For Quick Alerts
ALLOW NOTIFICATIONS  
For Daily Alerts

ಒರಟಾದ ಕೂದಲಿಗೆ ಅತ್ತ್ಯುತ್ತಮವಾಗಿರುವ ಈ ಶಾಂಪೂಗಳನ್ನು ಮನೆಯಲ್ಲಿಯೇ ತಯಾರಿಸಬಹುದು

|

ಚಳಿಗಾಲ ಮೆಲ್ಲಗೇ ಕಾಲಿಡುತ್ತಿದೆ. ಇದು ಕೇವಲ ತಂಪಾದ ವಾತಾರಣವನ್ನು ಹೊತ್ತು ತರುವುದಿಲ್ಲ, ಜೊತೆಗೆ ಹಲವಾರು ಸೌಂದರ್ಯ ಸಮಸ್ಯೆಗಳನ್ನು ಕೊಡುಗೆಯಾಗಿ ನೀಡುವುದು. ಅಂತಹ ಸಮಸ್ಯೆಗಳಲ್ಲಿ ಶುಷ್ಕ ಅಥವಾ ಒರಟಾದ ಕೂದಲು ಒಂದು. ಅದರಲ್ಲೂ ನೈಸರ್ಗಿಕವಾಗಿ ಒಣ ಕೂದಲಿದ್ದವರಿಗೆ ಚಳಿಗಾಲ ಅತ್ಯಂತ ಭಯಾನಕ ಋತುವಾಗಿದೆ.

ಆದ್ದರಿಂದ ನಿಮ್ಮ ಒಣ ಕೂದಲಿಗೆ ಈಗಾಗಲೇ ಉತ್ತಮ ಶ್ಯಾಂಪೂಗಳನ್ನು ಹುಡುಕಲು ಪ್ರಾರಂಭಿಸಿದ್ದರೆ, ಈ ಲೇಖನ ನಿಮಗಾಗಿ. ಇಲ್ಲಿ, ನಿಮ್ಮ ಒಣ ಕೂದಲಿಗೆ ಚಿಕಿತ್ಸೆ ನೀಡುವ ಮತ್ತು ಅವುಗಳನ್ನು ಮೃದುವಾಗಿಸುವ ಕೆಲವು ಮನೆಯಲ್ಲಿ ತಯಾರಿಸಬಹುದಾದ ಶಾಂಪೂಗಳ ಬಗ್ಗೆ ಹೇಳಲಿದ್ದೇವೆ. ಮಾರುಕಟ್ಟೆ ಲಭ್ಯವಿರುವ ಹೆಚ್ಚಿನ ಶ್ಯಾಂಪೂಗಳು ರಾಸಾಯನಿಕಗಳಿಂದ ತುಂಬಿದ್ದು ನಿಮ್ಮ ಕೂದಲನ್ನು ಹಾನಿಗೊಳಿಸುತ್ತದೆ. ಹೀಗಾಗಿ, ನೈಸರ್ಗಿಕವಾಗಿ, ಮನೆಯಲ್ಲಿ ತಯಾರಿಸಿದ ಶ್ಯಾಂಪೂಗಳನ್ನು ಬಳಸಿ ನಿಮ್ಮ ಕೂದಲನ್ನು ಸ್ವಚ್ಛಗೊಳಿಸುವುದು ಉತ್ತಮ ಉಪಾಯವಾಗಿದೆ. ಇದು ಶುಷ್ಕತೆ ಮತ್ತು ಮಂದತನವನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ.

ಒರಟಾದ ಕೂದಲನ್ನು ಮೃದುಗೊಳಿಸುವ ಮನೆಯಲ್ಲಿಯೇ ತಯಾರಿಸಬಹುದಾದ ಶಾಂಪೂಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅಲೋವೆರಾ ಜೆಲ್ ಶಾಂಪೂ:

ಅಲೋವೆರಾ ಜೆಲ್ ಶಾಂಪೂ:

ಅಲೋವೆರಾವು ಆರ್ಧ್ರಕ ಗುಣಗಳನ್ನು ಹೊಂದಿದ್ದು, ನಿಮ್ಮ ಕೂದಲನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಅಲೋವೆರಾದಲ್ಲಿ ವಿಟಮಿನ್‌ಗಳು, ಅಗತ್ಯವಾದ ಅಮೈನೋ ಆಮ್ಲಗಳು, ಖನಿಜಗಳು, ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ಇದು ಕೂದಲಿನ ಆರೋಗ್ಯ ಮತ್ತು ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.

