲ್
        • 1 ಮೊಟ್ಟೆ
        • ಹೇಗೆ ತಯಾರಿಸುವುದು?

          ಕೊಟ್ಟಿರುವಷ್ಟು ಪ್ರಮಾಣದ ಕ್ಯಾಸ್ಟರ್ ಆಯಿಲ್ ಮತ್ತು ಮೊಟ್ಟೆಯನ್ನು ಒಂದು ಬೌಲ್ ಗೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಅದನ್ನು ಡ್ರೈ ಕೂದಲಿಗೆ ಹಚ್ಚಿ, ಶವರ್ ಕ್ಯಾಪ್ ಹಾಕಿ ಒಂದು ಗಂಟೆ ಬಿಡಿ. ಆ ನಂತರ ತಣ್ಣೀರಿನಿಂದ ಶಾಂಪೂ ಹಾಕಿ ತೊಳೆಯಿರಿ.

          5. ನಿಂಬೆ ರಸ, ಆಲಿವ್ ಎಣ್ಣೆ ಮತ್ತು ತೆಂಗಿನಕಾಯಿ ಹಾಲು ಹೇರ್ ಕಂಡಿಷನರ್

          5. ನಿಂಬೆ ರಸ, ಆಲಿವ್ ಎಣ್ಣೆ ಮತ್ತು ತೆಂಗಿನಕಾಯಿ ಹಾಲು ಹೇರ್ ಕಂಡಿಷನರ್

          ನಿಮ್ಮ ಗುಂಗುರು ಕೂದಲಿಗೆ ಬೇಕಾಗಿರುವ ತೇವಾಂಶ ನೀಡಲು ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಲು ಆಲಿವ್ ಎಣ್ಣೆ ಮತ್ತು ತೆಂಗಿನ ಹಾಲು ಉತ್ತಮ ಪದಾರ್ಥ. ಅದೇ ರೀತಿ, ನಿಂಬೆ ರಸವು ಕೂಡ ಆರ್ದ್ರತೆಯನ್ನು ಅಂದರೆ ತೇವಾಂಶವನ್ನು ಹೆಚ್ಚಿಸಲು, ಗುಂಗುರು ಕೂದಲಿನ ಒರಟುತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

          ಬೇಕಾದ ಸಾಮಾಗ್ರಿಗಳು

          • 2 ಟೀ ಚಮಚ ನಿಂಬೆ ರಸ
          • 2 ಟೀ ಚಮಚ ಆಲಿವ್ ಎಣ್ಣೆ
          • 1 ಚಮಚ ತೆಂಗಿನ ಹಾಲು
          • ಹೇಗೆ ತಯಾರಿಸುವುದು?

            ಒಂದು ಬೌಲ್ ನಲ್ಲಿ ನಿಂಬೆ ರಸ, ಆಲಿವ್ ಎಣ್ಣೆ ಮತ್ತು ತೆಂಗಿನ ಹಾಲನ್ನು ಒಟ್ಟಿಗೆ ಸೇರಿಸಿ ಮಿಶ್ರಣ ಮಾಡಿ, ಅದನ್ನು ಒಣ ಕೂದಲಿಗೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಆ ನಂತರ ತಣ್ಣೀರಿನಿಂದ ತೊಳೆದು ಶಾಂಪೂ ಮಾಡಿ.

