For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಉಪ್ಪನ್ನು ಬಳಸುವುದರಿಂದಾಗುವ ಐದು ಅನುಕೂಲಗಳು

|

ದುಬಾರಿ ಶಾಂಪೂ ಮತ್ತು ಇತರ ಕೂದಲ ಉತ್ಪನ್ನಗಳು ನಿಮ್ಮ ಹಣವನ್ನು ಪೋಲು ಮಾಡುತ್ತಿದ್ದರೆ ಇಲ್ಲಿದೆ ಕೆಲವು ಸಲಹೆಗಳು.ಆರೋಗ್ಯಕರವಾದ ಕೂದಲನ್ನು ಪಡೆಯಲು ಬೇಕಾದ ಅಗ್ಗದ ರಹಸ್ಯ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ.ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕುತೂಹಲವಿದ್ದರೆ ಇಲ್ಲಿ ಓದಿ ನೋಡಿ. ನಿಮಗೆ ಇದನ್ನು ನಂಬಲು ಅಸಾಧ್ಯ ಎಂದೆನ್ನಿಸಬಹುದು ಆದರೆ ನೀವು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಉಪ್ಪು ನಿಮ್ಮ ಕೂದಲಿನ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ ಎಂಬುದು ನಿಜ.

ತಲೆಹೊಟ್ಟನ್ನು ನಿವಾರಿಸಿ

ತಲೆಹೊಟ್ಟನ್ನು ನಿವಾರಿಸಿ

ತಲೆಹೊಟ್ಟಿಗೆ ಇರುವ ಮುಖ್ಯವಾದ ಕಾರಣ ಎಂದರೆ ಕೂದಲಿನ ಬುಡದಲ್ಲಿರುವ ಡೆಡ್ ಸ್ಕಿನ್ ಒಣಗಿ ಫ್ಲೆಕ್ಸ್ ಆಗಿ ಉದುರುವುದು. ತಲೆಯಲ್ಲಿ ಆರ್ದ್ರತೆ ಮತ್ತು ಶಿಲೀಂಧ್ರ ಕೂಡ ತಲೆಹೊಟ್ಟು ಹೆಚ್ಚುವಂತೆ ಮಾಡುತ್ತದೆ.ಅಡುಗೆಗೆ ಬಳಸುವ ಉಪ್ಪು ಕೂದಲಿನಲ್ಲಿ ಹೆಚ್ಚಾದ ಎಣ್ಣೆ ಅಂಶ ಮತ್ತು ಆರ್ಧ್ರತೆಯನ್ನು ತಡೆಯುವುದರ ಜೊತೆಗೆ ತಲೆಹೊಟ್ಟನ್ನು ಕೂಡ ನಿವಾರಿಸುತ್ತದೆ.ಉಪ್ಪು ನೀರನ್ನು ನಿಮ್ಮ ಕೂದಲಿಗೆ ಸಿಂಪಡಿಸಿ ನಿಧಾನವಾಗಿ ಮಸಾಜ್ ಮಾಡಿ.ಸ್ವಲ್ಪ ಸಮಯದ ನಂತರ ಕೂದಲನ್ನು ಯಾವಾಗಲೂ ವಾಶ್ ಮಾಡುವಂತೆ ತಲೆಗೆ ಸ್ನಾನ ಮಾಡಿ ಮತ್ತು ಇದರ ಅನುಕೂಲವನ್ನು ನೋಡಿ.

