For Quick Alerts
ALLOW NOTIFICATIONS  
For Daily Alerts

ಕೂದಲು ಉದ್ದ ಬೆಳೆಯಲು ಈ ನೈಸರ್ಗಿಕ ವಿಧಾನ ಬಳಸಿ

|

ಕೂದಲು ಸುಂದರವಾಗಿ ಇರಬೇಕು ಎಂಬುದು ಎಲ್ಲರ ಆಸೆ. ಆದರೆ ಜೋಪಾನವಾಗಿ ಕಾಪಾಡಿಕೊಂಡು ಉದ್ದನೆಯ ಕೂದಲು ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಪ್ರತಿಯೊಬ್ಬರೂ ಕೂಡ ಇದಕ್ಕಾಗಿ ಅನೇಕ ಮಾರ್ಗಗಳನ್ನು ಅನುಸರಿಸುತ್ತಾರೆ. ನಿಜ ಹೇಳಬೇಕು ಎಂದರೆ ಇದಕ್ಕಾಗಿ ಆಧುನಿಕ ವಿಧಾನಕ್ಕಿಂತ ಸಾಂಪ್ರದಾಯಿಕ ಅಥವಾ ಆಯುರ್ವೇದದ ವಿಧಾನಗಳು ಬಹಳ ಉತ್ತಮ.

Natural Ayurvedic Ways To Faster Hair Growth

ಅಂತಹ ಕೆಲವು ಉತ್ತಮ ವಿಧಾನಗಳನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಎಣ್ಣೆ ಮಸಾಜ್ ನ್ನು ತಪ್ಪಿಸಲೇಬೇಡಿ

ಎಣ್ಣೆ ಮಸಾಜ್ ನ್ನು ತಪ್ಪಿಸಲೇಬೇಡಿ

ನಿಮ್ಮ ಕೂದಲಿಗೆ ನೀವು ತಪ್ಪಿಸಲೇಬಾರದ ಒಂದು ಪ್ರಮುಖ ಸಾಂಪ್ರದಾಯಿಕ ವಿಧಾನವೆಂದರೆ ಅದು ಎಣ್ಣೆ ಮಸಾಜ್. ಹೌದು ಇದರಿಂದಾಗಿ ನೀವು ಉದ್ದನೆಯ, ದಪ್ಪನೆಯ ಮತ್ತು ಫಳಫಳ ಹೊಳೆಯುವ ಕೂದಲನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಎಣ್ಣೆ ಮಸಾಜ್ ನಿಂದಾಗಿ ನಿಮ್ಮ ಕೂದಲಿಗೆ ಅನೇಕ ಪೋಷಕಾಂಶಗಳು ಲಭ್ಯವಾಗುತ್ತದೆ. ಐದು ನಿಮಿಷ ಕೂದಲಿನ ಮಸಾಜ್ ಮಾಡುವುದರಿಂದ ಕೂದಲಿನ ಆರೋಗ್ಯದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಕಾಣುವುದಕ್ಕೆ ಸಾಧ್ಯವಾಗುತ್ತದೆ. ಶುದ್ಧ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರಿಂದಾಗಿ ಕೂದಲಿನ ಬುಡ ಹೆಚ್ಚು ಬಲಶಾಲಿಯಾಗುತ್ತದೆ. ಕೂದಲಿನ ಬೇರುಗಳು ಸ್ಟ್ರಾಂಗ್ ಆದರೆ ನಿಮ್ಮ ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ.

