For Quick Alerts
ALLOW NOTIFICATIONS  
For Daily Alerts

ಗುಂಗುರು ಕೂದಲಿನ ಸಮಸ್ಯೆಗೆ ಸರಳ ಹಾಗೂ ಪರಿಣಾಮಕಾರಿ ಸಲಹೆಗಳು

|

ಕೆಲವರಿಗೆ ಹುಟ್ಟಿನಿಂದಲೇ ಗುಂಗುರು ಕೂದಲು ಬಂದಿರುತ್ತದೆ. ಇದು ಅನುವಂಶೀಯವಾಗಿ ಕೆಲವರು ಮಹಿಳೆಯರಿಗೆ ಬಂದಿರುವ ಬಳುವಳಿಯಾಗಿದೆ. ಗುಂಗುರು ಕೂದಲನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ಆಗ ಸೌಂದರ್ಯವು ಇನ್ನಷ್ಟು ಹೆಚ್ಚಾಗುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂದಿನ ದಿನಗಳಲ್ಲಿ ಕೆಲವೊಂದು ಸಾಧನಗಳನ್ನು ಬಳಸಿಕೊಂಡು ಕೂದಲನ್ನು ಗುಂಗುರು ಮಾಡಬಹುದು. ಇದು ತಾತ್ಕಾಲಿಕ ಮಾತ್ರ. ಶಾಶ್ವತವಾಗಿ ಇರುವಂತಹ ಗುಂಗುರು ಕೂದಲಿನ ನಿರ್ವಹಣೆ ಸ್ವಲ್ಪ ಕಷ್ಟವಂಎದು ಹೇಳಬಹುದು. ಇದು ಸಾಮಾನ್ಯ ಕೂದಲಿಗಿಂತ ಹೆಚ್ಚಿನ ಸಮಸ್ಯೆ ಉಂಟು ಮಾಡುವುದು. ಬೇಕಾದಂತೆ ಬಾಚಿಕೊಳ್ಳಲು, ಕಟ್ಟಿಕೊಳ್ಳಲು ಆಗದು.

ಗುಂಗುರು ಕೂದಲು ಇರುವವರು ಕೂಡ ಇದನ್ನು ಒಪ್ಪಿಕೊಳ್ಳೂವರು. ಯಾಕೆಂದರೆ ಗುಂಗುರು ಕೂದಲು ಬೇಗನೆ ಒಣಗುವುದು ಮತ್ತು ಗಂಟಿಕ್ಕಿಕೊಳ್ಳುವುದು. ಇದರಿಂದ ಇದರ ನಿರ್ವಹಣೆಗೆ ತುಂಬಾ ತಾಳ್ಮೆ ಹಾಗೂ ಶ್ರಮ ಬೇಕಾಗುವುದು. ಅದಾಗ್ಯೂ, ಸರಿಯಾದ ಕ್ರಮವನ್ನು ಪಾಲಿಸಿದರೆ ಆಗ ಇದು ಕೂಡ ಸಾಮಾನ್ಯ ಕೂದಲಿನಂತೆ ಸುಲಭವಾಗಿರುವುದು. ಗುಂಗುರು ಕೂದಲಿನ ಆರೈಕೆಗೆ ನೀವು ಕೆಲವೊಂದು ಕ್ರಮಗಳನ್ನು ಪಾಲಿಸಬೇಕು ಮತ್ತು ಮುನ್ನೆಚ್ಚರಿಕೆ ವಹಿಸಬೇಕು. ನೀವು ಗುಂಗುರು ಕೂದಲಿನವರಾಗಿದ್ದರೆ ಈ ಲೇಖನ ಓದಲೇಬೇಕು. ಗುಂಗುರು ಕೂದಲಿನ ಸಮಸ್ಯೆಯನ್ನು ತುಂಬಾ ಸರಳವಾಗಿ ನಿರ್ವಹಣೆ ಮಾಡುವ ವಿಧಾನಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ. ಇದನ್ನು ನೀವು ತಿಳಿಯಿರಿ.

