For Quick Alerts
ALLOW NOTIFICATIONS  
For Daily Alerts

ತಲೆಕೂದಲುಗಳು ದುರ್ಗಂಧ ಬೀರುತ್ತದೆಯೆ? ಹಾಗಾದರೆ ಈ ಮನೆ ಮದ್ದುಗಳನ್ನು ಮಾಡಿ ನೋಡಿ

|

ದುರ್ಗಂಧ ಬೀರುವ ತಲೆಕೂದಲುಗಳು ಎಲ್ಲರಿಗೂ ಮುಜುಗರ ಉಂಟುಮಾಡುವ ವಿಷಯ. ಎಣ್ಣೆಯುಕ್ತ ನೆತ್ತಿ, ಅತಿಯಾಗಿ ಬೆವರುವುದು, ಶಿಲೀಂದ್ರಗಳ ಸೋಂಕು, ಬ್ಯಾಕ್ಟೀರಿಯಾದ ಸೋಂಕು ಮತ್ತು ಮಾಲಿನ್ಯದಿಂದ ಇದು ಉಂಟಾಗಬಹುದು. ವಾತಾವರಣದಲ್ಲಿರುವ ಮಾಲಿನ್ಯವು ಎಣ್ಣೆಯುಕ್ತವಾದ ಕೂದಲುಗಳೊಂದಿಗೆ ಬೆರೆತು ಕೆಟ್ಟ ವಾಸನೆಯನ್ನು ಉಂಟುಮಾಡುತ್ತದೆ. ಅಸ್ವಚ್ಛತೆ, ಹಾರ್ಮೊನ್ ಗಳ ಅಸಮತೋಲನ ಹಾಗೂ ಕಲುಶಿತ ವಾತಾವರಣ ಕೂಡ ಇದಕ್ಕೆ ಕಾರಣವಾಗಬಹುದು. ಕಾರಣಗಳು ಏನೇ ಇರಲಿ, ಆದರೆ ಯಾರೂ ದುರ್ಗಂಧ ಬೀರುವ ತಲೆಕೂದಲುಗಳನ್ನು ಅಥವಾ ನೆತ್ತಿಯನ್ನು ಹೊಂದಿರಲು ಇಷ್ಟಪಡುವುದಿಲ್ಲ. ಎಣ್ಣೆಯುಕ್ತ ತ್ವಚೆಗೆ ಇರುವಂತೆ ಎಣ್ಣೆಯುಕ್ತವಾದ ತಲೆಕೂದಲುಗಳು ಮತ್ತು ನೆತ್ತಿಗೆ ಕೂಡಾ ಪರಿಹಾರಗಳಿವೆ.

ಮಾರುಕಟ್ಟೆಯಲ್ಲಿ ಹಲವಾರು ತರಹದ ಉತ್ಪನ್ನಗಳು ದೊರೆಯುತ್ತವೆ. ನೀವು ಅವುಗಳನ್ನು ಕೂಡಾ ಆರಿಸಿಕೊಳ್ಳಬಹುದು. ಆದರೆ ಇವುಗಳಲ್ಲಿ ಇರುವ ರಾಸಾಯನಿಕಗಳು ಕೂದಲು ಉದುರುವಿಕೆ, ಒಣ ಕೂದಲು ಹಾಗೂ ಕೂದಲುಗಳು ಕಾಂತಿಯನ್ನು ಕಳೆದುಕೊಳ್ಳುವಂತೆ ಮಾಡಬಹುದು. ಮನೆಯೆಲ್ಲಿ ಸುಲಭವಾಗಿ ದೊರೆಯುವ ವಸ್ತುಗಳಿಂದ ಕಡಿಮೆ ಖಃರ್ಚಿನಲ್ಲಿ ಕೂದಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ತಲೆಕೂದಲುಗಳ ದುರ್ಗಂಧದಿಂದ ಮುಕ್ತವಾಗಲು 10 ಮನೆಮದ್ದುಗಳನ್ನು ನಾವು ನಿಮ್ಮಮುಂದೆ ತಂದಿದ್ದೇವೆ. ಅವುಗಳನ್ನು ಪ್ರಯತ್ನಿಸಿ ಮತ್ತು ವ್ಯತ್ಯಾಸವನ್ನು ನೋಡಿ. ನೀವು ಇಷ್ಟಪಡುವುದಂತೂ ಖಂಡಿತ...

