For Quick Alerts
ALLOW NOTIFICATIONS  
For Daily Alerts

ತಲೆಬುರುಡೆಯಲ್ಲಿ ಈ ರೀತಿಯಾಗಿ ತುರಿಕೆ ಆಗುತ್ತಿದೆಯೇ? ಇಲ್ಲಿದೆ ನೋಡಿ ಮನೆಮದ್ದುಗಳು

By Hemanth
|

ತಲೆಬುರುಡೆಯಲ್ಲಿ ಕೇವಲ ತಲೆಹೊಟ್ಟಿನ ಸಮಸ್ಯೆ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಇಲ್ಲಿ ಹಲವಾರು ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡುವುದು. ಇದರಲ್ಲಿ ಮುಖ್ಯವಾಗಿ ತಲೆಹೊಟ್ಟು, ಉಂಗುರಕಚ್ಚಿ, ಪರೋಪಜೀವಿಗಳಿಂದಾಗಿ ಬರುವಂತಹ ಸ್ಕ್ಯಾಬ್ ಗಳು ಕೂಡ ಒಂದಾಗಿದೆ. ನೆತ್ತಿಯಲ್ಲಿ ಹಳದಿ, ಕಂದು ಅಥವಾ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಒಣಗಿರುವ ತೇಪೆಯೇ ಈ ಸ್ಕ್ಯಾಬ್ ಗಳು.

ಕೂದಲಿನ ವಿನ್ಯಾಸ, ಬ್ಲೀಚಿಂಗ್ ಇತ್ಯಾದಿಗಳಿಂದಾಗಿ ಇದು ಕಾಣಿಸಿಕೊಳ್ಳಬಹುದು. ಇದು ತುಂಬಾ ತುರಿಕೆ ಉಂಟು ಮಾಡುವುದು ಮತ್ತು ಕೆಲವೊಂದು ಸಲ ಇದರಿಂದ ರಕ್ತಸ್ರಾವವು ಆಗುವುದು. ಆದರೆ ಇದರ ಬಗ್ಗೆ ಚಿಂತೆ ಮಾಡುವಂತಹ ಅವಶ್ಯಕತೆಯಿಲ್ಲ. ಯಾಕೆಂದರೆ ಬೋಲ್ಡ್ ಸ್ಕೈ ಇಂತಹ ಸಮಸ್ಯೆ ಇರುವವರಿಗಾಗಿ ಮನೆಮದ್ದನ್ನು ಈ ಲೇಖನದಲ್ಲಿ ಹೇಳಿಕೊಡಲಿದೆ. ಇದು ತುಂಬಾ ಪರಿಣಾಮಕಾರಿಯಾಗಿರಲಿದೆ. ಆದರೆ ಸಮಸ್ಯೆಯು ತುಂಬಾ ದೀರ್ಘಕಾಲದಿಂದ ನಿಮ್ಮ ಕಾಡುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಇದಕ್ಕೆ ಚಿಕಿತ್ಸೆ ಪಡೆಯುವುದು ಸೂಕ್ತ....

ಅಲೋವೆರಾ ಲೋಳೆ

ಅಲೋವೆರಾ ಲೋಳೆ

ಅಲೋವೆರಾದ ಬಗ್ಗೆ ತಿಳಿಯದವರು ತುಂಬಾ ಕಡಿಮೆ. ಇದು ಹೆಚ್ಚಾಗಿ ಪ್ರತಿಯೊಂದು ರೀತಿಯ ಚರ್ಮದ ಸಮಸ್ಯೆಗೆ ಬಳಸಲಾಗುತ್ತದೆ. ಅಲೋವೆರಾದಲ್ಲಿರುವ ತಂಪುಕಾರಿ ಗುಣವು ಚರ್ಮಕ್ಕೆ ಶಮನ ನೀಡುವುದು ಮತ್ತು ಸೋಂಕು ಬರದಂತೆ ತಡೆಯುವುದು. ಇದು ಒಣ ಹಾಗೂ ಪದರ ಎದ್ದುಬರುವ ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು.