ಅಂಟುವಾಳ ಮತ್ತು ಸೀಗೆಕಾಯಿಯಿಂದ ತಯಾರಿಸಿದ ಮನೆಯ ಶಾಂಪ್ಯೂ

ಅಂಟುವಾಳ ಮತ್ತು ಸೀಗೆಕಾಯಿಯಿಂದ ತಯಾರಿಸಿದ ಮನೆಯ ಶಾಂಪ್ಯೂ

ಅಂಟುವಾಳ ಮತ್ತು ಸೀಗೆಕಾಯಿಯಲ್ಲಿ ನೈಸರ್ಗಿಕವಾಗಿ ಕೂದಲನ್ನು ಸ್ವಚ್ಛಗೊಳಿಸುವ ಅಂಶಗಳಿವೆ. ಅದನ್ನು ಸಫೋನಿನ್ಸ್ ಎನ್ನಲಾಗುತ್ತದೆ. ಅಂಟುವಾಳವು ನೈಸರ್ಗಿಕವಾಗಿ ಕೂದಲನ್ನು ಮೃದುವಾಗಿಸುತ್ತದೆ ಮತ್ತು ಸೀಗೆಕಾಯಿ ಸ್ವಚ್ಛತೆಗೆ ನೆರವು ನೀಡುತ್ತದೆ. ನೆಲ್ಲಿಕಾಯಿ ಕೂದಲಿನ ಫಾಲಿಕಲ್ಸ್ ಗಳನ್ನು ಬಲಶಾಲಿಯಾಗಿಸುತ್ತದೆ ಮತ್ತು ಕಂಡೀಷನರ್ ನಂತೆ ಕೆಲಸ ಮಾಡುತ್ತದೆ. ಕೂದಲಿನ ಬುಡವು ಆರೋಗ್ಯಕಾರಿಯಾಗಿರುವುದಕ್ಕೆ ಅಂಟುವಾಳ,ಸೀಗೆಕಾಯಿ ಮತ್ತು ನೆಲ್ಲಿಕಾಯಿಯಲ್ಲಿರುವ ಆಂಟಿಮೈಕ್ರೋಬಯಾಲ್ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ಸಹಾಯ ಮಾಡುತ್ತವರ. ಮನೆಯಲ್ಲೇ ತಯಾರಿಸಬಹುದಾದ ಈ ಶ್ಯಾಂಪೂಗೆ ಯಾವುದೇ ಜಾಹೀರಾತಿನ ಅಗತ್ಯವಿಲ್ಲ. ಫಿಲ್ಮ್ ಸ್ಟಾರ್ ಒಬ್ಬರು ನಿಮಗೆ ಸಮಜಾಯಿಷಿ ನೀಡಿ ಹೇಳುವ ಅಗತ್ಯವೂ ಇಲ್ಲ ಯಾಕೆಂದರೆ ಇದು ಬಹಳ ಹಿಂದಿನಿಂದಲೂ ಬಳಕೆಯಲ್ಲಿರುವ ಪುರಾತನ ವಿಧಾನವಾಗಿದೆ. ಅಷ್ಟೇ ಅಲ್ಲ ಇದರಿಂದ ಯಾವುದೇ ಅಡ್ಡಪರಿಣಾಮಗಳೂ ಕೂಡ ಕೂದಲಿಗೆ ಆಗುವುದಿಲ್ಲ.

ಹೇರ್ ಡೈ ಗೆ ಹೇಳಿ ಬಾಯ್ ಬಾಯ್ ಮತ್ತು ಮದರಂಗಿ ಬಳಸಿ

ಹೇರ್ ಡೈ ಗೆ ಹೇಳಿ ಬಾಯ್ ಬಾಯ್ ಮತ್ತು ಮದರಂಗಿ ಬಳಸಿ

ಬಿಳಿಯಾದ ಕೂದಲಿನ ಬಣ್ಣವನ್ನು ಬದಲಿಸುವುದಕ್ಕಾಗಿ ಮತ್ತು ಉಗುರು, ಚರ್ಮದ ಬಣ್ಣಕ್ಕಾಗಿ ಮದರಂಗಿಯನ್ನು ಬಳಕೆ ಮಾಡಲಾಗುತ್ತದೆ. ಇನ್ನು ಉಗುರು ಹುಳುಕಾಗದಂತೆ ತಡೆಯುವುದಕ್ಕೂ ಇದು ಸಹಕಾತಿ. ಅಷ್ಟೇ ಅಲ್ಲ ಮದುವೆಯಲ್ಲಿ ಮದರಂಗಿಗೆ ವಿಶೇಷ ಮಾನ್ಯತೆ ಇದೆ. ಮದರಂಗಿಯ ಎಲೆಗಳನ್ನು ನುಣ್ಣಗೆ ಅರೆದು ಅದನ್ನು ಕೂದಲಿಗೆ ಹಚ್ಚಿಕೊಳ್ಳುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ಹಿಂದಿನ ಕಾಲದ ಅಜ್ಜಿಯರೂ ಕೂಡ 85 ನೇ ವಯಸ್ಸಿನವರೆಗೂ ಕೂಡ ಉದ್ದನೆಯ ದಪ್ಪ ಕೂದಲನ್ನು ಹೊಂದಿರುತ್ತಿದ್ದರು.

