For Quick Alerts
ALLOW NOTIFICATIONS  
For Daily Alerts

ಈ ಸಿಂಪಲ್ ಮನೆಮದ್ದುಗಳಿಂದ ಸೀಳು ಕೂದಲಿಗೆ ಹೇಳಿ ಬೈ ಬೈ..

|

ಕೂದಲಿನ ತುದಿಗಳು ಸೀಳಾಗುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಈ ಸೀಳು ಕೂದಲುಗಳು ಕೂದಲನ್ನು ಒಣಗಿದಂತೆ ಕಾಣುವಂತೆ ಮಾಡುತ್ತದೆ ಜೊತೆಗೆ ಕೂದಲಿನ ಬೆಳವಣಿಗೆಯನ್ನು ಸಹ ನಿಲ್ಲಿಸುತ್ತವೆ. ಸ್ಟ್ರೈಟ್ನಿಂಗ್ ಉಪಕರಣಗಳು ಅಥವಾ ರಾಸಾಯನಿಕಗಳಿಂದ ಈ ಹಾನಿ ಸಂಭವಿಸುತ್ತದೆ. ಇದನ್ನು ಹೋಗಲಾಡಿಸಲು ಮನೆಯಲ್ಲಿ ತಯಾರಿಸಿದ ಹೇರ್ ಮಾಸ್ಕ್ ಬಳಸುವುದು ಉತ್ತಮ. ಏಕೆಂದರೆ ಇವುಗಳಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.

ಕೂದಲು ತುದಿಯಲ್ಲಿ ಸೀಳಾಗುವುದನ್ನು ಮನೆಯಲ್ಲಿ ಸುಲಭವಾಗಿ ತಡೆಗಟ್ಟಲು ಮತ್ತು ಸರಿಪಡಿಸಲು ಇಲ್ಲಿ ನಾವು ಕೆಲವು ಉತ್ತಮ ಪರಿಹಾರಗಳನ್ನು ತಿಳಿಸಿಕೊಟ್ಟಿದ್ದೇವೆ:

ಮೊಸರು ಮತ್ತು ಆಲಿವ್ ಎಣ್ಣೆ ಮಾಸ್ಕ್:

ಮೊಸರು ಮತ್ತು ಆಲಿವ್ ಎಣ್ಣೆ ಮಾಸ್ಕ್:

ಆಲಿವ್ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು ಇದ್ದು, ಕೂದಲಿಗೆ ಅಗತ್ಯವಿರುವ ತೇವಾಂಶ ನೀಡುತ್ತವೆ. ಜೊತೆಗೆ ಕೂದಲನ್ನು ಹಾನಿಯಾಗದಂತೆ ರಕ್ಷಿಸುತ್ತವೆ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ನೆತ್ತಿಯಿಂದ ಡೆಡ್ ಸೆಲ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆರೋಗ್ಯಕರ ನೆತ್ತಿ ಆರೋಗ್ಯಕರ ಕೂದಲನ್ನು ಉತ್ಪಾದಿಸುತ್ತದೆ.

ಇದಕ್ಕಾಗಿ ಅರ್ಧ ಚಪ್ ಮೊಸರನ್ನು 2 ಚಮಚ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಇದನ್ನು ನಿಮ್ಮ ಕೂದಲಿಗೆ ಮಾಸ್ಕ ನಂತೆ ಹಚ್ಚಿ, 20 ರಿಂದ 30 ನಿಮಿಷಗಳ ಕಾಲ ಬಿಡಿ ನಂತರ ತೊಳೆಯಿರಿ.

ಮೊಟ್ಟೆಯ ಹಳದಿ ಮತ್ತು ಜೇನುತುಪ್ಪ ಮಾಸ್ಕ್:

ಮೊಟ್ಟೆಯ ಹಳದಿ ಮತ್ತು ಜೇನುತುಪ್ಪ ಮಾಸ್ಕ್:

ಜೇನುತುಪ್ಪವು ನೈಸರ್ಗಿಕ ಹ್ಯೂಮೆಕ್ಟಂಟ್ ಆಗಿದ್ದು ಅದು ಶುಷ್ಕತೆಯನ್ನು ತಡೆದು, ತೇವಾಂಶವನ್ನು ಕೂದಲಿಗೆ ನೀಡುವುದು. ಮೊಟ್ಟೆಗಳಲ್ಲಿ ಅಮೈನೊ ಆಮ್ಲಗಳು ಸಮೃದ್ಧವಾಗಿದ್ದು, ಕೂದಲು ಸೀಳಾಗುವುದನ್ನು ತಡೆಯುತ್ತದೆ. ಈ ಎರಡು ಪದಾರ್ಥಗಳು ಕೂದಲಿನ ಹೊಳಪು, ಸದೃಢತೆ ಮತ್ತು ಪ್ರಮಾಣ ಪುನಃಸ್ಥಾಪಿಸಬಹುದು.

