For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ ಸುಲಭ ಪರಿಹಾರ ಈರುಳ್ಳಿ ರಸ

|

ಕೂದಲುದುರುವ ಸಮಸ್ಯೆ ಇಂದು ಯಾರಿಗಿಲ್ಲ ಹೇಳಿ? ಬಹುತೇಕ ಜನರ ಸಾಮಾನ್ಯ ಸಮಸ್ಯೆ ಎಂದರೆ ಕೂದಲುದುರುವುದು ಎನ್ನುವಂತಾಗಿದೆ. ಧೂಳು, ಕಲುಷಿತ ಆಹಾರ, ಪೋಷಕಾಂಶ ರಹಿತವಾದ ಆಹಾರ ಸೇರಿದಂತೆ ಇಂದು ಅನೇಕರು ಕೂದಲ ಸಮಸ್ಯೆಯನ್ನು ಹೊಂದಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಯಾರಾದರೂ ಉತ್ತಮ ಗುಣಮಟ್ಟದ ಕೇಶರಾಶಿಯನ್ನು ಹೊಂದಿದ್ದಾರೆ ಅಥವಾ ಅವರ ಕೂದಲು ದಟ್ಟವಾಗಿದೆ ಎಂದರೆ ಮೊದಲು ಅವರ ಬಳಿ ಹೋಗಿ ಕೂದಲಿಗೆ ಯಾವ ಆರೈಕೆ ಮಾಡುತ್ತೀದ್ದೀರಿ? ಎಂದು ಕೇಳುವಂತಾಗಿದೆ.

ಫ್ಯಾಷನ್, ಸೌಂದರ್ಯ ವರ್ಧಕ ಉತ್ಪನ್ನ, ಕೃತಕ ಔಷಧಿ, ಹೊಸ ಹೊಸ ಪರಿಕಲ್ಪನೆಗಳ ಆಕರ್ಷಣೆಯಲ್ಲಿ ಇಂದು ಬಹುತೇಕ ಜನರು ಆಯುರ್ವೇದ ಅಥವಾ ಮನೆ ಮದ್ದಿನ ಮಹತ್ವವನ್ನು ಮರೆಯುತ್ತಿದ್ದಾರೆ. ಅಲ್ಲದೆ ರಾಸಾಯನಿಕ ಪದಾರ್ಥಗಳಿಂದ ತಯಾರಿಸಲಾದ ಉತ್ಪನ್ನಗಳಿಗಿಂತ ಅತ್ಯುತ್ತಮ ರೀತಿಯಲ್ಲಿ ಮನೆ ಮದ್ದು ಆರೈಕೆ ಮಾಡುತ್ತದೆ ಎನ್ನುವುದು ಅನೇಕರು ನಂಬುವುದಿಲ್ಲ. ಹಾಗಾಗಿಯೇ ಇಂದಿಗೂ ಅನೇಕರು ಇನ್ನೂ ಸಮಸ್ಯೆಯಿಂದ ಹೊರ ಬಂದಿಲ್ಲ ಎಂತಲೇ ಹೇಳಬಹುದು.

ಹಾಗಲಕಾಯಿ-ಈರುಳ್ಳಿ ಮಿಶ್ರಿತ ಜ್ಯೂಸ್‌ನಲ್ಲಿದೆ ಆರೋಗ್ಯದ ಪವರ್

ಕೂದಲುದುರುವುದು ಹಾಗೂ ಕೇಶರಾಶಿಗೆ ಸಂಬಂಧಿತ ಅನೇಕ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುವ ಉತ್ತಮ ಮನೆ ಪರಿಹಾರ ಎಂದರೆ ಈರುಳ್ಳಿ ರಸ. ಈರುಳ್ಳಿ ರಸದಲ್ಲಿ ಸಲ್ಫರ್ (ದುರ್ನಾತ ನೀಡುವ ರಸ) ಸಮೃದ್ಧವಾಗಿದೆ. ಈ ಅಂಶವು ಕೂದಲನ್ನು ಗಟ್ಟಿ ಹಾಗೂ ಮುರಿಯುವುದು ಅಥವಾ ಉದುರುವ ಸಮಸ್ಯೆಯನ್ನು ನಿವಾರಿಸುತ್ತದೆ. ಕೂದಲ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಬಗೆಯ ಫೋಷಕಾಂಶವನ್ನು ಈರುಳ್ಳಿ ರಸ ಒದಗಿಸುತ್ತದೆ. ಈರುಳ್ಳಿ ರಸ ಹಾಗೂ ಇನ್ನಿತರ ನೈಸರ್ಗಿಕ ಉತ್ಪನ್ನಗಳ ಬಳಕೆಯಿಂದ ಯಾವ ಬಗೆಯಲ್ಲಿ ಆರೈಕೆ ಕೈಗೊಳ್ಳಬಹುದು ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಅರಿಯಿರಿ.....

ಕೂದಲ ಬೆಳವಣಿಗೆಯಲ್ಲಿ ಈರುಳ್ಳಿ ರಸ

ಕೂದಲ ಬೆಳವಣಿಗೆಯಲ್ಲಿ ಈರುಳ್ಳಿ ರಸ

ನೆತ್ತಿಯ ಮೇಲೆ ಈರುಳ್ಳಿ ರಸವನ್ನು ಅನ್ವಯಿಸುವುದರಿಂದ ಕೂದಲು ಬೆಳವಣಿಗೆಗೆ ಅಗತ್ಯವಾದ ಕಿರುಚೀಲವನ್ನು ಸಕ್ರಿಯಗೊಳಿಸುತ್ತದೆ. ಇದರ ಪೋಷಣೆಯ ಕಾರಣದಿಂದ ಕೂದಲು ಬೆಳವಣಿಗೆಯು ಹೆಚ್ಚುತ್ತದೆ.

ಬೇಕಾಗುವ ಸಾಮಾಗ್ರಿ:

ಈರುಳ್ಳಿ ಜ್ಯೂಸ್ 1 ಟೀ ಚಮಚ

1 ಹತ್ತಿ ಪ್ಯಾಡ್ವಿ

ವಿಧಾನ:

1. ಈರುಳ್ಳಿ ರಸದಲ್ಲಿ ಹತ್ತಿ ಚೂರನ್ನು ಅದ್ದಿಡಿ.

2. ನಂತರ ಹತ್ತಿಯಲ್ಲಿ ಹೀರಿಕೊಂಡ ರಸವನ್ನು ನೆತ್ತಿಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

3. ಸ್ವಲ್ಪ ಸಮಯದ ನಂತರ ಮೃದುವಾದ ಶಾಂಪೂ ಸಹಾಯದಿಂದ ಸ್ವಚ್ಛಗೊಳಿಸಿ.

4. ನಿತ್ಯವೂ ಈ ಕ್ರಮವನ್ನು ಅನ್ವಯಿಸುವುದರಿಂದ ಕೂದಲ ಬೆಳವಣಿಗೆ ಉಂಟಾಗುವುದು. ಜೊತೆಗೆ ಉದುರುವ ಸಮಸ್ಯೆಯು ನಿವಾರಣೆ ಹೊಂದುವುದು.

ಈರುಳ್ಳಿ ಮತ್ತು ಹರಳೆಣ್ಣೆ

ಈರುಳ್ಳಿ ಮತ್ತು ಹರಳೆಣ್ಣೆ

ಕೂದಲುದುರುವ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುವ ಇನ್ನೊಂದು ಉತ್ಪನ್ನ ಹರಳೆಣ್ಣೆ. ಇದು ನೆತ್ತಿಯನ್ನು ತಣ್ಣಗಾಗಿಸಿ

ಕೂದಲಿಗೆ ತೇವಾಂಶವನ್ನು ಒದಗಿಸುತ್ತದೆ.

ಬೇಕಾಗುವ ಸಾಮಾಗ್ರಿ:

ಈರುಳ್ಳಿ ರಸ 2 ಟೇಬಲ್ ಚಮಚ

ಹರಳೆಣ್ಣೆ 2 ಟೇಬಲ್ ಚಮಚ

ವಿಧಾನ:

1. ಈರುಳ್ಳಿ ರಸ ಮತ್ತು ಹರಳೆಣ್ಣೆಯನ್ನು ಮಿಶ್ರಗೊಳಿಸಿ.

2. ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ನೆತ್ತಿಯ ಭಾಗದಲ್ಲಿ ಅನ್ವಯಿಸಿ.

3. ಒಂದು ಗಂಟೆಯ ಬಳಿಕ ಮೃದುವಾದ ಶಾಂಪೂ ಸಹಾಯದಿಂದ ಸ್ವಚ್ಛಗೊಳಿಸಿ.

