For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಕೂದಲ ರಕ್ಷಣೆಯನ್ನು ಮಾಡಲು ಸಲಹೆಗಳು ಇಲ್ಲಿವೆ

|

ಬೇಸಿಗೆಯಲ್ಲಿ ಕೂದಲು ರಕ್ಷಣೆ ಮಾಡುವುದು ಸವಾಲಿನ ಕೆಲಸವೇ ಸರಿ. ಉರಿ ಬಿಸಿಲಿನ ಜೊತೆಗೆ ಕೂದಲು ಕಿರಿಕಿರಿ ಉಂಟು ಮಾಡುತ್ತವೆ. ಅತಿಯಾದ ಶಾಖದಿಂದಾಗಿ ಕೂದಲು ಶುಷ್ಕವಾಗಿ ಉದುರಲು ಪ್ರಾರಂಭವಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ಕೂದಲು ರಕ್ಷಣೆ ಮಾಡುವುದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅಂತಹವರಿಗಾಗಿ ಈ ಲೇಖನ. ಬೇಸಿಗೆಯಲ್ಲಿ ಕೂದಲು ರಕ್ಷಣೆ ಮಾಡಲು ಕೆಲವೊಂದು ಸಲಹೆಗಳನ್ನು ನೀಡಲಾಗಿದೆ.

ಬೇಸಿಗೆಯಲ್ಲಿ ಕೂದಲು ರಕ್ಷಣೆ ಮಾಡುವ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಕೂದಲನ್ನು ಹೈಡ್ರೇಟ್ ಮಾಡಿ:

ಕೂದಲನ್ನು ಹೈಡ್ರೇಟ್ ಮಾಡಿ:

ಬಿರು ಬೇಸಿಗೆಯಿಂದ ನಮ್ಮ ಕೂದಲಿನ ತುದಿಗಳು ನಿರ್ಜಲೀಕರಣಗೊಂಡು ಒಣಗುತ್ತವೆ. ಆದ್ದರಿಂದ ಕೂದಲನ್ನು ಹೈಡ್ರೇಟ್ ಮಾಡಲು, ಒಣಗಿದ ತುದಿಗಳನ್ನು ತೆಗೆದುಹಾಕಲು ಆಳವಾದ ಕಂಡೀಷನಿಂಗ್ ಮಾಡಿ. ನೆತ್ತಿಗೆ ಮತ್ತು ಕೂದಲಿನ ಉದ್ದಕ್ಕೆ ಪೋಷಕಾಂಶಗಳನ್ನು ತಲುಪಿಸುವ ಮಾಸ್ಕನ್ನು ಆರಿಸಿ. ನೀವು ಎಣ್ಣೆಯುಕ್ತ ನೆತ್ತಿಯನ್ನು ಹೊಂದಿದ್ದರೆ, ಎಣ್ಣೆಮುಕ್ತ ಹೇರ್ ಮಾಸ್ಕ ಬಳಸಿ. ಇದು ನಿಮ್ಮ ಕೂದಲನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಬೇಸಿಗೆಯಿಂದ ನಿಮಗೆ ರಕ್ಷಣೆಯೂ ನೀಡುತ್ತದೆ.

ನೆತ್ತಿಯ ಎಣ್ಣೆಯನ್ನು ಸಮತೋಲನದಲ್ಲಿಡಿ:

ನೆತ್ತಿಯ ಎಣ್ಣೆಯನ್ನು ಸಮತೋಲನದಲ್ಲಿಡಿ:

ಬೇಸಿಗೆಯಲ್ಲಿ ಆಗಾಗ್ಗೆ ನೆತ್ತಿ ಹಾಗೂ ಕೂದಲು ಎಣ್ಣೆಯುಕ್ತವಾಗುತ್ತದೆ. ಆದ್ದರಿಂದ ಉತ್ತಮ ಸಲ್ಫೇಟ್ ಮುಕ್ತ ಶಾಂಪೂ ಮತ್ತು ಕಂಡಿಷನರ್ ಬಳಕೆ ಮಾಡುವುದು ಸೂಕ್ತ. ಇದು ತೈಲವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಜೊತೆಗೆ ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಿ, ಯಾವುದೇ ಕಿರಿಕಿರಿ ಅಥವಾ ಅಲರ್ಜಿಯನ್ನು ತಡೆಯುತ್ತದೆ. ಆದ್ದರಿಂದ ನೆತ್ತಿಯ ಎಣ್ಣೆಯನ್ನು ಶಾಂಪೂ ಹಾಗೂ ಕಂಡೀಷನರ್ ಬಳಸಿ ಸರಿಯಾಗಿಡುವುದು ತುಂಬಾ ಮುಖ್ಯ.

