For Quick Alerts
ALLOW NOTIFICATIONS  
For Daily Alerts

ಒಣ ಕೂದಲುಗಾಗಿ ಅಲೋ ವೆರಾ ಮತ್ತು ಹನಿ ಮಾಸ್ಕ್

|

ಸುಂದರವಾಗಿ, ರೇಷ್ಮೆಯಂತೆ ಹೊಳೆಯುವ ಕೂದಲು ಯಾರಿಗೆ ಬೇಡ ಹೇಳಿ. ಪ್ರತಿಯೊಬ್ಬರು ಬಯಸುವುದು ಇದನ್ನೇ. ಯಾಕೆಂದರೆ ಕೂದಲು ಅಂದವಾಗಿದ್ದರೆ ಆಗ ಸೌಂದರ್ಯ ಕೂಡ ಮತ್ತಷ್ಟು ಹೆಚ್ಚಾಗುವುದು. ಆದರೆ ಇಂದಿನ ದಿನಗಳಲ್ಲಿ ಕಲುಷಿತ ವಾತಾವರಣ, ವಾಹನಗಳ ಹೊಗೆ, ಧೂಳು ಇತ್ಯಾದಿಗಳಿಂದ ಕೂದಲು ತನ್ನ ಜೀವ ಕಳೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಇಷ್ಟು ಮಾತ್ರವಲ್ಲದೆ ಕೂದಲಿಗೆ ಬಳಸುವಂತಹ ಉತ್ಪನ್ನಗಳಲ್ಲಿ ಇರುವಂತಹ ಕೆಲವೊಂದು ರಾಸಾಯನಿಕಗಳು ಕೂಡ ಕೂದಲನ್ನು ನಿಸ್ತೇಜಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕೂದಲು ಒಣ ಹಾಗೂ ನಿಸ್ತೇಜಗೊಂಡು ನಿರ್ವಹಣೆಗೆ ಕಷ್ಟವಾಗುವುದು. ಒಣ ಕೂದಲಿನ ಆರೈಕೆ ಮಾಡಲು ಸರಿಯಾದ ಕ್ರಮವನ್ನು ಪಾಲಿಸಿಕೊಂಡು ಹೋಗಬೇಕು. ಅದರಲ್ಲೂ ಮಾರುಕಟ್ಟೆಯಲ್ಲಿನ ಉತ್ಪನ್ನಕ್ಕಿಂತ ನೈಸರ್ಗಿಕದತ್ತವಾಗಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ನೀವು ಕೂದಲಿನ ಆರೈಕೆ ಮಾಡಬೇಕು. ಈ ಲೇಖನದಲ್ಲಿ ನಾವು ನಿಮಗೆ ಅಲೋವೆರಾ ಮತ್ತು ಬಾದಾಮಿ ಎಣ್ಣೆ ಬಳಸಿಕೊಂಡು ಒಣ ಕೂದಲಿನ ಆರೈಕೆ ಮಾಡುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಮನೆಯಲ್ಲೇ ತಯಾರಿಸಿಕೊಂಡು ಬಳಸಿಕೊಳ್ಳಿ.

ರಾತ್ರಿ ವೇಳೆ ನೀವು ತಯಾರಿಸಿಕೊಳ್ಳಬಹುದಾದ ಅಲೋವೆರಾ ಮತ್ತು ಜೇನುತುಪ್ಪದ ಹೇರ್ ಮಾಸ್ಕ್.

Aloe Vera And Honey Mask

ಬೇಕಾಗುವ ಸಾಮಗ್ರಿಗಳು

  • 2 ಚಮಚ ಅಲೋವೆರಾ ಲೋಳೆ
  • 2-3 ವಿಟಮಿನ್ ಇ ಕ್ಯಾಪ್ಯೂಲ್
  • 1 ಚಮಚ ಬಾದಾಮಿ ಎಣ್ಣೆ
  • ಕೆಲವು ಹನಿ ಲಿಂಬೆ ರಸ

ಇದನ್ನು ತಯಾರಿ ಮಾಡಿಕೊಳ್ಳುವುದು ಹೇಗೆ?

