For Quick Alerts
ALLOW NOTIFICATIONS  
For Daily Alerts

ಶಾಂಪೂವಿಗೆ ಈ ವಸ್ತುಗಳನ್ನು ಮಿಕ್ಸ್‌ ಮಾಡಿ ಬಳಸಿದರೆ, ಸೊಂಪಾದ, ಸ್ವಚ್ಛವಾದ ಕೇಶರಾಶಿ ನಿಮ್ಮದಾಗುವುದು

|

ಆರೋಗ್ಯಕರ ಮತ್ತು ಸುಂದರ ಕೂದಲಿಗೆ ಶಾಂಪೂ ಬಳಸುವುದು ತುಂಬಾ ಮೂಖ್ಯ. ಶಾಂಪೂ ಕೂದಲಿನಿಂದ ಕೊಳಕು, ಎಣ್ಣೆ ಇತ್ಯಾದಿಗಳನ್ನು ತೆಗೆದುಹಾಕಿ, ಸ್ವಚ್ಛಗೊಳಿಸುತ್ತದೆ. ಮಾರುಕಟ್ಟೆಯಲ್ಲಿ ಪ್ರತಿಯೊಂದು ಸಮಸ್ಯೆಗೂ ಬೇರೆ ಬೇರೆ ಶ್ಯಾಂಪೂಗಳು ಲಭ್ಯವಿರುತ್ತವೆ, ಆದರೆ ಈ ಶಾಂಪೂವಿನ ಜೊತೆಗೆ ನೈಸರ್ಗಿಕ ಪದಾರ್ಥಗಳನ್ನು ಸೇರಿಸದರೆ, ಕೂದಲಿನ ಸೌಂದರ್ಯ ಹೆಚ್ಚುತ್ತದೆ ಎಂದು ನಿಮಗೆ ತಿಳಿದಿದೆಯೇ?..

ಶಾಂಪೂವಿನ ಜೊತೆ ಕೆಲವು ಪದಾರ್ಥಗಳನ್ನು ಸೇರಿಸಿ, ಕೂದಲು ತೊಳೆಯುವುದರಿಂದ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಆದ್ದರಿಂದ ಇಂದು ನಾವು ನಿಮಗೆ ಅಂತಹ ಒಂದು ತಂತ್ರವನ್ನು ಹೇಳುತ್ತಿದ್ದೇವೆ, ಇದರ ಸಹಾಯದಿಂದ ನಿಮ್ಮ ಕೂದಲನ್ನು ಸುಂದರ, ಮೃದು ಮತ್ತು ಹೊಳೆಯುವಂತೆ ಮಾಡಬಹುದು.

ನಿಮ್ಮ ಶಾಂಪೂದಲ್ಲಿ ಈ 5 ವಸ್ತುಗಳನ್ನು ಮಿಶ್ರಣ ಮಾಡಿ, ಕೂದಲು ತೊಳೆಯುವುದರಿಂದ ಕೂದಲು ಮೃದು ಹಾಗೂ ಹೊಳೆಯುತ್ತದೆ. ಅವುಗಳಾವುವು ಇಲ್ಲಿ ನೋಡೋಣ.

1.ಸಕ್ಕರೆ:

1.ಸಕ್ಕರೆ:

ಶಾಂಪೂ ಬಳಸಿ ಕೂದಲನ್ನು ತೊಳೆಯುವುದರಿಂದ, ಮೇಲಿನ ಕೊಳೆ ಮಾತ್ರ ಸ್ವಚ್ಛವಾಗುತ್ತದೆ. ನೆತ್ತಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು, ನಿಮ್ಮ ಶಾಂಪೂವಿನಲ್ಲಿ ಸಕ್ಕರೆಯನ್ನು ಮಿಶ್ರಣ ಮಾಡಿ, ಅದನ್ನು ನೆತ್ತಿಯ ಮೇಲೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ನೆತ್ತಿಯು ಶುಚಿಯಾಗಿರುತ್ತದೆ ಹಾಗೂ ಕೂದಲು ಕೂಡ ಹೊಳೆಯುತ್ತದೆ.

2. ಅಲೋವೆರಾ ಜೆಲ್:

2. ಅಲೋವೆರಾ ಜೆಲ್:

ಅಲೋವೆರಾ ಜೆಲ್ ಬಹುಪಯೋಗಿ ಸೌಂದರ್ಯ ಸಾಧಕ. ಇದನ್ನು ನಿಮ್ಮ ಶಾಂಪೂವಿನಲ್ಲಿ ಬೆರೆಸಿ, ಕೂದಲನ್ನು ತೊಳೆಯುವುದರಿಂದ, ನಿಮ್ಮ ಕೂದಲು ಮೃದುವಾಗುವುದರ ಜೊತೆಗೆ ಹೊಳೆಯುವಂತೆ ಮಾಡುತ್ತದೆ. ಅಲೋವೆರಾ ಜೆಲ್‌, ತಲೆಹೊಟ್ಟಿನ ಸಮಸ್ಯೆಗೆ ಉತ್ತಮ ಮದ್ದಾಗಿದ್ದು, ಹೀಗೆ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆಯೂ ದೂರವಾಗುತ್ತದೆ.