 ಅಡುಗೆ ಸೋಡಾ

ಅಡುಗೆ ಸೋಡಾ

ಜಿಡ್ಡುತನವನ್ನು ಕಡಿಮೆಗೊಳಿಸಲು ಮತ್ತು ಕೆಟ್ಟ ವಾಸನೆಯನ್ನು ದೂರಗೊಳಿಸಲು ಅಡುಗೆ ಸೋಡವನ್ನು ಅತ್ಯಂತ ಸಾಮಾನ್ಯವಾಗಿ ಮನೆಮದ್ದುಗಳಲ್ಲಿ ಉಪಯೋಗಿಸಲಾಗುತ್ತದೆ.

ಉಪಯೋಗಿಸುವ ವಿಧಾನ:

* ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಪ್ರಮಾಣದ ಅಡುಗೆ ಸೋಡಾವನ್ನು ತೆಗೆದುಕೊಂಡು ಅದಕ್ಕೆ ಮೂರು ಪ್ರಮಾಣದಷ್ಟು ನೀರನ್ನು ಬೆರೆಸಿ ನುಣ್ಣಗೆ ಕಲೆಸಿಕೊಳ್ಳಿ.

* ಈಗ ನಿಮ್ಮ ಕೂದಲುಗಳನ್ನು ಒದ್ದೆಮಾಡಿಕೊಂಡು ಕಲೆಸಿಕೊಂಡಿಟ್ಟ ಅಡುಗೆ ಸೋಡದ ಮಿಶ್ರಣವನ್ನು ಒದ್ದೆ ಕೂದಲಿಗೆ ಹಚ್ಚಿಕೊಳಿ.

* 5 ನಿಮಿಷಗಳನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.

* ಈ ವಿಧಾನವನ್ನು ವಾರಕ್ಕೊಮ್ಮೆ ಪುನರಾವರ್ತಿಸಿ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ನೈಸರ್ಗಿಕ ಕೂದಲಿನ ಶುದ್ಧೀಕರಣ ಮತ್ತು ಸ್ಪಷ್ಟೀಕರಣವೆಂದು ಪರಿಗಣಿಸಲ್ಪಟ್ಟಂತೆ ಆಪಲ್ ಸೈಡರ್ ವಿನೆಗರ್ ಕೂದಲಿನ ಚಿಕಿತ್ಸೆಗಾಗಿ ಉತ್ತಮವಾಗಿರುತ್ತದೆ. ಎಣ್ಣೆಯುಕ್ತ ಕೂದಲುಗಳನ್ನು ನೀಡುವ ಉತ್ಪನ್ನಗಳ ಶೇಖರಣೆಯನ್ನು ತೆಗೆದುಹಾಕಲು ಸಹ ಇದು ಸಹಾಯ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ಕೂದಲಿನ ಸಾಮಾನ್ಯ ಪಿಎಚ್ ಮಟ್ಟವನ್ನು ಪುನಃಸ್ಥಾಪಿಸಲು ಸಹಾಯ ಮಾಡಿ ಕೂದಲಿಗೆ ಹೊಳಪನ್ನು ನೀಡಿ, ಕೂದಲು ಶುಷ್ಕವಾಗುವುದನ್ನು ತಡೆಯುತ್ತದೆ.

ಬಳಸುವುದು ಹೇಗೆ:

* ಒಂದು ಬಟ್ಟಲಿನಲ್ಲಿ, ಅರ್ಧ ಕಪ್ ಸಾವಯವ ಆಪಲ್ ಸೈಡರ್ ವಿನೆಗರ್ ಸೇರಿಸಿ ಎರಡು ಬಟ್ಟಲು ಶುದ್ದ ನೀರು ಮತ್ತು 2-3 ಹನಿಗಳಷ್ಟು ಲ್ಯಾವೆಂಡರ್

ತೈಲವನ್ನು ಸೇರಿಸಿ.

