For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವುದನ್ನು ತಡೆಯುವ ಶಕ್ತಿ ಈ ಹೇರ್ ಮಾಸ್ಕ್‌ಗಳಿಗಿವೆ

|

ದಟ್ಟ ಕೇಶರಾಶಿ ಯಾರಿಗೆ ಇಷ್ಟ ಇಲ್ಲ ಹೇಳಿ? ಆದರೆ, ಆಸೆಯಿಂದ ಬೆಳೆಸಿದ ಕೂದಲು ಉದುರಲು ಶುರುವಾದಾಗ ಆಗುವ ಸಂಕಟ ಅಷ್ಟಿಷ್ಟಲ್ಲ. ಎಲ್ಲಾ ಕೂದಲು ಉದುರಿ ಬಿಡುತ್ತದೆಯೇನೋ ಎಂಬ ಭಯ ಆರಂಭವಾಗುವುದಂತೂ ಸುಳ್ಳಲ್ಲ. ಅಂತಹವರು ಕೂದಲು ಉದುರುವಿಕೆ ತಡೆಯಲು ಕೆಲವು ಹೇರ್ ಮಾಸ್ಕ್ಕ ಗಳನ್ನು ಪ್ರಯತ್ನಿಸಬಹುದು. ಇವುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದಲೂ ಕೂದಲುದುರುವಿಕೆ ಹತೋಟಿಗೆ ಬರದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಕೂದಲುರುವಿಕೆ ಕಡಿಮೆ ಮಾಡಲು ಸಹಾಯ ಮಾಡುವ ಹೇರ್ ಮಾಸ್ಕ್‌ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮೊಟ್ಟೆಯ ಹೇರ್ ಮಾಸ್ಕ್:

ಮೊಟ್ಟೆಯ ಹೇರ್ ಮಾಸ್ಕ್:

ಇದನ್ನು ತಯಾರಿಸಲು ಒಂದು ಮೊಟ್ಟೆ, ಎರಡು ಕಪ್ ಹಾಲು, ಎರಡು ಚಮಚ ನಿಂಬೆ ರಸ ಮತ್ತು ಆಲಿವ್ ಎಣ್ಣೆಯನ್ನು ತೆಗೆದುಕೊಂಡು, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಕೂದಲಿಗೆ ಹಚ್ಚಿ. ಮೊಟ್ಟೆಯಲ್ಲಿ ಕೂದಲ ಬೆಳವಣಿಗೆಗೆ ಅಗತ್ಯವಾದ ಸಾಕಷ್ಟು ಪ್ರೊಟೀನ್ ಇದೆ. ಇದು ನಿಮ್ಮ ಕೂದಲಿಗೆ ಹೊಳಪನ್ನು ಕೂಡ ನೀಡುತ್ತದೆ.

ಸಲಹೆ: ಇದರ ದುಷ್ಪರಿಣಾಮ ಏನೆಂದರೆ, ಹೆಚ್ಚಿನ ಪ್ರಮಾಣ ಪ್ರೊಟೀನ್ ಕೂದಲನ್ನು ಒಣಗುವಂತೆ ಮಾಡುತ್ತದೆ ಆದ್ದರಿಂದ ಇದನ್ನು ಆಗಾಗ್ಗೆ ಬಳಸಬೇಡಿ.

ಮೊಸರು ಹೇರ್ ಮಾಸ್ಕ್:

ಮೊಸರು ಹೇರ್ ಮಾಸ್ಕ್:

ಈ ಹೇರ್ ಮಾಸ್ಕ್ ಮಾಡಲು, ಒಂದು ಕಪ್ ಮೊಸರು, ಒಂದು ಚಮಚ ಆಪಲ್ ಸೈಡರ್ ವಿನೆಗರ್ ಮತ್ತು ಜೇನುತುಪ್ಪವನ್ನು ತೆಗೆದುಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿ ನಂತರ ಹಚ್ಚಿ. ಮೊಸರು ಕೂದಲಿನ ಹಾನಿಯನ್ನು ಕಡಿಮೆ ಮಾಡಲು ಹೆಸರುವಾಸಿಯಾಗಿದ್ದು, ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಈ ಮಾಸ್ಕ್ ಕೂದಲನ್ನು ಚೆನ್ನಾಗಿ ತೇವಗೊಳಿಸಿ, ಪೋಷಿಸುತ್ತದೆ. ಜೊತೆಗೆ ಮೃದುವಾದ ಮತ್ತು ರೇಷ್ಮೆಯಂತಹ ನೋಟವನ್ನು ನೀಡುತ್ತದೆ.