ಬೇಕಾಗುವ ಸಾಮಗ್ರಿಗಳು

ಅಲೋವೆರಾ

ವಿಟಮಿನ್ ಇ ತೈಲ

ಬಳಸುವ ವಿಧಾನ

ಅಲೋವೆರಾ ಎಲೆ ಕತ್ತರಿಸಿಕೊಂಡು ಅದರ ಲೋಳೆ ತೆಗೆಯಿರಿ. ಇದಕ್ಕೆ ವಿಟಮಿನ್ ಇ ತೈಲ ಹಾಕಿಕೊಂಡು ಎರಡು ಸರಿಯಾಗಿ ಮಿಶ್ರಣ ಮಾಡಿ. ವಿಟಮಿನ್ ಇ ಮಾತ್ರೆಯಿಂದ ತೈಲ ತೆಗೆಯಬಹುದು. ಇದನ್ನು ಭಾದಿತ ಜಾಗ ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಒಂದು ಗಂಟೆ ಕಾಲ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ಶಾಂಪೂ ಹಾಕಿ ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ 2-3 ಸಲ ಇದನ್ನು ಬಳಸಿ.

ಟ್ರಿ ಟ್ರೀ ಎಣ್ಣೆ

ಟ್ರಿ ಟ್ರೀ ಎಣ್ಣೆ

ಟ್ರಿ ಟ್ರೀ ಎಣ್ಣೆಯು ಶೀಲೀಂಧ್ರ ವಿರೋಧಿ, ಉರಿಯೂತ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸ್ಕ್ಯಾಬ್ ಮತ್ತು ತಲೆಬುರುಡೆಯ ಇತರ ಸೋಂಕುಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವುದು.

ತಲೆಬುರುಡೆಯಲ್ಲಿ ಕಾಣಿಸಿಕೊಳ್ಳುವ ತುರಿಕೆ ತಡೆಯುವುದು.

ಬೇಕಾಗುವ ಸಾಮಗ್ರಿಗಳು

ಕೆಲವು ಹನಿ ಟ್ರಿ ಟ್ರೀ ಎಣ್ಣೆ

¼ ಕಪ್ ಬಾದಾಮಿ ಎಣ್ಣೆ

ಬಳಸುವ ವಿಧಾನ

ಒಂದು ಸಣ್ಣ ಪಾತ್ರೆಯಲ್ಲಿ ಚಹಾ ಮರದ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಜತೆಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಂಡು ಐದು ನಿಮಿಷ ಹಾಗೆ ಬಿಡಿ. ಐದು ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ಸಲ್ಫೇಟ್ ಮುಕ್ತ ಶಾಂಪೂವಿನಿಂದ ಕೂದಲು ತೊಳೆಯಿರಿ. ವಾರದಲ್ಲಿ 2-3 ಸಲ ಇದನ್ನು ಬಳಸಿ.

ಪರ್ಯಾಯವಾಗಿ ಚಹಾ ಮರದ ಎಣ್ಣೆ ಮತ್ತು ಮಕ್ಕಳ ಶಾಂಪೂ ಮಿಶ್ರಣ ಮಾಡಿಕೊಂಡು ಇದನ್ನು ಕೂದಲಿಗೆ ಹಚ್ಚಿಕೊಳ್ಳಬಹುದು. ಬಳಿಕ ನೀರಿನಿಂದ ತೊಳೆಯಿರಿ.

 ಬಿಸಿ ಎಣ್ಣೆ ಮಸಾಜ್

ಬಿಸಿ ಎಣ್ಣೆ ಮಸಾಜ್

ಬಿಸಿ ಎಣ್ಣೆಯ ಮಸಾಜ್ ನಿಂದ ತಲೆಬುರುಡೆಯ ಸ್ಕ್ಯಾಬ್ ಮತ್ತು ತುರಿಕೆ ಕಡಿಮೆಯಾಗುವುದು. ತಲೆಬುರುಡೆಯ ಇಂತಹ ಸಮಸ್ಯೆಗೆ ಇದು ತುಂಬಾ ಪರಿಣಾಮಕಾರಿ ಚಿಕಿತ್ಸೆ.

