For Quick Alerts
ALLOW NOTIFICATIONS  
For Daily Alerts

ಒಣ ಕೂದಲಿನ ಸಮಸ್ಯೆಯೇ? ಅಕ್ಕಿ ತೊಳೆದ ನೀರು ಮತ್ತು ಜೇನು ಮಿಶ್ರಣ ಟ್ರೈ ಮಾಡಿ

|

ಕೂದಲು ತುಂಬಾ ಡ್ರೈಯಾಗುತ್ತಿದ್ದರೆ ಕೂದಲಿನ ಅಂದ ಕೆಡುವುದು ಮಾತ್ರವಲ್ಲ ಕೂದಲಿನ ಬೆಳವಣಿಗೆ ಕೂಡ ನಿಂತು ಹೋಗುವುದು, ನಂತರ ಕೂದಲಿನ ಬುಡ ಕವಲೊಡೆಯುವ ಸಮಸ್ಯೆ ಉಂಟಾಗುವುದು. ಆದ್ದರಿಂದ ಕೂದಲು ಡ್ರೈಯಾಗುವುದನ್ನು ತಡೆಗಟ್ಟಬೇಕು.

ಕೂದಲನ್ನು ಮೃದುವಾಗಲು ಕೂದಲಿನ ಆರೈಕೆ ಮಾಡಬೇಕು, ಅದಕ್ಕಾಗಿ ಹೇರ್‌ ಸ್ಪಾಗಳಿಗೆ ಹೋದರೆ ತುಂಬಾನೇ ದುಡ್ಡು ಬೇಕಾಗುವುದು ಅದರ ಬದಲಿಗೆ ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳಿಂದಲೂ ಕೂದಲನ್ನು ಮೃದು ಮಾಡಬಹುದು.

DIY rinse for dry hair,

ಕೂದಲಿನ ಬುಡವನ್ನು ಮಾಯಿಶ್ಚರೈಸರ್‌ ಮಾಡದೇ ಹೋದಾಗ ಕೂದಲಿನ ಬುಡ ಒಣಗಿ ಕೂದಲು ಒಣಗುವುದು, ಆದ್ದರಿಂದ ಕೂದಲಿನ ಬುಡ ಮಾಯಿಶ್ಚರೈಸರ್ ಆಗಿರುವಂತೆ ನೋಡಿಕೊಳ್ಳಬೇಕು. ನಿಮಗೂ ಕೂಡ ಒಣ ಕೂದಲಿನ ಸಮಸ್ಯೆ ಇದೆಯೇ, ಚಿಂತೆ ಮಾಡಬೇಡಿ, ಈ ಎರಡು ವಸ್ತುಗಳನ್ನು ಬಳಸಿದರೆ ಸಾಕು ಕೂದಲು ಮೃದುವಾಗುವುದು ಜೊತೆಗೆ ಸೊಂಪಾಗಿ ಬೆಳೆಯುವುದು.

ಕೆಮಿಕಲ್ ಇರುವ ಶ್ಯಾಂಪೂ, ಕಂಡೀಷನರ್‌ಗಳನ್ನು ಬಳಸುವುದರಿಂದ ಕೂದಲಿಗೆ ಹಾನಿಯಾಗಬಹುದು ಎಂಬ ಭಯವಿರುತ್ತದೆ, ಇದರಲ್ಲಿ ಅದು ಕೂಡ ಇಲ್ಲ, ನೈಸರ್ಗಿಕವಾದ ವಸ್ತುಗಳನ್ನು ಬಳಸಿರುವುದರಿಂದ ಕೂದಲನ್ನು ಮತ್ತಷ್ಟು ಆರೈಕೆ ಮಾಡಿದಂತಾಗುವುದು.

ಇಲ್ಲಿ ನೀವು ಬಳಸುತ್ತಿರುವುದು ಅಕ್ಕಿ ತೊಳೆದ ನೀರು ಮತ್ತು ಜೇನು. ಇವುಗಳನ್ನು ಬಳಸಿ ಕೂದಲಿನ ಆರೈಕೆ ಮಾಡುವುದು ಹೇಗೆ ಎಂದು ನೋಡೋಣ:

ಮೊದಲಿಗೆ ಜೇನು ಮತ್ತು ಅಕ್ಕಿ ತೊಳೆದ ನೀರಿನ ಪ್ರಯೋಜನ ತಿಳಿಯೋಣ:

ಮೊದಲಿಗೆ ಜೇನು ಮತ್ತು ಅಕ್ಕಿ ತೊಳೆದ ನೀರಿನ ಪ್ರಯೋಜನ ತಿಳಿಯೋಣ:

ಅಕ್ಕಿ ತೊಳೆದ ನೀರಿನಲ್ಲಿ ಅಮೈನೋ ಆಮ್ಲ ಹಾಗೂ ಇನೋಸಿಟಾಲ್ ಅಂಶ ಇರುವುದರಿಂದ ಕೂದಲಿನ ಬುಡ ಬಲವಾಗಿಸುತ್ತೆ, ಜೊತೆಗೆ ವಿಟಮಿನ್ ಇ, ಬಿ ಹಾಗೂ ಆ್ಯಂಟಿಆಕ್ಸಿಡೆಂಟ್ ಅಂಶ ಇರುವುದರಿಂದ ಇದು ಕೂದಲು ಉದ್ದ ಬೆಳೆಯಲು ಕೂಡ ಸಹಕಾರಿ. ಇದರ ಜೊತೆಗೆ ಜೇನಿನಲ್ಲಿ ಕೂಡ ಆ್ಯಂಟಿಆಕ್ಸಿಡೆಂಟ್ ಅಧಿಕ ಇರುವುದರಿಂದ ಕೂದಲಿನ ಆರೈಕೆ ಮಾಡುವುದು. ಈ ಎರಡು ವಸ್ತುಗಳ ಕಾಂಬಿನೇಷನ್‌ನಿಂದಾಗಿ ಕೂದಲು ಮೃದುವಾಗುವುದು.