Curly Hair

ತೈಲ ಮಸಾಜ್

ಗುಂಗುರು ಕೂದಲು ಬೇಗನೆ ಒಣಗುವುದು ಮತ್ತು ಗಂಟಿಕ್ಕಿಕೊಳ್ಳುವುದು. ಕೂದಲಿಗೆ ಶಾಂಪೂ ಹಾಕಿಕೊಳ್ಳುವ ಮೊದಲು ಬಿಸಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿಕೊಳ್ಳುವುದು ತುಂಬಾ ಒಳ್ಳೆಯ ವಿಧಾನ ಆಗಿದೆ. ಇದರಿಂದ ಗಂಟಿಕ್ಕಿಕೊಳ್ಳುವುದನ್ನು ನಿಯಂತ್ರಿಸ ಬಹುದು ಮತ್ತು ಕೂದಲಿಗೆ ಕಾಂತಿ ಸಿಗುವುದು. ಕೂದಲಿಗೆ ಶಾಂಪೂ ಹಾಕಿಕೊಳ್ಳುವ ಕನಿಷ್ಠ ಒಂದು ಗಂಟೆ ಮೊದಲು ಕೂದಲಿಗೆ ಬಿಸಿ ಎಣ್ಣೆ ಹಾಕಿಕೊಂಡು ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ಬಳಿಕ ಶಾಂಪೂ ಹಾಕಿ ತೊಳೆಯಿರಿ. ಕೂದಲಿನ ಬುಡದ ತನಕ ಬಿಸಿ ಎಣ್ಣೆಯನ್ನು ಬೆರಳುಗಳನ್ನು ಬಳಸಿಕೊಂಡು ಮಸಾಜ್ ಮಾಡಿ ಮತ್ತು ಇದರಿಂದ ಹಾನಿಗೆ ಒಳಗಾಗಿರುವ ಕೂದಲಿಗೆ ಪೋಷಣೆ ಸಿಗುವುದು. ಕೂದಲಿಗೆ ಯಾವಾಗಲೂ ಎಣ್ಣೆ ಹಾಕುತ್ತಲಿರಿ. ಇದರಿಂದ ನಿಮ್ಮ ಕೂದಲಿನಲ್ಲಿ ವ್ಯತ್ಯಾಸ ಕಂಡುಬರುವುದು.

Most Read:ಗುಂಗುರು ಕೂದಲಿನ ಸಮಸ್ಯೆ ಇದೆಯೇ? ಇಲ್ಲಿದೆ ನೋಡಿ ಸರಳ ಟಿಪ್ಸ್

ಅತಿಯಾಗಿ ತೊಳೆಯಬೇಡಿ

ವಾರದಲ್ಲಿ ಎರಡು ಸಲ ಮಾತ್ರ ಕೂದಲು ತೊಳೆಯಿರಿ ಮತ್ತು ಇದಕ್ಕಿಂತ ಹೆಚ್ಚು ಸಲ ಬೇಡ. ಕೂದಲನ್ನು ಪದೇ ಪದೇ ತೊಳೆದರೆ ಅದರಿಂದ ನೈಸರ್ಗಿಕ ಎಣ್ಣೆಯು ಹಾರಿ ಹೋಗುವುದು ಮತ್ತು ಕೂದಲು ಒಣ ಹಾಗೂ ಗಂಟಿಕ್ಕಿಕೊಳ್ಳುವುದು. ಕೂದಲು ತೊಳೆಯಲು ತುಂಬಾ ಲಘುವಾಗಿರುವಂತಹ ಶಾಂಪೂ ಬಳಸಿಕೊಳ್ಳಿ.

