For Quick Alerts
ALLOW NOTIFICATIONS  
For Daily Alerts

ಒಂದೆರಡು ವಾರದಲ್ಲಿಯೇ ಬಿಳಿಕೂದಲನ್ನು ನಿವಾರಿಸುವ ಪವರ್‌ಫುಲ್ ಮನೆಮದ್ದುಗಳು

By Jaya Subramanya
|

ದಟ್ಟಗಿನ ಕಪ್ಪು ಹೊಳೆಯುವ ಕೇಶರಾಶಿ ಎಲ್ಲಾ ಹೆಣ್ಣುಮಕ್ಕಳ ಕನಸಾಗಿರುತ್ತದೆ. ಆದರೆ ಕಪ್ಪು ಕೂದಲಿನ ಎಡೆಯಲ್ಲಿ ಒಂದು ಬಿಳಿ ಕೂದಲು ಕಂಡುಬಂದರೂ ನಾವು ಹತಾಶರಾಗಿಬಿಡುತ್ತೇವೆ. ವಯಸ್ಸಾದಾಗ ಬರುವ ನರೆಗೂದಲು ಮತ್ತು ಪೋಷಕಾಂಶಗಳ ಕೊರತೆಯಿಂದ ಹುಟ್ಟುವ ಬಿಳಿ ಕೂದಲಿಗೂ ವ್ಯತ್ಯಾಸ ಹೆಚ್ಚಿಲ್ಲದಿದ್ದರೂ ಇದು ನಿಮ್ಮ ಸೌಂದರ್ಯಕ್ಕೆ ಭಂಗವನ್ನು ತರುತ್ತದೆ. ಬಿಳಿ ಬಣ್ಣದ ದಿರಸು, ಪಾದರಕ್ಷೆಗಳು, ಸೌಂದರ್ಯ ಸಾಧನಗಳನ್ನು ನಾವು ಬಳಸುತ್ತೇವೆ ಮತ್ತು ಇಷ್ಟಪಡುತ್ತೇವೆ ಆದರೆ ಬಿಳಿ ಕೂದಲನ್ನು ಮಾತ್ರ ನಾವು ಸಹಿಸಿಕೊಳ್ಳುವುದಿಲ್ಲ.

ಹೆಚ್ಚಿನ ರಾಸಾಯನಿಕಗಳ ಬಳಕೆ, ಪೋಷಕಾಂಶಗಳ ಕೊರತೆ, ವಿಟಮಿನ್‌ಗಳನ್ನು ಸರಿಯಾಗಿ ಸೇವಿಸದೇ ಇರುವುದು, ದೈಹಿಕ ಚಟುವಟಿಕೆಗಳ ಕೊರತೆ ಇವೇ ಮೊದಲಾದಗಳ ಕಾರಣದಿಂದ ಬಿಳಿ ಕೂದಲು ಕಂಡುಬರುತ್ತದೆ. ಆದರೆ ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ನೀವು ನೈಸರ್ಗಿಕ ವಿಧಾನಗಳನ್ನೇ ಬಳಸಿಕೊಳ್ಳಬೇಕಾಗುತ್ತದೆ.

