For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ತೆಂಗಿನೆಣ್ಣೆ ಶಾಂಪೂ ಮಾಡಿಕೊಳ್ಳುವುದು ಹೇಗೆ?

|

ನಿಸ್ತೇಜ, ದುರ್ಬಲ ಕೂದಲು ಇಂದು ಪ್ರತಿಯೊಬ್ಬರಿಗೂ ಸಾಮಾನ್ಯ ಸಮಸ್ಯೆಯಾಗಿರುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಶಾಂಪೂ ಬಳಸಿಕೊಂಡು ಇದರ ನಿವಾರಣೆ ಮಾಡಲು ಪ್ರಯತ್ನಿಸುತ್ತಿರುತ್ತೇವೆ. ಆದರೆ ಇದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಕೆಲವೊಂದು ಸಲ ಇದು ಅಡ್ಡಪರಿಣಾಮ ಕೂಡ ಬೀರುವುದು. ಇದರ ಬದಲಿಗೆ ಮನೆಮದ್ದನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ತೆಂಗಿನೆಣ್ಣೆಯಿಂದ ಮಾಡಿರುವಂತಹ ನೈಸರ್ಗಿಕ ಶಾಂಪೂವಿನ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ತೆಂಗಿನೆಣ್ಣೆ ಶಾಂಪೂ ಕೂದಲಿಗೆ ಅದ್ಭುತವಾಗಿ ಕೆಲಸ ಮಾಡಲಿದೆ. ರಾಸಾಯನಿಕ ರಹಿತವಾಗಿರುವ ಶಾಂಪೂವನ್ನು ಬಳಸಿಕೊಳ್ಳುವುದು ಹೇಗೆ ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ.

how to make natural shampoos at home

ತೆಂಗಿನೆಣ್ಣೆ ಮತ್ತು ಜೇನುತುಪ್ಪದ ಶಾಂಪೂ

ಬೇಕಾಗುವ ಸಾಮಗ್ರಿಗಳು

  • 1 ಕಪ್ ತೆಂಗಿನೆಣ್ಣೆ
  • 2 ಚಮಚ ಜೇನುತುಪ್ಪ
  • 1 ಚಮಚ ಅಲೋವೆರಾ
  • ¼ ಕಪ್ ಡಿಸ್ಟಿಲ್ಡ್ ವಾಟರ್
  • 1 ಚಮಚ ಲ್ಯಾವೆಂಡರ್ ಸಾರಭೂತ ತೈಲ
  • 1 ಚಮಚ ರೋಸ್ಮೆರಿ ಸಾರಭೂತ ತೈಲ

ಹೇಗೆ ತಯಾರಿಸುವುದು

ಹಗುರಬೆಚ್ಚಿನ ಡಿಸ್ಟಿಲ್ಡ್ ವಾಟರ್ ಗೆ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಮುಂದಿನ ಹಂತದಲ್ಲಿ ಉಳಿದ ಸಾಮಗ್ರಿಗಳನ್ನು ಇದಕ್ಕೆ ಸೇರಿಸಿಕೊಂಡು ಬೆರೆಸಿಕೊಳ್ಳಿ. ಅಂತಿಮವಾಗಿ ಎಲ್ಲವನ್ನು ಸರಿಯಾಗಿ ಬೆರೆಸಿಕೊಂಡು ಇದನ್ನು ಸ್ಪ್ರೇ ಬಾಟಲಿಗೆ ಹಾಕಿ. ಬಳಸುವ ಮೊದಲು ಇದನ್ನು ಸರಿಯಾಗಿ ಅಲುಗಾಡಿಸಿ. 2-3 ವಾರಗಳ ಕಾಲ ಇದನ್ನು ನೀವು ರೆಫ್ರಿಜರೇಟರ್ ನಲ್ಲಿ ಇಡಬಹುದು.

ತೆಂಗಿನೆಣ್ಣೆ ಮತ್ತು ತೆಂಗಿನ ಹಾಲಿನ ಶಾಂಪೂ

ಬೇಕಾಗುವ ಸಾಮಗ್ರಿಗಳು

  • 4 ಚಮಚ ತೆಂಗಿನೆಣ್ಣೆ
  • ½ ಕಪ್ ತೆಂಗಿನ ಹಾಲು
  • ½ ಕಪ್ ಗ್ಲಿಸರಿನ್
  • 1 ಕಪ್ ಲಿಕ್ವಿಡ್ ಸೋಪ್
  • ನಿಮ್ಮ ಆಯ್ಕೆಯ ಸಾರಭೂತ ತೈಲದ ಕೆಲವು ಹನಿ(ಬೇಕಿದ್ದರೆ)