ಕೂದಲಿಗೆ ಕಂಡೀಷನರ್ ಹಾಕಿಕೊಳ್ಳಿ

ಕೂದಲು ತೊಳೆದುಕೊಂಡ ಬಳಿಕ ಕಂಡೀಷನರ್ ಹಾಕುವುದನ್ನು ಯಾವಾಗಲೂ ಮರೆಯಬಾರದು. ಗುಂಗುರು ಕೂದಲು ಬೇಗನೆ ಹಾನಿಯಾಗುವುದು ಮತ್ತು ಅದು ತುಂಡಾಗುವುದು ಕೂಡ ಬೇಗ. ಕಂಡೀಷನರ್ ಬಳಸಿಕೊಂಡರೆ ಆಗ ಕೂದಲು ಗಂಟಿಕ್ಕಿ ಕೊಂಡು ತುಂಡಾಗುವುದು ತಪ್ಪುವುದು. ಇದರಿಂದ ಕೂದಲನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು. ಕಂಡೀಷನರ್ ಪರಿಣಾಮವು ಹೆಚ್ಚು ಸಿಗಬೇಕಿದ್ದರೆ ಆಗ ನೀವು ಕೂದಲಿಗೆ ಹಾಕಿಕೊಂಡ ಬಳಿಕ ಶಾವರ್ ಕ್ಯಾಪ್ ಹಾಕಿ ತಲೆ ಮುಚ್ಚಿಕೊಳ್ಳಿ ಮತ್ತು ಬಿಸಿ ನೀರು ಹಾಕಿಕೊಳ್ಳಿ. ಇದರಿಂದ ಕಂಡೀಷನರ್ ಸರಿಯಾಗಿ ಹೀರಿಕೊಳ್ಳಲು ನೆರವಾಗುವುದು. ಕೂದಲು ಗಂಟಿಕ್ಕಿಕೊಳ್ಳುವ ಸಮಸ್ಯೆ ನಿವಾರಣೆ ಆಗುವುದು. ನೀವು ಒಳ್ಳೆಯ ಗುಣಮಟ್ಟದ ಕಂಡೀಷನರ್ ಬಳಸಿಕೊಳ್ಳಿ.

ಲೀವ್ ಇನ್ ಕಂಡೀಷನರ್ ಬಳಸಿ

ಲೀವ್ ಇನ್ ಕಂಡೀಷನರ್ ಗುಂಗುರು ಕೂದಲಿಗೆ ತುಂಬಾ ಒಳ್ಳೆಯದು. ಇದು ಕೂದಲಿನಲ್ಲಿ ಆಳವಾಗಿ ತಲುಪಿ, ಕೂದಲಿಗೆ ಒಳ್ಳೆಯ ಪೋಷಣೆ ನೀಡುವುದು. ನೀವು ವ್ಯಾಯಾಮ ಮಾಡುವ ಮೊದಲು ಲಿವ್ ಇನ್ ಕಂಡೀಷನರ್ ಬಳಸಿಕೊಳ್ಳಬೇಕು. ಕಂಡೀಷನರ್ ಹಚ್ಚಿಕೊಂಡು ಕೂದಲನ್ನು ಬನ್ ಆಕಾರದಲ್ಲಿ ಕಟ್ಟಿಕೊಳ್ಳಿ. ವ್ಯಾಯಾಮ ಮಾಡುವ ವೇಳೆ ಬರುವ ಬಿಸಿ ಹಾಗೂ ಬೆವರು ಕೂದಲಿನಲ್ಲಿ ಮೊಶ್ಚಿರೈಸ್ ನ್ನು ಕಾಪಾಡುವುದು ಮತ್ತು ಕೂದಲು ತುಂಬಾ ನಯವಾಗುವಂತೆ ಮಾಡುವುದು.

ಸ್ನಾನ ಮಾಡುತ್ತಲೇ ಕೂದಲು ಬಾಚಿಕೊಳ್ಳಿ.

ಸ್ನಾನ ಮಾಡುತ್ತಲೇ ಕೂದಲು ಬಾಚಿಕೊಂಡರೆ ಆಗ ಖಂಡಿತವಾಗಿಯೂ ಕೂದಲು ಗಂಟಿಕ್ಕಿಕೊಳ್ಳುವುದು ನಿವಾರಣೆ ಆಗುವುದು. ಕಂಡೀಷನರ್ ಹಚ್ಚಿಕೊಂಡ ಬಳಿಕ ನಿಧಾನವಾಗಿ ಕೂದಲು ಬಾಚಿಕೊಳ್ಳಿ. ಸ್ವಲ್ಪ ಸಮಯ ಹಾಗೆ ಇದ್ದು ಬಳಿಕ ತೊಳೆಯಿರಿ. ಇದರಿಂದ ಕೂದಲಿನ ಆರೈಕೆ ಮಾಡಲು ನಿಮಗೆ ಸಾಧ್ಯ ಆಗುವುದು.

