For Quick Alerts
ALLOW NOTIFICATIONS  
For Daily Alerts

ಈ ಎಣ್ಣೆಗಳಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತೆ, ಕೂದಲು ಸೊಂಪಾಗಿ ಬೆಳೆಯುತ್ತೆ

|

ಬಿಡುವಿಲ್ಲದ ಜೀವನದಲ್ಲಿ ನಾವು ಸಾಮಾನ್ಯವಾಗಿ ತಲೆನೋವನ್ನು ಅನುಭವಿಸುತ್ತೇವೆ. ಅದಕ್ಕೆ ಕಾರಣಗಳು ಸಾಕಷ್ಟಿರುತ್ತವೆ, ಒತ್ತಡ, ಗೊಂದಲ, ವಾತಾವರಣದ ಬದಲಾವಣೆ ಹೀಗೆ ಒಂದಲ್ಲ ಒಂದು ಕಾರಣದಿಂದ ತಲೆನೋವು ನಮ್ಮನ್ನು ಕಾಡುತ್ತಿರುತ್ತದೆ. ಆದರೆ ಅದಕ್ಕೆ ಸೂಕ್ತ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯ. ನಿಮಗೆ ಆಯಾಸ ಅಥವಾ ದಣಿವಿನಿಂದ ತಲೆನೋವು ಬಂದಿದ್ದರೆ ಈ ಆಯುರ್ವೇದ ತೈಲಗಳನ್ನು ಬಳಸಿ ಮಸಾಜ್ ಮಾಡಿ, ಇದು ತಲೆನೋವಿಗೆ ಪರಿಹಾರ ನೀಡುವುದಲ್ಲದೇ, ಕೂದಲಿಗೂ ಒಳ್ಳೆಯದು.

Best Ayurvedic Oil For Hair Massage in Kannada

ತಲೆ ಮಸಾಜ್ ಮಾಡಲು ಇಲ್ಲಿ ಉತ್ತಮವಾದ ಅಯುರ್ವೇದಿಕ್ ಎಣ್ಣೆಗಳ ಬಗ್ಗೆ ವಿವರಿಸಲಾಗಿದೆ:

ಲ್ಯಾವೆಂಡರ್ ಎಣ್ಣೆ:

ಲ್ಯಾವೆಂಡರ್ ಎಣ್ಣೆ:

ಲ್ಯಾವೆಂಡರ್ ಎಣ್ಣೆಯನ್ನು ಕೂದಲಿಗೆ ಮಸಾಜ್ ಮಾಡುವುದರಿಂದ, ನಿಮ್ಮ ಮನಸ್ಸಿನಲ್ಲಿನ ಗೊಂದಲವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ಜೊತೆಗೆ ಶಾಂತಿಯನ್ನ ನೀಡುತ್ತದೆ. ಮಸಾಜ್ ಮಾಡಲು, ಎರಡು ಚಮಚ ಹರಳೆಣ್ಣೆ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಸಾರಭೂತ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ. ತಯಾರಾದ ಮಿಕ್ಸ್ ಎಣ್ಣೆಯಿಂದ ಇಡೀ ದೇಹವನ್ನು ಮಸಾಜ್ ಮಾಡಿ. ಇದು ಮುಖದ ಮೇಲಿನ ಮೊಡವೆ ಸಮಸ್ಯೆಯನ್ನು ಸಹ ತೆಗೆದುಹಾಕುತ್ತದೆ.

ಕ್ಯಾಮೊಮೈಲ್ ಎಣ್ಣೆ:

ಕ್ಯಾಮೊಮೈಲ್ ಎಣ್ಣೆ:

ಈ ಎಣ್ಣೆಯನ್ನು ಮಹಿಳೆಯರು ಕೂದಲಿಗೆ ಹಚ್ಚದರೆ ಒತ್ತಡದಿಂದಾದ ತಲೆನೋವು ನೀವಾರಣೆಯಾಗುತ್ತದೆ. ಈ ಎಣ್ನೆಯನ್ನು ನಿಮ್ಮ ಹಣೆ ಹಾಗೂ ಕೂದಲಿಗೆ ಹಚ್ಚಿ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ನಿರಾಳೆತೆಯ ಭಾವ ನಿಮಗೆ ಅರಿವಾಗುತ್ತದೆ. ಮಾರುಕಟ್ಟೆಯಲ್ಲಿ ಎರಡು ವಿಧದ ಕ್ಯಾಮೊಮೈಲ್ ಎಣ್ಣೆ ಲಭ್ಯವಿದೆ. ರೋಮನ್ ಕ್ಯಾಮೊಮೈಲ್ ಎಣ್ಣೆ ಮತ್ತು ಜರ್ಮನ್ ಕ್ಯಾಮೊಮೈಲ್ ಎಣ್ಣೆ. ಎರಡೂ ಪ್ರಯೋಜನಕಾರಿ. ಇದನ್ನು ಕೊಟ್ಟಿಗೆಯ ಹೂ ಎಂದೂ ಕರೆಯುತ್ತಾರೆ. ಇವುಗಳನ್ನು ದೇಹದ ಮೇಲೆ ಹಚ್ಚಿ ಮಸಾಜ್ ಮಾಡಬಹುದು.