ಶುದ್ಧವಾಗಿರುವ ಒಂದು ಗಾಜಿನ ಪಿಂಗಾಣಿ ತೆಗೆದುಕೊಳ್ಳಿ. ಇದಕ್ಕೆ ನೀವು ಹೇಳಿದಷ್ಟು ಪ್ರಮಾಣದ ಅಲೋವೆರಾ ಲೋಳೆ ಹಾಕಿಕೊಳ್ಳಿ. ನಿಮಗೆ ತಾಜಾ ಅಲೋವೆರಾ ಲೋಳೆ ಸಿಗದೆ ಇದ್ದರೆ ಆಗ ನೀವು ಮಾರುಕಟ್ಟೆಯಲ್ಲಿ ಸಿಗುವಂತಹ ರೆಡಿಮೇಡ್ ಅಲೋವೆರಾ ಲೋಳೆ ಬಳಸಿಕೊಳ್ಳಿ. ವಿಟಮಿನ್ ಇ ಕ್ಯಾಪ್ಸೂಲ್ ತೆಗೆದುಕೊಂಡು ಅದನ್ನು ಒಡೆದು ಪಿಂಗಾಣಿಗೆ ಹಾಕಿರಿ. ಇದರ ಬಳಿಕ ಮೇಲೆ ಹೇಳಿದಷ್ಟೇ ಬಾದಾಮಿ ಎಣ್ಣೆ ಮತ್ತು ಕೆಲವು ಹನಿ ಲಿಂಬೆ ರಸವನ್ನು ನೀವು ಪಿಂಗಾಣಿಗೆ ಹಾಕಿ. ಇದೆಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ತಯಾರಾದ ಬಳಿಕ ಕೂದಲನ್ನು ವಿಂಗಡಿಸಿಕೊಳ್ಳಿ. ಈಗ ನೀವು ಈ ಹೇರ್ ಮಾಸ್ಕ್ ನ್ನು ಕೂದಲಿಗೆ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ. ಸಂಪೂರ್ಣ ಕೂದಲಿಗೆ ಹಚ್ಚಿಕೊಂಡ ಬಳಿಕ ಕೂದಲನ್ನು ಬನ್ ಆಕೃತಿ ಮಾಡಿ ಕಟ್ಟಿಕೊಳ್ಳಿ. ಇದಕ್ಕೆ ನೀವು ಶಾವರ್ ಕ್ಯಾಪ್ ಇಡಬೇಕು. ಇದು ರಾತ್ರಿ ಮಲಗುವ ಮೊದಲ ಮಾಡಿ. ಮರುದಿನ ಬೆಳಗ್ಗೆ ನೀವು ಕೂದಲನ್ನು ಲಘು ಶಾಂಪೂ ಬಳಸಿಕೊಂಡು ತೊಳೆಯಿರಿ. ಇದರ ಬಳಿಕ ಕಂಡೀಷನರ್ ಹಚ್ಚಿಕೊಳ್ಳಿ.

ಅಲೋವೆರಾ ಲೋಳೆಯ ಲಾಭಗಳು

ಅಲೋವೆರಾ ಲೋಳೆಯ ಲಾಭಗಳು

ಶತಮಾನಗಳಿಂದ ಅಲೋವೆರಾ ಲೋಳೆಯನ್ನು ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಕೂದಲನ್ನು ರಕ್ಷಿಸುವುದು. ಯಾವುದೇ ರೀತಿಯ ಹಾನಿಯನ್ನು ಇದನ್ನು ತಡೆದು, ಕೂದಲಿಗೆ ತುಂಬಾ ನಯವಾದ ವಿನ್ಯಾಸ ನೀಡುವುದು. ಅಲೋವೆರಾರವು ಕೂದಲು ಹಾಗೂ ತಲೆಬುರುಡೆಯನ್ನು ತೇವಾಂಶ ಮತ್ತು ಮೊಶ್ಚಿರೈಸ್ ಆಗಿ ಇಡುವುದು. ಇದರಿಂದ ತಲೆಬುರುಡೆಯಲ್ಲಿ ತುರಿಕೆ ಮತ್ತು ತಲೆಹೊಟ್ಟು ಕಡಿಮೆಯಾಗುವುದು.