ತಯಾರಿಸುವುದು ಹೇಗೆ

ಮೊದಲು ಲಿಕ್ವಿಡ್ ಸೋಪ್ ಮತ್ತು ತೆಂಗಿನ ಹಾಲನ್ನು ಒಂದು ಪಿಂಗಾಣಿಗೆ ಹಾಕಿಕೊಂಡು ಬದಿಗಿಟ್ಟುಬಿಡಿ. ಈಗ ತೆಂಗಿನೆಣ್ಣೆ ಮತ್ತು ಗ್ಲಿಸರಿನ್ ನ್ನು ಇನ್ನೊಂದು ಪಿಂಗಾಣಿಗೆ ಹಾಕಿ. ಇದನ್ನು ಈಗ ತೆಂಗಿನಹಾಲಿನ ಮಿಶ್ರಣಕ್ಕೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಸ್ವಚ್ಛವಾಗಿರುವ ಸ್ಪ್ರೇ ಬಾಟಲಿಗೆ ಇದನ್ನು ಹಾಕಿಕೊಂಡಿ ಇಡಿ. ಬಳಸುವ ಮೊದಲು ಸರಿಯಾಗಿ ಅಲುಗಾಡಿಸಿ.

ತೆಂಗಿನೆಣ್ಣೆ ಮತ್ತು ಅಲೋವೆರಾ ಲೋಳೆಯ ಶಾಂಪೂ

ಬೇಕಾಗುವ ಸಾಮಗ್ರಿಗಳು

  • 11/2 ಕಪ್ ತೆಂಗಿನೆಣ್ಣೆ ತೈಲ
  • 11/2 ಕಪ್ ಅಲೋವೆರಾ ಲೋಳೆ
  • ಕೆಲವು ಹನಿ ಸಾರಭೂತ ತೈಲ(ಸುವಾಸನೆಗೆ)

ತಯಾರಿಸುವ ವಿಧಾನ

ಅಲೋವೆರಾ ಎಲೆಯಿಂದ ತಾಜಾ ಅಲೋವೆರಾ ಲೋಳೆ ತೆಗೆಯಿರಿ. ಇದನ್ನು ತೆಂಗಿನೆಣ್ಣೆಗೆ ಹಾಕಿ ಮತ್ತು ಎರಡನ್ನು ಜತೆಯಾಗಿ ಮಿಶ್ರಣ ಮಾಡಿ. ಅಂತಿಮವಾಗಿ ಕೆಲವು ಹನಿ ಸಾರಭೂತ ತೈಲ ಹಾಕಿಕೊಳ್ಳೀ. ಇದನ್ನು ಒಂದು ಬಾಟಲಿಗೆ ಹಾಕಿ ಶೇಖರಿಸಿಟ್ಟುಕೊಳ್ಳಿ. ಈ ಶಾಂಪೂ ನಿಮ್ಮ ತಲೆಬುರುಡೆಗೆ ಪೋಷಣೆ ನೀಡುವುದು ಮತ್ತು ಪಿಎಚ್ ಮಟ್ಟ ಕಾಪಾಡುವುದು.

ತೆಂಗಿನೆಣ್ಣೆ ಮತ್ತು ಉಪ್ಪಿನ ಶಾಂಪೂ

ಬೇಕಾಗುವ ಸಾಮಗ್ರಿಗಳು

  • 2 ಚಮಚ ತೆಂಗಿನೆಣ್ಣೆ
  • 2 ಚಮಚ ಉಪ್ಪು
  • 2 ಚಮಚ ಜೊಜೊಬಾ ಎಣ್ಣೆ
  • ¾ ಕಪ್ ನೀರು
  • ಕೆಲವು ಹನಿ ಸಾರಭೂತ ತೈಲ

ತಯಾರಿಸಿಕೊಳ್ಳುವುದು ಹೇಗೆ?

ನೀರನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ತೆಂಗಿನೆಣ್ಣೆ, ಉಪ್ಪು, ಜೊಜೊಬಾ ಎಣ್ಣೆ ಮತ್ತು ಕೆಲವು ಹನಿ ಸಾರಭೂತ ತೈಲವನ್ನು ಹಾಕಿಕೊಳ್ಳಿ. ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿ. ಒಂದು ಬಾಟಲಿಗೆ ಹಾಕಿಕೊಂಡು ಅದಕ್ಕೆ ಈ ಮಿಶ್ರಣ ಹಾಕಿ. ನೀವು ಬಳಸುವ ಮೊದಲು ಈ ಬಾಟಲಿಯನ್ನು ಸರಿಯಾಗಿ ಅಲುಗಾಡಿಸಿಕೊಳ್ಳಿ.

