For Quick Alerts
ALLOW NOTIFICATIONS  
For Daily Alerts

ಕೊರೊನಾ ಬಂದ ಬಳಿಕ ಕೂದಲು ಉದುರುತ್ತಿದೆಯೇ? ಈ ಆಹಾರಗಳನ್ನು ಸೇವಿಸಿ

|

ಕೋವಿಡ್‌ 19ನಿಂದ ಚೇತರಿಸಿಕೊಂಡವರಲ್ಲಿ ಹೆಚ್ಚಿನವರು ಕೂದಲು ಉದುರುವ ಸಮಸ್ಯೆ ಕಂಡು ಬರುತ್ತಿದೆ ಎಂದು ಹೇಳುತ್ತಿದ್ದಾರೆ. ಕೋವಿಡ್ 19 ಬಂದಾಗ ಹೆಚ್ಚಿನವರು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ಕೋವಿಡ್‌ 19ನಿಂದ ಸಂಪೂರ್ಣ ಚೇತರಿಸಿಕೊಳ್ಳುವವರಿಗೆ ನನಗೆ ಏನಾಗುತ್ತೋ ಎಂಬ ಭಯ ಕೊರೊನಾ ಬಂದವರಿಗೆ ಇರುತ್ತದೆ, ಇವೆಲ್ಲಾ ಮಾನಸಿಕ ಒತ್ತಡ ಹೆಚ್ಚಿಸುತ್ತದೆ, ಇದರ ಜೊತೆಗೆ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಈ ಕಾರಣಗಳಿಂದಾಗಿ ಕೂದಲು ಉದುರುವ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ.

ಕೋವಿಡ್ 19ನಿಂದ ಚೇತರಿಸಿಕೊಂಡವರು ಪೋಷಕಾಂಶಗಳಿರುವ ಆಹಾರ ಸೇವಿಸಬೇಕು. ಆರೋಗ್ಯಕರ ಆಹಾರ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ಹಾಗೂ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು. ಬಿಸಿ ಬಿಸಿ ಆಹಾರ ಸೇವಿಸಿ, ಸೀಸನಲ್ ಹಣ್ಣುಗಳನ್ನು ತಿನ್ನಿಇವೆಲ್ಲಾ ಕೂದಲು ಉದುರುವುದನ್ನು ತಡೆಗಟ್ಟಲು ತುಂಬಾನೇ ಸಹಕಾರಿ.

ಕೋವಿಡ್‌ 19ನಿಂದ ಚೇತರಿಸಿಕೊಂಡವರು ಈ ಆಹಾರಗಳನ್ನು ತಿಂದರೆ ಕೂದಲು ಉದುರುವುದನ್ನು ತಡೆಗಟ್ಟಬಹುದು:

 ಕಪ್ಪು ಒಣ ದ್ರಾಕ್ಷಿ

ಕಪ್ಪು ಒಣ ದ್ರಾಕ್ಷಿ

ಒಂದು ಮುಷ್ಠಿಯಷ್ಟು ಕಪ್ಪು ದ್ರಾಕ್ಷಿಯನ್ನು ರಾತ್ರಿ ನೆನೆ ಹಾಕಿ ಬೆಳಗ್ಗೆ ಸೇವಿಸಿ. ನೆನೆ ಹಾಕಿದ ನೀರಿನ ಜೊತೆ ಜ್ಯೂಸ್ ಮಾಡಿಯೂ ಕುಡಿಯಬಹುದು. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು, ರಕ್ತದೊತ್ತಡ ನಿಯಂತ್ರಿಸುವುಉದ, ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು. ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

ಆಮ್ಲ (ನೆಲ್ಲಿಕಾಯಿ)

ಆಮ್ಲ (ನೆಲ್ಲಿಕಾಯಿ)

ನೆಲ್ಲಿ ಕುದಲು ಉದುರುವುದನ್ನು ತಡೆಗಟ್ಟುವ ಅತ್ಯದ್ಭುತವಾದ ಔಷಧಿಯಾಗಿದೆ. ಸ್ವಲ್ಪ ನೆಲ್ಲಿಕಾಯಿ ಪ್ರತಿದಿನ ತಿಂದರೆ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರ ಪೇಸ್ಟ್‌ ಕೂಡ ತಲೆ ಬುಡಕ್ಕೆ ಹಚ್ಚಿದರೆ ಕೂದಲಿನ ಬುಡ ಬಲವಾಗುವುದು. ನೆಲ್ಲಿಕಾಯಿ ಕೂದಲನ್ನು ಒಳಗಿನಿಂದ ಹಾಗೂ ಹೊರಗಿನಿಂದ ಬಲವಾಗಿಸುತ್ತೆ.

ಕರಿಬೇವು

ಕರಿಬೇವು

ಒಂದು ಲೋಟ ನೀರಿಗೆ ಕರಿಬೇವಿನ ಎಲೆ ಹಾಕಿ ಕುದಿಸಿ, ಆ ನೀರು 1/4 ಲೋಟವಾಗುವಷ್ಟು ಕುದಿಸಿ, ಈ ನೀರನ್ನು ಪ್ರತಿದಿನ ಬೆಳಗ್ಗೆ ಕುಡಿಯಿರಿ. ಈ ನೀರು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಮೈ ಬೊಜ್ಜು ಕೂಡ ಕರಗಿಸುವುದು.

ಮೊಟ್ಟೆ

ಮೊಟ್ಟೆ

ಮೊಟ್ಟೆಯ ಹಳದಿ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮೊಟ್ಟೆಯ ಹಳದಿಯಲ್ಲಿ ಬಯೋಟಿನ್, ವಿಟಮಿನ್‌ ಬಿ ಇರುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

ಪಾಲಾಕ್‌

ಪಾಲಾಕ್‌

ಪಾಲಾಕ್‌ನಲ್ಲಿ ವಿಟಮಿನ್ ಎ, ಕೆ, ಇ, ಸಿ, ಬಿ ಮತ್ತು ಮ್ಯಾಂಗನೀಸ್, ಸತು, ಕಬ್ಬಿಣದಂಶ, ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಇದು ತ್ವಚೆಯಲ್ಲಿ ಕೊಲೆಜಿನ್ ಹಾಗೂ ಕೂದಲಿನಲ್ಲಿ ಕೆರಾಟಿನ್‌ ಉತ್ಯಾದಿಸುವಲ್ಲಿ ಸಹಕಾರಿಯಾಗಿದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗುವುದು.

ಸಿರಿ ದಾನ್ಯಗಳು

ಸಿರಿ ದಾನ್ಯಗಳು

ಇನ್ನು ದಾನ್ಯಗಳಲ್ಲಿ ನಾರಿನಂಶ, ಪ್ರೊಟೀನ್ ಇರುವುದರಿಂದ ಕುದಲಿನ ಆರೋಗ್ಯಕ್ಕೆ ಒಳ್ಳೆಯದು. ಓಟ್ಸ್, ನವಣೆ, ಗೋಧಿ, ಬಾರ್ಲಿ ಈ ರೀತಿಯ ಆಹಾರ ಸೇವಿಸಿ.

ಈ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಕೂದಲು ಉದುರುವುದು ಕಡಿಮೆಯಾಗುವುದು.

English summary

Food You Must Eat to Prevent Post Covid-19 Hair Loss in Kannada

Food You Must Eat to Prevent Post Covid-19 Hair Loss in Kannada, read on...
X
Desktop Bottom Promotion