4. ಉತ್ತಮ ಫಲಿತಾಂಶ ಪಡೆಯಲು ಎರಡು ದಿನಕ್ಕೊಮ್ಮೆ ಹರಳೆಣ್ಣೆಯನ್ನು ಅನ್ವಯಿಸಿ.

ಈರುಳ್ಳಿ ರಸ ಮತ್ತು ಶುಂಠಿ ರಸ

ಈರುಳ್ಳಿ ರಸ ಮತ್ತು ಶುಂಠಿ ರಸ

ಶುಂಠಿ ಉರಿಯೂತಗಳಂತಹ ಸಮಸ್ಯೆಗಳನ್ನು ಶಮನಗೊಳಿಸುತ್ತದೆ. ಇದು ರಕ್ತನಾಳಗಳಿಗೆ ಉತ್ತಮ ಪರಿಚಲನೆಯನ್ನು ನೀಡುತ್ತದೆ.

ಬೇಕಾಗುವ ಸಾಮಾಗ್ರಿ:

ಶುಂಠಿ ರಸ 1 ಟೇಬಲ್ ಚಮಚ

ಈರುಳ್ಳಿ ರಸ 1 ಟೀಚಮಚ

ವಿಧಾನ:

1. ಎರಡು ಉತ್ಪನ್ನಗಳನ್ನು ಚೆನ್ನಾಗಿ ಬೆರೆಸಿ.

2. ಮಿಶ್ರಣವನ್ನು ನೆತ್ತಿ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

3. ಅರ್ಧ ಗಂಟೆಯ ಬಳಿಕ ಸೌಮ್ಯವಾದ ಶಾಂಪೂವಿನಿಂದ ಸ್ವಚ್ಛಗೊಳಿಸಿ.

4. ದಿನಬಿಟ್ಟು ದಿನ ಈ ಕ್ರಮವನ್ನು ಅನ್ವಯಿಸುವುದರಿಂದ ಕೇಶರಾಶಿಯ ಸಮಸ್ಯೆಯನ್ನು ಪರಿಹರಿಸಬಹುದು.

ಈರುಳ್ಳಿ ರಸ ಮತ್ತು ಆಲಿವ್ ಎಣ್ಣೆ

ಈರುಳ್ಳಿ ರಸ ಮತ್ತು ಆಲಿವ್ ಎಣ್ಣೆ

ಆಂಟಿ-ಡ್ಯಾಂಡ್ರಫ್‍ಗಳ ನಿವಾರಣೆಗೆ ಆಲಿವ್ ಎಣ್ಣೆ ಉತ್ತಮ ಆರೈಕೆಯನ್ನು ಮಾಡುತ್ತದೆ. ಈರುಳ್ಳಿ ರಸದೊಂದಿಗೆ ಇದನ್ನು ಬೆರೆಸುವುದರಿಂದ ಪರಿಹಾರಕ ಶಕ್ತಿಯು ದ್ವಿಗುಣವಾಗುವುದು.

ಬೇಕಾಗುವ ಸಾಮಾಗ್ರಿ:

ಈರುಳ್ಳಿ ರಸ 3 ಟೀ ಚಮಚ

ಆಲಿವ್ ಎಣ್ಣೆ 1,1/2 ಟೀ ಚಮಚ

ವಿಧಾನ:

1. ಎರಡು ಉತ್ಪನ್ನಗಳನ್ನು ಚೆನ್ನಾಗಿ ಬೆರೆಸಿ.

2. ಮಿಶ್ರಣವನ್ನು ನೆತ್ತಿ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ, ಬೆರಳುಗಳಿಂದ ವೃತ್ತಾಕಾರವಾಗಿ ಮೃದುವಾದ ಮಸಾಜ್ ಮಾಡಿ.

3. ಎರಡು ಗಂಟೆಯ ಬಳಿಕ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.

4. ದಿನಬಿಟ್ಟು ದಿನ ಈ ಕ್ರಮವನ್ನು ಅನ್ವಯಿಸುವುದರಿಂದ ಕೇಶರಾಶಿಯ ಸಮಸ್ಯೆಯನ್ನು ಪರಿಹರಿಸಬಹುದು.

