For Quick Alerts
ALLOW NOTIFICATIONS  
For Daily Alerts

ಈ ಹೋಮ್‌ಮೇಡ್ ಶಾಂಪೂಗಳಿಂದ ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು

|

ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಕಲುಷಿತ ವಾತಾವರಣ, ಅನಾರೋಗ್ಯಕರ ಜೀವನಶೈಲಿಯೇ ಮುಖ್ಯ ಕಾರಣ. ಇದಕ್ಕಾಗಿ ಹಲವರು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವ ರಾಸಾಯನಿಕಯುಕ್ತ ಶಾಂಪೂಗಳನ್ನು ಅವಲಂಬಿಸಿದ್ದಾರೆ. ಆದರೆ, ಇದರಿಂದ ಸಿಗುವ ಫಲಿತಾಂಶ ತೃಪ್ತಿದಾಯಕವಾಗಿರುವುದಿಲ್ಲ.

ಆದರೆ, ಕೂದಲು ಉದುರುವಿಕೆಯಂತಹ ಕೂದಲಿನ ಸಮಸ್ಯೆಗಳಿಗೆ ನೈಸರ್ಗಿಕ ಪದಾರ್ಥಗಳನ್ನು ಹೇಗೆ ಬಳಸಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಇಲ್ಲಿ, ನೀವು ಪ್ರಯತ್ನಿಸಬಹುದಾದ ಕೆಲವು ಸುಲಭವಾದ ಮನೆಯಲ್ಲಿ ಕೂದಲು ಉದುರುವಿಕೆ ತಡೆಯುವ ಶಾಂಪೂ ಪಾಕವಿಧಾನಗಳನ್ನು ತಿಳಿಸಿಕೊಡಲಿದ್ದೇವೆ.

ಕೂದಲು ಉದುರುವಿಕೆ ತಡೆಯುವ ಶಾಂಪೂಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಈರುಳ್ಳಿ ಮತ್ತು ಗುಲಾಬಿ ಶಾಂಪೂ:

ಈರುಳ್ಳಿ ಮತ್ತು ಗುಲಾಬಿ ಶಾಂಪೂ:

ಈರುಳ್ಳಿ ನಿಮ್ಮ ಕೂದಲಿಗೆ ಉತ್ತಮ ಪದಾರ್ಥಗಳಲ್ಲಿ ಒಂದಾಗಿದ್ದು, ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ, ನೆತ್ತಿಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅಂತಿಮವಾಗಿ ನಿಮ್ಮ ಕೂದಲನ್ನು ಆರೋಗ್ಯಕರವಾಗಿಸುತ್ತದೆ. ಆದರೆ, ಈರುಳ್ಳಿಯನ್ನು ನೇರವಾಗಿ ನಿಮ್ಮ ಕೂದಲಿಗೆ ಬಳಸುವುದರಿಂದ ಕೂದಲಿನ ಮೇಲೆ ಕಟುವಾದ ವಾಸನೆಯನ್ನು ಬಿಡಬಹುದು. ಅದಕ್ಕಾಗಿ ಈ ಮನೆಯಲ್ಲಿ ತಯಾರಿಸಿದ ಶಾಂಪೂ ಕೇವಲ 2 ಪದಾರ್ಥಗಳನ್ನು ಬಳಸಿ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು:

1 ಈರುಳ್ಳಿ

1-2 ಚಮಚ ರೋಸ್ ವಾಟರ್

ಬಳಸುವ ವಿಧಾನ:

ಈರುಳ್ಳಿ ಸಿಪ್ಪೆ ತೆಗೆದು, ಜಜ್ಜಿ ರಸ ತೆಗೆಯಿರಿ. ಇದಕ್ಕೆ ರೋಸ್ ವಾಟರ್ ಸೇರಿಸಿ, ಚೆನ್ನಾಗಿ ಬೆರೆಸಿ. ನಿಮ್ಮ ಕೂದಲನ್ನು ಒದ್ದೆ ಮಾಡಿ, ಈ ಮಿಶ್ರಣವನ್ನು ಸ್ಪ್ರೇ ಬಾಟಲಿಯಿಂದ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಬಿಟ್ಟು, ಸಾಮಾನ್ಯ ನೀರಿನಿಂದ ತೊಳೆಯಿರಿ.

ನೆಲ್ಲಿಕಾಯಿ ಮತ್ತು ನಿಂಬೆ ಶಾಂಪೂ:

ನೆಲ್ಲಿಕಾಯಿ ಮತ್ತು ನಿಂಬೆ ಶಾಂಪೂ:

ನೆಲ್ಲಿಕಾಯಿ ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು, ಇದು ರಕ್ತವನ್ನು ಶುದ್ಧೀಕರಿಸುತ್ತದೆ ಜೊತೆಗೆ ನಿಮ್ಮ ಕೂದಲಿನ ಬಣ್ಣವನ್ನು ಹೆಚ್ಚಿಸುತ್ತದೆ. ನೆಲ್ಲಿಕಾಯಿಯ ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳು ತಲೆಹೊಟ್ಟು, ಶಿಲೀಂಧ್ರಗಳ ಸೋಂಕುಗಳು, ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ನಿಂಬೆ ಕೂಡ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ಕೂದಲು ಉದುರುವಿಕೆ ಮತ್ತು ಇತರ ಕೂದಲಿನ ತೊಂದರೆಗಳನ್ನು ತಡೆಯುತ್ತದೆ.