* ಇದನ್ನು ಸ್ಪ್ರೇ ಬಾಟಲ್ ಗೆ ವರ್ಗಾಯಿಸಿ ನಿಮ್ಮ ಕೂದಲಿನ ಮೇಲೆ ಸಿಂಪಡಿಸಿ

* ಇದನ್ನು 5 ನಿಮಿಷಗಳ ಕಾಲ ಬಿಡಿ.

* ಸಾಮಾನ್ಯ ನೀರಿನಿಂದ ತೊಳೆಯಿರಿ.

* ಅಥವಾ, ಕೇವಲ ಅರ್ಧ ಚಮಚ ಆಪಲ್ ಸೈಡರ್ ವಿನೆಗರ್ ಮತ್ತು ಒಂದು ಕಪ್ ನೀರಿನೊಂದಿಗೆ ಮಿಶ್ರಗೊಳಿಸಿ ಕೂದಲಿಗೆ ಹಚ್ಹಿ.

* ಸುಮಾರು ಒಂದು ನಿಮಿಷದ ನಂತರ ಸಾಮಾನ್ಯ ನೀರಿನಿಂದ ಇದನ್ನು ತೊಳೆಯಿರಿ.

ನಿಂಬೆ ರಸ

ನಿಂಬೆ ರಸ

ನಿಂಬೆ ರಸದಲ್ಲಿ ಸಂಕೋಚಕ ಗುಣಲಕ್ಷಣಗಳು ಕೂದಲಿನಿಂದ ವಾಸನೆಯನ್ನು ತೆಗೆದುಹಾಕಲು ಅತ್ಯುತ್ತಮ ಪರಿಹಾರವನ್ನು ನೀಡುತ್ತವೆ. ಇದು ತಲೆಹೊಟ್ಟು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿಗೆ ಹೊಳಪನ್ನು ನೀಡುತ್ತದೆ.

ಬಳಸುವುದು ಹೇಗೆ:

• ಎರಡು ನಿಂಬೆಹಣ್ಣುಗಳ ರಸವನ್ನು ತೆಗೆದುಕೊಂಡು ಅದಕ್ಕೆ ಒಂದು ಕಪ್ ನೀರನ್ನು ಸೇರಿಸಿ.

• ನಿಮ್ಮ ಕೂದಲು ಶಾಂಪೂ ಮಾಡಿದ ನಂತರ, ನಿಮ್ಮ ನೆತ್ತಿಯ ಮೇಲೆ ಮಿಶ್ರಣವನ್ನು ಹಚ್ಹಿ ಕೆಲವು ನಿಮಿಷಗಳವರೆಗೆ ಬಿಡಿ

• ನಂತರ ಸಾಮಾನ್ಯ ನೀರಿನಿಂದ ಅದನ್ನು ತೊಳೆಯಿರಿ

• ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

• ನಿಂಬೆ ರಸವನ್ನು ರೋಸ್ಮರಿ, ಲ್ಯಾವೆಂಡರ್, ಇತ್ಯಾದಿ. ಎಣ್ಣೆಗಳೊಂದಿಗೆ ಕೂಡಾ ಮಿಶ್ರ ಮಾಡಿ ರಾತ್ರಿಪೂರ್ತಿ ಬಿಡಿ. ನಂತರ ತೊಳೆಯಿರಿ.

• ವಾರದಲ್ಲಿ ಮೂರು ಬಾರಿ ಇದನ್ನು ಮಾಡಿ.

ಟೊಮೆಟೊ ಜ್ಯೂಸ್

ಟೊಮೆಟೊ ಜ್ಯೂಸ್

ನಿಮ್ಮ ಕೂದಲಿನಿಂದ ವಾಸನೆಯನ್ನು ತೊಡೆದುಹಾಕಲು ಟೊಮೆಟೊ ರಸವು ಸಹಾಯ ಮಾಡುತ್ತದೆ ಮತ್ತು ಇದು ನಿಮ್ಮ ಕೂದಲಿನ pH ಮಟ್ಟವನ್ನು ಸಮತೋಲನಗೊಳಿಸುತ್ತದೆ.

