For Quick Alerts
ALLOW NOTIFICATIONS  
For Daily Alerts

ಸುಂದರ ಕೂದಲಿಗೆ ದಾಸವಾಳದ ಹೇರ್ ಪ್ಯಾಕ್ ಪ್ರಯತ್ನಿಸಿ

By Deepu
|

ಸೌಂದರ್ಯದ ವಿಚಾರಕ್ಕೆ ಬಂದಾಗ ಹೆಚ್ಚಾಗಿ ಮಹಿಳೆಯರು ಹೆಚ್ಚು ಚ್ಯೂಸಿಯಾಗಿರುತ್ತಾರೆ. ಹೆಚ್ಚು ಕಾಳಜಿಯಿಂದ ಸೌಂದರ್ಯ ಉತ್ಪನ್ನಗಳ ಆಯ್ಕೆಯನ್ನು ಮಾಡುತ್ತಾರೆ. ಕೊಂಚ ದುಬಾರಿಯಾದರೂ ಸರಿ ಅದನ್ನು ಖರೀದಿಸುವತ್ತ ಆಸಕ್ತಿಯನ್ನು ವಹಿಸುತ್ತಾರೆ. ಇನ್ನು ಕೂದಲಿನ ವಿಷಯಕ್ಕೆ ಬಂದಾಗ ಈ ಆಯ್ಕೆ ಇನ್ನಷ್ಟು ಕಾಳಜಿದಾಯಕವಾಗಿರುತ್ತದೆ. ನೀಳವಾದ ಆರೋಗ್ಯಯುತ ಕೇಶರಾಶಿಯನ್ನು ಹೊಂದುವುದು ಎಲ್ಲಾ ಸ್ತ್ರೀಯರ ಮನದಾಸೆಯಾಗಿರುತ್ತದೆ.

ಆದರೆ ಇತ್ತೀಚಿನ ವಾಯುಮಾಲಿನ್ಯ ಮತ್ತು ಬಿಡುವಿಲ್ಲದೇ ಇರುವ ಜೀವನ ಪದ್ಧತಿಯಿಂದಾಗಿ ಕೂದಲು ನಿಸ್ತೇಜವಾಗಿ ಉದುರುವಿಕೆಯತ್ತ ಮುಖ ಹಾಕುತ್ತಿದೆ. ಮೊದೆಲೆಲ್ಲಾ ಅಜ್ಜಿ ಅಮ್ಮಂದಿರ ಆರೈಕೆಯಲ್ಲಿ ಪೋಷಣೆಯನ್ನು ಕಂಡಿದ್ದ ನಮ್ಮ ಕೂದಲು ನಮ್ಮ ಕೈಗಳಲ್ಲಿ ಕುಂದಿ ಹೋಗಿಬಿಡುತ್ತದೆ. ತಲೆಹೊಟ್ಟು, ಒಣತ್ವ, ಕೂದಲುದುರುವುದು, ತಲೆ ತುರಿಕೆ ಹೀಗೆ ಕೂದಲಿನ ಸಮಸ್ಯೆಗಳು ಒಂದೇ ಎರಡೇ ಪಟ್ಟಿ ಮಾಡುತ್ತಾ ಹೋದರೆ ಅದೊಂದು ಮುಗಿಯದ ಗೋಳಾಗುತ್ತದೆ.

ಆದರೆ ತಲೆಯ ಮೇಲೆ ಕೈಹೊತ್ತು ಕುಳಿತು ಉದುರಿದ ಕೂದಲಿನ ಬಗ್ಗೆ ಚಿಂತಿಸುತ್ತಿದ್ದರೆ ಇನ್ನಷ್ಟು ಕೂದಲು ನೆಲಕ್ಕಚ್ಚುವುದು ಗ್ಯಾರಂಟಿ. ಹಾಗಾಗುವುದು ಬೇಡ ಎಂದಿದ್ದರೆ ನಿಯಮಿತ ಕೂದಲಿನ ಪೋಷಣೆಯ ಜೊತೆಗೆ ಇನ್ನಷ್ಟು ಜಾಗರೂಕತೆಯನ್ನು ನೀವು ಮಾಡಬೇಕು. ಹಿತ್ತಲಗಿಡದಲ್ಲಿ ಮದ್ದಿದೆ ಎಂಬ ಮಾತಿನಂತೆ ನೈಸರ್ಗಿಕ ಪೋಷಣೆಯನ್ನು ನಿಮ್ಮ ಕೂದಲಿಗೆ ನೀಡಿದರೆ ನಿಮ್ಮ ಕೂದಲು ಹಿಂದಿನ ಸೌಂದರ್ಯವನ್ನು ಪಡೆಯುವುದು ಖಂಡಿತ. ಇದಕ್ಕೆ ಪುಷ್ಟಿ ನೀಡುವಂತಿದೆ ದಾಸವಾಳ.