Most Read: ಗುಂಗುರು ಕೂದಲಿನ ಆರೈಕೆಗೆ ಬರಿಯ ಐದು ನಿಮಿಷಗಳು

ಅಗಲ ಹಲ್ಲಿರುವ ಬಾಚಣಿಗೆ ಬಳಸಿ

ಅತೀ ಮುಖ್ಯ ಹಾಗೂ ಮಹತ್ವದ ವಿಚಾರವೆಂದರೆ ಗುಂಗುರು ಕೂದಲಿನವರು ಯಾವಾಗಲೂ ಅಗಲ ಹಲ್ಲಿರುವ ಬಾಚಣಿಗೆ ಬಳಸಬೇಕು. ಸಾಮಾನ್ಯ ಬಾಚಣಿಗೆಯಲ್ಲಿ ಕೂದಲು ಸಿಲುಕಿಕೊಂಡು, ಅದು ತುಂಡಾಗಬಹುದು. ಅಗಲ ಹಲ್ಲಿನ ಬಾಚಣಿಗೆ ಇದ್ದರೆ ಇದು ಗುಂಗುರು ಕೂದಲು ತುಂಡಾಗದಂತೆ ತಡೆಯುವುದು ಮತ್ತು ಇದರಿಂದ ನಿಮಗೆ ಕೂದಲಿನ ಆರೈಕೆ ಮಾಡುವುದು ತುಂಬಾ ಸುಲಭ ಆಗುವುದು.

ಬ್ರಷ್ ಬಳಸಬೇಡಿ

ಗುಂಗುರು ಕೂದಲು ಇದ್ದರೆ ಆಗ ನೀವು ಬ್ರಷ್ ಬಳಕೆ ಮಾಡಲೇಬಾರದು. ಬ್ರಷ್ ಬಳಸಿಕೊಂಡರೆ ಕೂದಲು ಗಂಟಿಕ್ಕಿಕೊಳ್ಳುವುದು ಮಾತ್ರವಲ್ಲದೆ ಅದರಿಂದ ಕೂದಲು ತುಂಡಾಗುವುದು. ಗುಂಗುರು ಕೂದಲು ಸಿಕ್ಕಿಹಾಕಿಕೊಳ್ಳುವ ಗುಣ ಹೊಂದಿರುವ ಕಾರಣದಿಂದಾಗಿ ಇದು ತುಂಡಾಗುವ ಸಾಧ್ಯತೆಯು ಹೆಚ್ಚಾಗಿರುವುದು.

ಗಾಳಿಗೆ ಒಣಗಲು ಬಿಡಿ

ಗುಂಗುರು ಕೂದಲು ಒಣಗಿಸಲು ಬ್ಲೊ ಡ್ರೈ ಬಳಸಬೇಡಿ. ಇದಕ್ಕೆ ಬದಲಿಗೆ ಕೂದಲು ಗಾಳಿಗೆ ಹಾಗೆ ಒಣಗಲು ಬಿಡಿ. ಬಿಸಿ ಬಳಸಿಕೊಂಡು ಕೂದಲು ಒಣಗಿಸಿದರೆ ಆಗ ಕೂದಲು ಮತ್ತಷ್ಟು ಒಣಗುವುದು ಮತ್ತು ಗಂಟಿಕ್ಕಿಕೊಳ್ಳುವುದು. ಇದರಿಂದ ಕೂದಲಿಗೆ ಹಾನಿಯಾಗುವ ಸಂಭವ ಹೆಚ್ಚಿರುವುದು. ಟವೆಲ್ ಬದಲಿಗೆ ಕಾಟನ್ ಟೀ ಶರ್ಟ್ ಬಳಸಿಕೊಳ್ಳಿ. ಇದರಿಂದ ಕೂದಲು ಒಣಗುವುದು ಮತ್ತು ಗಂಟಿಕ್ಕಿಕೊಳ್ಳುವುದು ದೂರ ಆಗುವುದು. ಟೀ ಶರ್ಟ್ ಬಳಸಿಕೊಂಡು ಹೆಚ್ಚಿರುವ ನೀರನ್ನು ತೆಗೆಯಿರಿ ಮತ್ತು ಅದಾಗಿಯೇ ಕೂದಲು ಒಣಗಲು ಬಿಡಿ.

