For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಚಿನ್ನದ ದ್ರವ ಆಲಿವ್ ಎಣ್ಣೆಯ 'ಹೇರ್-ಕೇರ್' ಪ್ಯಾಕ್

By Sushma Charhra
|

ಆಲಿವ್ ಎಣ್ಣೆಯನ್ನು "ಚಿನ್ನದ ದ್ರವ" ಎಂದು ಕರೆಯಲಾಗುತ್ತೆ. ಇದಕ್ಕೆ ಈ ಹೆಸರು ಅದರ ಬಣ್ಣದಿಂದ ಬಂದಿರುವಂತದ್ದು. ಕೇವಲ ಬಣ್ಣಕ್ಕಾಗಿ ಮಾತ್ರವಲ್ಲ. ನಿಜಕ್ಕೂ ಹೇಳಬೇಕೆಂದರೆ ಅದರ ಗುಣಗಳಿಗೂ ಕೂಡ ಈ ಹೆಸರು ಹೊಂದಿಕೊಳ್ಳುತ್ತೆ. ಯಾಕೆಂದರೆ ಆಲಿವ್ ಎಣ್ಣೆಯಿಂದ ಅಷ್ಟೊಂದು ಲಾಭಗಳಿವೆ. ದೇಹದ ಒಳಕ್ಕೂ, ದೇಹದ ಹೊರಕ್ಕೂ ಹಿತವನ್ನು ನೀಡುವಂತಹ ಹಲವು ಗುಣಗಳು ಇದರಲ್ಲಿದೆ. ಆಲಿವ್ ಎಣ್ಣೆಯನ್ನು ಬಳಕೆ ಮಾಡುವುದರಿಂದಾಗಿ ಹೃದಯಾಘಾತ ತಡೆಗಟ್ಟುವಿಕೆ, ಕೊಲೆಸ್ಟ್ರಾಲ್ ಲೆವೆಲ್ ನ್ನು ತಹಬದಿಯಲ್ಲಿಡಲು ಮತ್ತು ಲಿವರ್ ನ ಕಾರ್ಯಚಟುವಟಿಕೆಯನ್ನು ಸರಿಯಾಗಿಡಲು ಹಾಗೂ ಇತ್ಯಾದಿ ಕಾರ್ಯಗಳಿಗೆ ಇದು ಬಹಳ ನೆರವು ನೀಡುತ್ತೆ.

ಈ ಎಣ್ಣೆಯನ್ನು ಔಷಧಿಗಳಲ್ಲಿ, ಅಡುಗೆಯಲ್ಲಿ, ಕಾಸ್ಮೆಟಿಕ್ಸ್ ಗಳಲ್ಲಿ, ಸೋಪು, ಹಳೆಯ ಕಾಲದ ದೀಪಗಳಲ್ಲಿ ಹಾಗೂ ಇತ್ಯಾದಿಗಳಿಗಾಗಿ ಬಳಕೆ ಮಾಡಲಾಗುತ್ತೆ. ಆಲಿವ್ ಎಣ್ಣೆಯು ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಕೂಡ ಬಹಳ ಉಪಕಾರಿ. ಈ ಮ್ಯಾಜಿಕಲ್ ಎಣ್ಣೆ ಕೂದಲಿನ ಸ್ಪಿಟ್ ಎಂಡ್ಸ್, ಡ್ಯಾಂಡ್ರಫ್ ನಿವಾರಣೆ, ಕೂದಲಿನ ಮೃದುತ್ವದ ರಕ್ಷಣೆ, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು,ಸ್ಕ್ಯಾಲ್ಪ್ ನಲ್ಲಿನ ತೊಂದರೆಗಳ ನಿವಾರಣೆ, ಮತ್ತು ಕೂದಲಿನ ದಟ್ಟತನಗಳಿಗೆ ನೆರವು ನೀಡುತ್ತೆ.

