For Quick Alerts
ALLOW NOTIFICATIONS  
For Daily Alerts

ಕೂದಲು ಬಿಳಿಯಾಗುವುದನ್ನು ತಡೆಯಲು ಏಳು ಪರಿಣಾಮಕಾರಿ ಮನೆಮದ್ದುಗಳು

|

ಕೆಡಿಸಿಬಿಡುವುದು. ಕೂದಲು ಬಿಳಿಯಾಗಿರುವುದನ್ನು ನೋಡಲು ಪದೇ ಪದೇ ಕನ್ನಡಿ ಮುಂದೆ ಹೋಗಿ ನಿಲ್ಲಬಹುದು. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಶಾಂಪೂ ಹಾಗೂ ಕಂಡೀಷನರ್ ಬಳಸಿಕೊಂಡು ಕೂದಲು ಕಪ್ಪು ಮಾಡಲು ಇನ್ನಿಲ್ಲದ ಪ್ರಯತ್ನ ಮಾಡಬಹುದು.ಮೆಲನೊಸೈಟ್ ಕುಗ್ಗಲು ಆರಂಭವಾದ ವೇಳೆ ಕೂದಲು ಬಿಳಿಯಾಗುವುದು ಅಥವಾ ಮೆಲನಿನ್ ಉತ್ಪತ್ತಿಯು ಕಡಿಮೆ ಆದ ವೇಳೆ ಕೂದಲು ಬಿಳಿಯಾಗುವುದು.

ಇದರಿಂದಾಗಿ ಮೆಲನಿನ್ ಇಲ್ಲದೆ ಇರುವುದು ಅಥವಾ ಉತ್ಪತ್ತಿ ಆಗದೆ ಇರುವುದು ಬಿಳಿ ಕೂದಲಿಗೆ ಕಾರಣ. ಕೂದಲಿಗೆ ಡೈ ಬಳಸುವ ಬದಲು ನೀವು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿಯಾಗಿ ಬಿಳಿ ಕೂದಲು ನಿವಾರಣೆ ಮಾಡುವುದು. ನೈಸರ್ಗಿಕವಾಗಿ ಕೂದಲನ್ನು ಬಿಳಿಯಾಗಿಸುವುದು ಹೇಗೆ ಎಂದು ನಾವು ಇಲ್ಲಿ ತಿಳಿಯುವ.....

ಮೆಹೆಂದಿ ಮತ್ತು ಮೊಸರು

ಮೆಹೆಂದಿ ಮತ್ತು ಮೊಸರು

ಪರಿಶುದ್ಧವಾದ ಮೆಹೆಂದಿಯನ್ನು ಇದಕ್ಕೆ ಬಳಸಿ. ಪ್ಯಾಕ್‌ ಮಾಡಿರುವ ಮೆಹಂದಿಯನ್ನು ಬಳಸಬೇಡಿ. ರಾಸಾಯನಿಕಗಳಿಂದ ಮುಕ್ತವಾದ ಮೆಹಂದಿಯು ಇದಕ್ಕೆ ಒಳ್ಳೆಯದು. ಇದನ್ನು ಮಾಡಲು ಮೆಹಂದಿಯನ್ನು ನೀರಿನ ಬದಲಿಗೆ ಬ್ಲಾಕ್ ಟೀಯಲ್ಲಿ ನೆನೆಸಿ. ರಾತ್ರಿಯಿಡೀ ಇದನ್ನು ನೆನೆಯಲು ಬಿಟ್ಟು, ಬೆಳಗ್ಗೆ ಇದಕ್ಕೆ ಒಂದು ಟೇಬಲ್ ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ. ನಂತರ ಅರ್ಧ ಕಪ್ ಮೊಸರು ಅಥವಾ ಒಂದು ಮೊಟ್ಟೆಯನ್ನು ಬೆರೆಸಿಕೊಳ್ಳಿ. ಆಮೇಲೆ ಇದನ್ನು ನಿಮ್ಮ ಕೂದಲಿಗೆ ಲೇಪಿಸಿ. 30 ನಿಮಿಷ ಬಿಟ್ಟು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ, ಹೀಗೆ ವಾರದಲ್ಲಿ ಎರಡು ಮೂರು ದಿನ ಮಾಡುವುದರಿಂದ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.