            6. ಆವಕಾಡೊ ಮತ್ತು ಬೇಕಿಂಗ್ ಸೋಡಾದ ಶಾಂಪೂ ಹಾಗೂ ಹೇರ್ ಕಂಡಿಷನರ್

            6. ಆವಕಾಡೊ ಮತ್ತು ಬೇಕಿಂಗ್ ಸೋಡಾದ ಶಾಂಪೂ ಹಾಗೂ ಹೇರ್ ಕಂಡಿಷನರ್

            ನಿಮಗೆ ಆರೋಗ್ಯಕರ ಮತ್ತು ಸುರುಳಿ ಕೂದಲು ಬೇಕು ಅನ್ನುವ ಆಸೆ ಇದ್ದರೆ, ನೀವು ಆವಕಾಡೊವನ್ನು ತಿನ್ನುವ ಬದಲು ಅದನ್ನು ಕೂದಲಿಗೆ ಬಳಸಬೇಕು. ಆವಕಾಡೊದಲ್ಲಿರುವ ಕೊಬ್ಬಿನ ಅಮೈನೋ ಆಮ್ಲಗಳು, ನಿಮ್ಮ ಕೂದಲನ್ನು ಹೈಡ್ರೇಟ್ ಮಾಡುವುದಲ್ಲದೆ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಗುಂಗುರು ಕೂದಲಿಗೆ ಇದನ್ನು ನೈಸರ್ಗಿಕವಾದ ಶಾಂಪೂ-ಕಮ್-ಕಂಡಿಷನರ್ ಆಗಿ ಬಳಸಬಹುದು. ಇದು ಕೂದಲಿನಲ್ಲಿರುವ ಕೊಳೆಯನ್ನು ಕ್ಲೀನ್ ಮಾಡುವುದಲ್ಲದೆ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

            ಬೇಕಾದ ಸಾಮಾಗ್ರಿಗಳು

            • 1 ಮಾಗಿದ ಆವಕಾಡೊ
            • 2 ಚಮಚ ಅಡುಗೆ ಸೋಡಾ
            • ಸ್ವಲ್ಪ ನೀರು
            • ಹೇಗೆ ತಯಾರಿಸುವುದು?

              ಹಣ್ಣಾಗಿರುವ ಆವಕಾಡೊವನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ ಅದಕ್ಕೆ ಅಡುಗೆ ಸೋಡಾವನ್ನು ಸೇರಿಸಿ ಮಿಕ್ಸ್ ಮಾಡಿ. ಮಿಶ್ರಣ ತುಂಬಾ ಗಟ್ಟಿ ಆಗಿದ್ದರೆ ಅದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ನಯವಾದ ಪೇಸ್ಟ್ ತಯಾರಿಸಿ. ಈಗ ನಿಮ್ಮ ಕೂದಲನ್ನು ಸ್ವಲ್ಪ ಒದ್ದೆ ಮಾಡಿಕೊಂಡು ಕೂದಲ ಬುಡದಿಂದ ತುದಿವರೆಗೆ ಮಿಶ್ರಣ ಲೇಪಿಸಿ 5 ನಿಮಿಷ ಹಾಗೆಯೇ ಬಿಡಿ. ಆ ನಂತರ ತಣ್ಣೀರಿನಿಂದ ತೊಳೆಯಿರಿ.

              7. ಮೇಯನೋಸ್, ಮೊಸರು ಮತ್ತು ಮೊಟ್ಟೆಯ ಬಿಳಿಯ ಹೇರ್ ಕಂಡಿಷನರ್

              7. ಮೇಯನೋಸ್, ಮೊಸರು ಮತ್ತು ಮೊಟ್ಟೆಯ ಬಿಳಿಯ ಹೇರ್ ಕಂಡಿಷನರ್

              ನಿಮ್ಮ ಸುರುಳಿ ಕೂದಲ ಮೇಲೆ ಅದ್ಭುತವಾದ ಜಾದು ಮಾಡಬೇಕು ಅಂದರೆ ಈ ಮೇಯನೋಸ್ , ಮೊಸರು ಮತ್ತು ಮೊಟ್ಟೆಯ ಕಂಡೀಷನರ್ ಬಳಸಬೇಕು. ಮೇಯನೋಸ್ ಒರಟು ಕೂದಲನ್ನು ಸಾಪ್ಟ್ ಮಾಡಿದರೆ, ಮೊಸರು ಕೂದಲಿಗೆ ತೇವಾಂಶ ನೀಡುತ್ತದೆ. ಮೊಟ್ಟೆಯ ಬಿಳಿ ಭಾಗವು ಲುಟೀನ್ ಅನ್ನು ಹೊಂದಿರುವ ಕಾರಣ ಅದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ.