beauty tips in kannada

ವಾತಾವರಣದ ಕಲ್ಮಶಗಳಿಂದ ನಿಮ್ಮ ಕೂದಲಿಗೆ ಉಂಟಾಗುವ ಹಾನಿಯನ್ನು ತಡೆಯಲು ಈ ಎಣ್ಣೆ ಬಹಳ ಉಪಕಾರಿಯಾಗಿದೆ. ಹಾಗಿರುವಾಗ ನೀವು ಯಾಕೆ ಈ ಎಣ್ಣೆಯನ್ನು ನಿಮ್ಮ ಕೂದಲಿನ ರಕ್ಷಣೆಗೆ ಬಳಕೆ ಮಾಡಬಾರದು? ಸೂರ್ಯನ ನೇರಳಾತೀತ ಕಿರಣಗಳು,ಕೊಳೆ, ತಲೆಯಲ್ಲಿ ಬೆವರುವಿಕೆ, ಡ್ರೈಯರ್ ಗಳಿಂದಾಗುವ ತೊಂದರೆ, ಇತ್ಯಾದಿ ಎಲ್ಲಾ ಸಮಸ್ಯೆಗಳಿಗೆ ರಾಮಬಾಣದಂತೆ ವರ್ತಿಸುತ್ತೆ ಈ ಆಲಿವ್ ಆಯಿಲ್.

ಹೌದು, ಆಲಿವ್ ಎಣ್ಣೆಯನ್ನು ಇತರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ನಿಮ್ಮ ಕೂದಲಿಗೆ ಅಪ್ಲೈ ಮಾಡಿಕೊಳ್ಳುವುದರಿಂದಾಗಿ ನಿಮ್ಮ ಕೂದಲಿಗೆ ಅಗತ್ಯವಿರುವ ಪೋಷಕಾಂಶಗಳು ದೊರತು ನಿಮ್ಮ ಕೂದಲು ಆರೋಗ್ಯಪೂರ್ಣವಾಗಿ ಮತ್ತು ಮೃದುವಾಗಿ ದಟ್ಟವಾಗಿ ಬೆಳೆಯಲು ನೆರವಾಗುತ್ತದೆ.
ನಿಮ್ಮ ಕೂದಲಿಗೆ ಹೇರ್ ಮಾಸ್ಕ್ ಗಳು ಹೆಚ್ಚಾಗಿ ಎಲ್ಲಾ ಅಂಗಡಿಗಳಲ್ಲೂ ಲಭ್ಯವಿರುತ್ತೆ. ಆದರೆ ಅಂಗಡಿಯಿಂದ ತಂದು ಬಳಸುವ ಹೇರ್ ಮಾಸ್ಕ್ ಗಳು ರಾಸಾಯನಿಕ ಮಿಶ್ರಿತವಾಗಿರುತ್ತೆ ಮತ್ತು ಇದು ನಿಮ್ಮ ಕೂದಲಿಗೆ ಕೆಟ್ಟ ಪರಿಣಾಮಗಳನ್ನು ಮಾಡುವ ಸಾಧ್ಯತೆ ಇರುತ್ತೆ. ಮತ್ತು ಆಗಾಗ ಸಲೂನ್ ಗೆ ತೆರಳಿ ಟ್ರೀಟ್ ಮೆಂಟ್ ತೆಗೆದುಕೊಳ್ಳುವುದು ಕೂಡ ಕೂದಲಿನ ಆರೋಗ್ಯದ ದೃಷ್ಟಿಹಿಂತ ಹಿತವಾದುದ್ದಲ್ಲ.

ಹಾಗಾಗಿ, ಕೂದಲಿನ ಆರೋಗ್ಯ ಕಾಪಾಡಲು ಇರುವ ಉತ್ತಮ ಮಾರ್ಗವೆಂದರೆ ನೀವೇ ಸ್ವತಃ ಮನೆಯಲ್ಲಿ ಹೇರ್ ಮಾಸ್ಕ್ ಗಳನ್ನು ತಯಾರಿಸಿಕೊಳ್ಳುವುದು. ಹಾಗೆ ಹೇರ್ ಮಾಸ್ಕ್ ತಯಾರಿಸಿಕೊಳ್ಳಲು ನಾವೊಂದಿಷ್ಟು ಸಲಹೆಗಳನ್ನು ನಿಮಗೆ ನೀಡುತ್ತಿದ್ದೇವೆ. ಅದನ್ನು ತಿಳಿಯಲು ಮುಂದೆ ಓದಿ..

