For Quick Alerts
ALLOW NOTIFICATIONS  
For Daily Alerts

ಕೂದಲುದುರುವಿಕೆ, ತಲೆಹೊಟ್ಟಿನಿಂದ ಬೇಸತ್ತಿದ್ದರೆ, ಈ ಹೇರ್ ಪ್ಯಾಕ್ ಟ್ರೈ ಮಾಡಿ,

|

ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸಮಸ್ಯೆಯು ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಏಕೆಂದರೆ ಈ ಕಾಲದಲ್ಲಿ ಬಿಸಿನೀರಿನ ಬಳಕೆ ಅತಿಯಾಗಿ ಮಾಡುವುದರಿಂದ, ಬಿಸಿನೀರು ಕೂದಲನ್ನು ದುರ್ಬಲಗೊಳಿಸುತ್ತದೆ, ಜೊತೆಗೆ ತಲೆಹೊಟ್ಟು ಕೂಡ ಹೆಚ್ಚಾಗಲು ಪ್ರಾರಂಭವಾಗುತ್ತದೆ. ತಲೆಹೊಟ್ಟು ಮತ್ತು ಕೂದಲು ಉದುರುವುದನ್ನು ತಪ್ಪಿಸಲು, ಜನರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ, ಇದು ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ.

ಚಳಿಗಾಲದಲ್ಲಿ ಕೂದಲು ಉದುರುವಿಕೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಮೆಂತ್ಯೆ ಮತ್ತು ಮೊಸರಿನ ಹೇರ್ ಮಾಸ್ಕ್ ಅನ್ನು ಬಳಸಿ. ಈ ಮಾಸ್ಕ್‌ನಿಂದ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ, ಹಾಗೆಯೇ ಉದ್ದ ಹಾಗೂ ದಟ್ಟವಾಗಿರುತ್ತದೆ. ಈ ಹೇರ್ ಮಾಸ್ಕ್ ಅನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ.

ಕೂದಲಿನ ಸಮಸ್ಯೆಗೆ ಮೊಸರು ಮತ್ತು ಮೆಂತ್ಯೆ ಹೇರ್ ಮಾಸ್ಕ್ಕ ಹೇಗೆ ಬಳಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೆಂತ್ಯೆಯಿಂದ ಕೂದಲಿಗೆ ಪ್ರಯೋಜನ:

ಮೆಂತ್ಯೆಯಿಂದ ಕೂದಲಿಗೆ ಪ್ರಯೋಜನ:

ಹೆಚ್ಚಿನವರು ಅನುಭವಿಸುವ ಕೂದಲಿನ ಪ್ರಮುಖ ಸಮಸ್ಯೆಗಳೆಂದರೆ ಅದು ಕೂದಲು ಉದುರುವುದು, ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ತಲೆ ಹೊಟ್ಟು, ಸೀಳು ಕೂದಲು ಇತ್ಯಾದಿ. ಇದಕ್ಕೆಲ್ಲಾ ಪ್ರಮುಖ ಕಾರಣ ಎಂದರೆ ಕೂದಲಿನ ಬೇರುಗಳು ಅಪೌಷ್ಟಿಕತೆಗೆ ಗುರಿಯಾಗಿರುವುದು. ಅಂದರೆ ಕೂದಲಿಗೆ ಅಗತ್ಯವಾಗಿ ಬೇಕಾದ ಕೆಲವೊಂದು ಪೌಷ್ಟಿಕ ಸತ್ವಗಳು ನಮ್ಮ ಪ್ರತಿ ದಿನದ ಆಹಾರ ಪದ್ಧತಿಯಲ್ಲಿ ಲಭ್ಯವಾಗದೇ ಇರುವುದು. ಇದು ಕೂದಲಿಗೆ ಚಿಕ್ಕ ವಯಸ್ಸಿನಲ್ಲೇ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಆದರೆ ಇದಕ್ಕೆಲ್ಲಾ ಪರಿಹಾರವೆಂದು ರಾಸಾಯನಿಕ ಉತ್ಪನ್ನಗಳ ಉಪಯೋಗ ಮಾಡುವ ಬದಲು ಮನೆಯಲ್ಲೇ ಸಿಗುವ ಮೆಂತ್ಯೆ ಕಾಳುಗಳ ಬಳಕೆ ಮಾಡಿದರೆ, ಕೂದಲಿನ ಇಂತಹ ಎಲ್ಲಾ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ. ವಿಟಮಿನ್ ಎ, ಸಿ ಮತ್ತು ಕೆ ಹೊರತುಪಡಿಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೋಲಿಕ್ ಆಮ್ಲದಂತಹ ಪೌಷ್ಟಿಕಾಂಶದ ಅಂಶಗಳು ಮೆಂತ್ಯೆ ಬೀಜಗಳಲ್ಲಿ ಕಂಡುಬರುತ್ತವೆ, ಇದು ಕೂದಲಿಗೆ ಉಪಯುಕ್ತವಾಗಿದೆ. ಮೆಂತ್ಯವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದರ ಜೊತೆಗೆ ತಲೆಹೊಟ್ಟು ಹೋಗಲಾಡಿಸುತ್ತದೆ. ಆದ್ದರಿಂದ ಮೆಂತ್ಯೆ ಕಾಳುಗಳ ಉಪಯೋಗದಿಂದ ಕೂದಲಿನ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಂಡು ಸೊಂಪಾದ ಮತ್ತು ಆರೋಗ್ಯಕರವಾದ ಕೂದಲನ್ನು ಹೊಂದಿ.