ಬಿಳಿ ಕೂದಲಿನ ನಿಯಂತ್ರಣಕ್ಕೆ ಪರಿಣಾಮಕಾರಿ ಮನೆಮದ್ದುಗಳು

ಹೌದು ಪ್ರಕೃತಿ ಉತ್ತಮ ವರದಾನವಾಗಿದ್ದು ನಿಮ್ಮ ಸೌಂದರ್ಯದ ಯಾವುದೇ ಸಮಸ್ಯೆಗಳನ್ನು ನಿವಾರಿಸುವ ತಾಣವಾಗಿದೆ. ನಿಮ್ಮ ನರೆಗೂದಲು ಅಥವಾ ಬಿಳಿ ಕೂದಲಿನ ಸಮಸ್ಯೆ ನಿಮ್ಮನ್ನು ಹೆಚ್ಚು ಕಾಡುತ್ತಿದೆ ಮತ್ತು ಅದಕ್ಕಾಗಿ ನೈಸರ್ಗಿಕ ವಿಧಾನಗಳಲ್ಲಿ ಫಲ ಕಾಣಬೇಕೆಂದು ನೀವು ಬಯಸುತ್ತಿದ್ದರೆ ಇಂದಿನ ಲೇಖನದಲ್ಲಿ ಅದಕ್ಕಾಗಿ ಕೆಲವೊಂದು ಪರಿಹಾರಗಳನ್ನು ನಾವು ನೀಡುತ್ತಿದ್ದೇವೆ. ಅದೇನು ಎಂಬುದನ್ನು ನಾವು ಇಂದಿನ ಲೇಖನದಲ್ಲಿ ನೋಡೋಣ....

 ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿ ವಿಟಮಿನ್ ಸಿ ಅಂಶವನ್ನು ತನ್ನೊಳಗೆ ಒಳಗೊಂಡಿದ್ದು, ವಿಟಮಿನ್ ಸಿ, ಉತ್ಕರ್ಷಣ ನಿರೋಧಿ ಅಂಶಗಳನ್ನು ಹೊಂದಿದೆ. ಇದು ನಿಮ್ಮ ನೆರೆಗೂದಲನ್ನು ನಿವಾರಿಸಿ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ. ಹಾಗೆಯೇ ಕೂದಲಿಗೆ ಅತ್ಯಗತ್ಯ ಪೋಷಕಾಂಶಗಳನ್ನು ಒದಗಿಸಿ, ಕೂದಲನ್ನು ಸ್ವಾಸ್ಥ್ಯವಾಗಿಸುತ್ತದೆ.

 ಇದನ್ನು ಬಳಸುವುದು ಹೇಗೆ

ಇದನ್ನು ಬಳಸುವುದು ಹೇಗೆ

ಪ್ಯಾನ್‌ನಲ್ಲಿ ಸ್ವಲ್ಪ ತೆಂಗಿನೆಣ್ಣೆ ಮತ್ತು ಒಣ ನೆಲ್ಲಿಕಾಯಿಯನ್ನು ಬಿಸಿ ಮಾಡಿಕೊಳ್ಳಿ. ಒಣ ನೆಲ್ಲಿಕಾಯಿ ಇಲ್ಲದೇ ಇದ್ದಲ್ಲಿ ನೆಲ್ಲಿಕಾಯಿ ಹುಡಿಯನ್ನು ನೀವು ಬಳಸಬಹುದು. ಎಣ್ಣೆಯನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಎಣ್ಣೆಯನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ರಾತ್ರಿಪೂರ್ತಿ ಹಾಗೆಯೇ ಬಿಡಿ. ನಂತರ ಅದನ್ನು ತೊಳೆದುಕೊಳ್ಳಿ.

*ಈ ವಿಧಾನವನ್ನು ವಾರಕ್ಕೊಮ್ಮೆ ಮಾಡಿ

*ನೆಲ್ಲಿಕಾಯಿಯೊಂದಿಗೆ ಲಿಂಬೆ ರಸವನ್ನು ನೀವು ಬಳಸಬಹುದು

*ತಣ್ಣೀರಿನಲ್ಲಿ ತಲೆ ತೊಳೆದುಕೊಳ್ಳಿ

*ಬಾದಾಮಿ ಎಣ್ಣೆಯೊಂದಿಗೆ ಕೂಡ ನೆಲ್ಲಿಕಾಯಿಯನ್ನು ನಿಮಗೆ ಬಳಸಬಹುದು

*ನಿಮ್ಮ ತಲೆ ಬುಡ ಮತ್ತು ತುದಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳಿ

* ರಾತ್ರಿ ಪೂರ್ತಿ ಹಾಗೆಯೇ ಬಿಡಿ

* ನಿಮ್ಮ ನೆರೆಗೂದಲಿನ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಕೂದಲಿನ ಪೋಷಣೆಯನ್ನು ಮಾಡುತ್ತದೆ