ಮೊಟ್ಟೆ ಮತ್ತು ಆಲಿವ್ ಆಯಿಲ್ ಮಿಶ್ರಿತ ಹೇರ್ ಮಾಸ್ಕ್..

ಮೊಟ್ಟೆಯಲ್ಲಿ ಪೋಷಕಾಂಶಗಳು ಮತ್ತು ಪೋಟ್ರೀನ್ ಗಳು ಇರುತ್ತೆ. ಇವು ನಿಮ್ಮ ಕೂದಲನ್ನು ಮತ್ತಷ್ಟು ಬಲಿಷ್ಟಗೊಳಿಸಲು ನೆರವಾಗುತ್ತೆ. ಮೊಟ್ಟೆಯ ಬಿಳಿ ಭಾಗದಲ್ಲಿ ಎಝೈಮ್ಸ್ ಇರುತ್ತೆ. ಅದು ನಿಮ್ಮ ಕೂದಲಿನಲ್ಲಿರುವ ಹೆಚ್ಚಿನ ಎಣ್ಣೆಜಿಡ್ಡಿನಂಶವನ್ನು ಹೊರತೆಗೆಯುತ್ತೆ ಮತ್ತು ಕೂದಲಿಗೆ ಹೊಳಪನ್ನು ನೀಡುತ್ತೆ. ರಿಚ್ ಫ್ಯಾಟಿ ಆಸಿಡ್ ಗಳು ಕೂದಲಿಗೆ ಹೊಸತನವನ್ನು ಕೊಟ್ಟು ಹೊಳಪು ನೀಡುತ್ತೆ. ಈ ಮಿಶ್ರಣ ಕೂದಲಿಗೆ ಮೃದುತ್ವವನ್ನು ಕರುಣಿಸುತ್ತೆ.

. ಬೇಕಾಗುವ ಸಾಮಗ್ರಿಗಳು :

. ಶುಷ್ಕ ಕೂದಲಿನವರಿಗೆ : 2 ಮೊಟ್ಟೆಯ ಅರಿಶಿನ ಭಾಗ
. ಎಣ್ಣೆ ಕೂದಲಿನವರಿಗೆ : 2 ಮೊಟ್ಟೆಯ ಬಿಳಿ ಭಾಗ
. ನಾರ್ಮಲ್ ಕೂದಲಿನವರಿಗೆ : 1 ಮೊಟ್ಟೆ
. 2 ಟೇಬಲ್ ಸ್ಪೂನ್ ಆಲಿವ್ ಆಯಿಲ್
. ಅಗಲ ಹಲ್ಲಿನ ಬಾಚಣಿಗೆ

ಮಾಡುವ ವಿಧಾನ :

. ಬೇರೆ ಬೇರೆ ವಿಧಧ ಕೂದಲು ಬೇರೆ ಬೇರೆ ರೀತಿಯ ಚಿಕಿತ್ಸೆಗಳನ್ನು ಬಯಸುತ್ತೆ. ನಿಮ್ಮ ಕೂದಲು ಯಾವ ರೀತಿಯದ್ದು ಎಂದು ಪರಿಗಣಿಸಿ ನೀವು ಚಿಕಿತ್ಸೆಗೆ ಮುಂದಾಗಬೇಕು. ಮೇಲೆ ತಿಳಿಸಿದಂತೆ ಮೊಟ್ಟೆಯನ್ನು ಆಯ್ಕೆ ಮಾಡಿ
. ನಿಮ್ಮದು ಡ್ರೈ ಹೇರ್ ಆದರೆ ಮೊಟ್ಟೆಯ ಅರಿಶಿನ ಭಾಗವನ್ನು ಬಿಳಿಭಾಗದಿಂದ ಸಪರೇಟ್ ಮಾಡಿ ತೆಗೆದುಕೊಳ್ಳಿ. ಅದನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಒಂದು ವೇಳೆ ನಿಮ್ಮ ಎಣ್ಣೆಜಿಡ್ಡಿನಂತ ಕೂದಲಾಗಿದ್ರೆ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತೆಗೆದುಕೊಳ್ಳಿ ಮತ್ತು ಅದನ್ನು ಒಂದು ಸಪರೇಟ್ ಬೌಲ್ ಗೆ ಹಾಕಿಕೊಳ್ಳಿ.
. ನಂತರ ನಿಮ್ಮ ಕೂದಲಿಗೆ ಅನುಸಾರವಾದ ಮೊಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಎರಡು ಸ್ಪೂನ್ ಆಲಿವ್ ಎಣ್ಣೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಕ್ರೀಮ್ ನಂತಹ ಪೇಸ್ಟ್ ತಯಾರಿಸಿಕೊಳ್ಳಿ
. ನಿಮ್ಮದು ಉದ್ದ ಕೂದಲಾಗಿದ್ರೆ ಇನ್ನೆರಡು ಸ್ಪೂನ್ ಆಲಿವ್ ಎಣ್ಣೆಯನ್ನು ಬೆರೆಸಿಕೊಳ್ಳಿ. ತೊಂದರೆಯಿಲ್ಲ

