For Quick Alerts
ALLOW NOTIFICATIONS  
For Daily Alerts

ಇವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕೂದಲು ಸೊಂಪಾಗಿ ಬೆಳೆಯುತ್ತೆ

|

ಕೂದಲು ತೆಳುವಾಗುತ್ತಿದೆ, ಕೂದಲು ಉದುರುತ್ತಿದೆ, ತಲೆ ಹೊಟ್ಟು ಇವೆಲ್ಲಾ ಹೆಚ್ಚಿನವರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಸೊಂಪಾದ ಕೂದಲು ಮುಖಕ್ಕೆ ಲಕ್ಷಣ, ಕೂದಲು ಕಡಿಮೆಯಾದರೆ ನಾವು ಎಷ್ಟೇ ಸುಂದರವಾಗಿದ್ದರೂ ಏನೋ ಕೊರತೆ ಇರುವಂತೆ ಕಾಣಿಸುವುದು. ಅಲ್ಲದೆ ಸುಂದರವಾದ ಕೂದಲು ನಮ್ಮ ಆತ್ಮ ವಿಶ್ವಾಸವನ್ನೂ ಹೆಚ್ಚಿಸುತ್ತದೆ.

foods for hair growth

ಕೂದಲಿಗೆ ಬಾಹ್ಯ ಆರೈಕೆ ಮಾತ್ರ ಸಾಕಾಗಲ್ಲ, ಒಳಗಿನಿಂದಲೂ ಆರೈಕೆ ಮಾಡಬೇಕು ಅಂದರೆ ನೀವು ಕೂದಲಿಗೆ ಅವಶ್ಯಕವಿರುವ ಆಹಾರ ಹಾಗೂ ಸಪ್ಲಿಮೆಂಟ್ಸ್ ಸೇವಿಸಬೇಕಾಗುತ್ತದೆ. ನೀವು ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಲು ಬಯಸುವುದಾದರೆ ಇವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಅಲ್ಲದೆ ಇವುಗಳು ಇತರ ಆರೋಗ್ಯಕ್ಕೂ ತುಂಬಾ ಒಳ್ಳೆಯದು:

ಕರಿಬೇವು

ಕರಿಬೇವು

ಇದರಲ್ಲಿ ವಿಟಮಿನ್‌ ಸಿ ಇರುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದು. ಅಲ್ಲದೆ ಕೊಲೆಸ್ಟ್ರಾಲ್‌, ಮೈ ಬೊಜ್ಜು ನಿಯಂತ್ರಣದಲ್ಲಿಡಲು ಕೂಡ ಕರಿಬೇವು ತುಂಬಾ ಸಹಕಾರಿ. ದಿನಾ 3-4 ಕರಿಬೇವು ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಅಗಸೆ ಬೀಜ

ಅಗಸೆ ಬೀಜ

ಕೂದಲಿನ ಆರೊಗ್ಯ ಹೆಚ್ಚಿಸುವ ಮತ್ತೊಂದು ಸೂಪರ್ ಫುಡ್ಸ್ ಅಂದರೆ ಫ್ಲ್ಯಾಕ್ಸಿ ಸೀಡ್‌ ಅಥವಾ ಅಗಸೆ ಬೀಜ. ಅಗಸೆ ಬೀಜವನ್ನು ರಾತ್ರಿ ನೆನೆ ಹಾಕಿ ಆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಅಗಸೆ ಬೀಜ ಕೂಡ ಜಗಿದು ತಿನ್ನಬಹುದು.

ಕಹಿ ಬೇವಿನ ಎಲೆ

ಕಹಿ ಬೇವಿನ ಎಲೆ

ಬೇವು ಕಹಿಯಾದರೂ ಆರೋಗ್ಯಕ್ಕೆ ಸಿಹಿ. ಇದನ್ನು ತಿನ್ನುವುದರಿಂದ ಮಧುಮೇಹ ಕೂಡ ನಿಯಂತ್ರಿಸಬಹುದು, ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು, ಕೂದಲು ಸೊಂಪಾಗಿ ಬೆಳೆಯುವುದು. ಆದ್ದರಿಂದ ಕಹಿ ಬೇವನ್ನು ಯುಗಾದಿಗಷ್ಟೇ ಸೀಮಿತ ಮಾಡಬೇಡಿ, ದಿನಾ ತಿನ್ನಿ ಆರೋಗ್ಯ, ಕೂದಲು ಚೆನ್ನಾಗಿರುತ್ತೆ. ಎರಡು ಎಲೆ ತಿಂದರೆ ಸಾಕು.

ಎಳನೀರು

ಎಳನೀರು

ಎಳನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ಖನಿಜಾಂಶಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಕುಡಿಯುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು, ಮುಖದ ಕಾಂತಿಯೂ ಹೆಚ್ಚುವುದು.

ಸಿಟ್ರಸ್ ಆಹಾರ

ಸಿಟ್ರಸ್ ಆಹಾರ

ಸಿಟ್ರಸ್ ಆಹಾರದಲ್ಲಿ ವಿಟಮಿನ್ ಸಿ ಇರುತ್ತದೆ. ಇದು ಕೂದಲಿನ ಆರೈಕೆಗೆ ತುಂಬಾನೇ ಒಳ್ಳೆಯದು, ಅಲ್ಲದೆ ವಿಟಮಿನ್‌ ಸಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ, ಮುಖದ ಕಾಂತಿ ಹೆಚ್ಚಿಸಲು ಸಹಕಾರಿ.

ಕೊನೆಯದಾಗಿ: ಈ ಎಲ್ಲಾ ನೈಸರ್ಗಿಕ ವಸ್ತುಗಳನ್ನು ಮಿತಿಯಲ್ಲಿ ದಿನಾ ತಿಂದರೆ ಯಾವುದೇ ಅಡ್ಡಪರಿಣಾಮವಿಲ್ಲ ಸೊಂಪಾದ ಕೂದಲ ಜೊತೆಗೆ ಆರೋಗ್ಯ ಕೂಡ ವೃದ್ಧಿಸುವುದು.

English summary

Consume These Things On An Empty Stomach To Increase Hair Growth

Consume These Things On An Empty Stomach To Increase Hair Growth, Read on...
Story first published: Tuesday, April 12, 2022, 21:46 [IST]
X
Desktop Bottom Promotion