Just In
Don't Miss
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Technology
ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ರಿಕವರ್ ಮಾಡುವುದು ಹೇಗೆ?
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- News
ನಿತ್ಯಾನಂದನಿಗೆ 'ಕೈಲಾಸ' ಕೊಟ್ಟೇ ಇಲ್ಲ, ಆತ ಹೈಟಿಗೆ ಪರಾರಿಯಾಗಿದ್ದಾನೆ: ಈಕ್ವೆಡಾರ್ ಸ್ಪಷ್ಟನೆ
- Sports
ಟೀಮ್ ಇಂಡಿಯಾ ಪ್ರಮುಖ ಆಟಗಾರರ ಬಗ್ಗೆ ಅಮರನಾಥ್ ಅಸಮಾಧಾನ
- Automobiles
ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ
- Finance
ನೀರವ್ ಮೋದಿ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಣೆ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕೂದಲಿನ ಕಂಡೀಷನರ್ಗೆ ಮೊಟ್ಟೆಯನ್ನು ಬಳಸುವುದು ಹೇಗೆ?
ಕೂದಲು ಕೂಡ ದೇಹ ಸೌಂದರ್ಯದ ಪ್ರಮುಖ ಅಂಗ. ಕೂದಲು ಸುಂದರ ಹಾಗೂ ಕಾಂತಿಯುತವಾಗಿದ್ದರೆ ಆಗ ಸೌಂದರ್ಯಕ್ಕೆ ಮೆರಗು ಸಿಗುವುದು. ಹೀಗಾಗಿ ಕೂದಲು ಉದ್ದ, ಕಪ್ಪು ಹಾಗೂ ದಪ್ಪ ಇರುವಂತೆ ಮಾಡಲು ಪ್ರತಿಯೊಬ್ಬರು ಪ್ರಯತ್ನಿಸುವರು. ಇದೇ ವೇಳೆ ಮಾರುಕಟ್ಟೆಯಲ್ಲಿ ಸಿಗುವಂತಹ ಶಾಂಪೂ, ಕಂಡೀಷನರ್ ಬಳಸಿಕೊಂಡು ಕೂದಲಿನ ಆರೈಕೆ ಮಾಡಬಹುದು. ಇದು ತಾತ್ಕಾಲಿಕ ಕಾಂತಿ ನೀಡುವುದು. ಯಾಕೆಂದರೆ ಇದರಲ್ಲಿ ಇರುವಂತಹ ರಾಸಾಯನಿಕಗಳು ಸ್ವಲ್ಪ ಸಮಯದ ತನಕ ಕೂದಲಿಗೆ ಕಾಂತಿ ನೀಡುವುದು. ಇದರ ಬಳಿಕ ಆ ಕಾಂತಿ ಮಾಯವಾಗುವುದು. ಹೀಗಾಗಿ ಮನೆಯಲ್ಲೇ ಕೆಲವೊಂದು ಹೇರ್ ಮಾಸ್ಕ್ ಗಳನ್ನು ತಯಾರಿಸಿಕೊಳ್ಳಬೇಕು.