ಬಳಸುವ ವಿಧಾನ ಹೇಗೆ?

• ಈ ಮಾಸ್ಕ್ ಅಪ್ಲೈ ಮಾಡುವುದಕ್ಕೂ ಮುನ್ನ ನೀವು ನಿಮ್ಮ ಕೂದಲಿಗೆ ಶಾಂಪೂ ಮಾಡಿಕೊಳ್ಳಿ, ಆದರೆ ಕಂಡೀಷನರ್ ಬಳಸಬೇಡಿ.
• ನಿಮ್ಮ ಕೂದಲನ್ನು ದೊಡ್ಡ ಹಲ್ಲಿನ ಬಾಚಣಿಗೆ ತೆಗೆದುಕೊಂಡು ಬಾಚಿಕೊಂಡು ಪಾರ್ಟೀಷಿಯನ್ ಮಾಡಿಕೊಳ್ಳಿ. ನಂತ್ರ ಪ್ರತಿ ಕೂದಲಿಗೂ ಮಿಶ್ರಣ ತಗುಲುವಂತೆ ಅಪ್ಲೈ ಮಾಡಿಕೊಳ್ಳಿ
• ನಂತರ ಕೂದಲನ್ನು ಗಂಟಿನಂತೆ ಕಟ್ಟಿಕೊಳ್ಲಿ. ಸುಮಾರು 20 ನಿಮಿಷ ಈ ಮಿಶ್ರಣ ನಿಮ್ಮ ಕೂದಲಿನಲ್ಲಿ ಇರುವಂತೆ ನೋಡಿಕೊಳ್ಳಿ
• ತಣ್ಣನೆಯ ನೀರಿನಿಂದ ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ, ಬಿಸಿ ಅಥವಾ ಬೆಚ್ಚಗಿರುವ ನೀರನ್ನು ಬಳಸಬೇಡಿ.
• ಹೊಳೆಯುವ ಮತ್ತು ಮೃದುವಾದ ಕೂದಲು ಬೇಕು ಎಂದಾದರೆ ಇದನ್ನು ವಾರಕ್ಕೆ ಎರಡು ಬಾರಿ ಮಾಡಿ ನೋಡಿ..
• ಮಾಹಿತಿ: ಈ ಮಿಶ್ರಣ ತಣ್ಣಗಿರಬೇಕು ಇಲ್ಲದೇ ಇದ್ದರೆ ನಿಮ್ಮ ಕೂದಲು ವಾಸನೆಯಾಗುತ್ತೆ ಎಂಬುದು ನೆನಪಿರಲಿ. ಅದೇ ಕಾರಣಕ್ಕೆ ನಾವು ತಣ್ಣನೆಯ ನೀರಿನಲ್ಲಿ ಕೂದಲು ತೊಳೆಯಿರಿ ಎಂದು ಹೇಳಿರುವುದು.
• ಮೊಟ್ಟೆ ವಾಸನೆ ತೆಗೆಯಲು ಎಸೆನ್ಶಿಯಲ್ ಎಣ್ಣೆಯನ್ನು ಕೂಡ ಬಳಕೆ ಮಾಡಬಹುದು.

