For Quick Alerts
ALLOW NOTIFICATIONS  
For Daily Alerts

ಎಷ್ಟೇ ಪ್ರಯತ್ನಿಸಿದರೂ, ಕೂದಲು ಬೆಳವಣಿಗೆ ಆಗ್ತಾ ಇಲ್ವಾ? ಹಾಗಾದ್ರೆ, ಈ ಹೇರ್ ಮಾಸ್ಕ್ ಒಮ್ಮೆ ಟ್ರೈ ಮಾಡಿ

|

ನಾವು ನಮ್ಮ ದೇಹದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ ಅಷ್ಟೇ ಕಾಳಜಿ ನಮ್ಮ ಕೂದಲಿಗೂ ಬೇಕಾಗುತ್ತದೆ. ಆರೋಗ್ಯಕರ, ಉದ್ದ ಕೂದಲು ಬೇಕೆಂದು ಉತ್ತಮ ಶಾಂಪೂ, ಕಂಡೀಷನರ್, ಹೇರ್ ಮಾಸ್ಕ್ ಮತ್ತು ಹೇರ್ ಸ್ಪಾಗಳನ್ನು ಮಾಡಿಕೊಂಡರೂ, ನಾವು ಬಯಸಿದ ಉದ್ದ ಕೂದಲು ಸಿಗುವುದಿಲ್ಲ.

ಸಾಮಾನ್ಯವಾಗಿ, ಸೂರ್ಯನ ಬೆಳಕು, ಹವಾಮಾನ ಬದಲಾವಣೆಗಳು, ಒತ್ತಡ ಮತ್ತು ಮಾಲಿನ್ಯವು ಕೂದಲಿನ ಮೇಲೆ ನೇರ ಪರಿಣಾಮ ಬೀರುತ್ತದೆ, ಇದು ಕೂದಲಿನ ಆರೋಗ್ಯವನ್ನು ಹದಗೆಡಿಸಿ, ಕೂದಲಿನ ಬೆಳವಣಿಗೆ ಕಡಿಮೆ ಮಾಡುತ್ತದೆ.

ನೀವೇನಾದರೂ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಬಯಸಿದರೆ ಮತ್ತು ಎಲ್ಲಾ ಉತ್ಪನ್ನಗಳನ್ನು ಪ್ರಯತ್ನಿಸಿ ಸುಸ್ತಾಗಿದ್ದರೆ, ಮನೆಯಲ್ಲಿ ತಯಾರಿಸಿದ ಈ ತೆಂಗಿನೆಣ್ಣೆ ಹೇರ್ ಮಾಸ್ಕ್ ಸಹಾಯಕ್ಕೆ ಬರುವುದು. ಹಾಗಾದರೆ ಬನ್ನಿ, ಅದನ್ನು ಹೇಗೆ ತಯಾರಿಸುವುದು ನೋಡೋಣ.

ತೆಂಗಿನ ಎಣ್ಣೆ ಮತ್ತು ದಾಲ್ಚಿನ್ನಿ ಹೇರ್ ಮಾಸ್ಕ್:

ತೆಂಗಿನ ಎಣ್ಣೆ ಮತ್ತು ದಾಲ್ಚಿನ್ನಿ ಹೇರ್ ಮಾಸ್ಕ್:

ನಿಮ್ಮ ಕೂದಲು ತುಂಬಾ ತೆಳ್ಳಗಿದ್ದರೆ ಮತ್ತು ಬೆಳವಣಿಗೆ ಕಡಿಮೆಯಾಗಿದ್ದರೆ, ತೆಂಗಿನೆಣ್ಣೆ ಮತ್ತು ದಾಲ್ಚಿನ್ನಿ ಹೇರ್ ಮಾಸ್ಕ್ ಬಳಸಬಹುದು. ಇವು ಕೂದಲಿಗೆ ಹೆಚ್ಚುವರಿ ಪೋಷಣೆಯನ್ನು ನೀಡಿ, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿ ರಕ್ತ ಪರಿಚಲನೆ ಸುಧಾರಿಸುವುದು ಮಾತ್ರವಲ್ಲದೆ ಕೂದಲಿನ ಬೆಳವಣಿಗೆಗೆ ಸಹಕಾರಿ. ತೆಂಗಿನ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದ್ದು, ಕೂದಲನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

ಕೂದಲಿಗೆ ತೆಂಗಿನೆಣ್ಣೆ:

ಕೂದಲಿಗೆ ತೆಂಗಿನೆಣ್ಣೆ:

ತೆಂಗಿನ ಎಣ್ಣೆ ಲಾರಿಕ್ ಆಮ್ಲ ಮತ್ತು ಕ್ಯಾಪ್ರಿಕ್ ಆಮ್ಲವನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ತೆಂಗಿನ ಎಣ್ಣೆಯಲ್ಲಿ ಬಲವಾದ ಆಂಟಿವೈರಲ್, ಆಂಟಿಕ್ರೋಬಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ತಲೆಯಲ್ಲಿ ಉಂಟಾಗುವ ಶಿಲೀಂದ್ರಗಳ ದೋಷವನ್ನು ನಿವಾರಿಸಲು ಸಹಾಯ ಮಾಡುವುದು. ಇದರಿಂದ ತಲೆ ಹೊಟ್ಟನ್ನು ನಿವಾರಿಸಿ, ಕೇಶ ರಾಶಿಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಕೂದಲಿಗೆ ದಾಲ್ಚಿನ್ನಿ:

ಕೂದಲಿಗೆ ದಾಲ್ಚಿನ್ನಿ:

ನೈಸರ್ಗಿಕ ಮೂಲದಿಂದ ದೊರೆಯುವ ದಾಲ್ಚಿನ್ನಿಯು ವಿಶೇಷ ಔಷಧೀಯ ಗುಣಗಳನ್ನು ಪಡೆದುಕೊಂಡಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣವನ್ನು ಒಳಗೊಂಡಿರುವುದರಿಂದ ಕೇಶ ರಾಶಿಯ ಸಮಸ್ಯೆಗಳಿಗೆ ಔಷಧವನ್ನಾಗಿ ಬಳಸಲಾಗುವುದು. ಇದು ಕೂದಲು ಉದುರುವಿಕೆ, ತಲೆ ಹೊಟ್ಟು, ಒರಟು ತನದಂತಹ ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡುವುದು. ಜೊತೆಗೆ ಹೊಸ ಕೋಶಗಳು ಮತ್ತು ಕೂದಲುಗಳ ಬೆಳವಣಿಗೆಗೆ ಪ್ರಚೋದನೆ ನೀಡುವುದು.

ಹೇರ್ ಮಾಸ್ಕ್ಗೆ ಅಗತ್ಯ ಪದಾರ್ಥಗಳು:

ಹೇರ್ ಮಾಸ್ಕ್ಗೆ ಅಗತ್ಯ ಪದಾರ್ಥಗಳು:

ಒಂದು ಟೀಚಮಚ ದಾಲ್ಚಿನ್ನಿ

ಒಂದು ಟೀಚಮಚ ತೆಂಗಿನ ಎಣ್ಣೆ

ಹೇರ್ ಪ್ಯಾಕ್ ಮಾಡುವುದು ಹೇಗೆ?:

ತೆಂಗಿನೆಣ್ಣೆ ಮತ್ತು ದಾಲ್ಚಿನ್ನಿ ಹೇರ್ ಮಾಸ್ಕ್ ಮಾಡಲು, ಮೊದಲು ಒಂದು ಬಟ್ಟಲಿನಲ್ಲಿ ದಾಲ್ಚಿನ್ನಿ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಸಿದ್ಧಪಡಿಸಿದ ಹೇರ್ ಮಾಸ್ಕ್ ಅನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ, ಮೆಲ್ಲಗೆ ಕೈಗಳಿಂದ ಕೂದಲನ್ನು ಮಸಾಜ್ ಮಾಡಿ.

ಈ ಮಾಸ್ಕ್ನ್ನು ಕೂದಲಿನ ಮೇಲೆ 30 ರಿಂದ 45 ನಿಮಿಷಗಳ ಕಾಲ ಬಿಡಿ, ನಂತರ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ನಿಮ್ಮ ಕೂದಲಿಗೆ ಅನುಗುಣವಾಗಿ ದಾಲ್ಚಿನ್ನಿ ಮತ್ತು ಎಣ್ಣೆಯ ಪ್ರಮಾಣವನ್ನು ಸಹ ಹೆಚ್ಚಿಸಬಹುದು.

ಈ ಹೇರ್ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿ ಬಳಸಿ, ನಿಮ್ಮ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ.

English summary

Coconut Oil And Cinnamon Hair Mask for Improving Hair Growth in Kannada

Here we talking about Coconut Oil And Cinnamon Hair Mask fir Improving hair growth in kannada¸ read on
X
Desktop Bottom Promotion