ಶಾಖದ ಹಾನಿಯನ್ನು ಕಡಿಮೆ ಮಾಡಿ:

ಶಾಖದ ಹಾನಿಯನ್ನು ಕಡಿಮೆ ಮಾಡಿ:

ಉಷ್ಣತೆಯ ಏರಿಕೆಯೊಂದಿಗೆ, ನಿಮ್ಮ ಕೂದಲು ಹೆಚ್ಚಿನ ಶಾಖವನ್ನು ಎದುರಿಸಿರುತ್ತದೆ. ಜೊತೆಗೆ ಸ್ಟೈಲಿಂಗ್ ಉತ್ಪನ್ನಗಳ ಮತ್ತಷ್ಟು ಬಳಕೆಯು ನಿಮ್ಮ ಕೂದಲನ್ನು ಹೆಚ್ಚು ಹಾನಿಗೊಳಿಸುತ್ತದೆ. ಹೀಟ್ ಸ್ಟೈಲಿಂಗ್ ಸಾಧನಗಳನ್ನು ಬಳಸುವುದನ್ನು ತಪ್ಪಿಸಿ. ಸ್ಟೈಲಿಂಗ್ ಅಗತ್ಯವಿದ್ದರೆ, ಶಾಖ ರಕ್ಷಣೆಗಾಗಿ ಪ್ರಬಲವಾದ ಸೀರಮ್ ಅನ್ನು ಬಳಸುವ ಮೂಲಕ ಹಾನಿಯನ್ನು ಕಡಿಮೆ ಮಾಡಿ. ಸುಲಭವಾದ, ಶಾಂತವಾದ ಕೇಶವಿನ್ಯಾಸಕ್ಕಾಗಿ ಹೋಗಿ. ಇದು ಬೇಸಿಗೆಯಲ್ಲಿ ನಿಮ್ಮ ಕೂದಲಿಗೆ ಹಾನಿಯಾಗದಂತೆ ತಡೆಯುತ್ತದೆ

ಕೂದಲು ಉದುರುವಿಕೆಯನ್ನು ನಿಯಂತ್ರಿಸಿ:

ಕೂದಲು ಉದುರುವಿಕೆಯನ್ನು ನಿಯಂತ್ರಿಸಿ:

ಋತುವಿನ ಬದಲಾವಣೆಯಿಂದ ನೆತ್ತಿಯ ಮೇಲೆ ಕಿರಿಕಿರಿಯುಂಟಾಗುತ್ತದೆ. ಫ್ಲಾಕಿ ನೆತ್ತಿ ಹೆಚ್ಚುವರಿ ಕೂದಲು ಉದುರುವಿಕೆಗೆ ಕಾರಣವಾಗಬಹುದು ಆದ್ದರಿಂದ ಯಾವುದೇ ನೆತ್ತಿಯ ಅಲರ್ಜಿ ಕಡಿಮೆ ಮಾಡಲು ಹಿತವಾದ ಚಿಕಿತ್ಸೆಯನ್ನು ಬಳಸುವುದು ಮುಖ್ಯವಾಗಿದೆ. ಯಾವುದೇ ಬಿಸಿಲು ಅಥವಾ ತುರಿಕೆ ನಿವಾರಿಸಲು ಮತ್ತು ಸೌಮ್ಯವಾದ ಶಾಂಪೂ ಬಳಸಿ ತೊಳೆದು, ಅಲೋವೆರಾ ಜೆಲ್ ಅನ್ನು ನೇರವಾಗಿ ನಿಮ್ಮ ನೆತ್ತಿಯ ಮೇಲೆ ಬಳಸಿ. ಇದು ನಿಮ್ಮ ಕೂದಲನ್ನು ಶುದ್ದಗೊಳಿಸುತ್ತದೆ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

English summary

Hair Care Tips For The Summer Season in Kannada

Here we talking about Hair care tips for the summer season in kannada, read on
X
Desktop Bottom Promotion