ಮೊಸರಿನಿಂದ ಕೂದಲಿಗೆ ಚಿಕಿತ್ಸೆ:

ಮೊಸರಿನಿಂದ ಕೂದಲಿಗೆ ಚಿಕಿತ್ಸೆ:

ಮೊಸರು ಪ್ರೋಬಯಾಟಿಕ್ ಗುಣಗಳನ್ನು ಹೊಂದಿದ್ದು ಕೂದಲು ದಪ್ಪವಾಗಲು ಸಹಕಾರಿ. ಮೊಸರು ಕೂದಲನ್ನು ಮತ್ತು ಆಳವಾಗಿ ತೇವಗೊಳಿಸುತ್ತದೆ. ಜೊತೆಗೆ ಕೂದಲಿನ ಬೇರುಗಳನ್ನು ತೇವಗೊಳಿಸುತ್ತದೆ. ಇದರಿಂದ ನಿಮ್ಮ ಕೂದಲು ಸ್ಟ್ರಾಂಗ್ ಆಗುತ್ತದೆ. ಜೊತೆಗೆ ತಲೆಹೊಟ್ಟು ಸಮಸ್ಯೆಗೆ, ಕೂದಲು ಮೃದುವಾಗಲು ಹಾಗೂ ಹೊಳೆಯುವ ಕಪ್ಪುಕೂದಲು ಪಡೆಯಲು ಸಹ ಮೊಸರು ಸಹಾಯ ಮಾಡುತ್ತದೆ. ಒಂದು ರೀತಿಯಲ್ಲಿ ಕೂದಲಿನ ಸರ್ವ ಸಮಸ್ಯೆಗೂ ಮೊಸರು ಪರಿಹಾರ ನೀಡಲಿದೆ.

ಹೇರ್ ಮಾಸ್ಕ್ ತಯಾರಿಸಲು ಬೇಕಾದ ಪದಾರ್ಥಗಳು:

ಹೇರ್ ಮಾಸ್ಕ್ ತಯಾರಿಸಲು ಬೇಕಾದ ಪದಾರ್ಥಗಳು:

ಅರ್ಧ ಕಪ್ ಮೆಂತ್ಯೆ ಬೀಜಗಳು

2 ಚಮಚ ಮೊಸರು

ಹೇರ್ ಮಾಸ್ಕ್ ಮಾಡುವುದು ಹೇಗೆ?:

ಹೇರ್ ಮಾಸ್ಕ್ ಮಾಡುವುದು ಹೇಗೆ?:

ಈ ಹೇರ್ ಮಾಸ್ಕ್ ಮಾಡಲು, ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ನೀರನ್ನು ತೆಗೆದ ನಂತರ ಅದನ್ನು ಫಿಲ್ಟರ್ ಮಾಡಿ. ಇದಾದ ನಂತರ ಮಿಕ್ಸರ್ ನಲ್ಲಿ ಹಾಕಿ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ಈಗ ಈ ಪೇಸ್ಟ್‌ಗೆ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಿದ್ಧಪಡಿಸಿದ ಪೇಸ್ಟ್ ಅನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ 30-40 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಶುದ್ಧ ನೀರಿನಿಂದ ತೊಳೆಯಿರಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ವಾರಕ್ಕೆ ಎರಡು ಬಾರಿ ಹಚ್ಚಬಹುದು.

English summary

Fenugreek and Curd Hair Masks To Stop Hair Fall and Dandruff in Kannada

Her we talking about Fenugreek and curd Hair Masks To Stop Hair Fall and Dandruff in kannada, read on
Story first published: Friday, November 12, 2021, 13:42 [IST]
X
Desktop Bottom Promotion