ಗ್ರೀನ್ ಟೀ ಹೇರ್ ಮಾಸ್ಕ್:

ಗ್ರೀನ್ ಟೀ ಹೇರ್ ಮಾಸ್ಕ್:

ಈ ಹೇರ್ ಮಾಸ್ಕ್ ಮಾಡಲು ನಿಮಗೆ ಮೊಟ್ಟೆಯ ಹಳದಿ ಲೋಳೆ ಬೇಕಾಗುತ್ತದೆ. ಒಂದು ಮೊಟ್ಟೆಯ ಹಳದಿ ಲೋಳೆ ಮತ್ತು ಎರಡು ಚಮಚ ಗ್ರೀನ್ ಟೀ ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, ಕೂದಲಿಗೆ ಹಚ್ಚಿ. ಇದು ಕೂದಲು ಉದುರುವಿಕೆ ತಡೆಯಲು ಸಹಾಯ ಮಾಡುವುದಲ್ಲದೇ, ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ಹಸಿರು ಚಹಾದಲ್ಲಿರುವುದರಿಂದ, ಇದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಸಲಹೆ: ಫೇಸ್ ಮಾಸ್ಕ್ ಅನ್ನು ಬಳಸಿದ ನಂತರ ನಿಮ್ಮ ಕೂದಲು ಜಿಡ್ಡಾಗಿದ್ದರೆ, ಆ ಮಾಸ್ಕ್ ನಿಮಗೆ ಕೆಲಸ ಮಾಡದ ಕಾರಣ ಇರಬಹುದು. ನೀವು ವಿವಿಧ ಪರ್ಯಾಯಗಳನ್ನು ಪ್ರಯತ್ನಿಸಬಹುದು.

ಬಾಳೆಹಣ್ಣಿನ ಹೇರ್ ಮಾಸ್ಕ್:

ಬಾಳೆಹಣ್ಣಿನ ಹೇರ್ ಮಾಸ್ಕ್:

ಬಾಳೆಹಣ್ಣಿನ ಹೇರ್ ಮಾಸ್ಕ್‌ಗಳು ನಿಮ್ಮ ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಸಂರಕ್ಷಕನಾಗಿ ಕಾರ್ಯನಿರ್ವಹಿಸಬಲ್ಲವು. ಕೂದಲಿನ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಮುಖ್ಯವಾದ ಪೊಟ್ಯಾಸಿಯಮ್, ಜೀವಸತ್ವಗಳು ಮತ್ತು ನೈಸರ್ಗಿಕ ಎಣ್ಣೆಯಂತಹ ಪದಾರ್ಥಗಳಲ್ಲಿ ಇದು ತುಂಬಾ ಸಮೃದ್ಧವಾಗಿದೆ. ಈ ಮಾಸ್ಕ್ ತಯಾರಿಸಲು ಎರಡು ಮಾಗಿದ ಬಾಳೆಹಣ್ಣುಗಳು, ಒಂದು ಚಮಚ ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಮತ್ತು ಜೇನುತುಪ್ಪವನ್ನು ಬಳಸಿ. ನಿಮ್ಮ ಕೂದಲನ್ನು ದೃಢವಾಗಿ ಮತ್ತು ಆರೋಗ್ಯಕರವಾಗಿಸುವುದರ ಜೊತೆಗೆ, ಇದು ತಲೆಹೊಟ್ಟು ಕಡಿಮೆ ಮಾಡುತ್ತದೆ.

ಸಲಹೆ: ಕೂದಲಿನ ಮಾಸ್ಕ್‌ನ್ನು ನಿಮ್ಮ ನೆತ್ತಿಯಿಂದ ಕೂದಲಿನ ತುದಿಗಳಿಗೆ ಹಚ್ಚಿ.