ಬ್ಲ್ಯಾಕ್ ಟೀ

ಬ್ಲ್ಯಾಕ್ ಟೀ

ಬಿಳಿಕೂದಲಿಗೆ ನೈಸರ್ಗಿಕ ಬಣ್ಣವನ್ನು ಬ್ಲ್ಯಾಕ್ ಟೀ ನೀಡುತ್ತದೆ. ಕೆರಟಿನ್ ಅಂಶವನ್ನು ಕೂದಲಿಗೆ ನೀಡಿ ಕೂದಲಿಗೆ ನೈಸರ್ಗಿಕ ಪೋಷಣೆಯನ್ನು ಒದಗಿಸುತ್ತದೆ. ಟ್ಯಾನಿನ್ ಅಂಶ ಬ್ಲ್ಯಾಕ್ ಟಿಯಲ್ಲಿದ್ದು ಡಿಟಿಎಚ್ ಹಾರ್ಮೊನು ಉತ್ಪಾದನೆಯನ್ನು ನಿಲ್ಲಿಸುತ್ತದೆ. ಈ ಹಾರ್ಮೋನು ಕೂದಲು ಉದುರುವಿಕೆಗೆ ಕಾರಣವಾಗಿದೆ. ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಬ್ಲ್ಯಾಕ್ ಟಿ ಉತ್ತಮ ಪರಿಹಾರವಾಗಿದೆ.

ಬಳಸುವುದು ಹೇಗೆ

ಬಳಸುವುದು ಹೇಗೆ

* ಒಂದು ಪಾತ್ರೆಯಲ್ಲಿ ಬ್ಲ್ಯಾಕ್ ಟೀ ಎಲೆಗಳನ್ನು ಹಾಕಿ ನೀರಿನೊಂದಿಗೆ ಕುದಿಸಿ. ಸ್ವಲ್ಪ ನಿಮಿಷಗಳ ಕಾಲ ಹಾಗೆಯೇ ಬಿಡಿ

* ಈ ದ್ರಾವಣ ತಣ್ಣಗಾಗಲು ಬಿಡಿ

* ತಣ್ಣಗಾದ ನಂತರ ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ, ಅರ್ಧಗಂಟೆ ಹಾಗೆಯೇ ಬಿಡಿ

* ತಣ್ಣೀರಿನಲ್ಲಿ ಕೂದಲು ತೊಳೆದುಕೊಳ್ಳಿ

* ನಿಮ್ಮ ಕೂದಲಿಗೆ ಶ್ಯಾಂಪೂ ಹಚ್ಚಬೇಡಿ

* ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿ

ಮೆಹೆಂದಿ

ಮೆಹೆಂದಿ

ಮೆಹೆಂದಿ ನೈಸರ್ಗಿಕ ಡೈ ಎನಿಸಿದ್ದು ಇದು ಆಂಟಿಬ್ಯಾಕ್ಟೀರಿಯಾ ಅಂಶವನ್ನು ಒಳಗೊಂಡಿದೆ. ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಗಾಗಿಸುವ ಅಂಶವನ್ನು ಹೆನ್ನಾ ಹೊಂದಿದೆ. ತಲೆಯ ಬುಡದಲ್ಲಿ ಎಣ್ಣೆಯ ಉತ್ಪಾದನೆಯನ್ನು ಇದು ಮಾಡುತ್ತದೆ.

