For Quick Alerts
ALLOW NOTIFICATIONS  
For Daily Alerts

ಈ ಸಾರಭೂತ ತೈಲಗಳು ಕೂದಲು ಮತ್ತೆ ಬೆಳೆಯಲು ಬಹಳ ಪರಿಣಾಮಕಾರಿ

|

ಕೂದಲು ಉದುರುವಿಕೆ ತುಂಬಾ ಸಾಮಾನ್ಯವಾದ ಸಮಸ್ಯೆಯಾಗಿದ್ದು, ಸಾಕಷ್ಟು ಜನರ ನೆಮ್ಮದಿ ಹಾಳಾಗುವಂತೆ ಮಾಡಿದೆ. ನಮ್ಮ ಕೂದಲು ಉದುರಲು ಕೆಟ್ಟ ಆಹಾರದಿಂದ ಹಿಡಿದು ಒತ್ತಡದವರೆಗೆ ಸಾಕಷ್ಟು ಕಾರಣಗಳಿವೆ. ಆದರೆ, ನೆತ್ತಿಗೆ ಅಗತ್ಯ ಪೋಷಕಾಂಶಗಳು ಸಿಗದೇ ಇರುವುದು ಮುಖ್ಯ ಕಾರಣ. ಇಂತಹ ಸಮಯದಲ್ಲಿ ಅದಕ್ಕೆ ಸೂಕ್ತ ಪೋಷಣೆ ಒದಗಿಸಿ, ಕೂದಲು ಮತ್ತೆ ಬೆಳೆಯುವಂತೆ ಮಾಡಬೇಕು.

ಕೂದಲು ಮತ್ತೆ ಬೆಳೆಯಲು ಸಹಾಯ ಮಾಡುವ ವಿಧಾನವೆಂದರೆ ಸಾರಭೂತ ತೈಲಗಳನ್ನು ಬಳಸುವುದು. ಸಾರಭೂತ ತೈಲಗಳು ಹೆಚ್ಚು ಶಕ್ತಿಯುತವಾಗಿದ್ದು, ನೆತ್ತಿ ಮತ್ತು ಕೂದಲು ಕಿರುಚೀಲಗಳನ್ನು ಉತ್ತೇಜಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇಲ್ಲಿ ನಾವು ಕೂದಲಿನ ಬೆಳವಣಿಗೆಗೆ ಹೆಚ್ಚು ಪ್ರಯೋಜನಕಾರಿಯಾದ ನಾಲ್ಕು ಸಾರಭೂತ ತೈಲಗಳ ಬಗ್ಗೆ ಹೇಳಲಿದ್ದೇವೆ.

ಕೂದಲು ಮತ್ತೆ ಬೆಳೆಯುವಂತೆ ಮಾಡುವ ಸಾರಭೂತ ತೈಲಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ರೋಸ್ಮರಿ ಎಣ್ಣೆ:

ರೋಸ್ಮರಿ ಎಣ್ಣೆ:

ರೋಸ್ಮರಿ ಸಾರಭೂತ ತೈಲವು ರಕ್ತನಾಳಗಳನ್ನು ಹಿಗ್ಗಿಸುವ (ವಿಸ್ತರಿಸುವ) ಮೂಲಕ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನೆತ್ತಿಗೆ ಆಕ್ಸಿಜನ್ ಪೂರೈಸಿ, ಪೋಷಕಾಂಶಗಳು ಸರಿಯಾಗಿ ವಿತರಣೆಯಾಗುವಂತೆ ನೋಡಿಕೊಳ್ಳುತ್ತದೆ. ಇದು ಕೂದಲನ್ನು ದಪ್ಪವಾಗಿಸುವುದರ ಜೊತೆಗೆ ಕೂದಲು ಮರು-ಬೆಳವಣಿಗೆಗೆ ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯೊಂದಿಗೆ 5-6 ಹನಿ ರೋಸ್ಮರಿ ಸಾರಭೂತ ತೈಲವನ್ನು ಮಿಶ್ರಣ ಮಾಡಿ, ಅದನ್ನು ನಿಮ್ಮ ನೆತ್ತಿಗೆ ಹಚ್ಚಿ. ಇದನ್ನು 10-15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ನೈಸರ್ಗಿಕ ಶಾಂಪೂ ಬಳಸಿ ತೊಳೆಯಿರಿ.

ಲೆಮನ್ಗ್ರಾಸ್ ಎಣ್ಣೆ (ಮಜ್ಜಿಗೆ ಸೊಪ್ಪು):

ಲೆಮನ್ಗ್ರಾಸ್ ಎಣ್ಣೆ (ಮಜ್ಜಿಗೆ ಸೊಪ್ಪು):

ಮಜ್ಜಿಗೆ ಸೊಪ್ಪಿನ ಸಾರಭೂತ ತೈಲವು ತಲೆಹೊಟ್ಟು ವಿರುದ್ಧ ಹೋರಾಡಲು ಉತ್ತಮವಾಗಿದ್ದು, ಈ ಮೂಲಕ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಏಕೆಂದರೆ, ಉದುರುವಿಕೆಗೆ ತಲೆಹೊಟ್ಟು ಒಂದು ಪ್ರಮುಖ ಕಾರಣವಾಗಿದೆ. ಲೆಮನ್ ಗ್ರಾಸ್ ಸುವಾಸನೆಯು ಅತ್ಯಂತ ಹಿತವಾಗಿರುವುದರಿಂದ, ಇದು ಒಣ ನೆತ್ತಿಯನ್ನು ಕಡಿಮೆಮಾಡಲು ಪರಿಣಾಮಕಾರಿಯಾಗಿದೆ. ನಿಮ್ಮ ನಿಯಮಿತ ಶಾಂಪೂ ಅಥವಾ ಕಂಡಿಷನರ್ (ನೈಸರ್ಗಿಕ ಅಥವಾ ಸಾವಯವ ಉತ್ಪನ್ನಗಳು) ಜೊತೆಗೆ 3-4 ಹನಿ ಲೆಮನ್ ಗ್ರಾಸ್ ಸಾರಭೂತ ತೈಲವನ್ನು ಮಿಶ್ರಣ ಮಾಡಿ ಮತ್ತು ನಿಯಮಿತವಾಗಿ ಬಳಸಿ.