ಇದು ತುಂಬಾ ಒಳ್ಳೆಯದು ಮತ್ತು ಯಾವುದೇ ಅಡ್ಡಪರಿಣಾಮಗಳು ಇರದು. ಮೊಟ್ಟೆಯನ್ನು ಬಳಸಿಕೊಂಡು ಹೇರ್ ಮಾಸ್ಕ್ ತಯಾರಿಸುಬಹುದು. ಮೊಟ್ಟೆಯಲ್ಲಿ ಪ್ರಮುಖ ಪ್ರೋಟೀನ್ ಸಹಿತ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದು ಕೂದಲಿಗೆ ಆಗುವಂತಹ ಹಾನಿ ತಡೆಯುತ್ತದೆ. ಆದರೆ ಕೂದಲಿಗೆ ಕಂಡೀಷನಿಂಗ್ ಮಾಡಲು ಮೊಟ್ಟೆಯನ್ನು ಸರಿಯಾದ ವಿಧಾನದಲ್ಲಿ ಬಳಸಿಕೊಳ್ಳಲು ಕಲಿಯಬೇಕು. ಹೀಗೆ ಮಾಡಿದರೆ ಮಾತ್ರ ಅದರಿಂದ ನೈಸರ್ಗಿಕ ಕಾಂತಿ ಹಾಗೂ ಹೊಳಪು ಸಿಗುವುದು. ಕೂದಲಿನ ಕಾಂತಿ ಮಾಯವಾಗಲು ಪ್ರಮುಖ ಕಾರಣವೆಂದರೆ ಕಲುಷಿತ ವಾತಾವರಣ, ಧೂಳು ಇತ್ಯಾದಿಗಳು.
Most Read: ಮುಖದ ಕಾಂತಿ ಹೆಚ್ಚಿಸಲು 5 ಬಗೆಯ ಹಣ್ಣುಗಳ ಫೇಸ್ ಪ್ಯಾಕ್ ರೆಡಿ!!
ಹೇರ್ ಕಂಡೀಷನಿಂಗ್ ಗೆ ಮೊಟ್ಟೆ ಬಳಸುವ ವಿಧಾನ
*ಒಂದು ಪಿಂಗಾಣಿಗೆ ಮೊಟ್ಟೆಯ ಲೋಳೆ ಹಾಕಿಕೊಳ್ಳಿ. ಇದರ ಹಳದಿ ಹಾಗೂ ಬಿಳಿ ಲೋಳೆ ಬೇರ್ಪಡಿಸಿಕೊಳ್ಳಿ. ಮೊಟ್ಟೆಯ ಹಳದಿ ಭಾಗವನ್ನು ಸರಿಯಾಗಿ ಕಲಸಿಕೊಳ್ಳಿ ಮತ್ತು ಇದು ಸರಿಯಾಗಿ ಮಿಶ್ರಣವಾಗಲಿ. ಇದಕ್ಕೆ ಒಂದು ಚಮಚ ಆಲಿವ್ ತೈಲವನ್ನು ಹಾಕಿಕೊಳ್ಳಿ ಮತ್ತು ಮತ್ತೆ ಕಲಸಿಕೊಂಡು ಮಿಶ್ರಣ ಮಾಡಿ. ನಿಮಗೆ ಒಳ್ಳೆಯ ಸುವಾಸನೆ ಬೇಕಿದ್ದರೆ ಆಗ ನೀವು ಆಲಿವ್ ತೈಲದ ಬದಲಿಗೆ ಮಗುವಿನ ತೈಲ ಬಳಸಿಕೊಳ್ಳಬಹುದು.