ಬಳಸುವುದು ಹೇಗೆ:

• ಒಂದು ಟೊಮೆಟೊ ರಸವನ್ನು ತೆಗೆದುಕೊಂಡು ನೇರವಾಗಿ ನಿಮ್ಮ ನೆತ್ತಿಯ ಮೇಲೆ ಹಚ್ಹಿ.

• ಸುಮಾರು 10-15 ನಿಮಿಷಗಳ ಕಾಲ ಬಿಟ್ಟು ಕೂದಲನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.

• ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಪುನರಾವರ್ತಿಸಿ.

• ಗಮನಿಸಿ: ಟೊಮೇಟೊ ರಸವು ನಿಮ್ಮ ಕೂದಲನ್ನು ಹಗುರಗೊಳಿಸಬಹುದು.

ಬೇವಿನ ತೈಲ

ಬೇವಿನ ತೈಲ

ಬೇವಿನ ಎಣ್ಣೆಯಲ್ಲಿನ ನಂಜುನಿರೋಧಕ ಗುಣಲಕ್ಷಣಗಳು ಕೂದಲಿನ ದುರ್ಗಂದ ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಒಂದು ವೇಳೆ ಯಾವುದೇ ನೆತ್ತಿಯ ಸೋಂಕುಗಳು ಇದ್ದರೆ ಕಡಿಮೆಗೊಳಿಸುತ್ತದೆ

ಬಳಸುವುದು ಹೇಗೆ:

• ಕೆಲವು ಹನಿಗಳನ್ನು ನೇರವಾಗಿ ನಿಮ್ಮ ನೆತ್ತಿಯ ಮೇಲೆ ಹಚ್ಚಿ ಸ್ವಲ್ಪ ಸಮಯಕ್ಕೆ ಮಸಾಜ್ ಮಾಡಿ, ರಾತ್ರಿಪೂರ್ತಿ ಬಿಡಿ.

• ನಿಮ್ಮ ಕೂದಲನ್ನು ಶಾಂಪೂ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ.

• ಅಥವಾ, ಕೆಲವು ಬೇವಿನ ಎಲೆಗಳನ್ನು ಕುದಿಸಿ ಆ ದ್ರಾವಣವನ್ನು ಕೂದಲು ತೊಳೆಯಲು ಬಳಸಬಹುದು.

ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್

ಟೀ ಟ್ರೀ ಎಣ್ಣೆಯಲ್ಲಿನ ಸೂಕ್ಷ್ಮಜೀವಿಯ ಗುಣಲಕ್ಷಣಗಳು, ಕೆಟ್ಟ ವಾಸನೆಯನ್ನು ಬೀರುವ ಕೂದಲು ಮತ್ತು ನೆತ್ತಿಯ ತುರಿಕೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ತಲೆಹೊಟ್ಟು ಮತ್ತು ಇತರ ನೆತ್ತಿ ಸಂಬಂಧಿತ ಸಮಸ್ಯೆಗಳನ್ನು ಕೂಡ ಗುಣಪಡಿಸಲು ಸಹಾಯ ಮಾಡುತ್ತದೆ.

ಬಳಸುವುದು ಹೇಗೆ:

• ಚಹಾ ಮರದ ಎಣ್ಣೆಯ ಕೆಲವು ಹನಿಗಳನ್ನು ಒಂದು ಕಪ್ ನೀರಿನಲ್ಲಿ ಮಿಶ್ರ ಮಾಡಿ ನಿಮ್ಮ ನೆತ್ತಿಯ ಮೇಲೆ ಹಚ್ಹಿ

• ಅರ್ಧ ಘಂಟೆಗಳ ಕಾಲ ನಿಮ್ಮ ಕೂದಲ ಮೇಲೆ ಬಿಡಿ.

• ನಂತರ ಕೂದಲುಗಳನ್ನು ಶಾಂಪೂ ಮಾಡಿ.

• ವಾರಕ್ಕೊಮ್ಮೆ ಈ ಪರಿಹಾರವನ್ನು ಬಳಸಿ.