ಬೆರ್ಗಮಾಟ್ ಎಣ್ಣೆ:

ಬೆರ್ಗಮಾಟ್ ಎಣ್ಣೆ:

ಬೆರ್ಗಮಾಟ್ ಸಾರಭೂತ ತೈಲವು ಆಂಟಿಮೈಕ್ರೊಬಿಯಲ್ ಆಗಿದ್ದು, ಆರೋಗ್ಯಕರ ನೆತ್ತಿಯನ್ನು ಉತ್ತೇಜಿಸುತ್ತದೆ. ಇದರ ಉರಿಯೂತದ ಗುಣಲಕ್ಷಣಗಳು ನೆತ್ತಿಯನ್ನು ತಂಪಾಗಿಸಿ, ಅತಿಯಾದ ಬೆವರುವಿಕೆಯಂತಹ ನೋವಿನ ಉರಿಯೂತದ ಅಪಾಯವನ್ನು ಕಡಿಮೆ ಮಾಡುತ್ತದೆ. ಉರಿಯೂತವು ಕೂದಲು ಉದುರುವಿಕೆಗೆ ಕಾರಣವಾಗಿದ್ದು, ಬೆರ್ಗಮಾಟ್ ಅದನ್ನು ಎದುರಿಸಲು ಉತ್ತಮವಾಗಿದೆ. ಬೆರ್ಗಮಾಟ್ನ 3-4 ಹನಿಗಳನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಮತ್ತು ನಿಮ್ಮ ನೆತ್ತಿಗೆ ಹಚ್ಚಿ, ತಕ್ಷಣ ನಿಮ್ಮ ಕೂದಲನ್ನು ತೊಳೆಯಿರಿ.

ಸೀಡರ್ ಮರ(ಬೀಟೆ ಮರ)ದ ಎಣ್ಣೆ:

ಸೀಡರ್ ಮರ(ಬೀಟೆ ಮರ)ದ ಎಣ್ಣೆ:

ಈ ಸಾರಭೂತ ತೈಲವು ನೆತ್ತಿಯಲ್ಲಿ ತೈಲ ಉತ್ಪಾದಿಸುವ ಗ್ರಂಥಿಗಳನ್ನು ಸಮತೋಲನಗೊಳಿಸುತ್ತದೆ, ಜೊತೆಗೆ ಕೂದಲು ಸ್ನೇಹಿ ಬ್ಯಾಕ್ಟೀರಿಯಾಗಳು ತಮ್ಮ ಕೆಲಸವನ್ನು ಮಾಡಲು ಆರೋಗ್ಯಕರ ವಾತಾವರಣವನ್ನು ಒದಗಿಸುತ್ತದೆ. ಇದು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ತಲೆಹೊಟ್ಟು, ಒಣ ನೆತ್ತಿಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಎಣ್ಣೆಯು ನಿಮ್ಮ ನೆತ್ತಿಯ ಆರೋಗ್ಯವನ್ನು ಉತ್ತಮಗೊಳಿಸಿ, ಕೂದಲು ಸುರಕ್ಷಿತ ಮತ್ತು ಪೋಷಣೆಯ ವಾತಾವರಣದಲ್ಲಿ ಮರು-ಬೆಳೆಯುವುದಕ್ಕೆ ದಾರಿ ಮಾಡಿಕೊಡುತ್ತದೆ. ತೆಂಗಿನೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ನೊಂದಿಗೆ 3 ಹನಿ ಈ ಸಾರಭೂತ ತೈಲವನ್ನು ಮಿಶ್ರಣ ಮಾಡಿ , ನೆತ್ತಿಯ ಮೇಲೆಹಚ್ಚಿ.

ಗಮನಿಸಿ: ಕೂದಲ ಬೆಳವಣಿಗೆಗೆ ಸಾರಭೂತ ತೈಲಗಳು ಉತ್ತಮವಾಗಿವೆ, ಆದರೆ ನೀವು ಅವುಗಳನ್ನು ಸುರಕ್ಷಿತವಾಗಿ ಬಳಸಬೇಕು. ಸಾರಭೂತ ತೈಲಗಳನ್ನು ಯಾವಾಗಲೂ ತೆಂಗಿನ ಎಣ್ಣೆ ಮತ್ತು ಹರಳೆಣ್ಣೆಗಳಂತಹ ಕ್ಯಾರಿಯರ್ ಎಣ್ಣೆಯಿಂದ ದುರ್ಬಲಗೊಳಿಸಿದ ನಂತರ ಬಳಸಬೇಕು ಎಂಬುದನ್ನು ದಯವಿಟ್ಟು ಗಮನಿಸಿ. ಜೊತೆಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಪರಿಶೀಲಿಸಲು ಯಾವಾಗಲೂ ಪ್ಯಾಚ್ ಪರೀಕ್ಷೆಯನ್ನು ಮಾಡಿಕೊಳ್ಳಿ.

English summary

Essential Oils for Hair Regrowth in Kannada

Here we talking about Essential oils for hair regrowth in kannada¸ read on
Story first published: Friday, November 26, 2021, 7:21 [IST]
X
Desktop Bottom Promotion