ಕೂದಲು ಒದ್ದೆಯಾಗಿರುವಾಗಲೇ ಅದನ್ನು ಕಟ್ಟಿಕೊಳ್ಳಿ

ಕೂದಲು ಗಂಟಿಕ್ಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಕೂದಲು ಒದ್ದೆಯಾಗಿರುವಾಗಲೇ ಕಟ್ಟಿಕೊಳ್ಳಿ ಮತ್ತು ಅದು ಅಲ್ಲೇ ಒಣಗಲು ಬಿಡಿ. ಇದರಿಂದ ಗಂಟಿಕ್ಕಿಕೊಳ್ಳುವುದು ಕಡಿಮೆ ಆಗುವುದು. ಸುಲಭವಾಗಿ ಕೂದಲು ಕಟ್ಟಿಕೊಳ್ಳಿ ಮತ್ತು ಕೂದಲು ತುಂಡಾಗುವುದನ್ನು ತಪ್ಪಿಸಿ.

ಕೂದಲಿನ ಬುಡದಿಂದ ತುದಿ ತನಕ ಬಾಚಿಕೊಳ್ಳಿ

ಕೂದಲಿನ ತುದಿಯನ್ನು ಮಾತ್ರ ನೀವು ಬಾಚಿಕೊಳ್ಳಬೇಡಿ. ಇದರ ಬದಲಿಗೆ ನೀವು ಕೂದಲಿನ ಬುಡದಿಂದ ತುದಿಯ ತನಕ ಬಾಚಿಕೊಳ್ಳಿ. ಮೊದಲು ಬುಡದಲ್ಲಿ ಕೂದಲನ್ನು ಬಾಚಿಕೊಳ್ಳಿ ಮತ್ತು ಇದರ ಬಳಿಕ ತುದಿ ಬಾಚಿಕೊಳ್ಳಿ. ಕೂದಲು ಬಾಚಿಕೊಳ್ಳುವ ವೇಳೆ ಗಡಸಾಗಿ ವರ್ತಿಸಬೇಡಿ. ಇದರಿಂದ ಪರಿಸ್ಥಿತಿಯು ತುಂಬಾ ಕೆಟ್ಟದಾಗಬಹುದು.

ಮಲಗುವ ಮೊದಲು ಕೂದಲು ಕಟ್ಟಿಕೊಳ್ಳಿ

ನಿದ್ರಿಸುವ ಮೊದಲು ಕೂದಲನ್ನು ಬನ್ ಆಕಾರದಲ್ಲಿ ಕಟ್ಟಿಕೊಳ್ಳಿ. ಮಲಗುವ ವೇಳೆ ಕೂದಲನ್ನು ಹಾಗೆ ಬಿಟ್ಟುಕೊಂಡರೆ ಆಗ ಕೂದಲಿಗೆ ಹಾನಿ ಆಗುವ ಸಾಧ್ಯತೆಯು ಹೆಚ್ಚಾಗಿರುವುದು. ಮಲಗುವ ವೇಳೆ ಕೂದಲು ಕಟ್ಟಿಕೊಂಡರೆ ಆಗ ಕೂದಲು ತುಂಡಾಗುವಂತ ಸಾಧ್ಯತೆಯು ತುಂಬಾ ಕಡಿಮೆ ಇರುವುದು.

English summary

Simple And Effective ways You Must Try To Manage Curly Hair

Being blessed with those luscious, bouncy curls is one thing and to manage them is another. Those of you who have curly hair will agree with us that curly hair is quite wild and unruly and hence it becomes difficult to manage. Curly hair tend to become dry and frizzy, and it require a lot of patience and efforts to deal with it. However, with that being said, they sure can be tamed if done the right way. There are certain things you need to care of and certain precautions you need to take while dealing with curly hair.
X
Desktop Bottom Promotion