ಹೌದು ಅನಾದಿ ಕಾಲದಿಂದಲೂ ದಾಸವಾಳವನ್ನು ಕೂದಲಿನ ಪೋಷಣೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಕೂದಲಿನ ಅಭಿವೃದ್ಧಿ, ಕೂದಲುದುರುವಿಕೆಯ ತಡೆ, ಕೂದಲಿಗೆ ನಯತ್ವ ಮತ್ತು ಮೆರುಗನ್ನು ನೀಡುವುದು ಹೀಗೆ ಬಹಳಷ್ಟು ಪೋಷಣೆಯನ್ನು ದಾಸವಾಳ ಮಾಡುತ್ತದೆ. ದಾಸವಾಳವು ಅಮಿನೊ ಆ್ಯಸಿಡ್ ಅನ್ನು ಹೊಂದಿದ್ದು ವಿಟಮಿನ್ ಸಿ ಮತ್ತು ಆಲ್ಫಾ ಹೈಡ್ರೊಕ್ಸೈಲ್‌ನಿಂದ ಯಥೇಚ್ಛವಾಗಿದೆ.

ದಾಸವಾಳ ಹೂವನ್ನು ತೆಗೆದುಕೊಂಡು ಅದನ್ನು ರುಬ್ಬಿ ತಲೆಗೆ ಹಚ್ಚಿಕೊಂಡರೆ ನಿಮ್ಮ ಕೂದಲಿನ ಪೋಷಣೆಯನ್ನು ನೀವು ಮಾಡಿದಂತೆಯೇ. ಅಂತೆಯೇ ಮಾರುಕಟ್ಟೆಯಲ್ಲಿ ದಾಸವಾಳದ ಸಿದ್ಧ ಉತ್ಪನ್ನಗಳು ದೊರೆಯುತ್ತಿದೆ. ಇದನ್ನು ನೀರಿನಲ್ಲಿ ಮಿಶ್ರ ಮಾಡಿಕೊಂಡು ತಲೆಗೆ ಹಚ್ಚಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಇಂದಿನ ಲೇಖನದಲ್ಲಿ ದಾಸವಾಳವನ್ನು ಇನ್ನಷ್ಟು ಪ್ರಯೋಜನಕಾರಿಯಾಗಿ ಬಳಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ...

1. ದಾಸವಾಳದ ಎಣ್ಣೆ

1. ದಾಸವಾಳದ ಎಣ್ಣೆ

ಇದಕ್ಕಾಗಿ ನಿಮಗೆ 8 ದಾಸವಾಳದ ಹೂವುಗಳು ಬೇಕು. ಅಂತೆಯೇ 8 ದಾಸವಾಳದ ಎಲೆ ಮತ್ತು ಎಣ್ಣೆ. ಮೊದಲಿಗೆ ಹೂವು ಮತ್ತು ಎಲೆಯನ್ನು ಚೆನ್ನಾಗಿ ತೊಳೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಂಡು ಅದಕ್ಕೆ ಈ ಪೇಸ್ಟ್ ಅನ್ನು ಹಾಕಿ. ಸ್ವಲ್ಪ ನಿಮಿಷ ಕುದಿಸಿಕೊಳ್ಳಿ. ಎಣ್ಣೆ ತಣ್ಣಗಾಗಲು ಬಿಡಿ. ಎಣ್ಣೆ ತಣ್ಣಗಾದ ನಂತರ 2-3 ಚಮಚದಷ್ಟು ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಉಳಿದ ಎಣ್ಣೆಯನ್ನು ಸಂಗ್ರಹಿಸಿಡಿ. ಈ ಎಣ್ಣೆಯನ್ನು ಬೆರಳುಗಳ ಸಹಾಯದಿಂದ ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. ನಿಮ್ಮ ಸಂಪೂರ್ಣ ಕೂದಲಿಗೆ ಈ ಎಣ್ಣೆಯನ್ನು ಹಚ್ಚಿ ನಂತರ ಕೆಲವು ನಿಮಿಷ ಹಾಗೆಯೇ ಬಿಡಿ. ಶ್ಯಾಂಪೂ ಬಳಸಿ ಕೂದಲು ತೊಳೆದು ಕೊಳ್ಳಿ.

