For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟು ನಿವಾರಣೆಗೆ ಒಂದೆರಡು ಚಮಚ ತೆಂಗಿನೆಣ್ಣೆ ಪರ್ಫೆಕ್ಟ್ ಮನೆಮದ್ದು

|

ಹದಿಹರೆಯದವರನ್ನು ಮತ್ತು ವಯಸ್ಕರನ್ನು ಅತೀ ಸಾಮಾನ್ಯವಾಗಿ ಕಾಡುವ ಮತ್ತು ಅತೀ ಕಿರಿಕಿರಿಯನ್ನು೦ಟು ಮಾಡುವ ಸಮಸ್ಯೆಗಳಲ್ಲೊ೦ದು ಈ ತಲೆಹೊಟ್ಟು (ಡ್ಯಾಂಡ್ರಫ್). ಇದು ಯಾವ ವಯಸ್ಸಿನಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ತಲೆಹೊಟ್ಟು ಸಾಮಾನ್ಯವಾಗಿ ಮುಜುಗುರಕ್ಕೀಡಾಗುವ ಸನ್ನಿವೇಶವನ್ನು೦ಟು ಮಾಡುತ್ತದೆ. ಏಕೆ೦ದರೆ, ತಲೆಹೊಟ್ಟು ತಲೆದೋರಿದಾಗ, ವ್ಯಕ್ತಿಯ ತಲೆಯಿ೦ದ ನಿರ್ಜೀವ ತ್ವಚೆಯು ಸಣ್ಣ ಸಣ್ಣ ತುಣುಕುಗಳ ರೂಪದಲ್ಲಿ ಉದುರುತ್ತವೆ ಅಥವಾ ಕೆಲವೊಮ್ಮೆ ತಲೆಯ ಮೇಲೆ ಹಾಗೆಯೇ ಉಳಿದುಬಿಡುತ್ತವೆ ಇಲ್ಲವೇ ಕೆಲವೊಮ್ಮೆ ಧರಿಸಿಕೊ೦ಡಿರುವ ಬಟ್ಟೆಗಳ ಮೇಲೂ ಉದುರಿಬಿಡುತ್ತವೆ.

ತಲೆಹೊಟ್ಟಿನ ಸಾಮಾನ್ಯವಾದ ರೋಗಲಕ್ಷಣಗಳೆ೦ದರೆ, ತಲೆಯ ಮೇಲೆ ಉರಿಯ೦ತಹ ಅನುಭವ, ತಲೆ ತುರಿಸುವಿಕೆ, ಮತ್ತು ನಿರ್ಜೀವ ತ್ವಚೆಯು ತುಣುಕುಗಳ ರೂಪದಲ್ಲಿ ತಲೆಯಿ೦ದ ಉದುರುವುದು. ಹಾಗಾದರೆ ಇದನ್ನು ಹೇಗೆ ನಿಯಂತ್ರಣಕ್ಕೆ ತರುವುದು? ಚಿಂತಿಸಬೇಡಿ, ನಿಮ್ಮ ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಈ ಸಮಸ್ಯೆಯನ್ನು ಹತೋಟಿಗೆ ತರಬಹುದು. ಅದರಲ್ಲಿ ಅತಿ ಮುಖ್ಯವಾದುದು ತೆಂಗಿನೆಣ್ಣೆಯಾಗಿದೆ.

ಬ್ಯೂಟಿ ಟಿಪ್ಸ್: ಮೈಕಾಂತಿ ಹೆಚ್ಚಿಸುವ ಹಳ್ಳಿಗಾಡಿನ 'ತೆಂಗಿನೆಣ್ಣೆ'