ಈರುಳ್ಳಿ ರಸ ಮತ್ತು ಜೇನುತುಪ್ಪ

ಈರುಳ್ಳಿ ರಸ ಮತ್ತು ಜೇನುತುಪ್ಪ

ಸೌಂದರ್ಯ ಹಾಗೂ ಸಾಮಾನ್ಯ ಅನಾರೋಗ್ಯ ಸಮಸ್ಯೆಗಳ ನಿವಾರಣೆಗೆ ಜೇನುತುಪ್ಪ ಅತ್ಯುತ್ತಮ ರೀತಿಯಲ್ಲಿ ಪರಿಹಾರವನ್ನು ನೀಡುತ್ತದೆ. ಕೂದಲನ್ನು ಮೃದುಗೊಳಿಸುವುದರೊಂದಿಗೆ ಸದಾ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

ಬೇಕಾಗುವ ಸಾಮಾಗ್ರಿ:

ಈರುಳ್ಳಿ ರಸ 3 ಟೀ ಚಮಚ

ಜೇನುತುಪ್ಪ 1/2 ಟೀ ಚಮಚ

ವಿಧಾನ:

1. ಎರಡು ಉತ್ಪನ್ನಗಳನ್ನು ಚೆನ್ನಾಗಿ ಬೆರೆಸಿ.

2. ಮಿಶ್ರಣವನ್ನು ನೆತ್ತಿ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ, ಬೆರಳುಗಳಿಂದ ವೃತ್ತಾಕಾರವಾಗಿ ಮೃದುವಾದ ಮಸಾಜ್ ಮಾಡಿ.

3. ಒಂದು ಗಂಟೆಯ ಬಳಿಕ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.

4. ವಾರದಲ್ಲಿ 3 ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಕೇಶರಾಶಿಯ ಸಮಸ್ಯೆಯನ್ನು ಪರಿಹರಿಸಬಹುದು. ಜೊತೆಗೆ ಕೂದಲು ಹುಟ್ಟಿಗೆ ಉತ್ತೇಜಿಸುವುದು.

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ

ಶತಮಾನಗಳಿಂದಲೂ ಕೂದಲು ಸಂರಕ್ಷಣೆಗೆ ಬಳಸುವ ಎಣ್ಣೆ ಎಂದರೆ ತೆಂಗಿನ ಎಣ್ಣೆ. ಇದು ಬಹಳ ಸೂಕ್ಷ್ಮ ಗ್ರಾಹಿಯಾಗಿದ್ದು, ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಒಳಗೊಂಡಿದೆ. ಇದನ್ನು ಈರುಳ್ಳಿ ರಸದೊಂದಿಗೆ ಸೇರಿಸುವುದರಿಂದ ಅತ್ಯುತ್ತಮ ಪರಿಹಾರಕವಾಗುವುದು.

ಬೇಕಾಗುವ ಸಾಮಾಗ್ರಿ:

ಈರುಳ್ಳಿ ರಸ 3 ಟೀ ಚಮಚ

ತೆಂಗಿನ ಎಣ್ಣೆ 2 ಟೀ ಚಮಚ

ವಿಧಾನ:

1. ಎರಡು ಉತ್ಪನ್ನಗಳನ್ನು ಚೆನ್ನಾಗಿ ಬೆರೆಸಿ.

2. ಮಿಶ್ರಣವನ್ನು ನೆತ್ತಿ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

3. ಅರ್ಧ ಗಂಟೆಯ ಬಳಿಕ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.

4. ದಿನಬಿಟ್ಟು ದಿನ ಈ ಕ್ರಮವನ್ನು ಅನ್ವಯಿಸುವುದರಿಂದ ಕೇಶರಾಶಿಯ ಸಮಸ್ಯೆಯನ್ನು ಪರಿಹರಿಸಬಹುದು.

ಈರುಳ್ಳಿ ರಸ, ಬೆಳ್ಳುಳ್ಳಿ ಮತ್ತು ಆಲಿವ್ ಎಣ್ಣೆ

ಈರುಳ್ಳಿ ರಸ, ಬೆಳ್ಳುಳ್ಳಿ ಮತ್ತು ಆಲಿವ್ ಎಣ್ಣೆ

ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಇನ್ನೊಂದು ನೈಸರ್ಗಿಕ ಉತ್ಪನ್ನ ಬೆಳ್ಳುಳ್ಳಿ. ಇದು ಸಮೃದ್ಧವಾದ ಸಲ್ಫರ್ ಗುಣವನ್ನು ಒಳಗೊಂಡಿದೆ. ಅಲ್ಲದೆ ಕ್ಯಾಲ್ಸಿಯಂ ಮತ್ತು ಸತುವಿನ ಗುಣವನ್ನು ಒಳಗೊಂಡಿದೆ. ಇದು ಕೂದಲು ದಪ್ಪವಾಗಿ ಹಾಗೂ ಸಮೃದ್ಧವಾಗಿ ಬೆಳೆಯಲು ಸಹಕರಿಸುತ್ತದೆ.