2. ದೃಢವಾದ ಕೂದಲಿಗೆ ದಾಸವಾಳ ಮತ್ತು ಮೊಸರು

2. ದೃಢವಾದ ಕೂದಲಿಗೆ ದಾಸವಾಳ ಮತ್ತು ಮೊಸರು

ಈ ಮಾಸ್ಕ್ ಮಾಡಲು, ನೀವು 1 ದಾಸವಾಳ ಹೂವು, 3-4 ದಾಸವಾಳ ಎಲೆಗಳು ಮತ್ತು 4 ಟೇಬಲ್ ಸ್ಪೂನ್ ಮೊಸರು ಬೇಕಾಗುತ್ತದೆ. ದಾಸಾಳ ಹೂವನ್ನು ಎಲೆಗಳೊಂದಿಗೆ ಸೇರಿಸಿ ಪೇಸ್ಟ್ ಮಾಡಿ. ಇದಕ್ಕೆ ಮೊಸರು ಸೇರಿಸಿ. ಈ ಹೇರ್ ಮುಖವಾಡವನ್ನು ನಿಮ್ಮ ನೆತ್ತಿಯ ಮತ್ತು ಕೂದಲಿಗೆ ಹಚ್ಚಿ ಮತ್ತು ಸುಮಾರು ಒಂದು ಗಂಟೆಗಳ ಕಾಲ ಅದನ್ನು ಬಿಡಿ. ನೀರು ಮತ್ತು ಮೃದು ಶಾಂಪೂ ಬಳಸಿ ನಿಮ್ಮ ಕೂದಲಿನ ಮಾಸ್ಕ್ ತೊಳೆಯಿರಿ.

2. ದೃಢವಾದ ಕೂದಲಿಗೆ ದಾಸವಾಳ ಮತ್ತು ಮೊಸರು

2. ದೃಢವಾದ ಕೂದಲಿಗೆ ದಾಸವಾಳ ಮತ್ತು ಮೊಸರು

ಸ್ವಲ್ಪ ದಾಸವಾಳ ಎಲೆಯನ್ನು ತೆಗೆದುಕೊಳ್ಳಿ 1 ಚಮಚ ಮೆಂತೆಯನ್ನು ಸೇರಿಸಿ 1/4 ಕಪ್ ಮಜ್ಜಿಗೆ ಸೇರಿಸಿ. ರಾತ್ರಿ ಪೂರ್ತಿ ಮೆಂತ್ಯಯನ್ನು ನೀರಿನಲ್ಲಿ ನೆನೆಸಿ. ಬೆಳಗ್ಗೆ ಇದನ್ನು ರುಬ್ಬಿಕೊಳ್ಳಿ ಮತ್ತು ದಾಸವಾಳ ಎಲೆಯನ್ನು ಸೇರಿಸಿ. ಮಜ್ಜಿಗೆ ಸೇರಿಸಿ. ನಿಮ್ಮ ಸಂಪೂರ್ಣ ಕೂದಲಿಗೆ ಇದನ್ನು ಹಚ್ಚಿ 1 ಗಂಟೆ ಬಿಡಿ. ನಂತರ ಕೂದಲನ್ನು ತೊಳೆದುಕೊಳ್ಳಿ.