ದಟ್ಟವಾದ ಕೇಶರಾಶಿ ನಿಮ್ಮದಾಗುತ್ತದೆ

ದಟ್ಟವಾದ ಕೇಶರಾಶಿ ನಿಮ್ಮದಾಗುತ್ತದೆ

ಕೂದಲು ಉದುರುವಿಕೆ ಸಾಮನ್ಯವಾಗಿ ಎಲ್ಲರಲ್ಲಿ ಕಂಡು ಬರುವಸಮಸ್ಯೆ.ರಾಸಾಯನಿಕ ಉತ್ಪನ್ನಗಳನ್ನು ಒಳಗೊಂಡಿರುವ ಶಾಂಪೂ ಬಳಸುವುದರಿಂದ ಕೂದಲು ಹೊಳಪನ್ನು ಕಳೆದುಕೊಳ್ಳುತ್ತದೆ. ಶಾಂಪೂವಿನ ಜೊತೆಗೆ ಸ್ವಲ್ಪ ಉಪ್ಪನ್ನು ಬಳಸುವುದರಿಂದ ಇದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಇದು ಕೂದಲು ದಪ್ಪವಾಗಿ ಕಾಣುವುದು ಮಾತ್ರವಲ್ಲ,ದಟ್ಟವಾಗಿ ಬೆಳೆಯಲು ಕೂಡ ಸಹಕರಿಸುತ್ತದೆ.ನಿಮಗೆ ಬೇಕಾದಷ್ಟು ಶಾಂಪೂವನ್ನು ತೆಗೆದುಕೊಂಡು ಅದರ ಅರ್ಧದಷ್ಟು ಉಪ್ಪನ್ನು ಬೆರೆಸಿ.ನಿಧಾನವಾಗಿ ಮಸಾಜ್ ಮಾಡಿ ಅದನ್ನು ಸ್ವಲ್ಪ ಹೊತ್ತು ಹಾಗೇ ಬಿಟ್ಟುಬಿಡಿ. ಹೊಳೆಯುವ ಮತ್ತು ದಟ್ಟವಾದ ಕೂದಲನ್ನು ನಿಮ್ಮದಾಗಿಸಿಕೊಳ್ಳಲು ನಂತರ ತಣ್ಣೀರಿನಲ್ಲಿ ಕೂದಲನ್ನು ತೊಳೆಯಿರಿ.

Most Read: ಗುರುತು ಮರೆಮಾಚಿ ತಲೆ ಕೂದಲು ಕತ್ತರಿಸುವ ಅಂಗಡಿ ನಡೆಸುತ್ತಿರುವ ಸಹೋದರಿಯರು!

ಕೂದಲ ಬೆಳವಣಿಗೆಗೆ ಸಹಾಯಕ

ಕೂದಲ ಬೆಳವಣಿಗೆಗೆ ಸಹಾಯಕ

ಅತಿಯಾದ ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಸಮುದ್ರದ ಉಪ್ಪು ನೈಸರ್ಗಿಕವಾಗಿ ಮತ್ತು ಅತಿ ಕಡಿಮೆ ಮೊತ್ತದಲ್ಲಿ ದೊರೆಯುವ ಸಾಮಗ್ರಿ.ಮುಚ್ಚಿದ ರಂಧ್ರಗಳನ್ನು ತೆರೆದು ಕೂದಲು ಸರಿಯಾದ ರೀತಿಯಲ್ಲಿ ಬೆಳೆಯಲು ಇದು ಸಹಕರಿಸುತ್ತದೆ.ಸ್ವಲ್ಪ ಎಣ್ಣೆ ಮತ್ತು ಉಪ್ಪನ್ನು ತೆಗೆದುಕೊಂಡು ಕೂದಲಿನ ಬುಡದಲ್ಲಿ ಒಂದೆರಡು ವಾರ ಮಸಾಜ್ ಮಾಡಿ ನೋಡಿ. ಕೂದಲು ಬೆಳವಣಿಗೆ ಸರಾಗವಾಗಿ ಆಗುತ್ತದೆ.