ಬೇಕಾಗುವ ಸಾಮಾಗ್ರಿಗಳು:

1 ½ ಕಪ್ ತೆಂಗಿನ ಎಣ್ಣೆ

1 ¾ ಕಪ್ ಅಲೋವೆರಾ ಜೆಲ್

ಸಾರಭೂತ ತೈಲದ ಕೆಲವು ಹನಿಗಳು

ಬಳಸುವ ವಿಧಾನ:

ಒಂದು ಬಟ್ಟಲಿನಲ್ಲಿ, ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ, ಮಿಶ್ರಣ ಮಾಡಿ, ಶಾಂಪೂವನ್ನು ಜಾರ್ನಲ್ಲಿ ಸುರಿದು, ಫ್ರಿಜ್ ನಲ್ಲಿಡಿ. ಕೂದಲನ್ನು ಒದ್ದೆ ಮಾಡಿದ ನಂತರ, ಸ್ವಲ್ಪ ಪ್ರಮಾಣದ ಶಾಂಪೂ ತೆಗೆದುಕೊಂಡು, ನೆತ್ತಿಯನ್ನು ಮಸಾಜ್ ಮಾಡಿ. ಈ ಶಾಂಪೂ ನೆತ್ತಿಯ ಮೇಲೆ ಸಂಗ್ರಹವಾಗಿರುವ ಎಲ್ಲಾ ಕೊಳಕು ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಜೊತೆಗೆ ದಪ್ಪ, ನಯವಾದ ಕೂದಲನ್ನು ನಿಮಗೆ ನೀಡುತ್ತದೆ.

ಜೇನುತುಪ್ಪ ಶಾಂಫೂ:

ಜೇನುತುಪ್ಪ ಶಾಂಫೂ:

ಜೇನುತುಪ್ಪವು ಎಮೋಲಿಯಂಟ್ ಮತ್ತು ಹ್ಯೂಮೆಕ್ಟಂಟ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಉತ್ತಮವಾದ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಈ ಶಾಂಪೂ ನಿಮ್ಮ ಮಂದ ಮತ್ತು ಒಣ ಕೂದಲಿಗೆ ಉತ್ತಮ ಹೊಳಪನ್ನು ನೀಡುತ್ತದೆ ಜೊತೆಗೆ, ಕೂದಲ ಕಿರುಚೀಲಗಳನ್ನು ಸುಗಮಗೊಳಿಸುತ್ತದೆ.

ಬೇಕಾಗುವ ಸಾಮಾಗ್ರಿಗಳು:

1 ಕಪ್ ತೆಂಗಿನ ಎಣ್ಣೆ

1 ಕಪ್ ಅಲೋವೆರಾ ಜೆಲ್

3-4 ಚಮಚ ಜೇನುತುಪ್ಪ

ಸಾರಭೂತ ತೈಲದ ಕೆಲವು ಹನಿಗಳು

1 ಟೀಸ್ಪೂನ್ ಆಲಿವ್ ಎಣ್ಣೆ

ಬಳಸುವ ವಿಧಾನ:

ಬಾಣಲೆಯಲ್ಲಿ, ಸ್ವಲ್ಪ ಬೆಚ್ಚಗಿನ ನೀರು ಮತ್ತು ಜೇನುತುಪ್ಪವನ್ನು ಸೇರಿಸಿ. ಸಮವಾಗಿ ಮಿಶ್ರಣ ಮಾಡಲು ನಿಧಾನವಾಗಿ ಬೆರೆಸಿ. ನಂತರ ಪ್ಯಾನ್ಗೆ ಎಲ್ಲಾ ಇತರ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಬಾಟಲಿಗೆ ಸುರಿಯಿರಿ, ಫ್ರಿಜರ್‌ನಲ್ಲಿಡಿ. ಬಳಕೆಗೆ ಮೊದಲು ಶಾಂಪೂ ಅಲ್ಲಾಡಿಸಿ. ಒದ್ದೆ ಕೂದಲಿನ ಮೇಲೆ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ತೊಳೆಯಿರಿ.