ಇದನ್ನು ಬಳಸುವುದು ಹೇಗೆ

ಇದನ್ನು ಬಳಸುವುದು ಹೇಗೆ

* ಒಂದು ಪ್ಲಾಸ್ಟಿಕ್ ಬೌಲ್‌ನಲ್ಲಿ ಮೆಹೆಂದಿಯನ್ನು 8 ಗಂಟೆಗಳ ಕಾಲ ನೆನೆಸಿ ಇಲ್ಲವೇ ರಾತ್ರಿಪೂರ್ತಿ ಹಾಗೆಯೇ ಬಿಡಿ

* ಕಪ್‌ನಲ್ಲಿ ಬ್ಲ್ಯಾಕ್ ಚಹಾವನ್ನು ಕುದಿಸಿಕೊಳ್ಳಿ ಮತ್ತು ಕೆಲವು ನಿಮಿಷ ಹಾಗೆಯೇ ಬಿಡಿ. ತಣ್ಣಗಾಗಲು ಹಾಗೆಯೇ ಬಿಡಿ

* ಹೆನ್ನಾ ಪೇಸ್ಟ್‌ಗೆ ಚಹಾವನ್ನು ಮಿಶ್ರ ಮಾಡಿ

* ಈಗ ಲಿಂಬೆ ರಸ ಮತ್ತು ನೆಲ್ಲಿಕಾಯಿ ಪುಡಿಯನ್ನು ಸೇರಿಸಿ

* ನಿಮ್ಮ ಕೈಗೆ ಗ್ಲೌವ್ಸ್ ಅನ್ನು ಹಾಕಿಕೊಂಡು ನಂತರ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ.

* ಸಂಪೂರ್ಣವಾಗಿ ಕೂದಲಿಗೆ ಹಚ್ಚಿ

* ಒಂದು ಗಂಟೆ ಕೂದಲಿನಲ್ಲಿ ಹಾಗೆಯೇ ಬಿಡಿ

* ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ

* ತಿಂಗಳಿಗೊಮ್ಮೆ ಈ ವಿಧಾನವನ್ನು ಅನುಸರಿಸಿ

ತೆಂಗಿನೆಣ್ಣೆ ಮತ್ತು ಲಿಂಬೆ ರಸ

ತೆಂಗಿನೆಣ್ಣೆ ಮತ್ತು ಲಿಂಬೆ ರಸ

ತೆಂಗಿನೆಣ್ಣೆ ಮತ್ತು ಲಿಂಬೆ ರಸ ನಿಮ್ಮ ಕೂದಲಿನ ಪೋಷಣೆಯನ್ನು ಉತ್ತಮವಾಗಿ ಮಾಡುತ್ತದೆ. ತೆಂಗಿನೆಣ್ಣೆಯು ಕೆಲವು ಕೊಬ್ಬಿನ ಅಂಶಗಳನ್ನು ಒಳಗೊಂಡಿದ್ದು ಲ್ಯಾರಿಕ್ ಆಸಿಡ್ ಇದರಲ್ಲಿದೆ. ಇದರಿಂದ ನೆರೆಯುವಿಕೆ ಕಡಿಮೆಯಾಗಿ ಕೂದಲು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತದೆ. ಇನ್ನು ಲಿಂಬೆ ರಸವು ವಿಟಮಿನ್ ಸಿ ಅಂಶವನ್ನು ಹೊಂದಿದ್ದು, ವಿಟಮಿನ್ ಬಿ, ಫೋಸ್‌ಫೊರಸ್, ಹೀಗೆ ಮೊದಲಾದ ಅಂಶಗಳಿವೆ.

ಬಳಸುವುದು ಹೇಗೆ

ಬಳಸುವುದು ಹೇಗೆ

* ಒಂದು ಪಾತ್ರೆಯಲ್ಲಿ ಒಂದು ಚಮಚದಷ್ಟು ಲಿಂಬೆ ರಸವನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಕೆಲವು ಹನಿ ತೆಂಗಿನೆಣ್ಣೆ ಸೇರಿಸಿ, ಕೆಲವು ಗಂಟೆ ಹಾಗೆಯೇ ಬಿಡಿ