ಹೆಚ್ಚಿನ ಹೇರ್ ಪ್ಯಾಕ್ ಗಳಲ್ಲಿ ಮದರಂಗಿಯೇ ಪ್ರಮುಖ ವಸ್ತುವಾಗಿರುತ್ತಿತ್ತು. ಕೂದಲನ್ನು ಬಲಿಷ್ಟಗೊಳಿಸಲು, ಗಟ್ಟಿಗೊಳಿಸಲು, ಹೊಳೆಯುವಂತೆ ಮಾಡಲು ಇದು ಸಹಕಾರಿ. ಅಷ್ಟೇ ಅಲ್ಲ ಕೂದಲು ಉದುರುವಿಕೆ ತಡೆಯುವುದಕ್ಕೂ ಕೂಡ ಇದು ನೆರವು ನೀಡುತ್ತದೆ. ಇದರಲ್ಲಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳಿದ್ದು ಸ್ಕಾಲ್ಪ್ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ನೆರವು ನೀಡುತ್ತದೆ.

ಮದರಂಗಿ ಬಣ್ಣವು ಇನ್ನಷ್ಟು ಗಾಢವಾಗುದಕ್ಕಾಗಿ ನೀವು ಇದಕ್ಕೆ ಬ್ರಾಹ್ಮೀ, ಬೃಂಗರಾಜ,ದಾಸವಾಳ, ಕಹಿಬೇವು,ಮೆಂತ್ಯ ಕಾಳುಗಳನ್ನು ಕೂಡ ಸೇರಿಸಿ ಅರೆದು ಹಚ್ಚಿಕೊಳ್ಳಬಹುದು. ಮದರಂಗಿಯಿಂದಾಗಿ ಬಿಳಿ ಕೂದಲು ಕೆಂಪಾಗುತ್ತದೆ ಅಥವಾ ಕಂದು, ಕೇಸರಿ ವರ್ಣಕ್ಕೆ ತಿರುಗುತ್ತದೆ. ಈ ವರ್ಣ ಬದಲಾವಣೆ ನೀವು ಮದರಂಗಿಯ ಜೊತೆಗೆ ಇನ್ನೇನು ಪದಾರ್ಥಗಳನ್ನು ಸೇರಿಸುತ್ತೀರಿ ಎಂಬುದನ್ನು ಆಧರಿಸಿರುತ್ತದೆ.

ಚಟುವಟಿಕೆಯಿಂದ ಇರಿ ಮತ್ತು ಕೂದಲಿನ ಆರೋಗ್ಯ ಹೆಚ್ಚಿಸಿ

ಚಟುವಟಿಕೆಯಿಂದ ಇರಿ ಮತ್ತು ಕೂದಲಿನ ಆರೋಗ್ಯ ಹೆಚ್ಚಿಸಿ

ಹಿಂದಿನ ಕಾಲದಲ್ಲಿ ಜನರು ಬಹಳ ದೂರ ನಡೆಯುತ್ತಿದ್ದರು, ಭಾರ ಹೊರುತ್ತಿದ್ದರು, ನೀರು ಸೇದುವುದು, ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುವುದು ಇತ್ಯಾದಿ ದೈಹಿಕ ಕೆಲಸಗಳನ್ನು ಮಾಡುತ್ತಿದ್ದರು. ಬಹುಷ್ಯ ಇದೂ ಒಂದು ಕಾರಣದಿಂದಾಗಿ ಅವರ ಕೂದಲು ಉದ್ದವಾಗಿ ಆರೋಗ್ಯವಾಗಿ ಇರುತ್ತಿತ್ತು. PCOS, ಮತ್ತು ಥೈರಾಯ್ಡ್ ನಂತಹ ಸಮಸ್ಯೆಗಳು ಕಳೆದ 20_30 ವರ್ಷಗಳ ಹಿಂದೆ ಪ್ರಾರಂಭವಾಗಿದೆ.