ತೆಂಗಿನ ಹಾಲಿನ ಶಾಂಪೂ:

ತೆಂಗಿನ ಹಾಲಿನ ಶಾಂಪೂ:

ಪ್ರೋಟೀನ್‌ಗಳು ಮತ್ತು ಪೋಷಕಾಂಶಗಳ ಉತ್ತಮತೆಯಿಂದ ಕೂಡಿರುವ ಈ ತೆಂಗಿನ ಹಾಲಿನ ಶಾಂಪೂ ಒಣ ಕೂದಲಿಗೆ ಪರಿಪೂರ್ಣವಾಗಿದೆ. ಈ ಶಾಂಪೂವನ್ನು ಬಳಸುವುದರಿಂದ ನಿಮ್ಮ ನೆತ್ತಿಯ ಮೇಲಿನ ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವವನ್ನು ನಿಯಂತ್ರಿಸಲು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಬೇಕಾಗುವ ಸಾಮಾಗ್ರಿಗಳು:

1 ಕಪ್ ತೆಂಗಿನ ಹಾಲು

1/4 ಕಪ್ ಆಲಿವ್ ಎಣ್ಣೆ

ಬಳಸುವ ವಿಧಾನ:

ಒಂದು ಬಟ್ಟಲಿನಲ್ಲಿ, ಎಣ್ಣೆ ಮತ್ತು ತೆಂಗಿನ ಹಾಲು ಸೇರಿಸಿ, ಮಿಶ್ರಣ ಮಾಡಿ, ಶಾಂಪೂವಾಗಿ ಬಳಸಿ. ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು ಅದನ್ನು ಬಿಡಿ.

ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಗಮನಿಸಿ:

ಇವು ನೈಸರ್ಗಿಕ ಶ್ಯಾಂಪೂಗಳಾಗಿದ್ದು, ಫ್ರಿಜ್‌ನಲ್ಲಿ ಇಟ್ಟರೂ, 2-3 ವಾರಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ನಿಮ್ಮ ಬಳಕೆಗೆ ಅನುಗುಣವಾಗಿ ಸಿದ್ಧಪಡಿಸಿ. ಅಲ್ಲದೆ, ಈ ಶ್ಯಾಂಪೂಗಳು ಸೋಪಿನ ಕೊರತೆಯಿಂದಾಗಿ ನೊರೆಯನ್ನು ಉಂಟುಮಾಡುವುದಿಲ್ಲ. ನೊರೆಯನ್ನು ಬಯಸಿದರೆ ನೀವು ಈ ಶ್ಯಾಂಪೂಗಳಿಗೆ ದ್ರವ ಸೋಪ್ ಅನ್ನು ಸೇರಿಸಬಹುದು. ಜೊತೆಗೆ ಈ ಶ್ಯಾಂಪೂಗಳನ್ನು ಎಲ್ಲಾ ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿದ್ದರೂ, ಅವು ನಿಮಗೆ ಕೆಲಸ ಮಾಡದಿರಬಹುದು. ನಿಮಗೆ ಫಲಿತಾಂಶಗಳು ಇಷ್ಟವಾಗದಿದ್ದರೆ ಅಥವಾ ಪದಾರ್ಥಗಳು ನೆತ್ತಿಯ ಮೇಲೆ ಯಾವುದೇ ಕಿರಿಕಿರಿ ಉಂಟುಮಾಡಿದರೆ, ತಕ್ಷಣವೇ ಶಾಂಪೂ ಬಳಸುವುದನ್ನು ನಿಲ್ಲಿಸಿ.

English summary

Best Homemade Shampoo For Dry Hair in Kannada

Here we talking about Best Homemade Shampoo For Dry Hair in Kannada, read on
Story first published: Tuesday, November 2, 2021, 13:04 [IST]
X
Desktop Bottom Promotion