For Quick Alerts
ALLOW NOTIFICATIONS  
For Daily Alerts

ಕೂದಲಿನ ವೇಗದ ಬೆಳವಣಿಗೆಗೆ ಯಾವ ಎಣ್ಣೆ ಸೂಕ್ತ?

|

ಆರೋಗ್ಯಕರ ಕೂದಲಿಗಾಗಿ, ತೈಲ ಮಸಾಜ್ ತುಂಬಾ ಮುಖ್ಯ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಅಭ್ಯಾಸವಾಗಿದೆ. ಕೂದಲು ಸದೃಢ ಹಾಗೂ ಬಲವಾಗಬೇಕಾದರೆ, ಅದರ ಬೇರುಗಳನ್ನು ಪೋಷಿಸುವುದು ಅಗತ್ಯವಾಗಿರುತ್ತದೆ. ಅದಕ್ಕಿರುವ ದಾರಿಯೆಂದರೆ, ಎಣ್ಣೆ ಮಸಾಜ್ ಒಂದೇ. ಆದ್ದರಿಂದ ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚಿ, ಮಸಾಜ್ ಮಾಡಬೇಕು. ಆಗ ಮಾತ್ರ, ನಿಮ್ಮ ಕೇಶ ರಾಶಿ, ಸೊಂಪಾಗಿ ಬೆಳೆಯಲು ಸಾಧ್ಯ. ಆದರೆ, ಯಾವ ಎಣ್ಣೆ ಬಳಸಬೇಕು ಎಂಬುದು ಹೆಚ್ಚಿನವರಿಗೆ ಗೊಂದಲವಿರುತ್ತದೆ. ಅದಕ್ಕಾಗಿ ನಾವಿಂದು, ಕೂದಲು ಬೆಳವಣಿಗೆ ಉತ್ತೇಜಿಸುವಂತ ಎಣ್ಣೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಎಣ್ಣೆಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ತೆಂಗಿನ ಎಣ್ಣೆ :

ತೆಂಗಿನ ಎಣ್ಣೆ :

ತೆಂಗಿನ ಎಣ್ಣೆಯು ಅದರ ಹಿತವಾದ ಮತ್ತು ಗುಣಪಡಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ತೆಂಗಿನ ಎಣ್ಣೆಯು ಬಹು ಉಪಯೋಗಗಳನ್ನು ಹೊಂದಿದ್ದರೂ, ಕೂದಲಿನ ಎಣ್ಣೆಯಾಗಿ ಇದು ಇತರ ಬಳಕೆಗಳನ್ನು ಮೀರಿಸುತ್ತದೆ. ತೆಂಗಿನ ಎಣ್ಣೆ ಸುಕ್ಕುಗಟ್ಟಿದ ಕೂದಲಿಗೆ ಅಥವಾ ಒಣ ಕೂದಲಿಗೆ, ಗುಂಗುರು ಕೂದಲಿಗೆ ಅಥವಾ ನೇರಗೊಳಿಸಿದ ಕೂದಲು ಸೇರಿದಂತೆ, ಎಲ್ಲಾ ರೀತಿಯ ಕೂದಲಿನ ರಚನೆಗಳ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಎಣ್ಣೆಯು ಕೂದಲಿನ ಹಾನಿಯನ್ನು ತಡೆದು, ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೇ, ನಿಮ್ಮ ನೆತ್ತಿಯ ಆರೋಗ್ಯಕ್ಕೂ ಒಳ್ಳೆಯದು. ತೆಂಗಿನ ಎಣ್ಣೆಯ ಉತ್ತಮ ಭಾಗವೆಂದರೆ ಅದು ಮಾರುಕಟ್ಟೆಯಲ್ಲಿ ಬಹಳ ಸುಲಭವಾಗಿ ಲಭ್ಯವಿದ್ದು, ಹೆಚ್ಚು ದುಬಾರಿಯೂ ಇಲ್ಲ.

ಎಳ್ಳೆಣ್ಣೆ:

ಎಳ್ಳೆಣ್ಣೆ:

ಎಳ್ಳಿನ ಬೀಜಗಳಿಂದ ತೆಗೆದ ಎಳ್ಳೆಣ್ಣೆಯು ನಿಮ್ಮ ಕೂದಲಿಗೆ ಮಾಂತ್ರಿಕವಾಗಿ ಕೆಲಸ ಮಾಡುತ್ತದೆ. ಇದು ಪ್ರಕೃತಿಯಲ್ಲಿ ತಂಪಾಗಿದ್ದು, ವಿವಿಧ ರೀತಿಯ ಕೂದಲಿನ ಸಮಸ್ಯೆಗಳನ್ನು ಪರಿಹರಿಸಲು ಇದನ್ನು ಬಳಸಬಹುದು. ವಿಶೇಷವಾಗಿ ನೀವು ಹೆಚ್ಚಿನ ಮಾಲಿನ್ಯ ಮತ್ತು ಧೂಳಿನ ನಡುವೆ ವಾಸಿಸುತ್ತಿದ್ದರೆ ಕೂದಲಿನ ಸಮಸ್ಯೆಗಳನ್ನು ನಿಭಾಯಿಸುವುದು ಒಂದು ಕಷ್ಟಕರವಾದ ಕೆಲಸವಾಗಿದೆ. ಆಗ ಎಳ್ಳಿನ ಎಣ್ಣೆಯಿಂದ ಖಂಡಿತವಾಗಿ ಪರಿಹಾರ ಪಡೆಯಬಹುದು. ತಲೆಹೊಟ್ಟಿನಿಂದ ಒಣ ನೆತ್ತಿಯವರೆಗೆ, ಎಳ್ಳಿನ ಎಣ್ಣೆಯು ಖಂಡಿತವಾಗಿಯೂ ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳೊಂದಿಗೆ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ನಿಮ್ಮ ಕೂದಲಿಗೆ ಸಂಪೂರ್ಣ ಪೋಷಣೆಯನ್ನು ಒದಗಿಸಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ನೆಲ್ಲಿಕಾಯಿ ಎಣ್ಣೆ:

ನೆಲ್ಲಿಕಾಯಿ ಎಣ್ಣೆ:

ನೆಲ್ಲಿಕಾಯಿ ನಮ್ಮ ತಾಯಿ ಮತ್ತು ಅಜ್ಜಿಯ ನೆಚ್ಚಿನ ಪದಾರ್ಥವಾಗಿದೆ. ನೆಲ್ಲಿಕಾಯಿ ಹಣ್ಣಿನಿಂದ ಹೊರತೆಗೆಯಲಾದ ಎಣ್ಣೆಯನ್ನು ನೆಲ್ಲಿಕಾಯಿ ಎಣ್ಣೆ ಎಂದು ಕರೆಯಲಾಗುತ್ತದೆ. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು, ತೈಲವು ತಲೆಹೊಟ್ಟುಗೆ ಚಿಕಿತ್ಸೆ ನೀಡುತ್ತದೆ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನಿಮ್ಮ ಉದ್ದನೆಯ ಕೂದಲನ್ನು ಪ್ರದರ್ಶಿಸಲು ನೀವು ಆರಿಸಿಕೊಳ್ಳಬಹುದಾದ ತೈಲಗಳಲ್ಲಿ ನೆಲ್ಲಿಕಾಯಿ ಎಣ್ಣೆಯು ಒಂದು.

ಹರಳೆಣ್ಣೆ:

ಹರಳೆಣ್ಣೆ:

ಹರಳೆಣ್ಣೆಯು ನಿಮ್ಮ ಕೂದಲನ್ನು ಚೆನ್ನಾಗಿ ಪೋಷಿಸುವ ಮತ್ತೊಂದು ಎಣ್ಣೆಯಾಗಿದೆ. ಒಲಿಯಿಕ್ ಆಮ್ಲ ಮತ್ತು ಲಿನೋಲಿಯಿಕ್ ಆಮ್ಲದೊಂದಿಗೆ ಪ್ಯಾಕ್ ಮಾಡಲಾದ ಹರಳೆಣ್ಣೆಯು ಸೂಪರ್ ಹೈಡ್ರೇಟಿಂಗ್ ತೈಲವಾಗಿದೆ. ನಿಮ್ಮ ಒಣ ಕೂದಲನ್ನು ಆರ್ಧ್ರಕಗೊಳಿಸುವ ವಿಷಯಕ್ಕೆ ಬಂದಾಗ, ಹರಳೆಣ್ಣೆಯಂತೆ, ಬೇರೆ ಯಾವುದೂ ಕೆಲಸ ಮಾಡುವುದಿಲ್ಲ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದರ ಜೊತೆಗೆ, ಹರಳೆಣ್ಣೆಯು ನಿಮ್ಮ ಕೂದಲಿನ ನೋಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಮತ್ತು ಹೊಳೆಯುವ ಕೂದಲಿಗೆ, ಹರಳೆಣ್ಣೆಯು ಅತ್ಯುತ್ತಮವಾದದ್ದು. ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಹೊಂದಲು ಬಯಸಿದರೆ ಹರಳೆಣ್ಣೆಯನ್ನು ಆರಿಸಿಕೊಳ್ಳಿ.

ಬಾದಾಮಿ ಎಣ್ಣೆ :

ಬಾದಾಮಿ ಎಣ್ಣೆ :

ಬಾದಾಮಿ ಎಣ್ಣೆಯ ಪ್ರಯೋಜನಗಳು ಹಲವು. ನಿಮ್ಮ ಕೂದಲಿಗೆ ನೈಸರ್ಗಿಕ SPF ಒದಗಿಸುವುದರಿಂದ ಹಿಡಿದು ಅಕಾಲಿಕ ಕೂದಲು ಬಿಳಿಯಾಗುವುದನ್ನು ತಡೆಯುವವರೆಗೆ, ಬಾದಾಮಿ ಎಣ್ಣೆಯು ಮಾಂತ್ರಿಕ ಅಮೃತವಾಗಿದೆ. ಇದು ಸ್ವಲ್ಪ ದುಬಾರಿಯಾಗಿದ್ದರೂ, ತೈಲವು ಹಣಕ್ಕೆ ನಿಜವಾಗಿಯೂ ಮೌಲ್ಯಯುತವಾಗಿದೆ. ನಮ್ಮ ಸಲಹೆಯೆಂದರೆ, ಮಾರುಕಟ್ಟೆಯಲ್ಲಿನ ಬಾದಾಮಿ ಎಣ್ಣೆಯ ಬ್ರ್ಯಾಂಡ್‌ಗಳಿಂದ ದೂರವಿರಿ ಮತ್ತು ಸಾವಯವ ಬಾದಾಮಿ ಎಣ್ಣೆಗಳಿಗೆ ಹೋಗಿ. ನೈಸರ್ಗಿಕವಾಗಿ ಉದ್ದವಾದ ಮತ್ತು ಹೊಳಪುಳ್ಳ ಕೂದಲಿಗೆ, ಬಾದಾಮಿ ಎಣ್ಣೆಯು ಅತ್ಯಂತ ಪ್ರಯೋಜನಕಾರಿಯಾಗಿದೆ.

English summary

Best Hair Oils For Hair Growth in Kannada

Here we talking about Best Hair Oils For Hair Growth in kannada, read on
Story first published: Tuesday, January 25, 2022, 17:54 [IST]
X
Desktop Bottom Promotion