How To Treat Dandruff With Coconut Oil

ತೆಂಗಿನೆಣ್ಣೆಯನ್ನು ಅಡುಗೆಗೆ ಮಾತ್ರವಲ್ಲದೆ ನಿಮ್ಮ ಸೌಂದರ್ಯವನ್ನು ಇಮ್ಮಡಿಸುವ ಹಲವಾರು ವಿಧಾನಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ನಮ್ಮ ದೈನಂದಿನ ಹಲವಾರು ಸೌಂದರ್ಯ ಉತ್ಪನ್ನಗಳಲ್ಲಿ ತೆಂಗಿನೆಣ್ಣೆ ಕಮಾಲನ್ನು ಉಂಟು ಮಾಡುತ್ತದೆ. ಬ್ಯಾಕ್ಟೀರಿಯಾ ಮತ್ತು ಫಂಗಲ್ ವಿರೋಧಿ ಅಂಶವನ್ನು ತೆಂಗಿನೆಣ್ಣೆ ಹೊಂದಿದ್ದು ಇದು ತ್ವಚೆಗೆ ಉತ್ತಮ ಮಾಯಿಶ್ಚರೈಸರ್ ಎಂದೆನಿಸಿದೆ. ನಿಮ್ಮ ಕೂದಲಿನ ಸಂರಕ್ಷಣೆಯಲ್ಲೂ ಇತರ ಎಣ್ಣೆಗಳಿಗಿಂತ ಹೆಚ್ಚಿನ ಪ್ರಭಾವವನ್ನು ಇದು ಬೀರುತ್ತದೆ. ತಲೆಹೊಟ್ಟು ಮತ್ತು ಒಣ ತ್ವಚೆಯು ಕೂದಲನ್ನು ಕಾಡುವ ಸರ್ವೇ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕೂದಲಿನ ಬೇರುಗಳನ್ನು ಮಾಯಿಶ್ಚರೈಸ್ ಮಾಡಲು ತೆಂಗಿನೆಣ್ಣೆ ಚಿಕಿತ್ಸೆ ಅಗತ್ಯವಾದುದು. ಹಾಗಿದ್ದರೆ ತೆಂಗಿನೆಣ್ಣೆಯನ್ನು ಬಳಸಿ ತಲೆಹೊಟ್ಟನ್ನು ನಿವಾರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ....

ಬಿಸಿ ಎಣ್ಣೆ ಮಸಾಜ್

ನಿಮ್ಮ ತಲೆಯಲ್ಲಿರುವ ಕೊಳಕನ್ನು ಧೂಳನ್ನು ನಿವಾರಿಸಲು ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಂಡು ಕೂದಲಿಗೆ ಹಚ್ಚುವುದು ಉತ್ತಮ ವಿಧಾನವಾಗಿದೆ. ತಲೆಯಲ್ಲಿರುವ ಈ ಕೊಳಕು ತಲೆಹೊಟ್ಟನ್ನು ಉಂಟುಮಾಡುತ್ತದೆ. ಆದ್ದರಿಂದ ಉತ್ತಮವಾಗಿ ಎಣ್ಣೆ ಮಸಾಜ್ ಅನ್ನು ನಿಮ್ಮ ಕೂದಲಿಗೆ ನೀವು ಮಾಡಬೇಕಾಗುತ್ತದೆ.

ಸಾಮಾಗ್ರಿ:

  • 3-4 ಚಮಚ ಎಣ್ಣೆ

ಮಾಡುವ ವಿಧಾನ
1. ಮೊದಲಿಗೆ ಸ್ವಲ್ಪ ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ
2. ಎಣ್ಣೆ ಹೆಚ್ಚು ಬಿಸಿಯಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ
3. ನಿಮ್ಮ ತಲೆಕೂದಲಿಗೆ ಈ ಎಣ್ಣೆಯಿಂದ 10-15 ನಿಮಿಷ ಮಸಾಜ್ ಮಾಡಿ
4. 30 ನಿಮಿಷ ಹಾಗೆಯೇ ಬಿಡಿ ನಂತರ ಕೂದಲನ್ನು ಮೃದುವಾದ ಶ್ಯಾಂಪೂ ಬಳಸಿ ತೊಳೆದುಕೊಳ್ಳಿ
5. ತಲೆಹೊಟ್ಟಿನಿಂದ ಮುಕ್ತಿ ಪಡೆಯಲು ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿ.

ತೆಂಗಿನೆಣ್ಣೆ ಮತ್ತು ಲಿಂಬೆ ರಸ

ನಿಮ್ಮ ಕೂದಲಿನ ಕಿರಿಕಿರಿ ಮತ್ತು ತುರಿಕೆಯನ್ನು ನಿವಾರಣೆ ಮಾಡಲು ಲಿಂಬೆ ರಸ ಸೂಕ್ತವಾದುದು. ಇದು ತಲೆಹೊಟ್ಟನ್ನು ಬೇಗನೇ ನಿವಾರಿಸುತ್ತದೆ.

