For Quick Alerts
ALLOW NOTIFICATIONS  
For Daily Alerts

ಕತ್ತಿಯಂತ ದಪ್ಪ ಹುಬ್ಬು ಪಡೆಯಲು ಈ ಮನೆಮದ್ದು ಬಳಸಿ, ರಿಸಲ್ಟ್ ಗ್ಯಾರಂಟಿ!

|

ದಪ್ಪವಾದ, ಕಪ್ಪಾದ ಹಾಗೂ ಸುಂದರವಾದ ಹುಬ್ಬು ಬೇಕೆಂಬುದು ಎಲ್ಲ ಹೆಂಗಳೆಯರ ಆಸೆ. ಹುಡುಗಿಯರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಈ ಆಸೆ ಸಹಜ. ಈ ಹುಬ್ಬುಗಳು ಮುಖದ ಸೌಂದರ್ಯದ ಪ್ರತೀಕ. ಆದರೆ ಕೆಲವರು ದಪ್ಪ ಹುಬ್ಬುಗಳಿಂದ ವಂಚಿತರಾಗಿದ್ದು, ದಪ್ಪ ಹುಬ್ಬನ್ನು ಪಡೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಅಂತಹವರು ಈ ಮನೆಮದ್ದನ್ನು ಒಮ್ಮೆ ಪ್ರಯತ್ನಿಸಬಹುದು. ಇದು ನಿಮ್ಮ ಹುಬ್ಬಿನ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಈ ಕೆಳಗಿರುವ ಮಾಹಿತಿ ಓದಿ, ನಿಮಗೆ ತಿಳಿಯುತ್ತೆ ಆ ಮನೆಮದ್ದು ಯಾವುದು ಅಂತ.

ದಪ್ಪ ಹುಬ್ಬನ್ನು ಪಡೆಯಲು ಬಳಸಬೇಕಾದ ಮನೆಮದ್ದು ಈ ಕೆಳಗಿದೆ:

ಬೇಕಾಗಿರುವ ಸಾಮಾಗ್ರಿಗಳು:

ಬೇಕಾಗಿರುವ ಸಾಮಾಗ್ರಿಗಳು:

50 ಮಿ.ಗ್ರಾ ಹರಳೆಣ್ಣೆ

50 ಮಿ.ಗ್ರಾ ತೆಂಗಿನ ಎಣ್ಣೆ

50 ಮಿ.ಗ್ರಾ ಆಲಿವ್ ಎಣ್ಣೆ

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

50 ಮಿ.ಗ್ರಾ ಹರಳೆಣ್ಣೆ, 50 ಮಿ.ಗ್ರಾ ತೆಂಗಿನ ಎಣ್ಣೆ ಮತ್ತು 50 ಮಿ.ಗ್ರಾ ಆಲಿವ್ ಎಣ್ಣೆಯನ್ನು ತೆಗೆದುಕೊಳ್ಳಿ. ಈಗ ಈ ಮೂರು ಎಣ್ಣೆಯನ್ನು ಬೆರೆಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ.

ಬಳಸುವ ವಿಧಾನ:

ಬಳಸುವ ವಿಧಾನ:

ನೀವು ಮಲಗುವ ಮುನ್ನ ಪ್ರತಿ ರಾತ್ರಿ ಈ ಎಣ್ಣೆ ಮಿಶ್ರಣದ ಕೆಲವು ಹನಿಗಳನ್ನು ತೆಗೆದುಕೊಂಡು ನಿಮ್ಮ ಹುಬ್ಬುಗಳನ್ನು ಮಸಾಜ್ ಮಾಡಿ. ಇದನ್ನು ನಿರಂತರವಾಗಿ ಮಾಡುತ್ತಿರಿ. ಕೆಲವು ದಿನಗಳ ನಂತರ ಫಲಿತಾಂಶ ನೋಡಿ ನಿಮಗೆ ಆಶ್ಚರ್ಯವಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?:

ಇದು ಹೇಗೆ ಕೆಲಸ ಮಾಡುತ್ತದೆ?:

  • ಹರಳೆಣ್ಣೆಯು ಪ್ರೋಟೀನ್ ಮತ್ತು ಕೊಬ್ಬಿನಾಮ್ಲಗಳಿಂದ ತುಂಬಿರುತ್ತದೆ, ಇದು ಕೂದಲಿನ ಎಳೆಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.
  • ತೆಂಗಿನ ಎಣ್ಣೆ ಹುಬ್ಬುಗಳ ಸುತ್ತಲಿನ ಚರ್ಮಕ್ಕೆ ಬಹಳ ಒಳ್ಳೆಯದು. ಜೊತೆಗೆ ಕೂದಲಿನ ಬೆಳವಣಿಗೆಗೂ ಸಹಕಾರಿ.
  • ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಕೆ ಜೊತೆಗೆ ಕೊಬ್ಬಿನಾಮ್ಲಗಳಿವೆ, ಇದು ಕೂದಲು ಕಿರುಚೀಲಗಳನ್ನು ಸರಿಪಡಿಸಲು ಮತ್ತು ರಕ್ಷಿಸಲು ಸಹಾಯ ಮಾಡುತ್ತದೆ.
English summary

Castor oil, Coconut oil and Olive Oil Mix to Grow Thick Eyebrows in Kannada

Here we talking about castor oil, coconut oil and olive oil mix to grow thick eyebrows in kannada, read on
Story first published: Friday, May 7, 2021, 18:06 [IST]
X
Desktop Bottom Promotion