ಸೀಗೆಕಾಯಿ

ಸೀಗೆಕಾಯಿ

ಮೂರರಿಂದ ನಾಲ್ಕು ಸೀಗೆಕಾಯಿಯ ಕೋಡು ಹಾಗೂ ಹತ್ತರಿಂದ ಹನ್ನೆರಡು ಅಂಟುವಾಳದ ಬೀಜ (soap nut seeds) ಗಳನ್ನು ಒಂದು ಜಗ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಬೇಕು. ಬೆಳಿಗ್ಗೆ ಇದನ್ನು ಕುದಿಸಿ ತಣಿದ ಬಳಿಕ ಒಂದು ಬಾಟಲಿಯಲ್ಲಿ ಶೇಖರಿಸಿಡಬೇಕು. ಇದು ಪ್ರತಿದಿನ ಉಪಯೋಗಿಸುವ ಶಾಂಪೂವಿನಂತೆ ಉಪಯೋಗಿಸಬೇಕು. ಕೆಲವು ನೆಲ್ಲಿಕಾಯಿಗಳನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಕುದಿಸಿ ತಣಿಸಿದ ಬಳಿಕ ನೆಲ್ಲಿಕಾಯಿಯನ್ನು ಕಿವುಚಿ ತೆಗೆದ ನೀರು ಕಂಡೀಶನರ್ ನಂತೆ ಬಳಸಬಹುದು. ಈ ಜೋಡಿ ಕೂದಲು ಬೆಳ್ಳಗಾಗುವುದನ್ನು ತಡೆಯುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯಿಂದ, ಕೂದಲಿನ ಹೊಳಪನ್ನು ಕಾಪಾಡುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

ಕರಿಬೇವಿನ ಎಲೆ

ಕರಿಬೇವಿನ ಎಲೆ

ಚಿಕ್ಕ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕೆಲವು ಕರಿಬೇವಿನ ಎಲೆಗಳನ್ನು ಬೇಯಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ. ಈ ಎಣ್ಣೆಗೆ ಕೊಂಚ ಮೊಸರನ್ನು ಅಥವಾ ಮಜ್ಜಿಗೆಯನ್ನು ಸೇರಿಸಿಯೂ ಬಳಸಬಹುದು.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ಎಲ್ಲಾ ಪೋಷಕಾಂಶಗಳು ಇವೆ. ಅದೇ ರೀತಿಯಾಗಿ ಇದು ಕೂದಲಿಗೆ ಕೂಡ ಸಹಕಾರಿ. ನೆಲ್ಲಿಕಾಯಿ ಹುಡಿಯನ್ನು ಮದರಂಗಿ ಜತೆಗೆ ಸೇರಿಸಿಕೊಂಡು ಹಚ್ಚಿಕೊಳ್ಳಿ. ನೆಲ್ಲಿಕಾಯಿ ಕೂಲಿಗೆ ಬಲ ಮತ್ತು ಮೊಶ್ಚಿರೈಸ್ ನೀಡುವುದು. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ತಲೆಬುರುಡೆಯಲ್ಲಿ ಪಿಎಚ್ ಮಟ್ಟವನ್ನು ಕಾಪಾಡುವುದು. ಹೆನ್ನಾ ಮತ್ತು ನೆಲ್ಲಿಕಾಯಿ ಮಿಶ್ರಣವನ್ನು ತಿಂಗಳಲ್ಲಿ ಒಂದು ಸಲ ಬಳಸಿ ಕಪ್ಪು ಕೂದಲು ಪಡೆಯಿರಿ.