ಇಂದಿನ ದಿನಗಳಲ್ಲಿ ಹೆಚ್ಚಿನ ಸಮಯವನ್ನು ನಾವು ಕುಳಿತುಕೊಂಡೆ ಕಳೆತುತ್ತಿದ್ದೇವೆ. ಕೆರವಲ ಕುಳಿತೇ ಇರುವುದುವಮತ್ತು ಪ್ರಕೃತಿಯೊಂದಿಗೆ ಕಳೆಯದೆ ಇರುವುದರಿಂದಾಗಿ ನಮ್ಮ ಕೂದಲು ಹಾಳಾಗುತ್ತಿದೆ. ನಾವು ವ್ಯಾಯಾಮ ಮಾಡಿದಾಗ ಬೆವರುತ್ತೇವೆ ಮತ್ತು ಅದರಿಂದಾಗಿ ದೇಹದಲ್ಲಿರುವ ಟಾಕ್ಸಿಕ್ ಅಂಶಗಳು ಹೊರಹಾಕಲ್ಪಡುತ್ತದೆ. ಹಾಗಾಗಿ ನಮ್ಮ ಚರ್ಮವೂ ಕೂಡ ಕಾಂತಿ ಹೊಂದುತ್ತವೆ.

ಕೂದಲನ್ನು ಹೆಚ್ಚಿಸುವ ಆಹಾರ ಮತ್ತು ಗಿಡಮೂಲಿಕೆಗಳು

ಕೂದಲನ್ನು ಹೆಚ್ಚಿಸುವ ಆಹಾರ ಮತ್ತು ಗಿಡಮೂಲಿಕೆಗಳು

1. ಮೆಂತೆ

ಭಾರತದಲ್ಲೇ ಅಧಿಕ ಬೆಳೆಯುವ ಸಾಂಬಾರ ಪದಾರ್ಥವಲ್ಲದೆ ಇದ್ದರೂ ಇದರ ಬಳಕೆ ಭಾರತದಲ್ಲಿ ಅತ್ಯಧಿಕವೇ ಆಗಿದೆ. ಹಿಂದಿನ ಕಾಲದಿಂದಲೂ ಮೆಂತೆಯನ್ನು ಅಡುಗೆಯಲ್ಲಿ ಬಳಸುವುದನ್ನು ಭಾರತೀಯರು ಅಭ್ಯಾಸ ಮಾಡಿಕೊಂಡಿದ್ದಾರೆ. ಆಯುರ್ವೇದವು ಇದರ ಪ್ರಯೋಜನವನ್ನು ಸಾವಿರ ವರ್ಷಗಳ ಹಿಂದೆಯೇ ಗುರುತಿಸಿದೆ.ಮೆಂತೆಯ ಬಳಕೆಯನ್ನು ಮಾಡುವುದರಿಂದಾಗಿ ಆರೋಗ್ಯದ ಮತ್ತು ಸೌಂದರ್ಯದ ವೃದ್ಧಿಯಾಗುತ್ತದೆ. ಮೆಂತೆ ಬೀಜಗಳಲ್ಲಿ ಫೋಲಿಕ್ ಆಸಿಡ್, ವಿಟಮಿನ್ ಎ, ವಿಟಮಿನ್ ಕೆ ಮತ್ತು ವಿಟಮಿನ್ ಸಿ ಅಂಶಗಳು ಅಧಿಕವಾಗಿವೆ. ಇದರ ಜೊತೆಗೆ ಪೋಷಕಾಂಶಗಳಾಗಿರುವ ಪೊಟಾಷಿಯಂ,ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನು ಹೊಂದಿವೆ. ಮೆಂತ್ಯೆಯಲ್ಲಿ ಅಧಿಕ ಪ್ರೊಟೀನ್ ಅಂಶವಿದ್ದು ನಿಕೊಟಿನಿಕ್ ಆಸಿಡ್ ಅಂಶಗಳನ್ನು ಒಳಗೊಂಡಿದೆ. ಇದು ಕೂದಲು ಉದುರುವುದನ್ನು ತಡೆಯುವ ಮತ್ತು ಹೊಟ್ಟು ನಿವಾರಿಸುವ ಶಕ್ತಿಯನ್ನು ಹೊಂದಿದೆ.ಕೂದಲಿನ ಶುಷ್ಕತೆ, ಬೊಕ್ಕ ತಲೆ,ಮತ್ತು ಕೂದಲು ತೆಳು ಆಗುವ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ನಿಮ್ಮ ಕೂದಲಿನ ಆರೋಗ್ಯಕ್ಕಾಗಿ ಆಹಾರದಲ್ಲಿ ಮೆಂತ್ಯೆಯ ಬಳಕೆಯನ್ನು ಯಾವಾಗಲೂ ಮಾಡುವುದು ಬಹಳ ಒಳ್ಳೆಯದು.