ಸಾಮಾಗ್ರಿಗಳು

  • 2 ಚಮಚ ತೆಂಗಿನೆಣ್ಣೆ
  • 1 ಚಮಚ ಲಿಂಬೆ ರಸ

ಮಾಡುವ ವಿಧಾನ:
1. ಒಂದು ಬೌಲ್‌ನಲ್ಲಿ ಎರಡೂ ಸಾಮಾಗ್ರಿಗಳನ್ನು ತೆಗೆದುಕೊಳ್ಳಿ
2. ನಿಮ್ಮ ಕೂದಲಿನ ಬುಡಕ್ಕೆ ಮತ್ತು ತುದಿಗೆ ಸಂಪೂರ್ಣವಾಗಿ ಹಚ್ಚಿ
3. 20-30 ನಿಮಿಷ ಹಾಗೆಯೆ ಬಿಡಿ
4. ನಂತರ ಮೃದು ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ.

ತೆಂಗಿನೆಣ್ಣೆ ಮತ್ತು ರೋಸ್‌ಮೇರಿ ಎಣ್ಣೆ

ರೋಸ್‌ಮೇರಿ ಎಣ್ಣೆಯು ಅತ್ಯುನ್ನತ ಶಮನಕಾರಿ ಗುಣವನ್ನು ಹೊಂದಿದ್ದು ಇದನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡುವುದರಿಂದ ಇದು ತುರಿಕೆ ಮತ್ತು ಒಣ ತಲೆಬುಡದ ಸಮಸ್ಯೆಯನ್ನು ನಿವಾರಿಸುತ್ತದೆ.

ಸಾಮಾಗ್ರಿಗಳು

  • 2-3 ಚಮಚ ತೆಂಗಿನೆಣ್ಣೆ
  • 3-4 ಚಮಚ ರೋಸ್‌ಮೇರಿ ಎಣ್ಣೆ

ಮಾಡುವ ವಿಧಾನ:
1. ರೋಸ್‌ಮೇರಿ ಎಣ್ಣೆಯನ್ನು 2-3 ಚಮಚ ತೆಂಗಿನೆಣ್ಣೆಯೊಂದಿಗೆ ಸೇರಿಸಿ
2. ನಿಮ್ಮ ಕೂದಲಿನ ಬುಡಕ್ಕೆ ಇದನ್ನು ಮಸಾಜ್ ಮಾಡಿ
3.ವೃತ್ತಾಕಾರವಾಗಿ ಮಸಾಜ್ ಮಾಡಿ
4. 30 ನಿಮಿಷ ಹಾಗೆಯೇ ಬಿಟ್ಟು ನಂತರ ಶ್ಯಾಂಪೂ ಮಾಡಿ.

ತೆಂಗಿನೆಣ್ಣೆ ಮತ್ತು ಜೊಜಾಬಾ ಎಣ್ಣೆ

ತಲೆಬುಡದಲ್ಲಿ ಹೆಚ್ಚುವರಿ ಎಣ್ಣೆಯನ್ನು ಇದು ನಿಯಂತ್ರಿಸುತ್ತದೆ. ನೀವು ಎಣ್ಣೆಕೂದಲನ್ನು ಹೊಂದಿದ್ದರೆ ಇದರಿಂದ ಕೂಡ ತಲೆಹೊಟ್ಟು ಬರುತ್ತದೆ.

ಸಾಮಾಗ್ರಿಗಳು

  • 3 ಚಮಚ ತೆಂಗಿನೆಣ್ಣೆ
  • 3 ಚಮಚ ಜೊಜೊಬಾ ಎಣ್ಣೆ

ಮಾಡುವ ವಿಧಾನ:
1. ಒಂದು ಬೌಲ್‌ನಲ್ಲಿ ಎರಡೂ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ
2. ಅವನ್ನು ಚೆನ್ನಾಗಿ ಮಿಶ್ರ ಮಾಡಿ
3. ನಿಮ್ಮ ಕೂದಲಿಗೆ ಇದನ್ನು ಹಚ್ಚಿ ಮಸಾಜ್ ಮಾಡಿ
4. ಶವರ್ ಕ್ಯಾಪ್‌ನಿಂದ ಕೂದಲನ್ನು ಕವರ್ ಮಾಡಿ 30 ನಿಮಿಷ ಹಾಗೆಯೇ ಬಿಡಿ
5. ನಂತರ ಮೃದು ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ.

ತೆಂಗಿನೆಣ್ಣೆ ಮತ್ತು ಕರ್ಪೂರ

ತಲೆಹೊಟ್ಟಿನ ನಿವಾರಣೆಗೆ ತೆಂಗಿನೆಣ್ಣೆ ಮತ್ತು ಕರ್ಪೂರ ಉತ್ತಮ ಔಷಧವಾಗಿದೆ. ಕರ್ಪೂರ ಗುಣಪಡಿಸುವ ಗುಣವನ್ನು ಹೊಂದಿದೆ.