              ನೈಸರ್ಗಿಕ ಹೇರ್ ಕಂಡೀಷನರ್ ಮಾಡಲು ನಿಮಗೆ ಬೇಕಾಗಿರುವುದು

              • ¼ ಕಪ್ ಮೇಯನೋಸ್
              • ¼ ಕಪ್ ಮೊಸರು
              • 1 ಮೊಟ್ಟೆಯ ಬಿಳಿ
              • ಹೇಗೆ ತಯಾರಿಸುವುದು?

                ಮೇಯನೋಸ್, ಮೊಸರು, ಮೊಟ್ಟೆಯ ಬಿಳಿ ಲೋಳೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ದಪ್ಪ ಪೇಸ್ಟ್ ರೂಪ ಬರುವಂತೆ ಮಾಡಿ. ಅದನ್ನು ಕೂದಲ ಬುಡದಿಂದ ತುದಿಯವರೆಗೆ ಹಚ್ಚಿ ಶವರ್ ಕ್ಯಾಪ್ ಹಾಕಿ ಅರ್ಧ ಗಂಟೆ ಬಿಡಿ. ಆ ನಂತರ ಮೈಲ್ಡ್ ಆಗಿರುವ ಶಾಂಪೂ ಬಳಸಿ ತಣ್ಣೀರಿನಿಂದ ತೊಳೆಯಿರಿ.

                8. ಬಾಳೆಹಣ್ಣು ಮತ್ತು ಹಾಲಿನ ಹೇರ್ ಕಂಡಿಷನರ್

                8. ಬಾಳೆಹಣ್ಣು ಮತ್ತು ಹಾಲಿನ ಹೇರ್ ಕಂಡಿಷನರ್

                ಬಾಳೆಹಣ್ಣಿನಲ್ಲಿ ಹೇರಳವಾಗಿರುವ ಜೀವಸತ್ವಗಳು, ಪೊಟ್ಯಾಸಿಯಮ್ ಮತ್ತು ನೈಸರ್ಗಿಕ ತೈಲಗಳು ನಿಮ್ಮ ಕೂದಲಿಗೆ ತೇವಾಂಶ ಒದಗಿಸುತ್ತದೆ, ಹೊಳೆಯುವಂತೆ ಮಾಡುತ್ತದೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ, ಜೊತೆಗೆ ಕೂದಲು ಒಡೆಯುವುದನ್ನು ತಡೆಯುತ್ತದೆ. ಹಾಲು ನಿಮ್ಮ ಕೂದಲನ್ನು ಸಾಪ್ಟ್ ಮಾಡುತ್ತದೆ.

                ಬೇಕಾಗಿರುವ ಸಾಮಾಗ್ರಿಗಳು

                • 1 ಬಾಳೆಹಣ್ಣು
                • 3 ಚಮಚ ಹಾಲು
                • ಹೇಗೆ ತಯರಿಸುವುದು

                  ಬಾಳೆಹಣ್ಣನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ, ಅದನ್ನು ಹಾಲಿನೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ ದಪ್ಪ ಪೇಸ್ಟ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಒಣ ಕೂದಲಿಗೆ ಬುಡದಿಂದ ತುದಿವರೆಗೆ ಹಚ್ಚಿ, ಶವರ್ ಕ್ಯಾಪ್ ಹಾಕಿ ಅರ್ಧ ಗಂಟೆ ಬಿಡಿ. ಆ ನಂತರ ತಣ್ಣೀರಿನಿಂದ ಶಾಂಪೂ ಹಾಕಿ ತೊಳೆಯಿರಿ.