ಬೆಳ್ಳುಳ್ಳಿ ತೈಲ

ಬೆಳ್ಳುಳ್ಳಿ ತೈಲ

ಬೆಳ್ಳುಳ್ಳಿಯ ಸಲ್ಫರ್ ಅಂಶವು ಕೂದಲಿನ ಕೆಟ್ಟ ವಾಸನೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಏಕೆಂದರೆ ಸಲ್ಫರ್ ಒಂದು ಶಿಲೀಂಧ್ರ ಮತ್ತು ಆಂಟಿ ಬ್ಯಾಕ್ಟೀರಿಯಲ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಬಳಸುವುದು ಹೇಗೆ:

3-4 ಬೆಳ್ಳುಳ್ಳಿ ಎಸಳುಗಳನ್ನು ಅರ್ಧ ಕಪ್ ತೆಂಗಿನ ಎಣ್ಣೆಯಲ್ಲಿ ಕುದಿಸಿ.

* ಬೆಚ್ಚಗಿನ ಬೆಳ್ಳುಳ್ಳಿ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ನಿಮ್ಮ ನೆತ್ತಿಗೆ ಅದನ್ನು ಹಚ್ಹಿ.

• ತೈಲವನ್ನು ಸಂಪೂರ್ಣವಾಗಿ ಮಸಾಜ್ ಮಾಡಿ 20 ನಿಮಿಷಗಳ ಕಾಲ ನೆತ್ತಿಯ ಮೇಲೆ ತೈಲವನ್ನು ಬಿಡಿ

• ನಂತರ ಶಾಂಪೂ ಮಾಡಿ.

• ವಾರಕ್ಕೊಮ್ಮೆ ಈ ಪರಿಹಾರವನ್ನು ಪುನರಾವರ್ತಿಸಿ

ಥೈಮ್

ಥೈಮ್

ಥೈಮ್ನಲ್ಲಿನ ಆಂಟಿಬ್ಯಾಕ್ಟೀರಿಯಾ ಗುಣಗಳು ಕೂದಲಲ್ಲಿ ಕೆಟ್ಟ ವಾಸನೆಯನ್ನು ತೆಗೆಯಲು ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಶ್ಯಾಂಪೂಗಳು ಥೈಮ್ ಸಾರದ ಸಕ್ರಿಯ ಅಂಶಗಳನ್ನು ಒಳಗೊಂಡಿವೆ.

ಬಳಸುವುದು ಹೇಗೆ

• ಸುಮಾರು 20 ನಿಮಿಷಗಳ ಕಾಲ 3 ಲೀಟರ್ ನೀರು ನೀರಿನಲ್ಲಿ 3 ಕಪ್ ಥೈಮ್ ಚಿಗುರುಗಳನ್ನು ಕುದಿಸಿ.

• ತಣ್ಣಗಾಗಲು ಬಿಡಿ.

• ತಣ್ಣಗಾದ ನಂತರ ದ್ರಾವಣವನ್ನು ಸೋಸಿಕೊಂಡು, ಶಾಂಪೂ ಮಾಡಿದ ನಂತರ ಬಳಸಿ.

• ವಾರಕ್ಕೊಮ್ಮೆ ಈ ಪರಿಹಾರವನ್ನು ಪುನರಾವರ್ತಿಸಿ.

ಅಲೋವೆರಾ

ಅಲೋವೆರಾ

ಅಲೋ ವೆರಾ ಬಹಳಷ್ಟು ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇದು ತಲೆ ಹೊಟ್ಟು ಮತ್ತು ಎಣ್ಣೆಯುಕ್ತ ನೆತ್ತಿಯಿಂದ ಉಂಟಾಗುವ ಕೆಟ್ಟ ವಾಸನೆಯನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದು ಕೂದಲನ್ನು ಬೆಳೆಸಲು ಮತ್ತು ಅದ್ಭುತ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ.

ಬಳಸುವುದು ಹೇಗೆ:

• ಅಲೋ ವೆರಾ ಎಲೆಯಿಂದ ಅಲೋ ವೆರಾ ಜೆಲ್ ಅನ್ನು ತೆಗೆಯಿರಿ.

* ನಿಮ್ಮ ನಿಯಮಿತ ಶಾಂಪೂದೊಂದಿಗೆ ನಿಮ್ಮ ಕೂದಲನ್ನು ಶಾಂಪೂ ಮಾಡಿ.