ಕೂದಲಿನ ಆರೈಕೆಗೆ ನಿಮಗೆ ಬೇಕಾಗುವ ಸಾಮಗ್ರಿಗಳು

ಕೂದಲಿನ ಆರೈಕೆಗೆ ನಿಮಗೆ ಬೇಕಾಗುವ ಸಾಮಗ್ರಿಗಳು

1 ಚಮಚ ಜೇನು

1/2 ಕಪ್ ಅಕ್ಕಿ

ನೀರು

ತಯಾರಿಸುವುದು ಹೇಗೆ?

ತಯಾರಿಸುವುದು ಹೇಗೆ?

ಸ್ಟೆಪ್‌ 1: ಅರ್ಧ ಕಪ್‌ ಅಕ್ಕಿಗೆ 1 ಕಪ್ ನೀರು ಹಾಕಿ 2 ಗಮಟೆ ಬಿಡಿ.

ಸ್ಟೆಪ್ 2: ಈಗ 1 ಕಪ್ ನೀರು ಬಿಸಿ ಮಾಡಿ ಅದಕ್ಕೆ ಜೇನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ 5-10 ನಿಮಿಷ ಹಾಗೇ ಬಿಡಿ.

ಸ್ಟೆಪ್ 3: ಈಗ ಅಕ್ಕಿ ನಿರನ್ನು ಒಂದು ಪಾತ್ರೆಗೆ ಸೋಸಿ, ಅಕ್ಕಿಯನ್ನು ದೋಸೆಗೆ ಬಳಸಿ.

ಸ್ಟೆಪ್‌ 4: ಈಗ ಜೇನು ಸೇರಿಸಿದ ನೀರನ್ನು ಹಾಕಿ ಮಿಕ್ಸ್ ಮಾಡಿದರೆ ಕೂದಲಿನ ಆರೈಕೆಗೆ ಪೋಷಕಾಂಶವಿರುವ ನೀರು ರೆಡಿ.

ಬಳಸುವುದು ಹೇಗೆ?

ಬಳಸುವುದು ಹೇಗೆ?

ಕೂದಲನ್ನು ಸಾಮಾನ್ಯವಾಗಿ ಹೇಗೆ ತೊಳೆಯುತ್ತೀರೋ ಹಾಗೇ ತೊಳೆಯಿರಿ. ತಲೆ ತೊಳೆಯುವಾಗ ಬೆಚ್ಚಗಿನ ನೀರು ಬಳಸಿ, ಇದರಿಂದ ತಲೆ ಬುಡದಲ್ಲಿರುವ ರಂಧ್ರಗಳು ತೆರೆದುಕೊಳ್ಳುವುದು.

* ನಂತರ ತಯಾರಿಸಿಟ್ಟ ಅಕ್ಕಿ ನೀರನ್ನು ತಲೆ ಬುಡಕ್ಕೆ, ಕೂದಲಿಗೆ ಉಜ್ಜಿ 10-15 ನಿಮಿಷ ಬಿಡಿ, ನಂತರ ತಣ್ಣೀರಿನಲ್ಲಿ ತೊಳೆಯಬಹುದು.

* ನೀವು ಇದೇ ನೀರನ್ನು ಕೊನೆಯದಾಗಿ ಬಳಸಿ, ಮತ್ತೆ ತಲೆಗೆ ನೀರು ಹಾಕದೆಯೂ ಕೂದಲು ಒಣಗಿಸಬಹುದು.

ಎಷ್ಟು ಬಾರಿ ಬಳಸಬೇಕು?

ಎಷ್ಟು ಬಾರಿ ಬಳಸಬೇಕು?

ಇದನ್ನು ವಾರದಲ್ಲಿ ಎರಡು ಬಾರಿ ಬಳಸಿ. ಈ ರೀತಿ ಮಾಡುತ್ತಾ ಬಂದರೆ ಒಂದೆರಡು ತಿಂಗಳಿನಲ್ಲಿಯೇ ಒಳ್ಳೆಯ ರಿಸಲ್ಟ್ ಸಿಗುವುದು. ಇಷ್ಟೆಲ್ಲಾ ಸುಲಭ ವಿಧಾನ ಇರುವಾಗ ಮತ್ಯಾಕೆ ಟ್ರೈ ಮಾಡಬಾರದು? ಟ್ರೈ ಮಾಡಿ ಫಲಿತಾಂಶ ತಿಳಿಸಿ.

English summary

DIY rinse using rice water and honey for dry hair in kannada

DIY rinse using rice water and honey for dry hair in kannada, Read on...
X
Desktop Bottom Promotion