                  9. ಅಲೋವೆರಾ ಮತ್ತು ಸಿಹಿ ಬಾದಾಮಿ ಆಯಿಲ್ ಹೇರ್ ಕಂಡಿಷನರ್

                  9. ಅಲೋವೆರಾ ಮತ್ತು ಸಿಹಿ ಬಾದಾಮಿ ಆಯಿಲ್ ಹೇರ್ ಕಂಡಿಷನರ್

                  ಅಲೋವೆರಾ ಜೆಲ್ ಮತ್ತು ಸಿಹಿ ಬಾದಾಮಿ ಎಣ್ಣೆಯ ಕಂಡಿಷನರ್ ಬಳಸಿದರೆ ನಯವಾದ, ಹೊಳೆಯುವ ಸುರುಳಿ ಹೊಂದಿರುವ ಕೂದಲು ನಿಮ್ಮದಾಗುತ್ತದೆ. ಅಲೋವೆರಾ ಜೆಲ್ ನೈಸರ್ಗಿಕ ಎಮೋಲಿಯಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಅದು ನಿಮ್ಮ ಕೂದಲಿನ ಹೊರಪೊರೆಯನ್ನು ಮೃದುಗೊಳಿಸುತ್ತದೆ. ನಿಮ್ಮ ಕೂದಲಿಗೆ ತೇವಾಂಶವನ್ನು ನೀಡುತ್ತದೆ. ಅದೇ ರೀತಿ ಸಿಹಿ ಬಾದಾಮಿ ಎಣ್ಣೆ ನಿಮ್ಮ ಕೂದಲಿನ ಸುರುಳಿಗಳನ್ನು ಹೊಳೆಯುವಂತೆ ಮಾಡುತ್ತದೆ.

                  ಇದಕ್ಕೆ ಬೇಕಾಗಿರುವುದು

                  • 2 ಚಮಚ ಅಲೋವೆರಾ ಜೆಲ್
                  • 1 ಚಮಚ ಸಿಹಿ ಬಾದಾಮಿ ಎಣ್ಣೆ
                  • ½ ಕಪ್ ನೀರು
                  • ಹೇಗೆ ತಯಾರಿಸುವುದು?

                    ಅಲೋವೆರಾ ಜೆಲ್, ಸಿಹಿ ಬಾದಾಮಿ ಎಣ್ಣೆ ಮತ್ತು ನೀರನ್ನು ಸೇರಿಸಿ ತೆಳುವಾದ ಪೇಸ್ಟನ್ನು ತಯಾರಿಸಿ. ಅದನ್ನು ಒದ್ದೆಯಾದ ಕೂದಲಿಗೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಆ ನಂತರ ತಣ್ಣೀರಿನಿಂದ ಪ್ರತಿ ದಿನದಂತೆ ಶಾಂಪೂ ಬಳಸಿ ಕೂದಲು ತೊಳೆಯಿರಿ

                    ಮುನ್ನೆಚ್ಚರಿಕೆ

                    ನಿಮ್ಮ ಕೂದಲಿನ ಮೇಲೆ ನೈಸರ್ಗಿಕ ಕಂಡಿಷನರ್ ಅನ್ನು ಬಳಸುವ ಮೊದಲು, ನೀವು ಬಳಸುವ ಪದಾರ್ಥಗಳು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆಯೇ ಎಂದು ಪರಿಶೀಲಿಸುವುದು ಅತಿ ಮುಖ್ಯ. ಆದ್ದರಿಂದ, ಅದ್ಯಾವುದೇ ನೈಸರ್ಗಿಕ ಹೇರ್ ಕಂಡಿಷನರ್ ಅನ್ನು ಕೂದಲಿಗೆ ಹಚ್ಚುವ ಮುನ್ನ ನಿಮ್ಮ ಕತ್ತಿನ ಕುತ್ತಿಗೆ ಅಥವಾ ನಿಮ್ಮ ತೋಳಿನ ಒಳಭಾಗಕ್ಕೆ ಹಚ್ಚಿ. ಒಂದು ಗಂಟೆಯ ಬಳಿಕ ಯಾವುದೇ ಸಮಸ್ಯೆ ಆಗದಿದ್ದಲ್ಲಿ ನೀವು ನಿಶ್ಚಿಂತೆಯಿಂದ ಕೂದಲಿಗೆ ಬಳಸಬಹುದು.

English summary

Homemade Conditioners For Curly Hair in Kannada

Here we are discussing about Homemade Conditioners For Curly Hair, you know all the wonderful ways that a DIY natural conditioner can benefit your curly hair, let’s look at the best ones you can try out!. Read more.
Story first published: Wednesday, May 12, 2021, 22:20 [IST]
X
Desktop Bottom Promotion