4. ದಾಸವಾಳ ಮತ್ತು ಮೆಹಂದಿ ತಲೆಹೊಟ್ಟು ನಿವಾರಕ ಪ್ಯಾಕ್

4. ದಾಸವಾಳ ಮತ್ತು ಮೆಹಂದಿ ತಲೆಹೊಟ್ಟು ನಿವಾರಕ ಪ್ಯಾಕ್

ಇದಕ್ಕೆ ಮುಷ್ಟಿಯಷ್ಟು ದಾಸವಾಳ ಹೂವು, ದಾಸವಾಳ ಎಲೆ ಮತ್ತು ಮೆಹಂದಿ ಎಲೆಯನ್ನು ತೆಗೆದುಕೊಳ್ಳಿ. ಅರ್ಧ ಲಿಂಬೆ ಇರಲಿ. ಇವುಗಳನ್ನೆಲ್ಲಾ ಪೇಸ್ಟ್ ಮಾಡಿಕೊಳ್ಳಿ. ಪೇಸ್ಟ್‌ಗೆ ಲಿಂಬೆ ರಸ ಬೆರೆಸಿ. ನಿಮ್ಮ ಸಂಪೂರ್ಣ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ಒಂದು ಗಂಟೆ ಹಾಗೆಯೇ ಬಿಡಿ. ನಂತರ ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ.

5. ದಾಸವಾಳ ಮತ್ತು ನೆಲ್ಲಿಕಾಯಿ ಮಾಸ್ಕ್

5. ದಾಸವಾಳ ಮತ್ತು ನೆಲ್ಲಿಕಾಯಿ ಮಾಸ್ಕ್

ಇದಕ್ಕಾಗಿ ನಿಮಗೆ 3 ಚಮಚ ಹುಡಿ ಮಾಡಿದ ದಾಸವಾಳ ಹೂವು ಮತ್ತು ಎಲೆ ಹಾಗೂ 3 ಚಮಚ ನೆಲ್ಲಿಕಾಯಿ ಹುಡಿ ಬೇಕು. ಇವುಗಳನ್ನು ಬೆರೆಸಿ ಮಿಶ್ರ ಮಾಡಿಕೊಳ್ಳಿ. ನೀರು ಹಾಕಿ ಪೇಸ್ಟ್ ತಯಾರಿಸಿ. ನಿಮ್ಮ ಸಂಪೂರ್ಣ ಕೂದಲಿಗೆ ಈ ಪೇಸ್ಟ್ ಹಚ್ಚಿ. ಒಂದು ಗಂಟೆ ಕಾಲ ಹಾಗೆಯೇ ಬಿಡಿ ನಂತರ ಕೂದಲನ್ನು ಶ್ಯಾಂಪೂ ಹಚ್ಚಿ ತೊಳೆಯಿರಿ.

6. ದಾಸವಾಳ ಶಾಂಪೂ

6. ದಾಸವಾಳ ಶಾಂಪೂ

ಇದಕ್ಕೆ ನಿಮಗೆ ಬೇಕಾಗಿರುವುದು 15 ದಾಸವಾಳ ಎಲೆ, 5 ದಾಸವಾಳ ಹೂವು, 1 ಕಪ್ ನೀರು ಮತ್ತು 1 ಚಮಚ ಕಡಲೆಹಿಟ್ಟು. ಎಲೆ ಮತ್ತು ಹೂವನ್ನು ನೀರಿನಲ್ಲಿ 5 ನಿಮಿಷ ಕುದಿಸಿಕೊಳ್ಳಿ. ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಮಿಶ್ರಣಕ್ಕೆ ಕಡಲೆಹಿಟ್ಟು ಸೇರಿಸಿ. ಶಾಂಪೂ ಬದಲಿಗೆ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಕೂದಲನ್ನು ತೊಳೆದುಕೊಳ್ಳಬಹುದು.

7. ದಾಸವಾಳದ ಕಂಡೀಷನಿಂಗ್

7. ದಾಸವಾಳದ ಕಂಡೀಷನಿಂಗ್

ಈ ಪ್ಯಾಕ್ ಮಾಡಲು 8 ದಾಸವಾಳ ಹೂವು ಮತ್ತು ಸ್ವಲ್ಪ ನೀರನ್ನು ತೆಗೆದುಕೊಳ್ಳಿ. ಹೂವನ್ನು ಹುಡಿ ಮಾಡಿ ಮತ್ತು ಅದಕ್ಕೆ ನೀರು ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ನಿಮ್ಮ ಕೂದಲಿಗೆ ಇದನ್ನು ಹಚ್ಚಿ ಮತ್ತು ಗಂಟೆಯ ನಂತರ ತೊಳೆದುಕೊಳ್ಳಿ.