2. ಜೇನುತುಪ್ಪ, ವಿಟಮಿನ್ ಇ ಮತ್ತು ಆಲಿವ್ ಆಯಿಲ್ ಹೇರ್ ಮಾಸ್ಕ್ :

ಜೇನುತುಪ್ಪದಲ್ಲಿರುವ ಹಲವು ಗುಣಗಳು ನಿಮ್ಮ ಕೂದಲಿನ ಮಾಯ್ಚರ್ ನ್ನು ಕಾಪಾಡಲು ನೆರವಾಗುತ್ತೆ ಮತ್ತು ಕೂದಲು ಹೆಚ್ಚು ಸಮಯದ ವರೆಗೆ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತೆ. ಜೇನುತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳು ನಿಮ್ಮ ಸ್ಕ್ಯಾಲ್ಪ್ ನ್ನು ಆರೋಗ್ಯವಾಗಿಡಲು ಮತ್ತು ಕೂದಲಿನ ಡ್ಯಾಮೇಜನ್ನು ತಡೆಗಟ್ಟಲು ನೆರವಾಗುತ್ತೆ.ವಿಟಮಿನ್ ಇ ಕ್ಯಾಲ್ಸೂಲ್ ನಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಹೆಚ್ಚಿರುತ್ತೆ ಇದು ಡ್ರೈ ಮತ್ತು ಡ್ಯಾಮೇಜ್ ಆಗಿರುವ ಕೂದಲನ್ನು ರೀಸ್ಟೋರ್ ಮಾಡಲು ಸಹಕಾರಿಯಾಗಿದೆ. ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದ್ದು, ಕೂದಲು ಹೊಳೆಯುವಂತೆ ಮಾಡಲು ಮತ್ತು ಮೃದುತ್ವ ಪಡೆಯಲು ಈ ಮಾಸ್ಕ್ ನಿಮಗೆ ನೆರವು ನೀಡುತ್ತೆ.

ಬೇಕಾಗುವ ಸಾಮಗ್ರಿಗಳು :

• 1 ಟೇಬಲ್ ಸ್ಪೂನ್ ಜೇನುತುಪ್ಪ
• 1 ವಿಟಮಿನ್ ಇ ಕ್ಯಾಪ್ಸೂಲ್
• 3 ಟೇಬಲ್ ಸ್ಪೂನ್ ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್
• ಒಂದು ಶವರ್ ಕ್ಯಾಪ್

ಬಳಸುವ ವಿಧಾನ:

• ಒಂದು ಸ್ವಚ್ಛ ಬೌಲ್ ತೆಗೆದುಕೊಂಡು ಅದಕ್ಕೆ 1 ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು 3 ಟೇಬಲ್ ಸ್ಪೂನ್ ನಷ್ಟು ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಮತ್ತು ವಿಟಮಿನ್ ಈ ಕ್ಯಾಲ್ಪೂಲ್ ಎಣ್ಣೆಯನ್ನು ಸೇರಿಸಿ. ಕ್ಯಾಪ್ಸೂಲ್ ಓಪನ್ ಮಾಡಿ ಮತ್ತು ಮಿಶ್ರಣ ಮಾಡಿ.
• ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಮೂತ್ ಪೇಸ್ಟ್ ತಯಾರಿಸಿಕೊಳ್ಳಿ.

ಮಾಡುವ ವಿಧಾನ :

• ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ, ಕಂಡೀಷನರ್ ಬಳಸಬೇಡಿ. ಮತ್ತು ಕೂದಲು ಒಣಗಲು ಬಿಡಿ.
• ಸಣ್ಣಸಣ್ಣ ಸೆಕ್ಷನ್ ಗಳನ್ನಾಗಿ ನಿಮ್ಮ ಕೂದಲನ್ನು ಪಾರ್ಟೀಷಿಯನ್ ಮಾಡಿಕೊಳ್ಳಿ. ನಂತರ ಈ ಹೇರ್ ಮಾಸ್ಕ್ ಮಿಶ್ರಣವನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಿ. ನಿಮ್ಮ ಕೂದಲಿನ ಬೇರು ಮತ್ತು ತುದಿಯವರೆಗೂ ಈ ಮಿಶ್ರಣ ತಲುಪಬೇಕು. ಹಾಗೆ ಅಪ್ಲೈ ಮಾಡಿಕೊಳ್ಳಿ
• 60 ನಿಮಿಷ ಹಾಗೆಯೇ ಬಿಡಿ ಮತ್ತ ಶವರ್ ಕ್ಯಾಪ್ ಧರಿಸಿಕೊಂಡಿರಿ.
•ನಂತರ ಮೃದುವಾದ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲನ್ನು ತೊಳೆಯಿರಿ
• ಡ್ರೈ ಹೇರ್ ಇರುವವರು ಈ ಮಾಸ್ಕ್ ನ್ನು ವಾರಕ್ಕೆ ಎರಡು ಬಾರಿ ಬಳಸಿ
• ಎಣ್ಣೆ ಜಿಡ್ಡಿನಂತಹ ಕೂದಲಿನವರು ವಾರಕ್ಕೆ ಒಂದು ಬಾರಿ ಈ ಮಾಸ್ಕ್ ಬಳಕೆ ಮಾಡಿದರೆ ಸಾಕಾಗುತ್ತೆ.