ಸಾಮಾಗ್ರಿಗಳು:

  • 1 ಚಮಚ ಕರ್ಪೂರ
  • 1/2 ಕಪ್ ತೆಂಗಿನೆಣ್ಣೆ

ಮಾಡುವ ವಿಧಾನ:
1 ಕರ್ಪೂರ ಮತ್ತು ತೆಂಗಿನೆಣ್ಣೆಯನ್ನು ಜೊತೆಯಾಗಿ ಮಿಶ್ರ ಮಾಡಿ
2. ನಿಮ್ಮ ಸಂಪೂರ್ಣ ಕೂದಲಿಗೆ ಇದನ್ನು ಹಚ್ಚಿ 30-40 ನಿಮಿಷ ಕಾಯಿರಿ
3. 30 ನಿಮಿಷಗಳ ನಂತರ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ ಶ್ಯಾಂಪೂ ಬಳಸಿ
4. ವಾರಕ್ಕೆ 2-3 ಬಾರಿ ಈ ಕ್ರಮವನ್ನು ಅನುಸರಿಸಿ

ತೆಂಗಿನೆಣ್ಣೆ ಮತ್ತು ಮೆಂತ್ಯ

ತುರಿಕೆ ತಲೆಬುಡ ಮತ್ತು ತಲೆಹೊಟ್ಟು ನಿವಾರಣೆಗೆ ಮೆಂತ್ಯ ಉತ್ತಮವಾಗಿದೆ.

ಸಾಮಾಗ್ರಿಗಳು:

  • 1 ಚಮಚ ಮೆಂತ್ಯ
  • 4 ಚಮಚ ತೆಂಗಿನೆಣ್ಣೆ

ಮಾಡುವ ವಿಧಾನ:
1. ಸ್ವಲ್ಪ ತೆಂಗಿನೆಣ್ಣೆಯನ್ನು ಬಿಸಿ ಮಾಡಿ.
2. 1 ಚಮಚ ಮೆಂತ್ಯ ಹುಡಿಯನ್ನು ಇದಕ್ಕೆ ಸೇರಿಸಿ ಮಿಶ್ರ ಮಾಡಿ
3. ನಿಮ್ಮ ತಲೆಕೂದಲಿಗೆ ಇದನ್ನು ಮಸಾಜ್ ಮಾಡಿ
4. 30 ನಿಮಿಷದ ನಂತರ ಕೂದಲಿಗೆ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ.

ಕೊಬ್ಬರಿ ಎಣ್ಣೆ ಹಾಗೂ ಲಿಂಬೆ ರಸ

ಒ೦ದು ಚಮಚದಷ್ಟು ಲಿ೦ಬೆರಸ, ಐದು ಚಮಚಗಳಷ್ಟು ಕೊಬ್ಬರಿ ಎಣ್ಣೆಯನ್ನು ಮಿಶ್ರಗೊಳಿಸಿರಿ. ಈಗ, ಈ ಮಿಶ್ರಣವನ್ನು ತಲೆಗೆ ಹಿಚ್ಚಿಕೊ೦ಡು 20 ರಿ೦ದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ, ನ೦ತರ ತಲೆಯನ್ನು ಚೆನ್ನಾಗಿ ತೊಳೆಯಿರಿ. ಇದು ತಲೆಹೊಟ್ಟು ನಿವಾರಿಸುವಲ್ಲಿ ಪರಿಣಾಮಕಾರಿ ಮನೆಮದ್ದಾಗಿದೆ. ಅಷ್ಟೇ ಅಲ್ಲದೆ ಪ್ರತಿ ಬಾರಿ ತಲೆಸ್ನಾನ ಮಾಡುವ ಮೊದಲು ಕೊಂಚ ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಆರೋಗ್ಯಕರವಾಗುತ್ತದೆ ಮತ್ತು ಹೊಳಪಿನಿಂದ ಕೂಡಿರುತ್ತದೆ.

English summary

How To Treat Dandruff With Coconut Oil

Coconut oil is a very common and effective ingredient that can be used for many other purposes, apart from cooking. Coconut oil is used for a good reason in many of the beauty products that we use in our day-to-day life. It is antibacterial and antifungal in nature. Also, coconut oil acts as the best moisturizer for the skin and is very effective for the hair than any other oils that we have.
Story first published: Monday, July 16, 2018, 17:51 [IST]
X
Desktop Bottom Promotion