8. ತೆಂಗಿನ ಹಾಲು ಮತ್ತು ದಾಸವಾಳ ಒಣ ಕೂದಲಿಗೆ

8. ತೆಂಗಿನ ಹಾಲು ಮತ್ತು ದಾಸವಾಳ ಒಣ ಕೂದಲಿಗೆ

ಈ ಪ್ಯಾಕ್ ತಯಾರಿಸಲು 2 ಚಮಚ ಜಜ್ಜಿದ ದಾಸವಾಳ ಎಲೆಗಳ ಪೇಸ್ಟ್ ತೆಗೆದುಕೊಳ್ಳಿ 2 ಚಮಚ ತೆಂಗಿನ ಹಾಲು ಸೇರಿಸಿ, 2 ಚಮಚ ಜೇನು, 2 ಚಮಚ ಮೊಸರು ಮತ್ತು 4 ಚಮಚ ಅಲೊವೇರಾ ಜೆಲ್ ಸೇರಿಸಿಕೊಳ್ಳಿ. ಇದನ್ನು ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಕೂದಲಿಗೆ ಈ ಪೇಸ್ಟ್ ಹಚ್ಚಿ 30 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ.

9. ಶುಂಠಿ ಮತ್ತು ದಾಸವಾಳ ಎಲೆ ಕೂದಲು ಬೆಳೆಯಲು

9. ಶುಂಠಿ ಮತ್ತು ದಾಸವಾಳ ಎಲೆ ಕೂದಲು ಬೆಳೆಯಲು

ಇದಕ್ಕಾಗಿ ನಿಮಗೆ ಬೇಕಾಗಿರುವುದು 3 ಚಮಚ ಶುಂಠಿ ಜ್ಯೂಸ್ ಮತ್ತು 2 ಚಮಚ ದಾಸವಾಳದ ಹೂವು. ಒಂದು ಪಾತ್ರೆಯಲ್ಲಿ ಈ ಸಾಮಾಗ್ರಿಗಳನ್ನು ತೆಗೆದುಕೊಳ್ಳಿ ಮತ್ತು ಮೃದು ಪೇಸ್ಟ್ ಮಾಡಿ. ನಿಮ್ಮ ಕೂದಲಿಗೆ ಇದನ್ನು ಹಚ್ಚಿ ಮತ್ತು ಸಂಪೂರ್ಣ ಕೂದಲಿಗೆ ಕವರ್ ಮಾಡಿ. 20 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ.

10. ಮೊಟ್ಟೆ ಮತ್ತು ದಾಸವಾಳ ಕೂದಲಿನ ಪೋಷಣೆಗೆ

10. ಮೊಟ್ಟೆ ಮತ್ತು ದಾಸವಾಳ ಕೂದಲಿನ ಪೋಷಣೆಗೆ

ಈ ಪ್ಯಾಕ್ ತಯಾರಿಸಲು ನಿಮಗೆ ಬೇಕಾಗಿರುವುದು 2 ಮೊಟ್ಟೆ ಮತ್ತು 3 ಚಮಚ ಹುಡಿ ಮಾಡಿದ ದಾಸವಾಳದ ಹೂವು. ಪೇಸ್ಟ್ ತಯಾರಿಸಿಕೊಂಡು ನಿಮ್ಮ ಸಂಪೂರ್ಣ ಕೂದಲಿಗೆ ಇದನ್ನು ಹಚ್ಚಿ. 20 ನಿಮಿಷ ಕಾಯಿರಿ. ನಂತರ ಮೃದು ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ.

English summary

Ways To Use Hibiscus For Healthy & Shiny Hair

Hibiscus is one of the most beneficial ingredients for hair care. Hibiscus helps in hair growth, reduces hair loss and encourages hair regrowth. You have to face certain hair problems at least once in your lifetime and there comes a time when you start losing your hair to a great extent and what are you searching for? Maybe a good doctor or a better shampoo. Shampoo is not good for your hair; it uses artificial treatments which makes your hair look volumised, fluffy and silky but not for a longer period of time. Shampoo is stuffed and packed together with many chemicals which start reacting after a particular period of time. So get rid of your hair problems by using hibiscus.
Story first published: Wednesday, July 18, 2018, 18:01 [IST]
X
Desktop Bottom Promotion