ಕೂದಲು ಜಿಡ್ಡುಗಟ್ಟುವುದನ್ನು ತಡೆಯುತ್ತದೆ

ಕೂದಲು ಜಿಡ್ಡುಗಟ್ಟುವುದನ್ನು ತಡೆಯುತ್ತದೆ

ಕೂದಲು ಜಿಡ್ಡುಗಟ್ಟುವುದನ್ನು ತಡೆಯಲು ಪ್ರತಿ ಎರಡು ದಿನಕ್ಕೊಮ್ಮೆ ತಲೆಗೆ ಸ್ನಾನ ಮಾಡಬೇಕಾಗಿ ಬರುತ್ತಿದೆಯೇ ?ಹಾಗಿದ್ದರೆ ಉಪ್ಪು ನಿಮ್ಮ ಸಹಾಯಕ್ಕೆ ಬರಬಹುದು.ಆರೋಗ್ಯಕರ ಕೂದಲನ್ನು ಪಡೆಯಲು ಎಣ್ಣೆ ಬಳಸುವುದು ಅಗತ್ಯ ಆದರೆ ವಿಪರೀತ ಎಣ್ಣೆಯಂಶ ಕೂಡ ಮುಜುಗರ ಉಂಟು ಮಾಡುತ್ತದೆ.ತಲೆ ಬುಡದಲ್ಲಿ ಸೆಬಾಸಿಯಸ್ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಎಣ್ಣೆ ಅಂಶವನ್ನು ಉಪ್ಪು ತಡೆಯುತ್ತದೆ.ಇದರಿಂದ ನಿಮ್ಮ ಕೂದಲಿನ ಗುಣಮಟ್ಟ ಸುಧಾರಿಸುತ್ತದೆ.

Most Read:ರಾತ್ರಿ ಮಲಗುವ ಮುನ್ನ, ಹೀಗೆ ಮಾಡಿದರೆ, ಮುಂಜಾನೆ ಎದ್ದಾಗ ಮುಖ ಕಾಂತಿಯುತವಾಗಿರುತ್ತದೆ

ರಕ್ತ ಸಂಚಲನವನ್ನು ತೀವ್ರಗೊಳಿಸುವುದು

ರಕ್ತ ಸಂಚಲನವನ್ನು ತೀವ್ರಗೊಳಿಸುವುದು

ಸೀ ಸಾಲ್ಟ್ ರಕ್ತ ಸಂಚಾರವನ್ನು ಸರಾಗಗೊಳಿಸಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಒಂದು ರೀತಿಯ ಉಪ್ಪು.ಇದರಲ್ಲಿರುವ ಕ್ಯಾಲ್ಸಿಯಂ,ಮ್ಯಾಗ್ನಿಷಿಯಂ,ಬ್ರೋಮೈಡ್,ಸಲ್ಫಾರ್,ಜಿಂಕ್, ಕ್ಲೋರೈಡ್ ಇವುಗಳು ಕೂದಲಿನ ಬೆಳವಣಿಗೆ ಹೆಚ್ಚಿಸಿ ಬಲಯುತವಾಗಿಸುತ್ತದೆ. ಈ ಎಲ್ಲಾ ರೀತಿಯಲ್ಲಿ ಉಪ್ಪನ್ನು ಬಳಸುವುದರಿಂದ ಕೂದಲು ಬೆಳೆಯಲು ಅನುಕೂಲವಾಗುತ್ತದೆ.ಅಡುಗೆ ಮನೆಯಲ್ಲಿ ದೊರೆಯುವ ಈ ಉಪ್ಪನ್ನು ಬಳಸಿ ಮತ್ತು ಇದರಿಂದಾಗುವ ಮ್ಯಾಜಿಕ್ ನೋಡಿ.

English summary

Five Magical Benefits Of Using Salt On Your Hair

If buying expensive hair serums and shampoos have been burning a hole in your pocket, we have got you covered! The secret and economical option which you have been waiting for to give your hair the texture and volume you want is right there hidden in your kitchen. Yes, you read that right.You would find it hard to believe but the salt which you use to enhance the flavour of your food can actually prove out to be your most economical hair partner too. Think we’re tricking you? Let’s take a look:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more