ಬೇಕಾಗುವ ಸಾಮಾಗ್ರಿಗಳು:

1 ಚಮಚ ನೆಲ್ಲಿಕಾಯಿ ಜ್ಯೂಸ್

1 ಚಮಚ ನಿಂಬೆ ರಸ

ಬಳಸುವ ವಿಧಾನ:

ಒಂದು ಬಟ್ಟಲಿನಲ್ಲಿ, ಎರಡೂ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ನೆತ್ತಿಯ ಮೇಲೆ ಹಚ್ಚಿ, 5 ನಿಮಿಷಗಳ ಕಾಲ ಹಿಡಿದುಕೊಳ್ಳಿ ಮತ್ತು ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಬಲವಾದ ನಿಂಬೆ ಸುಗಂಧವನ್ನು ತೊಡೆದುಹಾಕಲು, ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಬಹುದು.

ಶೀಗೆಕಾಯಿ ಮತ್ತು ಮೆಂತ್ಯೆ ಶಾಂಪೂ:

ಶೀಗೆಕಾಯಿ ಮತ್ತು ಮೆಂತ್ಯೆ ಶಾಂಪೂ:

ಶೀಗೆಕಾಯಿ ನಿಮ್ಮ ಕೂದಲಿಗೆ ಉತ್ತಮ ಕ್ಲೆನ್ಸರ್ ಮಾತ್ರವಲ್ಲದೆ ಇದು ನಿಮ್ಮ ಕೂದಲಿನ ಬೇರುಗಳನ್ನು ಬಲಪಡಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಮೆಂತ್ಯ ಬೀಜಗಳು ಪ್ರೋಟೀನ್ ಮತ್ತು ಕಬ್ಬಿಣದ ಉತ್ತಮ ಮೂಲವಾಗಿದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಬೇಕಾಗುವ ಸಾಮಾಗ್ರಿಗಳು:

10 ಗ್ರಾಂ ಶೀಗೆಕಾಯಿ

2-3 ಕಪ್ ನೀರು

1 ಟೀಸ್ಪೂನ್ ಮೆಂತ್ಯ ಬೀಜಗಳು

10 ಗ್ರಾಂ ಅಂಟುವಾಳ ಕಾಯಿ

ಅಗತ್ಯವಿರುವಂತೆ ನೀರು

ಬಳಸುವ ವಿಧಾನ:

ಬಾಣಲೆಯಲ್ಲಿ, ನೀರು ಮತ್ತು ಎಲ್ಲಾ ಪದಾರ್ಥಗಳನ್ನು ಸೇರಿಸಿ, ಕನಿಷ್ಠ 10-15 ನಿಮಿಷ ಬೇಯಿಸಿ, ತಣ್ಣಗಾಗಿಸಿ. ಇದನ್ನು ಸ್ಪ್ರೇ ಬಾಟಲಿಗೆ ಹಾಕಿ

ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಸಿಂಪಡಿಸಿ. 15-20 ನಿಮಿಷಗಳ ಕಾಲ ಇರಿಸಿ. ಸಾಮಾನ್ಯ ನೀರಿನಿಂದ ತೊಳೆಯಿರಿ.

ಮೊಟ್ಟೆ ಮತ್ತು ಅಲೋವೆರಾ ಶಾಂಪೂ:

ಮೊಟ್ಟೆ ಮತ್ತು ಅಲೋವೆರಾ ಶಾಂಪೂ:

ಈ ಮನೆಯಲ್ಲಿ ತಯಾರಿಸಿದ ಮೊಟ್ಟೆಯ ಶಾಂಪೂ ನಿಮ್ಮ ತೆಳ್ಳನೆಯ ಕೂದಲಿಗೆ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ. ಮೊಟ್ಟೆಯಲ್ಲಿ ಲೆಸಿಥಿನ್ ಇದ್ದು, ಇದು ಎಮಲ್ಸಿಫೈಯರ್ ಆಗಿ ಕಾರ್ಯನಿರ್ವಹಿಸಿ, ನಿಮ್ಮ ಕೂದಲನ್ನು ಕ್ಲೀನ್ ಮಾಡುತ್ತದೆ. ಇದು ವಿಟಮಿನ್ ಎ, ಡಿ, ಬಿ 12 ಮತ್ತು ಇತರ ಅಗತ್ಯ ಕೊಬ್ಬಿನಾಮ್ಲಗಳನ್ನು ಹೊಂದಿದೆ, ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಅಲೋವೆರಾ ನಿಮ್ಮ ಕೂದಲಿನ ನೆತ್ತಿಯನ್ನು ಸ್ವಚ್ಛಗೊಳಿಸಲು, ತಲೆಹೊಟ್ಟು ಕಡಿಮೆ ಮಾಡುತ್ತದೆ ಮತ್ತು ಕೂದಲು ಕಿರುಚೀಲಗಳನ್ನು ಅನಿರ್ಬಂಧಿಸುತ್ತದೆ, ಕೂದಲಿನ ಬೆಳವಣಿಗೆಯನ್ನು ಇನ್ನಷ್ಟು ಸುಧಾರಿಸುತ್ತದೆ.