• ಶಾಂಪೂ ಮಾಡಿದ ನಂತರ, ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಅಲೋ ವೆರಾ ಜೆಲ್ ಅನ್ನು ಹಚ್ಹಿ, 15 ನಿಮಿಷಗಳ ಕಾಲ ಅದನ್ನು ಬಿಡಿ.

• ವಾರಕ್ಕೊಮ್ಮೆ ಈ ಪರಿಹಾರವನ್ನು ಪುನರಾವರ್ತಿಸಿ.

ಈರುಳ್ಳಿ ರಸ

ಈರುಳ್ಳಿ ರಸ

ಈರುಳ್ಳಿ ರಸವು ಬೆಳ್ಳುಳ್ಳಿ ರಸಕ್ಕೆ ಹೋಲುತ್ತದೆ, ಈರುಳ್ಳಿ ರಸವು ಸಲ್ಫರ್ ಅನ್ನು ಹೊಂದಿದೆ. ಇದು ಕೆಟ್ಟ ವಾಸನೆಯನ್ನು ಉಂಟುಮಾಡಲು ಕಾರಣವಾದ ಮತ್ತು ಎಣ್ಣೆಯುಕ್ತ ನೆತ್ತಿಯನ್ನು ಉಂಟುಮಾಡುವ ಬ್ಯಾಕ್ಟೀರಿಯಾದೊಂದಿಗೆ ಹೋರಾಡುತ್ತದೆ. ಈರುಳ್ಳಿ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಬೋಳಾಗುವುದನ್ನು ತಡೆಯುತ್ತದೆ.

ಬಳಸುವುದು ಹೇಗೆ:

• ಜ್ಯೂಸರ್ನಲ್ಲಿ 5-6 ತುಂಡು ಈರುಳ್ಳಿ ಸೇರಿಸಿ.

• ಈಗ ಈ ರಸವನ್ನು ನಿಮ್ಮ ನೆತ್ತಿಗೆ ಹಚ್ಹಿ ಮೃದುವಾಗಿ ಮಸಾಜ್ ಮಾಡಿ.

• ಅರ್ಧ ಘಂಟೆಯವರೆಗೆ ಅದನ್ನು ಬಿಡಿ ಮತ್ತು ಶಾಂಪೂ ಮಾಡಿ.

• ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ಕಂಡಿಷನರ್ ಅನ್ನು ಬಳಸಬೇಡಿ

ಕಂಡಿಷನರ್ ಅನ್ನು ಬಳಸಬೇಡಿ

ಕಂಡಿಷನರ್ ಅನ್ನು ಕೂದಲ ಮೇಲೆ ಮಾತ್ರ ಹಚ್ಚಿ. ನೆತ್ತಿಯ ಮೇಲೆ ಹಚ್ಚದಿರಿ. ನೆತ್ತಿ ತನ್ನದೇ ತೈಲವನ್ನು ಉತ್ಪಾದಿಸುತ್ತದೆ ಮತ್ತು ನೆತ್ತಿಯ ಮೇಲೆ ಕಂಡಿಷನರ್ ಬಳಸಿದರೆ, ನೀವು ಅಲ್ಲಿ ವಾಸಿಸುವ ಸೂಕ್ಷ್ಮಜೀವಿಗಳಿಗೆ ಪೌಷ್ಟಿಕ ಆಹಾರವನ್ನು ನೀಡುವಂತಾಗುತ್ತದೆ.

English summary

Worried About Smelly Hair? Try These Home Remedies

Whereas, some other causes are poor hygiene, hormonal imbalances and environmental factors. But whatever may be the cause, no one likes to have smelly hair or a smelly scalp. Just like you have remedies to treat oily skin, an oily scalp, dry skin and a dry scalp, there are remedies to treat a smelly scalp. You can opt for store-bought products as well, but it’s best not to opt for those because sometimes, due to high chemical content, you might get hair fall, dry hair, frizzy hair, etc. So, it’s better to opt for home-made products as they are cheap, easy and you will not have to worry too much about your hair's health.
X
Desktop Bottom Promotion