ಬಾದಾಮಿ ಎಣ್ಣೆಯ ಲಾಭಗಳು

ಬಾದಾಮಿ ಎಣ್ಣೆಯ ಲಾಭಗಳು

ಮೆಗ್ನಿಶಿಯಂ ನಿಂದ ಸಮೃದ್ಧವಾಗಿರುವಂತಹ ಬಾದಾಮಿ ಎಣ್ಣೆಯು ಕೂದಲಿಗೆ ತುಂಬಾ ನಯ ಹಾಗೂ ಮೃಧುವಾದ ವಿನ್ಯಾಸ ನೀಡುವುದು. ಇದು ಕೂದಲು ತೆಳುವಾಗುವುದನ್ನು ತಡೆಯುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಬಾದಾಮಿ ಎಣ್ಣೆಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ತಲೆಬುರುಡೆಯಲ್ಲಿ ಉಂಟಾಗಿರುವಂತಹ ಯಾವುದೇ ರೀತಿಯ ಉರಿಯೂತವನ್ನು ಶಮನ ಮಾಡುವುದು ಮತ್ತು ತಲೆಬುರುಡೆಯಲ್ಲಿ ಉಂಟಾಗುವಂತಹ ತಲೆಹೊಟ್ಟು ಮತ್ತು ಇತರ ಸೋಂಕನ್ನು ನಿವಾರಣೆ ಮಾಡುವುದು. ಕೂದಲಿನ ಆರೋಗ್ಯ ಮತ್ತು ಸುಂದರವಾದ ಕೂದಲು ಪಡೆಯಲು ನೀವು ಪ್ರತಿನಿತ್ಯವು ಬಾದಾಮಿ ಎಣ್ಣೆಯಿಂದ ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ.

ವಿಟಮಿನ್ ಇ ಲಾಭಗಳು

ವಿಟಮಿನ್ ಇ ಲಾಭಗಳು

ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವಂತಹ ವಿಟಮಿನ್ ಇ ಎಣ್ಣೆಯು ಕೂದಲಿನ ಪುನರ್ಶ್ಚೇತನಕ್ಕೆ ನೆರವಾಗುವುದು ಮತ್ತು ಕೂದಲು ತುಂಬಾ ಆರೋಗ್ಯಕಾರಿ ಹಾಗೂ ಬಲವಾಗಿ ಇರುವಂತೆ ಮಾಡುವುದು. ರಕ್ತ ಸಂಚಾರವನ್ನು ಉತ್ತಮಪಡಿಸುವುದು ಮಾತ್ರವಲ್ಲದೆ ಕೂದಲು ಸರಿಯಾಗಿ ಬೆಳವಣಿಗೆಯಾಗಲು ನೆರವಾಗುವುದು. ಇದು ಕೂದಲಿನ ತುದಿ ಒಡೆಯುವುದ ಸಮಸ್ಯೆ ಮತ್ತು ಕೂದಲು ತುಂಡಾಗುವುದನ್ನು ತಡೆಯುವುದು.

ಲಿಂಬೆ ರಸದ ಲಾಭಗಳು

ಲಿಂಬೆ ರಸದ ಲಾಭಗಳು

ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವಂತಹ ಲಿಂಬೆ ರಸವು ಕಾಲಜನ್ ಉತ್ಪತ್ತಿಯನ್ನು ಸುಧಾರಣೆ ಮಾಡುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಇದು ಕೂದಲಿನ ಕಿರು ಚೀಲಗಳನ್ನು ಬಲಗೊಳಿಸುವುದು ಮತ್ತು ಕೂದಲು ಉದುರದಂತೆ ತಡೆಯುವುದು. ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವಂತ ಲಿಂಬೆಯು ತಲೆಹೊಟ್ಟು ಮತ್ತು ಒಣ ತಲೆಬುರುಡೆ ಚಿಕಿತ್ಸೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವುದು.

Read more about: honey hair
English summary

DIY Overnight Aloe Vera And Honey Mask For Dry Hair

When your hair is exposed to sunlight or if it undergoes several chemical treatments like straightening, rebonding, smoothening, blow dry, etc., it can definitely lead to dry hair. Rich in magnesium almond oil helps in making your hair smooth and soft. Aloe vera helps in protecting the hair and also gives a smooth texture to the hair.
Story first published: Friday, December 7, 2018, 13:03 [IST]
X
Desktop Bottom Promotion