ಬೇಕಾಗುವ ಸಾಮಾಗ್ರಿಗಳು:

1 ಮೊಟ್ಟೆಯ ಹಳದಿ ಲೋಳೆ

ಅಗತ್ಯವಿರುವಂತೆ ನೀರು

1 ಚಮಚ ಅಲೋವೆರಾ ಜೆಲ್

1 ಟೀಸ್ಪೂನ್ ಶಿಕಾಕಾಯಿ ಪುಡಿ

ಬಳಸುವ ವಿಧಾನ:

ಒಂದು ಬಟ್ಟಲಿನಲ್ಲಿ, ಮೊಟ್ಟೆಯ ಹಳದಿ ಲೋಳೆ ಮತ್ತು ಇತರ ಎಲ್ಲಾ ಪದಾರ್ಥಗಳನ್ನು ಸೇರಿಸಿ, ತೆಳುವಾದ ಸ್ಥಿರತೆಯನ್ನು ನೀಡಲು ಸ್ವಲ್ಪ ನೀರು ಸೇರಿಸಿ. ಇದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ, 15-20 ನಿಮಿಷಗಳ ಕಾಲ ಬಿಟ್ಟು, ಸಾಮಾನ್ಯ ನೀರಿನಿಂದ ತೊಳೆಯಿರಿ.

ಕಡಲೆಹಿಟ್ಟು ಮತ್ತು ಜೇನುತುಪ್ಪದ ಶಾಂಪೂ:

ಕಡಲೆಹಿಟ್ಟು ಮತ್ತು ಜೇನುತುಪ್ಪದ ಶಾಂಪೂ:

ಕಡಲೆಹಿಟ್ಟು ಪ್ರೋಟೀನ್, ಫೋಲಿಕ್ ಆಮ್ಲ, ಸತು ಮತ್ತು ಇತರ ಅಗತ್ಯ ಕೊಬ್ಬಿನಾಮ್ಲಗಳಿಂದ ತುಂಬಿದ್ದು, ಇದು ನಮ್ಮ ಕೂದಲಿಗೆ ಅದ್ಭುತವಾಗಿದೆ. ಜೊತೆಗೆ ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ಕೂದಲನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಜೇನುತುಪ್ಪವು ಆರ್ಧ್ರಕ ಗುಣಗಳನ್ನು ಹೊಂದಿದ್ದು ಅದು ನಿಮ್ಮ ನೆತ್ತಿಯನ್ನು ಆರೋಗ್ಯಕರವಾಗಿ ಮತ್ತು ಹೈಡ್ರೀಕರಿಸುತ್ತದೆ.

ಬೇಕಾಗುವ ಸಾಮಾಗ್ರಿಗಳು:

2 ಟೀಸ್ಪೂನ್ ಕಡಲೆಹಿಟ್ಟು

2 ಟೀಸ್ಪೂನ್ ಮೆಂತ್ಯ ಪುಡಿ

2 ಟೀಸ್ಪೂನ್ ಜೇನು

ಅಗತ್ಯವಿರುವಂತೆ ನೀರು

ಬಳಸುವ ವಿಧಾನ:

ಒಂದು ಬಟ್ಟಲಿನಲ್ಲಿ, ನಯವಾದ ಪೇಸ್ಟ್ ಮಾಡಲು ಎಲ್ಲಾ ಪದಾರ್ಥಗಳನ್ನು ಸೇರಿಸಿ, ಮಿಕ್ಸ್ ಮಾಡಿ. ಇದನ್ನು ನಿಮ್ಮ ನೆತ್ತಿಯ ಮೇಲೆಲ್ಲ ಅನ್ವಯಿಸಿ. 5 ನಿಮಿಷಗಳ ಕಾಲ ಬಿಟ್ಟು, ಸಾಮಾನ್ಯ ನೀರಿನಿಂದ ತೊಳೆಯಿರಿ.

English summary

Best Homemade Shaampoos Recipes in Kannada

Here we talking about Best homemade shaampoos recipes in kannada, read on
Story first published: Wednesday, January 19, 2022, 14:43 [IST]
X
Desktop Bottom Promotion