3. ರೋಸ್‌ವಾಟರ್:

3. ರೋಸ್‌ವಾಟರ್:

ನಿಮ್ಮ ಕೂದಲು ನಿರ್ಜೀವವಾಗಿ ಮತ್ತು ಶುಷ್ಕವಾಗಿ ಕಾಣಲು ಪ್ರಾರಂಭಿಸಿದರೆ, ನಂತರ ನಿಮ್ಮ ಶಾಂಪೂವಿಗೆ ಎರಡು ಚಮಚ ರೋಸ್ ವಾಟರ್ ಸೇರಿಸಿ, ಕೂದಲನ್ನು ತೊಳೆಯಿರಿ. ಇದು ತಲೆಯಲ್ಲಿ ಜಿಡ್ಡಿನಾಂಶದಿಂದ ಬರುವ ಕೆಟ್ಟ ವಾಸನೆಯನ್ನು ಸಹ ತೆಗೆದುಹಾಕುತ್ತದೆ.

4. ನಿಂಬೆ ರಸ:

4. ನಿಂಬೆ ರಸ:

ನಿಮಗೆ ತಲೆಹೊಟ್ಟು ಸಮಸ್ಯೆ ಕಾಡುತ್ತಿದ್ದರೆ, ನಿಮ್ಮ ಶಾಂಪೂವಿಗೆ ಎರಡು ಚಮಚ ನಿಂಬೆ ರಸವನ್ನು ಸೇರಿಸಿ, ನಂತರ ಕೂದಲನ್ನು ತೊಳೆಯಿರಿ. ಇದು ತುರಿಕೆ ಮತ್ತು ತಲೆಹೊಟ್ಟು ಎರಡರಿಂದಲೂ ಪರಿಹಾರ ನೀಡುತ್ತದೆ. ಇದರ ಜೊತೆಯಲ್ಲಿ, ಇದು ಎಣ್ಣೆಯುಕ್ತ ಕೂದಲಿನ ಸಮಸ್ಯೆಯನ್ನು ಸಹ ತೆಗೆದುಹಾಕಬಹುದು.

5. ನೆಲ್ಲಿಕಾಯಿ ರಸ:

5. ನೆಲ್ಲಿಕಾಯಿ ರಸ:

ಕೂದಲು ಹೆಚ್ಚು ಉದುರುತ್ತಿದ್ದರೆ, ಎರಡು ಚಮಚ ನೆಲ್ಲಿಕಾಯಿ ರಸ ಅಥವಾ ಜ್ಯೂಸ್ ನ್ನು ಶಾಂಪೂ ಬೆರೆಸಿ ಬಳಸಿ. ಇದು ಕೂದಲನ್ನು ಬಲವಾಗಿಸುತ್ತದೆ ಜೊತೆಗೆ ಉದ್ದವಾಗಿ ಬೆಳೆಯಲು ಸಹಾಯಮಾಡುತ್ತದೆ. ನೀವು ತೆಳ್ಳನೆಯ ಕೂದಲನ್ನು ಹೊಂದಿದ್ದರೂ, ಸಹ ಇದರ ಬಳಕೆಯು ಪ್ರಯೋಜನಕಾರಿಯಾಗಿದೆ.

ನೆನಪಿಡಿ: ನೀವು ಶಾಂಪೂವಿಗೆ ಏನನ್ನಾದರೂ ಮಿಶ್ರಣ ಮಾಡಿದಾಗ ಅದನ್ನು ಕೂದಲಿಗೆ ಹಚ್ಚಿ, ಸ್ವಲ್ಪ ಹೊತ್ತು ಮಸಾಜ್ ಮಾಡಿದ ನಂತರ ಎರಡು ನಿಮಿಷಗಳ ಕಾಲ ಬಿಡಿ. ಅದರ ನಂತರ ನೀರಿನಿಂದ ತೊಳೆಯಿರಿ.

English summary

Hair Wash Tips For Dandruff Dead Dry And Dirty Scalp in Kannada

Here we talking about Hair Wash Tips For Dandruff Dead Dry And Dirty Scalp in kannada, read on
Story first published: Monday, October 11, 2021, 14:20 [IST]
X
Desktop Bottom Promotion