* ಮೃದು ಶಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ

* ವಾರಕ್ಕೊಮ್ಮೆ ಈ ವಿಧಾನವನ್ನು ಬಳಸಿ ನೋಡಿ

ಕರಿಬೇವು ಮತ್ತು ತೆಂಗಿನೆಣ್ಣೆ

ಕರಿಬೇವು ಮತ್ತು ತೆಂಗಿನೆಣ್ಣೆ

ವಿಟಮಿನ್ ಎ, ಸಿ, ಇ ಅಂಶಗಳನ್ನು ಕರಿಬೇವು ಒಳಗೊಂಡಿದ್ದು ಇದು ನೆರೆಗೂದಲನ್ನು ತಡೆಗಟ್ಟುತ್ತದೆ. ಇದು ಕೂದಲಿಗೆ ಉತ್ತಮ ಪೋಷಣೆಯನ್ನು ನೀಡಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

ಬಳಸುವುದು ಹೇಗೆ

ಬಳಸುವುದು ಹೇಗೆ

* ಪ್ಯಾನ್‌ನಲ್ಲಿ ಕರಿಬೇವು ಮತ್ತು ತೆಂಗಿನೆಣ್ಣೆಯನ್ನು ಚೆನ್ನಾಗಿ ಕಾಯಿಸಿಕೊಳ್ಳಿ

* ಇದನ್ನು ತಣ್ಣಗಾಗಲು ಬಿಡಿ

* ಎಣ್ಣೆ ತಣ್ಣಗಾದ ನಂತರ ಕೂದಲಿಗೆ ಇದನ್ನು ಹಚ್ಚಿ

* ಒಂದು ಗಂಟೆ ಎಣ್ಣೆಯನ್ನು ಕೂದಲಿನಲ್ಲಿ ಬಿಡಿ

* ಮೃದು ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ

* ವಾರದಲ್ಲಿ 2-3 ಬಾರಿ ಹೀಗೆ ಮಾಡಿ ನೋಡಿ

ಕಪ್ಪು ಎಳ್ಳು

ಕಪ್ಪು ಎಳ್ಳು

ಕಪ್ಪು ಎಳ್ಳು ನೆರೆಗೂದಲನ್ನು ತಡೆಗಟ್ಟಿ ಕೂದಲುದುರುವುದನ್ನು ನಿವಾರಿಸುತ್ತದೆ. ಕೂದಲಿನ ಬಣ್ಣಕ್ಕೆ ಕಾರಣವಾಗಿರುವ ವಿಟಮಿನ್ ಪ್ರೊಟೀನ್ ಅಂಶಗಳನ್ನು ಕಪ್ಪು ಎಳ್ಳು ಪ್ರೋತ್ಸಾಹಿಸುತ್ತದೆ. ಬೇಗನೇ ಕೂದಲು ಬೆಳ್ಳಗಾಗುವುದನ್ನು ಇದು ತಡೆಗಟ್ಟಿ ನಿಮ್ಮ ಕೂದಲನ್ನು ಮೃದು ಹಾಗೂ

ಬ್ರೇಕೇಜ್ ಅನ್ನು ನಿವಾರಿಸುತ್ತದೆ.

ಬಳಸುವುದು ಹೇಗೆ

2-3 ಚಮಚದಷ್ಟು ಕಪ್ಪು ಎಳ್ಳನ್ನು ನಿತ್ಯವೂ ಸೇವಿಸಿ

ಭೃಂಗರಾಜ್

ಭೃಂಗರಾಜ್

ಕೂದಲುದುರುವುದು ಮತ್ತು ನೆರೆಗೂದಲನ್ನು ತಡೆಗಟ್ಟಲು ಭೃಂಗರಾಜ್ ಅನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತದೆ. ಆಯುರ್ವೇದ ರಾಜ ಎಂದು ಭೃಂಗರಾಜನ್ನು ಕರೆಯುತ್ತಿದ್ದು, ಕೂದಲಿಗೆ ಉತ್ತಮ ಪೋಷಣೆಯನ್ನು ಮಾಡುತ್ತದೆ. ನಿಮ್ಮ ಕೂದಲನ್ನು ಕಪ್ಪಗಾಗಿಸಿ ದಪ್ಪದಾಗಿ ಮಾಡುವ ಶಕ್ತಿ ಭೃಂಗರಾಜ್‌ಗಿದೆ. ಇದು ನಿಮ್ಮ ಕೂದಲಿಗೆ ಹೊಳಪು ಮತ್ತು ದೃಢತೆಯನ್ನು ನೀಡುತ್ತದೆ.