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಒಂದು ಮೊಟ್ಟೆಯ ಹಳದಿಯನ್ನು 1 ಟೀ ಚಮಚ ಜೇನುತುಪ್ಪದೊಂದಿಗೆ ಸೇರಿಸಿ, ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ, ಒಂದು ಗಂಟೆ ಬಿಟ್ಟು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.

ತೆಂಗಿನ ಎಣ್ಣೆ ಚಿಕಿತ್ಸೆ:

ತೆಂಗಿನ ಎಣ್ಣೆ ಚಿಕಿತ್ಸೆ:

ತೆಂಗಿನ ಎಣ್ಣೆ ನಿಮ್ಮ ಕೂದಲಿಗೆ ಉತ್ತಮವಾದ ಎಣ್ಣೆಯಾಗಿದೆ. ಅರ್ಧ ಕಪ್ ತೆಂಗಿನ ಎಣ್ಣೆಯನ್ನು 15 ಸೆಕೆಂಡುಗಳ ಕಾಲ ಬೆಚ್ಚಗಾಗಿಸಿ ಮತ್ತು ನಿಮ್ಮ ಒಣ ಕೂದಲಿಗೆ ಹಚ್ಚಿ. ಸೀಳು ತುದಿಗಳನ್ನು ಗುಣಪಡಿಸಲು ನೆತ್ತಿಯ ಮೇಲೆ ಮತ್ತು ತುದಿಗಳಿಗೆ ಎಣ್ಣೆಯನ್ನು ಹಚ್ಚಬೇಕು, ನಂತರ ನಿಮ್ಮ ತಲೆಯನ್ನು ಟವೆಲ್‌ನಲ್ಲಿ ಕಟ್ಟಿಕೊಳ್ಳಿ ಅಥವಾ ಶವರ್ ಕ್ಯಾಪ್ ಹಾಕಿ ಕನಿಷ್ಠ 30 ನಿಮಿಷಗಳ ಕಾಲ ಬಿಡಿ. ಸೌಮ್ಯವಾದ ಶಾಂಪೂ ಬಳಸಿ ಅದನ್ನು ತೊಳೆಯಿರಿ.

ಆಪಲ್ ಸೈಡರ್ ವಿನೆಗರ್ ನಿಂದ ತೊಳೆಯುವಿಕೆ:

ಆಪಲ್ ಸೈಡರ್ ವಿನೆಗರ್ ನಿಂದ ತೊಳೆಯುವಿಕೆ:

ವಿನೆಗರ್ ನಲ್ಲಿ ಕೂದಲನ್ನು ತೊಳೆಯುವುದರಿದ ನಿಮ್ಮ ಕೂದಲು ತುಂಬಾ ಮೃದುವಾಗುವುದು. ಆಪಲ್ ಸೈಡರ್ ವಿನೆಗರ್ ನಲ್ಲಿರುವ ಅಸಿಟಿಕ್ ಆಮ್ಲವು ಕೂದಲಿನ ಕೊಳೆಯನ್ನು ತೆಗೆಯುತ್ತದೆ ಮತ್ತು ಕೂದಲನ್ನು ಬಲಪಡಿಸಿ, ಹೊಳಪನ್ನು ನೀಡುತ್ತದೆ. 1 ಕಪ್ ನೀರನ್ನು ಕುದಿಸಿ ತಣ್ಣಗಾಗಲು ಬಿಡಿ, ಅದಕ್ಕೆ 2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಮತ್ತು ಶಾಂಪೂ ಮಾಡಿದ ನಂತರ ಅದರಲ್ಲಿ ನಿಮ್ಮ ಕೂದಲನ್ನು ತೊಳೆಯಿರಿ. ತೊಳೆಯುವ ಮೊದಲು ಒಂದು ನಿಮಿಷ ಕೂದಲನ್ನು ಬಿಡಿ.

English summary

DIY Home Remedies to Heal Split Ends in Kannada

Here we talking about DIY Home Remedies to heal split ends in Kannada, read on
Story first published: Tuesday, July 27, 2021, 12:22 [IST]
X
Desktop Bottom Promotion