2. ನೆಲ್ಲಿಕಾಯಿ

2. ನೆಲ್ಲಿಕಾಯಿ

ಹಿಂದಿನ ಕಾಲದ ಅಜ್ಜಿಯರು ನೆಲ್ಲಿಕಾಯಿಯನ್ನು ಯಾಕೆ ಬಳಸುತ್ತಿದ್ದರು ಗೊತ್ತಾ? ಅದರ ಗುಟ್ಟು ಇಲ್ಲೇ ಇದೆ ತಿಳಿದುಕೊಳ್ಳಿ. ಭಾರತದಲ್ಲಿ ನೆಲ್ಲಿಕಾಯಿ ಯನ್ನು ಕೂದಲಿನ ಆರೋಗ್ಯದ ವೃದ್ಧಿಗಾಗಿಯೇ ಬಳಸಲಾಗುತ್ತಿತ್ತು. ನೆಲ್ಲಿಕಾಯಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದಾಗಿ ತಲೆಯಲ್ಲಿ ರಕ್ತಸಂಚಾರ ಅಧಿಕವಾಗುತ್ತದೆ. ಇದರಿಂದಾಗಿ ಕೂದಲಿನ ಬುಡಕ್ಕೆ ದೃಢತೆ ಸಿಗುತ್ತದೆ.ಹಾಗಾಗಿ ಕೂದಲು ಅಧಿಕವಾಗುತ್ತದೆ. ಕೂದಲಿನ ಬುಡದಲ್ಲಿರುವ ಅಂಟಿನಂಶ ಮತ್ತು ಕೊಳಕನ್ನು ತೆಗೆಯುವ ಕೆಲಸವನ್ನು ಇದಿ ಮಾಡುವುದರಿಂದಾಗಿ ನಿಮ್ಮ ಕೂದಲಿನ ಬುಡ ಶಕ್ತಿಶಾಲಿಯಾಗುತ್ತದೆ. ಇದು ಪಿಹೆಚ್ ಮಟ್ಟವನ್ನು ಹೆಚ್ಚಿಸಿ ಕೂದಲಿನ ಸಂಖ್ಯೆಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ದೇಹದಲ್ಲಿ ವಿಟಮಿನ್ ಸಿ ಅಂಶದ ಕೊರತೆಯಾದಾಗ ಕೂದಲು ಉದುರುವ ಸಮಸ್ಯೆಯಾಗುತ್ತದೆ. ನೆಲ್ಲಿಕಾತಿಯಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿ ಲಭ್ಯವಿರುತ್ತವೆ. ಇದರಿಂದಾಗಿ ಫ್ರಿ ರ್ಯಾಡಿಕಲ್ ಗಳ ಚಟುವಟಿಕೆಗಳನ್ನು ನಿಯಂತ್ರಣ ದಲ್ಲಿಡಲು ಸಾಧ್ಯವಾಗುತ್ತದೆ.