3. ಅವಕಾಡೋ ಮತ್ತು ಆಲಿವ್ ಆಯಿಲ್ ಹೇರ್ ಮಾಸ್ಕ್

ಶ್ರೀಮಂತ ಪೋಷಕಾಂಶಗಳಾಗಿರುವ ಒಮೆಗಾ 3 ಫ್ಯಾಟಿ ಆಸಿಡ್ ಗಳು, ವಿಟಮಿನ್ ಎ, ಬಿ, ಮತ್ತು ಇ ಅಂಶಗಳು ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಅಧಿಕವಾಗಿದ್ದು ಕೂದಲಿನ ಅನೇಕ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿಯಾಗಿದೆ. ಅವಕಾಡೋ ಜೊತೆ ಆಲಿವ್ ಆಯಿಲ್ ಸೇರಿಕೊಂಡಾ ಕೂದಲಿಗೆ ಉತ್ತಮ ಮಾಯ್ಚರೈಸರ್ ನಂತೆ ಈ ಮಿಶ್ರಣ ಕೆಲಸ ಮಾಡಿ ನಿಮ್ಮ ಶುಷ್ಕ ಕೂದಲನ್ನು ನಿವಾರಿಸಲು ಇದು ನೆರವು ನೀಡುತ್ತೆ. ಅಷ್ಟೇ ಅಲ್ಲ, ಬೇರುಮಟ್ಟದಿಂದ ನಿಮ್ಮ ಕೂದಲಿನ ಆರೋಗ್ಯ ಹೆಚ್ಚಿಸಿ ಸಿಲ್ಕಿಯಾದ ಮತ್ತು ಸಾಫ್ಟ್ ಆದ ಕೂದಲನ್ನು ಪಡೆಯುವಂತೆ ಮಾಡಲು ಈ ಮಾಸ್ಕ್ ಸಹಕಾರಿ

. ಬೇಕಾಗುವ ಸಾಮಗ್ರಿಗಳು :

• 2 ಟೇಬಲ್ ಸ್ಪೂನ್ ಆಲಿವ್ ಆಯಿಲ್
• 1 ಬೆಣ್ಣೆಹಣ್ಣು
• ಒಂದು ಶವರ್ ಕ್ಯಾಪ್

ಮಾಡುವ ವಿಧಾನ :

• ಬೆಣ್ಣೆ ಹಣ್ಣಿನ ಸಿಪ್ಪೆಯನ್ನು ತೆಗೆದು ಪಲ್ಪ್ ನ್ನು ತೆಗೆದುಕೊಳ್ಳಿ ಮತ್ತು ಅದನ್ನು ಒಂದು ಬೌಲ್ ನಲ್ಲಿ ಹಾಕಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಿ. ಅದರಲ್ಲಿ ಯಾವುದೇ ಲಂಪ್ಸ್ ಗಳು ಇಲ್ಲದಂತೆ ನೋಡಿಕೊಳ್ಳಿ
• ಈಗ ಅದಕ್ಕೆ 2 ಟೇಬಲ್ ಸ್ಪೂನ್ ಆಲಿವ್ ಎಣ್ಣೆಯನ್ನು ಸೇರಿಸಿ ಅವಕಾಡೋ ಜೊತೆ ಚೆನ್ನಾಗಿ ಬೆರೆಯುವಂತೆ ಮಾಡಿ