ಕೂದಲಿಗೆ ತೆಂಗಿನೆಣ್ಣೆಯ ಲಾಭಗಳು

1. ಕೂದಲು ಮತ್ತು ತಲೆಬುರುಡೆಗೆ ತೆಂಗಿನೆಣ್ಣೆಯು ನೈಸರ್ಗಿಕ ಮಾಯಿಶ್ಚರೈಸರ್ ಎಂದು ಪರಿಗಣಿಸಲಾಗಿದೆ. ಇದು ಆಳವಾಗಿ ತಲೆಬುರುಡೆಯನ್ನು ಕಂಡೀಷನಿಂಗ್ ಮಾಡುವುದು.
2. ಕೂದಲು ಉದುರುವಿಕೆ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಮತ್ತು ಕೂದಲಿನ ಬುಡವನ್ನು ಬಲಗೊಳಿಸುವುದು.
3. ತಲೆಬುರುಡೆಗೆ ಮಾಯಿಶ್ಚರೈಸ್ ಮಾಡುವ ಜತೆಗೆ ಇದು ತಲೆಹೊಟ್ಟು ಮತ್ತು ಒಣ ತಲೆಬುರುಡೆ ಸಮಸ್ಯೆ ನಿವಾರಣೆ ಮಾಡುವುದು.
4. ನಿಯಮಿತವಾಗಿ ತೆಂಗಿನೆಣ್ಣೆ ಬಳಸುವುದರಿಂದ ಕೂದಲು ತುಂಡಾಗುವ ಸಮಸ್ಯೆ ನಿವಾರಣೆ ಮಾಡಬಹುದು.
5. ಜಿಡ್ಡುಗಟ್ಟಿದ ಕೂದಲಿನ ಸಮಸ್ಯೆ ಬೇಡವೆಂದಾದರೆ ತೆಂಗಿನೆಣ್ಣೆಯು ಅತ್ಯುತ್ತಮ ಪರಿಹಾರ.
6. ಡ್ಯಾಂಡ್ರಫ್ ಅನ್ನು ನಿವಾರಿಸುವ ಸಾಮರ್ಥ್ಯ ತೆಂಗಿನೆಣ್ಣೆಗಿದೆ. ವಾರಕ್ಕೊಮ್ಮೆ ತಲೆಯ ಬುಡಕ್ಕೆ ತೆಂಗಿನೆಣ್ಣೆಯನ್ನು ಹಚ್ಚಿ. ಈ ಸಮಸ್ಯೆ ಒಂದು ವಾರದಲ್ಲಿ ದೂರ ಸರಿಯುತ್ತದೆ.
7. ನಿಮ್ಮ ಕೂದಲು ಸಿಕ್ಕು ಸಿಕ್ಕಾಗಿದ್ದು ಗಂಟಾಗಿದ್ದರೆ ಇದನ್ನು ಬಿಡಿಸಲು ತೆಂಗಿನೆಣ್ಣೆಯನ್ನು ಪ್ರತಿ ದಿನ ಕೂದಲಿಗೆ ಹಚ್ಚಿ. ಇದು ಕೂದಲಿನ ಸಿಕ್ಕಿನ ಗಂಟನ್ನು ಬಿಡಿಸುತ್ತದೆ, ಜೊತೆಗೆ ಕೂದಲು ಇನ್ನಷ್ಟು ಹೊಳೆಯುವಂತೆ ಮಾಡುತ್ತದೆ.
8.ಎರಡು ಚಮಚ ತೆಂಗಿನ ಎಣ್ಣೆಗೆ ಎರಡು ಚಮಚ ಜೇನುತುಪ್ಪ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ಇದನ್ನು ತೊಳೆಯಿರಿ. ನಿಸ್ತೇಜ, ಒಣ ಮತ್ತು ಹಾನಿಗೊಳಗಾದ ಕೂದಲಿಗೆ ಇದು ಪರಿಣಾಮಕಾರಿಯಾಗಲಿದೆ.

English summary

How To Make Coconut Oil Shampoo At Home?

Dull, frizzy and lifeless hair are some common hair-related issues that we all face in our day-to-day life. In an attempt to find a solution to this, we experiment with different shampoos and conditioners that are available in the market. But sometimes none of these work on our hair. At this point it is better to try some home remedies.In this article, we'll be discussing some natural shampoos that are made from coconut oil. So let us see how we can use coconut oil shampoo as an alternative for other chemical shampoos.
X
Desktop Bottom Promotion