*ಉಗುರುಬೆಚ್ಚಗಿನ ನೀರು ಬಳಸಿಕೊಂಡು ಈ ಮಿಶ್ರಣವನ್ನು ತೆಳು ಮಾಡಿ. ಕೂದಲಿಗೆ ಹಚ್ಚಿಕೊಳ್ಳುವ ಮೊದಲು ಶಾಂಪೂ ಹಾಕಿ ಕೂದಲು ಸ್ವಚ್ಛಗೊಳಿಸಬೇಕು. ಕೂದಲಿಗೆ ಹಾಗೂ ತಲೆಬುರುಡೆಗೆ ಇದನ್ನು ಸರಿಯಾಗಿ ಹಚ್ಚಿಕೊಳ್ಳಿ. ಕೂದಲು ತೊಳೆದ ಬಳಿಕ ಹೆಚ್ಚುವರಿ ನೀರು ಕೂದಲಿನಿಂದ ಹೊರಗೆ ಹೋಗುವಂತೆ ಮಾಡಿ.*ಮಿಶ್ರಣದ ಅರ್ಧದಷ್ಟು ತೆಗೆದುಕೊಂಡು ಅದನ್ನು ಕೂದಲಿನ ಬುಡದಿಂದ ಹಿಡಿದು ತುದಿ ತನಕ ಹಚ್ಚಿಕೊಳ್ಳಿ. ಇದು ಮುಖದ ಮೇಲೆ ಬರುವುದನ್ನು ತಪ್ಪಿಸಿ. ಯಾಕೆಂದರೆ ಆಲಿವ್ ತೈಲವು ಮುಖದ ಚರ್ಮಕ್ಕೆ ಒಳ್ಳೆಯದಲ್ಲ. ಆದರೆ ಮೊಟ್ಟೆಯ ಲೋಳೆಯು ಲಾಭಕಾರಿಯಾಗಿರುವುದು. ಇನ್ನು ಉಳಿದರ್ಧ ಮಿಶ್ರಣವನ್ನು ನೀವು ಮತ್ತೆ ಕೂದಲು ಹಾಗೂ ತಲೆಬುರುಡೆಗೆ ಹಚ್ಚಿಕೊಳ್ಳಿ.
*ತಲೆಯಲ್ಲಿ ಈ ಮಿಶ್ರಣದ ಪದರ ನಿರ್ಮಾಣವಾಗಿದೆಯಾ ಎಂದು ದೃಢಪಡಿಸಿಕೊಳ್ಳಿ. ನೀವು ಕೂದಲಿನ ಮೇಲೆ ಬೆರಳಾಡಿಸಿದರೆ ಆಗ ನಿಮಗೆ ಇದು ತಿಳಿದುಬರುವುದು. ಐದು ನಿಮಿಷ ಕಾಲ ಹಾಗೆ ಇರಲು ಬಿಡಿ. 30 ನಿಮಿಷ ಕಾಲ ಬಿಟ್ಟರೆ ಆಗ ನೀವು ಇದರಿಂದ ಅತ್ಯುತ್ತಮ ಫಲಿತಾಂಶ ಪಡೆಯಲಿದ್ದೀರಿ.
*ಈಗ ನೀವು ಕೂದಲನ್ನು ತೊಳೆಯಬೇಕು. ಉಗುರುಬೆಚ್ಚಗಿನ ನೀರು ಅಥವಾ ತಣ್ಣೀರು ಬಳಸಿಕೊಳ್ಳಿ. ಆದರೆ ಬಿಸಿ ನೀರು ಮಾತ್ರ ಬಳಸಿಕೊಳ್ಳಬೇಡಿ. ಇದರಿಂದ ಮೊಟ್ಟೆಯು ಕೂದಲಿನಲ್ಲಿ ಬೇಯುವುದು. ಹಾಗಾಗಿ ಮತ್ತೆ ಕೂದಲು ತೊಳೆಯಬೇಕಾಗಬಹುದು. ತಣ್ಣೀರಿನಲ್ಲಿ ಕೂದಲು ತೊಳೆದರೆ ಆಗ ಕೂದಲು ತುಂಬಾ ಕಾಂತಿಯುತವಾಗಿ ಇರುವುದು.
*ಮೊಟ್ಟೆಯಲ್ಲಿ ಇರುವಮತಹ ಪ್ರೋಟೀನ್ ಕೂದಲಿನ ಕಿರುಚೀಲಗಳನ್ನು ಸದೃಢವಾಗಿಸುವುದು ಮತ್ತು ಕೂದಲು ಒಡೆಯುವುದನ್ನು ತಡೆಯುವುದು. ಸಲ್ಫರ್, ವಿಟಮಿನ್ ಮತ್ತು ಖನಿಜಾಂಶಗಳು ವೇಗ ಮತ್ತು ಆರೋಗ್ಯಕಾರಿಯಾಗಿ ಕೂದಲು ಬೆಳೆಯಲು ನೆರವಾಗುವುದು.