ಬೇಕಾಗುವ ಸಾಮಾಗ್ರಿ:

ಈರುಳ್ಳಿ ರಸ 1 ಟೀ ಚಮಚ

ಬೆಳ್ಳುಳ್ಳಿ ರಸ 1 ಟೀ ಚಮಚ

ಆಲಿವ್ ಎಣ್ಣೆ 1 ಟೀ ಚಮಚ

ವಿಧಾನ:

1. ಎರಡು ಉತ್ಪನ್ನಗಳನ್ನು ಚೆನ್ನಾಗಿ ಬೆರೆಸಿ.

2. ಮಿಶ್ರಣವನ್ನು ನೆತ್ತಿ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

3. ಒಂದು ಗಂಟೆಯ ಬಳಿಕ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.

4. ದಿನ ನಿತ್ಯ ಈ ಕ್ರಮವನ್ನು ಅನ್ವಯಿಸುವುದರಿಂದ ಕೇಶರಾಶಿಯ ಸಮಸ್ಯೆಯನ್ನು ಪರಿಹರಿಸಬಹುದು.ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ ನಿಮಗೆ ತಿಳಿದಿರುವ ಹಾಗೆ ತೆಂಗಿನ ಎಣ್ಣೆಯು ಸಾಮಾನ್ಯವಾಗಿ ಕೇಶಕ್ಕೆ ಹಚ್ಚುವ ಎಣ್ಣೆಯಾಗಿದ್ದು, ಕೂದಲುದುರುವ ಸಮಸ್ಯೆಗೆ ನೆರವಾಗುತ್ತದೆ. ಈ ಎಣ್ಣೆಯನ್ನು ಈರುಳ್ಳಿ ರಸದ ಜೊತೆಗೆ ಬಳಸಿದರೆ ಈ ಸಮಸ್ಯೆಯನ್ನು ಇನ್ನೂ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದಾಗಿದ್ದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸಲಿದೆ. 2 ಚಮಚ ತೆಂಗಿನ ಎಣ್ಣೆಯನ್ನು 1 ಚಮಚ ಈರುಳ್ಳಿಯ ರಸದೊಂದಿಗೆ ಬೆರೆಸಿ ಕೇಶಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.

ಈರುಳ್ಳಿ ರಸ ಹಾಗೂ ನಿಂಬೆ ರಸ

ಈರುಳ್ಳಿ ರಸ ಹಾಗೂ ನಿಂಬೆ ರಸ

ಎರಡು ಚಮಚ ಈರುಳ್ಳಿ ರಸಕ್ಕೆ ಉಗುರು ಬೆಚ್ಚಗಿನ ಎಣ್ಣೆಯನ್ನು ಮಿಶ್ರಮಾಡಿಕೊಳ್ಳಿ. 3 ಹನಿಗಳಷ್ಟು ಲಿಂಬೆರಸವನ್ನು ಈ ಮಿಶ್ರಣಕ್ಕೆ ಸೇರಿಸಿ ಅಂತೆಯೇ ಮಾಸ್ಕ್ ಸಿದ್ಧಪಡಿಸಲು ತಯಾರಾಗಿರಿ. ವಿಟಮಿನ್ ಸಿ ಈರುಳ್ಳಿಯಲ್ಲಿದ್ದು ನಿಮ್ಮ ಕೂದಲಿಗೆ ಹೊಳಪು ಮತ್ತು ದಟ್ಟತೆಯನ್ನು ನೀಡುತ್ತದೆ.

English summary

Ways To Use Onion Juice For Hair Growth: Before & After

Onion juice is rich in sulphur (the component that gives it the distinct stench), which slows down the thinning and breaking of hair. Rich in antioxidants, onion juice is known to cure premature graying. Onion juice also helps improve blood circulation to the scalp, making sure the hair follicles receive the necessary amount of nutrients and nourishment. So, here are some ways in which onion juice can be used for hair growth. Take a look.
X
Desktop Bottom Promotion