ನೀಲಗಿರಿ ಎಣ್ಣೆ:

ನೀಲಗಿರಿ ಎಣ್ಣೆ:

ನೀಲಗಿರಿ ತೈಲವು ಮನಸ್ಸು ಮತ್ತು ದೇಹದ ಆಯಾಸ, ನೋವು ಮತ್ತು ಸೆಳೆತವನ್ನು ನಿವಾರಿಸುತ್ತದೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಪ್ರತಿಜೀವಕಗಳ ಅಂಶಗಳನ್ನು ನೀಲಗಿರಿ ಎಣ್ಣೆ ಹೊಂದಿದೆ. ಇದು ನಿಮ್ಮ ಮುಖದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ತಲೆನೋವನ್ನು ಕಡಿಮೆ ಮಾಡಲು ನೀಲಗಿರಿ ಎಣ್ಣೆಯಿಂದ ನಿಮ್ಮ ಹಣೆಯನ್ನು ಮಸಾಜ್ ಮಾಡಿ. ಇದು ನಿಮ್ಮ ತಲೆನೋವಿಗೆ ಮುಕ್ತಿ ನೀಡುವುದಲ್ಲದೇ, ಒತ್ತಡವನ್ನೂ ತೊಡೆದುಹಾಕುತ್ತದೆ.

ಪುದೀನಾ ಎಣ್ಣೆ:

ಪುದೀನಾ ಎಣ್ಣೆ:

ಈ ಎಣ್ಣೆ ಆಯಾಸ, ಹೊಟ್ಟೆ ನೋವು, ಮುಟ್ಟಿನ ಸೆಳೆತ, ಮಹಿಳೆಯರಲ್ಲಿ ಅವಧಿಯ ಹೊಟ್ಟೆ ನೋವು, ತಲೆನೋವು, ಬೆನ್ನು ನೋವು ಇತ್ಯಾದಿಗಳಿಂದ ತ್ವರಿತ ಪರಿಹಾರ ನೀಡುತ್ತದೆ. ಈ ಎಣ್ಣೆಯನ್ನು ಹಚ್ಚುವುದರಿಂದ ನಿಮಗೆ ಸ್ವಲ್ಪ ಸುಡುವ ಸಂವೇದನೆ ಉಂಟಾಗುತ್ತದೆ, ಆದ್ದರಿಂದ ಈ ಎಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿ, ಮಸಾಜ್ ಮಾಡಿ.

ರೋಸ್ಮರಿ ಆಯಿಲ್ :

ರೋಸ್ಮರಿ ಆಯಿಲ್ :

ರೋಸ್ಮರಿ ಆಯಿಲ್ ನ ಸ್ಥಿರತೆ ತಲೆನೋವುಗಳಿಗೆ ತ್ವರಿತ ಪರಿಹಾರ ನೀಡುತ್ತದೆ. ಕೀಲು ನೋವು ನಿವಾರಣೆಯಲ್ಲೂ ಇದು ಕೆಲಸ ಮಾಡುತ್ತದೆ. ನೀವು ಈ ಎಣ್ಣೆಯನ್ನು ಮಲಗುವಾಗ ಬಳಸಬಹುದು, ಅಂದರೆ, ನೀವು ಮಲಗುವ ಬೆಡ್ ಮೇಲೆ ಕೆಲವು ಹನಿಗಳನ್ನು ಸಿಂಪಡಿಸಿ ಮಲಗಬಹುದು.

English summary

Best Ayurvedic Oil For Hair Massage in Kannada

Here we talking about Best Ayurvedic Oil For Hair Massage in kannada
Story first published: Saturday, May 15, 2021, 17:53 [IST]
X
Desktop Bottom Promotion