ಆವಕಾಡೊ ಹೇರ್ ಮಾಸ್ಕ್:

ಆವಕಾಡೊ ಹೇರ್ ಮಾಸ್ಕ್:

ಆವಕಾಡೊ ವಿಟಮಿನ್ ಸಿ ಮತ್ತು ಬಿ, ಕಬ್ಬಿಣ, ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದ್ದು, ಕೂದಲಿನ ಬೆಳವಣಿಗೆಗೆ ಮತ್ತು ಕೂದಲನ್ನು ನೇರಗೊಳಿಸಲು ಮುಖ್ಯವಾಗಿದೆ. ಈ ಹೇರ್ ಮಾಸ್ಕ್ ಮಾಡಲು, ಒಂದು ಮಾಗಿದ ಆವಕಾಡೊ, ಒಂದು ಕಪ್ ಹಾಲು, ಒಂದು ಚಮಚ ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ. ಇದು ಕೂದಲು ಉದುರುವಿಕೆ ಮತ್ತು ಫ್ರಿಜ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಕೂದಲನ್ನು ಮೃದು ಮತ್ತು ರೇಷ್ಮೆಯಂತೆ ಮಾಡುತ್ತದೆ.

ಸಲಹೆ: ಒಣ ಕೂದಲಿನ ಮೇಲೂ ನೀವು ಹೇರ್ ಮಾಸ್ಕ್ ಅನ್ನು ಬಳಸಬಹುದು. ತೊಳೆಯುವ ಮೊದಲು 20 ನಿಮಿಷಗಳ ಕಾಲ ಬಿಡಿ.

ರೋಸ್ಮರಿ ಹೇರ್ ಮಾಸ್ಕ್:

ರೋಸ್ಮರಿ ಹೇರ್ ಮಾಸ್ಕ್:

ಈ ಹೇರ್ ಮಾಸ್ಕ್ ಮಾಡಲು 3 ಟೇಬಲ್ಸ್ಪೂನ್ ಚೆನ್ನಾಗಿ ಕತ್ತರಿಸಿದ ರೋಸ್ಮರಿ ಮತ್ತು ಒಂದು ಕಪ್ ನೀರನ್ನು ತೆಗೆದುಕೊಳ್ಳಿ. ರೋಸ್ಮರಿಯನ್ನು ಕನಿಷ್ಠ 2-5 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಈ ಮಾಸ್ಕ್ ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅದರೊಂದಿಗೆ, ರೋಸ್ಮರಿ ಕೋಶಕಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಸಲಹೆ: ಹೇರ್ ಮಾಸ್ಕ್ ಹಚ್ಚಿದ ನಂತರ ಕಂಡೀಷನರ್ ಬಳಸದಿದ್ದರೂ ಪರವಾಗಿಲ್ಲ.

ತೆಂಗಿನಕಾಯಿ ಮತ್ತು ಕರಿಬೇವಿನ ಎಲೆಗಳ ಮಾಸ್ಕ್:

ತೆಂಗಿನಕಾಯಿ ಮತ್ತು ಕರಿಬೇವಿನ ಎಲೆಗಳ ಮಾಸ್ಕ್:

ಕರಿಬೇವಿನ ಎಲೆಗಳು ನಿಮ್ಮ ಕೂದಲಿಗೆ ಒಟ್ಟಾರೆ ಪ್ರಯೋಜನವನ್ನು ನೀಡುತ್ತದೆ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವುದರಿಂದ ಹಿಡಿದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ತೆಂಗಿನ ಎಣ್ಣೆಯು ಕೂದಲಿಗೆ ಪ್ರೊಟೀನ್ ಸೇರಿಸಲು ಸಹಾಯ ಮಾಡುತ್ತದೆ. ಈ ಪ್ಯಾಕ್ ಮನೆಯಲ್ಲಿ ಮಾಡುವುದು ತುಂಬಾ ಸುಲಭ. 10-12 ಕರಿಬೇವಿನ ಎಲೆಗಳು ಮತ್ತು ಎರಡು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ತೆಂಗಿನ ಎಣ್ಣೆಯಲ್ಲಿ ಎಲೆಗಳನ್ನು ಬಿಸಿ ಮಾಡಿ, ಹಚ್ಚಿ.

ಸಲಹೆ: ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಎರಡು ಬಾರಿ ಇದನ್ನು ಬಳಸಿ.

English summary

Different types of Hair Masks for Hair Fall in Kannada

Here we talking about Different types of hair masks for Hair Fall in Kannada, read on
Story first published: Thursday, January 6, 2022, 12:43 [IST]
X
Desktop Bottom Promotion