ಬಳಸುವುದು ಹೇಗೆ

ಬಳಸುವುದು ಹೇಗೆ

ಒಂದು ಚಮಚ ಭೃಂಜರಾಜ ಪೌಡರ್, ನೆಲ್ಲಿಕಾಯಿ ಪೌಡರ್ ಮತ್ತು ಬ್ರಾಹ್ಮೀ ಪೌಡರ್ ಅನ್ನು ನೀರಿನೊಂದಿಗೆ ಮಿಶ್ರ ಮಾಡಿ ಮತ್ತು ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ

ನಿಮ್ಮ ಕೂದಲಿಗೆ ಇದನ್ನು ಹಚ್ಚಿ 20-30 ನಿಮಿಷ ಹಾಗೆಯೇ ಬಿಡಿ

ನಂತರ ನೀರು ಬಳಸಿ ಕೂದಲನ್ನು ತೊಳೆದುಕೊಳ್ಳಿ

ಬಿಳಿ ಗೋಧಿ ರಸ

ಬಿಳಿ ಗೋಧಿ ರಸ

ಗೋಧಿ ಹುಲ್ಲು ವಿಟಮಿನ್ ಎ, ಬಿ, ಸಿ ಮತ್ತು ಇ ಅಂಶವನ್ನು ಒಳಗೊಂಡಿದೆ. ಇದು ಅಮಿನೊ ಆಸಿಡ್ ಅನ್ನು ಹೊಂದಿದ್ದು ಕಬ್ಬಿಣ, ಕ್ಯಾಲ್ಶಿಯಂ, ಅಯೋಡಿನ್ ಅಂಶಗಳನ್ನು ಹೊಂದಿದೆ. ಇದು ಕೂದಲು ಬೆಳ್ಳಗಾಗುವುದರಿಂದ ತಡೆಯುತ್ತದೆ. ಇದು ಕೂದಲಿನ ಪೋಷಣೆಯನ್ನು ಅತ್ಯುತ್ತಮಗೊಳಿಸುತ್ತದೆ.

ಬಳಸುವುದು ಹೇಗೆ?

ಬಳಸುವುದು ಹೇಗೆ?

* ಗೋಧಿ ಹುಲ್ಲನ್ನು ಕತ್ತರಿಸಿ ಬ್ಲೆಂಡ್ ಮಾಡಿಕೊಳ್ಳಿ

* ನಿಮ್ಮ ಕೂದಲನ್ನು ತೊಳೆದುಕೊಂಡು ಗೋಧಿ ರಸವನ್ನು ಹಚ್ಚಿಕೊಳ್ಳಿ

* 5-10 ನಿಮಿಷ ಇದನ್ನು ಹಾಗೆಯೇ ಬಿಡಿ

* ಈ ಜ್ಯೂಸ್ ಅನ್ನು ನಿತ್ಯವೂ ಸೇವಿಸಿ ನಿಮ್ಮ ಕೂದಲಿನ ಪೋಷಣೆಯನ್ನು ಮಾಡಿಕೊಳ್ಳಬಹುದಾಗಿದೆ. ನಿತ್ಯವೂ ಈ ಜ್ಯೂಸ್ ಅನ್ನು ಸೇವಿಸಿ.