. ಬಳಸುವ ವಿಧಾನ :

• ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ ಮತ್ತು ಕೂದಲು ಡ್ರೈ ಆಗಲು ಬಿಡಿ
• ಕೂದಲನ್ನು ಭಾಗ ಮಾಡಿಕೊಳ್ಳಿ ಮತ್ತು ಪ್ರತಿಯೊಂದು ಭಾಗಕ್ಕೂ ಚೆನ್ನಾಗಿ ತಲುಪುವಂತೆ ಮಿಶ್ರಣವನ್ನು ಅಪ್ಲೈ ಮಾಡಿ. ಕೂದಲಿನ ಬೇರುಗಳಿಗೆ ಮತ್ತು ಕೂದಲಿನ ತುದಿಯ ಭಾಗಕ್ಕೆ ಹೆಚ್ಚು ಗಮನ ಕೊಡಿ
• ಒಮ್ಮೆ ನಿಮ್ಮ ಕೂದಲಿನ ಎಲ್ಲಾ ಭಾಗಕ್ಕೂ ಮಿಶ್ರಣವನ್ನು ಹಚ್ಚಿದ ನಂತರ ಶವರ್ ಕ್ಯಾಪ್ ಬಳಸಿ ನಿಮ್ಮ ಕೂದಲನ್ನು ಕವರ್ ಮಾಡಿಕೊಳ್ಳಿ
• 45 ನಿಮಿಷ ನಿಮ್ಮ ಕೂದಲಿನಲ್ಲಿ ಈ ಮಿಶ್ರಣ ಹಾಗೆಯೇ ಇರಲಿ
• ನಂತ್ರರ ಮೃದುವಾದ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲನ್ನು ತೊಳೆಯಿರಿ
• ಹೊಳೆಯುವ ಕೂದಲನ್ನು ಪಡೆಯಲು ವಾರಕ್ಕೆ ಒಮ್ಮೆ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಿ.

4. ಮಯೋನೈಸ್ ಮತ್ತು ಆಲಿವ್ ಎಣ್ಣೆಯ ಹೇರ್ ಮಾಸ್ಕ್ :

ಮಯನೈಸ್ ನ್ನು ಮೊಟ್ಟೆಯ ಅರಿಶಿನ ಭಾಗ , ವಿನೆಗರ್ ಮತ್ತು ಎಣ್ಣೆಯನ್ನು ಬಳಸಿ ತಯಾರಿಸಲಾಗಿರುತ್ತೆ. ಇದು ನಿಮ್ಮ ಕೂದಲಿಗೆ ಮಾಯ್ಚರೈಸ್ ಮಾಡಲು ಮತ್ತು ಕೂದಲಿಗೆ ನ್ಯೂರಿಷಸ್ ಮಾಡಲು ಬಹಳ ಸಹಕಾರಿ. ಇದರಲ್ಲಿರುವ ಅಮೈನೋ ಆಸಿಡ್ ಮತ್ತು ಎಲ್-ಸಿಸ್ಟೈನ್ ಅಂಶಗಳು ಕೂದಲಿನ ಆರೋಗ್ಯಕರ ಬೆಳವಣಿಗೆಗೆ ನೆರವಾಗುತ್ತೆ. ಮಯೋನೈಸ್ ನಿಮ್ಮ ಕೂದಲಿಗೆ ಅತ್ಯುತ್ತಮವಾದ ಕಂಡೀಷನರ್ ನಂತೆ ವರ್ತಿಸುತ್ತೆ. ಹಾಗಾಗಿ ಕೂದಲಿನ ಮಾಯ್ಚರ್ ನ್ನು ಕಾಪಾಡಲು ಜೊತೆಗೆ ಕೂದಲು ಶುಷ್ಕವಾಗುವುದನ್ನು ತಡೆಯಲು ಇದು ಸಹಕಾರಿಯಾಗಿರುತ್ತೆ. ಶುಷ್ಕ ಮತ್ತು ಡ್ಯಾಮೇಜ್ ಆಗಿರುವ ಕೂದಲಿನ ನಿರ್ವಹಣೆಗೆ ಮಯೋನೈಸ್ ಮತ್ತು ಆಲಿವ್ ಎಣ್ಣೆ ಬಳಸಿ ತಯಾರಿಸುವ ಮಾಸ್ಕ್ ಅತ್ಯತ್ತುಮವಾದುದ್ದಾಗಿದೆ.