ಬ್ಲ್ಯಾಕ್ ಟೀ

ಬ್ಲ್ಯಾಕ್ ಟೀ

ನೈಸರ್ಗಿಕವಾಗಿ ಕೂದಲಿಗೆ ಕಪ್ಪು ಬಣ್ಣ ಬರಲು ನೀವು ಬ್ಲ್ಯಾಕ್ ಟೀ ಬಳಸಿ. ಬ್ಲ್ಯಾಕ್ ಟೀಯು ಕೂದಲಿಗೆ ನೈಸರ್ಗಿಕವಾಗಿ ಕಪ್ಪು ಬಣ್ಣ ನೀಡುವುದು, ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ಕೂದಲಿನ ಕಾಂತಿ ಹೆಚ್ಚಿಸುವುದು. ಬ್ಲ್ಯಾಕ್ ಟೀ ಬಳಸಿದ ಬಳಿಕ ಶಾಂಪೂ ಬಳಸದೆ ಇದ್ದರೆ ಒಳ್ಳೆಯ ಫಲಿತಾಂಶ ಸಿಗುವುದು.

ಲಿಂಬೆ ಮತ್ತು ತೆಂಗಿನ ಎಣ್ಣೆ

ಲಿಂಬೆ ಮತ್ತು ತೆಂಗಿನ ಎಣ್ಣೆ

ಲಿಂಬೆ ಮತ್ತು ತೆಂಗಿನ ಎಣ್ಣೆಯ ಹೇರ್ ಮಾಸ್ಕ್ ನ್ನು ವಾರದಲ್ಲಿ ಎರಡು ಸಲ ಬಳಸಿಕೊಂಡರೆ ಆಗ ಕೂದಲು ಕಪ್ಪಾಗುವುದು. ಈ ಎರಡು ಸಾಮಗ್ರಿಗಳನ್ನು ಬಳಸಿಕೊಂಡರೆ ಆಗ ಕೂದಲಿನ ಕಿರುಚೀಲಗಳಲ್ಲಿ ಬಣ್ಣದ ಕೋಶಗಳನ್ನು ಕಾಪಾಡಲು ನೆರವಾಗುವುದು.

ತೆಂಗಿನ ಎಣ್ಣೆ+ಲಿಂಬೆರಸ, ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ಈರುಳ್ಳಿ ರಸ

ಈರುಳ್ಳಿ ರಸ

ಕೂದಲನ್ನು ಬುಡದಿಂದಲೇ ಕಪ್ಪಾಗಿಸುವ ಕಿಣ್ವ ಕ್ಯಾಟಲಸೆ ಎನ್ನುವುದು ಈರುಳ್ಳಿಯಲ್ಲಿದೆ. ಈರುಳ್ಳಿ ರಸದಲ್ಲಿ ಬಿಯೊಟಿನ್, ಮೆಗ್ನಿಶಿಯಂ, ತಾಮ್ರ, ವಿಟಮಿನ್ ಸಿ, ಫೋಸ್ಪರಸ್, ಸಲ್ಫರ್, ವಿಟಮಿನ್ ಬಿ1 ಮತ್ತು ಬಿ6 ಹಾಗೂ ಫಾಲಟೆ ಇದೆ. ಇವುಗಳು ಕೂದಲನ್ನು ಕಪ್ಪಾಗಿಸುವುದು ಮತ್ತು ಕೂದಲು ಉದುರುವುದನ್ನು ತಡೆಯುವುದು. ಒಂದು ಈರುಳ್ಳಿಯಿಂದ ರಸ ತೆಗೆದು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಅದರಲ್ಲೂ ಬುಡಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. 40 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಪರಿಣಾಮಕಾರಿ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಬಳಸಿ.

English summary

Seven home remedies to naturally cover your greys

If before going out for any social gathering or a party you tend to look in the mirror to check for those grey hair then these home remedies are custom made for you. Your hair turns grey when melanocytes start decreasing or stop producing melanin around your hair follicle. Therefore, absence or reduction of melanin in keratin results in hair greying. Other than using the chemicals present in the hair dyes can also harm your hair in the long run. Turn those greys back into their natural color by simply using these home remedies.
Story first published: Saturday, May 25, 2019, 12:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more