ಈರುಳ್ಳಿ

ಈರುಳ್ಳಿ

ಉತ್ಕರ್ಷಣ ನಿರೋಧಿ ಅಂಶಗಳಾದ ಎಂಜೀಮ್, ಕ್ಯಾಟಲೀಸ್ ಅನ್ನು ಒಳಗೊಂಡಿದ್ದು ಇದು ಕೂದಲಿಗೆ ನೈಸರ್ಗಿಕ ಬಣ್ಣವನ್ನು ಒಳಗೊಂಡಿದೆ. ವಿಟಮಿನ್ ಸಿ, ಫೋಲಿಕ್ ಆಸಿಡ್ ಅನ್ನು ಹೊಂದಿದ್ದು ನೆರೆಗೂದಲನ್ನು ತಡೆಯುತ್ತದೆ.

ಬಳಸುವುದು ಹೇಗೆ

ಬಳಸುವುದು ಹೇಗೆ

ಈರುಳ್ಳಿಯನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಿ ಮತ್ತು ರಸವನ್ನು ತೆಗೆಯಿರಿ

ನಿಮ್ಮ ಕೂದಲಿಗೆ ಈ ರಸವನ್ನು ಹಚ್ಚಿಕೊಂಡು 30 ನಿಮಿಷ ಹಾಗೆಯೇ ಬಿಡಿ

ಸಾಮಾನ್ಯ ನೀರಿನಲ್ಲಿ ಕೂದಲನ್ನು ತೊಳೆದುಕೊಳ್ಳಿ

ಸಮಪ್ರಮಾಣದ ಈರುಳ್ಳಿ ರಸವನ್ನು ತೆಂಗಿನೆಣ್ಣೆಗೆ ಮಿಶ್ರ ಮಾಡಿ

ಮೇಲೆ ತಿಳಿಸಿದಂತೆಯೇ ಬಳಸಿ

ರೋಸ್‌ಮೇರಿ ಮತ್ತು ಸೇಜ್

ರೋಸ್‌ಮೇರಿ ಮತ್ತು ಸೇಜ್

ನಿಮ್ಮ ಕೂದಲು ಬೆಳ್ಳಗಾಗುತ್ತಿದ್ದಲ್ಲಿ ಅದನ್ನು ಕಪ್ಪಾಗಿ ಮಾಡಲು ಈ ಎರಡೂ ಉತ್ತಮವಾಗಿವೆ. ಇದು ನೈಸರ್ಗಿಕ ಬಣ್ಣವನ್ನು ಕೂದಲಿಗೆ ಮರಳಿಸುತ್ತದೆ.

ಬಳಸುವುದು ಹೇಗೆ

ಬಳಸುವುದು ಹೇಗೆ

ಒಂದು ಕಪ್‌ನಷ್ಟು ರೋಸ್‌ಮೇರಿಯನ್ನು ಎರಡು ಕಪ್ ಸೇಜ್‌ನೊಂದಿಗೆ ಕುದಿಸಿಕೊಳ್ಳಿ

ಗಂಟೆಗಳ ಕಾಲ ಹಾಗೆಯೇ ಬಿಟ್ಟು ನಂತರ ಸೋಸಿಕೊಳ್ಳಿ

ನಿಮ್ಮ ಕೂದಲಿಗೆ ಇದನ್ನು ಹಚ್ಚಿ

ಇಲ್ಲದಿದ್ದಲ್ಲಿ 2 ಚಮಚ ಆಪಲ್ ಸೀಡರ್ ವಿನೇಗರ್ ಅನ್ನು ಮಿಶ್ರಣಕ್ಕೆ ಸೇರಿಸಿ ಮತ್ತು ವಾರದಲ್ಲೊಮ್ಮೆ 4-5 ಬಾರಿ ಇದನ್ನು ಕೂದಲಿಗೆ ಉಜ್ಜಿಕೊಳ್ಳಿ.

English summary

How To Treat Grey Hair At Home With Homemade Products

There are many hair dyeing formulas in the market to cover grey hair, but the chemicals that are present in these products are not good for the health of your hair. But do not worry because Mother Nature has always provided us with an abundance of fruits and vegetables, which we can use on our hair. In this article, we have 10 natural home remedies that you can easily make by yourself and treat grey hair. These are as follows:
X
Desktop Bottom Promotion