ಮನೆಯಲ್ಲಿಯೇ ಕೆಲವು ರೀತಿಯ ನೆಲ್ಲಿಕಾಯಿ ಎಣ್ಣೆಯನ್ನು ತಯಾರಿಸುವುದಕ್ಕೆ ನಿಮಗೆ ಅವಕಾಶವಿರುತ್ತದೆ. ಕೊಬ್ಬರಿ ಎಣ್ಣೆಗೆ ಸ್ವಲ್ಪ ನೆಲ್ಲಿಕಾಯಿ ಪುಡಿಯನ್ನಜ ಹಾಕಿ ಕುದಿಸಿ. ಕೆಲವು ಸಮಯದ ನಂಥ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. 2 ರಿಂದ ಮೂರು ನಿಮಿಷ ಕುದಿಸಿದ ನಂತರ ಎಣ್ಣೆಯನ್ನು ತಣಿಯಲು ಬಿಡಿ. ನಂತರ ಶೇಖರಿಸಿ ಇಟ್ಟುಕೊಳ್ಳಬಹುದು ಮತ್ತು ಆಗಾಗ ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬಹುದು. ಹದವಾಗಿ ಬೆಚ್ಚಗಿರುವಾಗಲೇ ಮಸಾಜ್ ಮಾಡಿಕೊಳ್ಳುವುದು ಒಳ್ಳೆಯದು.

3. ತ್ರಿಫಲಾ

3. ತ್ರಿಫಲಾ

ತ್ರಿಫಲಾ ಚೂರ್ಣದಲ್ಲಿರುವ ಅಂಶಗಳು ಕೂದಲಿಗೆ ಆಗುವ ಕೆಟ್ಟ ಪರಿಣಾಮಗಳನ್ನು ತಪ್ಪಿಸಿ ಕೂದಲಿನ ದಟ್ಟತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿರುವ ಹರೀತಕಿಯಲ್ಲಿ ಆಂಟಿಬ್ಯಾಕ್ಟೀಯಲ್ ಮತ್ತು ಆಂಟಿಫಂಗಲ್ ಗುಣಗಳಿವೆ. ಇವುಗಳು ಸ್ಕ್ಯಾಲ್ಪ್ ನಲ್ಲಿ ಕೆಲ್ಸ ಮಾಡುತ್ತವೆ ಮತ್ತು ಎಲ್ಲಾ ರೀತಿಯ ಸೋಂಕು ತಡೆಯುವ ಸಾಮರ್ಥ್ಯ ಇದಕ್ಕಿದೆ. ಅಷ್ಟೇ ಅಲ್ಲ ಫಂಗಸ್ ಗಳ ಚಟುವಟಿಕೆಯನ್ನು ಇದು ನಿಯಂತ್ರಿಸುತ್ತದೆ. ತ್ರಿಫಲಾ ಪೌಡರ್ ನಿಂದ ಡ್ಯಾಂಡ್ರಫ್ ಕೂಡ ನಿವಾರಿಸಲ್ಪಡುತ್ತದೆ. ತ್ರಿಫಲಾ ಚೂರ್ಣವನ್ನು ಕೊಬ್ಬರಿ ಎಣ್ಣೆ ಜೊತೆಗೆ ಮಿಕ್ಸ್ ಮಾಡಿ ನಿಮ್ಮ ಕೂದಲಿಗೆ ಅಪ್ಲೈ ಮಾಡಿಕೊಳ್ಳಬಹುದು ಅಥವಾ ನಿಮ್ಮ ಡಯಟ್ ನಲ್ಲೂ ಕೂಡ ಸೇರಿಸಿಕೊಳ್ಳಬಹುದು.