ಬೇಕಾಗುವ ಸಾಮಗ್ರಿಗಳು

¼ ಕಪ್ ತೆಂಗಿನೆಣ್ಣೆ/ಆಲಿವ್ ತೈಲ/ ಹರಳೆಣ್ಣೆ/ ಬಾದಾಮಿ ಎಣ್ಣೆ

ಬಳಸುವ ವಿಧಾನ

ಮೊದಲಿಗೆ ನಿಮ್ಮ ಆಯ್ಕೆಯ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಇದರ ಬಳಿಕ ಕೂದಲನ್ನು ಎರಡು ವಿಭಾಗವನ್ನಾಗಿ ಮಾಡಿಕೊಳ್ಳಿ ಮತ್ತು ಕೂದಲು ಹಾಗೂ ತಲೆಬುರುಡೆಗೆ ಬಿಸಿ ಎಣ್ಣೆ ಹಚ್ಚಿಕೊಳ್ಳಿ. ಬೆರಳುಗಳಿಂದ ತಲೆಬುರುಡೆಗೆ ನಿಧಾನವಾಗಿ ಮಸಾಜ್ ಮಾಡಿ. ಬಾಚಣಿಗೆ ಬಳಸಿಕೊಂಡು ಕೂದಲಿಗೆ ಸರಿಯಾಗಿ ಎಣ್ಣೆ ಸರಿಯಾಗಿ ಹಚ್ಚಿ. ಶವರ್ ಕ್ಯಾಪ್ ಬಳಸಿಕೊಂಡು ರಾತ್ರಿಯಿಡಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ನೀವು ಶಾಂಪೂವಿನಿಂದ ಕೂದಲು ತೊಳೆಯಿರಿ. ವಾರದಲ್ಲಿ ಒಂದು ಸಲ ಹೀಗೆ ಮಾಡಿದರೆ ಪರಿಣಾಮಕಾರಿ ಫಲಿತಾಂಶ ಸಿಗುವುದು.

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ಚರ್ಮದಲ್ಲಿ ಪಿಎಚ್ ಮಟ್ಟವನ್ನು ಕಾಪಾಡುವುದು ಮತ್ತು ಒಣ ಹಾಗೂ ತುರಿಕೆ ಉಂಟು ಮಾಡುವ ತಲೆಬುರುಡೆಗೆ ಶಮನ ನೀಡುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ಆ್ಯಪಲ್ ಸೀಡರ್ ವಿನೇಗರ್

ಬಳಸುವ ವಿಧಾನ

½ ಕಪ್ ನೀರನ್ನು ಬಿಸಿ ಮಾಡಿ ಮತ್ತು ಇದಕ್ಕೆ ಹೇಳಿದ ಪ್ರಮಾಣದ ಆ್ಯಪಲ್ ಸೀಡರ್ ವಿನೇಗರ್ ಹಾಕಿ.

ಇದನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ನಿಧಾನವಾಗಿ ಮಸಾಜ್ ಮಾಡಿ.

ಐದು ನಿಮಿಷ ಹಾಗೆ ಬಿಟ್ಟು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

ವಾರದಲ್ಲಿ ಒಂದು ಅಥವಾ ಎರಡು ಸಲ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು. ಈ ಮೇಲಿನ ನೈಸರ್ಗಿಕ ಮನೆಮದ್ದನ್ನು ಬಳಸಿಕೊಂಡು ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡಿ. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ. ಫೇಸ್ ಬುಕ್, ಇನ್ ಸ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ನಮ್ಮನ್ನು ಫಾಲೋ ಮಾಡಿ ಹೆಚ್ಚಿನ ಸೌಂದರ್ಯ ಸಲಹೆಗಳನ್ನು ಪಡೆಯಿರಿ.

English summary

Treat Scalp Scabs With These Remedies

Scabs are generally dry patches on your scalp that appear yellowish, brownish or reddish in colour. Scalp scabs can cause itchiness and at times cause bleeding also. Usually, scabs are caused due to reasons like dandruff, ringworm, lice, etc. It can also occur due to factors like the styling of your hair, bleaching, braiding, bleaching, etc. However, there's nothing to worry as long as we have natural remedies to treat this scalp issue. But if the problem seems to be chronic then it is recommended to consult a doctor. Meanwhile, you can try these remedies to treat dry scalp.
X
Desktop Bottom Promotion