ಕೂದಲು ಉತ್ತಮವಾಗಿ ಬೆಳೆಯದೆ ಇರುವುದಕ್ಕೆ ಇರುವ ಪ್ರಮುಖ ಕಾರಣಗಳಲ್ಲಿ ಲಿವರ್ ಸಮಸ್ಯೆ ಕೂಡ ಒಂದು. ಜೀರ್ಣಕ್ರಿಯೆ ಸಮಸ್ಯೆ ಇದ್ದವರಲ್ಲಿ ಕೂದಲಿನ ಆರೋಗ್ಯವು ಅಷ್ಟು ಉತ್ತಮವಾಗಿ ಇರುವುದಿಲ್ಲ. ತ್ರಿಫಲಾ ಇವೆರಡ ಕಾಳಜಿಯನ್ನೂ ಕೂಡ ತೆಗೆದುಕೊಳ್ಳುತ್ತದೆ. ತ್ರಿಫಲಾದಲ್ಲಿ ನೆಲ್ಲಿಕಾಯಿ ಕೂಡ ಇರುತ್ತದೆ.

4. ಬ್ರಾಹ್ಮೀ

4. ಬ್ರಾಹ್ಮೀ

ಬ್ರಾಹ್ಮೀ ಎಲೆಗಳ ಪುಡಿಯಿಂದಾಗಿ ನಿಮ್ಮ ಕೂದಲಿನ ಹೊಳಪು ಹೆಚ್ಚುತ್ತದೆ. ಸೌಂದರ್ಯ ಇಮ್ಮಡಿಯಾಗುತ್ತದೆ. ಬ್ರಾಹ್ಮೀ ಎಲೆಗಳನ್ನು ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಬಳಸಲಾಗುತ್ತದೆ. ಆದರೆ ಈ ಗಿಡಮೂಲಿಕೆಯಿಂದಾಗಿ ಕೂದಲಿನ ಆರೋಗ್ಯವನ್ನು ಕೂಡ ಅಧಿಕಗೊಳಿಸಿಕೊಳ್ಳಬಹುದು. ಅಷ್ಟೇ ಅಲ್ಲ ನಿಮ್ಮ ಸೌಂದರ್ಯವರ್ಧಕವಾಗಿ ಕೂಡ ಬಳಸಬಹುದು.ಇದು ಕೂದಲುದುರುವಿಕೆಯನ್ನು ತಡೆಯುತ್ತದೆ. ಶುಷ್ಕವಾಗಿರುವ ಮತ್ತು ತುಂಡರಿಸಲ್ಪಡುವ ಕೂದಲನ್ನು ಕೂಡ ಸರಿ ಪಡಿಸುತ್ತದೆ.ವಿವಿಧ ರೀತಿಯ ಕೂದಲಿನ ಸಮಸ್ಯೆಯನ್ನು ತಡೆಯುವುದಕ್ಕೆ ಬ್ರಾಹ್ಮೀ ಬಹಳ ಪ್ರಯೋಜನಕಾರಿ. ಡ್ಯಾಂಡ್ರಫ್, ತುರಿಕೆ ಮತ್ತು ಕೆಂಪಗಾಗುವ ತುದಿಕೂದಲು, ಸಿಗಿದಂತೆ ಆಗುವ ಕೂದಲು ಇತ್ಯಾದಿ ಸಮಸ್ಯೆಗಳಿಗೆ ಇದು ರಾಮಬಾಣ. ಬ್ರಾಹ್ಮೀ ಎಣ್ಣೆಯನ್ನು ಮಸಾಜ್ ಮಾಡಿ ಕೂದಲಿಗರ ಬಳಸುವುದರಿಂದಾಗಿ ಕೂದಲಿನ ಬುಡದ ಆರೋಗ್ಯವನ್ನು ಹೆಚ್ಚಿಸಬಹುದು.

English summary

Ayurvedic Methods for Fast Hair Growth

Here we are discussing about Natural Amazing Ayurvedic Ways To Faster Hair Growth. Let’s take a look at the traditional hair practices for thick, long, beautiful hair. Read more.
Story first published: Friday, August 7, 2020, 15:05 [IST]
X
Desktop Bottom Promotion