. ಬೇಕಾಗುವ ಸಾಮಗ್ರಿಗಳು :

• 2 ಟೇಬಲ್ ಸ್ಪೂನ್ ಆಲಿವ್ ಎಣ್ಣೆ
• 2 ಟೇಬಲ್ ಸ್ಪೂನ್ ನಷ್ಟು ಮಯೋನೈಸ್ ಫ್ಯಾಟ್
• ಒಂದು ಶವರ್ ಕ್ಯಾಪ್

ಮಾಡುವ ವಿಧಾನ :

•ಒಂದು ಸ್ವಚ್ಛವಾದ ಬೌಲ್ ನಲ್ಲಿ 2 ಟೇಬಲ್ ಸ್ಪೂನ್ ಆಲಿವ್ ಎಣ್ಣೆ ಮತ್ತು 2 ಟೇಬಲ್ ಸ್ಪೂನ್ ಫುಲ್ ಫ್ಯಾಟ್ ಮಯೋನೈಸ್ ನ್ನು ಮಿಕ್ಸ್ ಮಾಡಿ.
• ಎರಡನ್ನೂ ಚೆನ್ನಾಗಿ ಕಲಸಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ.

ಬಳಸುವ ವಿಧಾನ ವಿಧಾನ :

• ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ ಮತ್ತು ಡ್ರೈ ಆಗಲು ಬಿಡಿ.
• ಕೂದಲನ್ನು ಬಾಚಣಿಗೆ ಬಳಸಿ ಬಾಚಿ, ಪಾರ್ಟೀಷಿಯನ್ ಮಾಡಿಕೊಳ್ಳಿ. ಮತ್ತು ಅದಕ್ಕೆ ಈ ಮಿಶ್ರಣವನ್ನು ಅಪ್ಲೈ ಮಾಡಿ. ನಿಮ್ಮ ಕೂದಲಿನ ಎಲ್ಲಾ ಭಾಗಕ್ಕೂ ಈ ಮಿಶ್ರಣವನ್ನು ಹಚ್ಚಲಾಗಿದ್ಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಕೂದಲಿನ ಬೇರು ಮತ್ತು ತುದಿಯ ಭಾಗಕ್ಕೆ ಹೆಚ್ಚು ಮಹತ್ವ ನೀಡಿ.
. 30 ನಿಮಿಷ ಈ ಮಿಶ್ರಣ ಕೂದಲಿನಲ್ಲಿ ಹಾಗೆಯೇ ಇರಲಿ. ಶವರ್ ಕ್ಯಾಪ್ ಬಳಸಿ ಜೋಪಾನ ಮಾಡಿ.
• ಮೃದುವಾದ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲನ್ನು ತೊಳೆಯಿರಿ
• ವಾರಕ್ಕೆ ಎರಡು ಬಾರಿ ಈ ಮಾಸ್ಕ್ ನ್ನು ಕೂದಲಿಗೆ ಬಳಸಿ. ಡ್ರೈ ಹೇರ್ ಇರುವವರಿಗೆ ಇದು ಅತ್ಯದ್ಭುತವಾದ ಹೇರ್ ಮಾಸ್ಕ್ ಆಗಿದೆ. ಶುಷ್ಕ ಕೂದಲಲ್ಲದೇ ಇರುವವರು ವಾರಕ್ಕೆ ಒಮ್ಮೆ ಈ ಹೇರ್ ಮಾಸ್ಕ್ ಬಳಸಿದರೆ ಸಾಕಾಗುತ್ತೆ. ಆ ಮೂಲಕ ರೇಷ್ಮೆಯಂತ ಕೂದಲನ್ನು ಪಡೆಯಲು ಇದು ಸಹಕಾರಿಯಾಗಿದೆ.

5. ಬಾಳೆಹಣ್ಣು ಮತ್ತು ಆಲಿವ್ ಎಣ್ಣೆಯ ಹೇರ್ ಮಾಸ್ಕ್ :

ಬಾಳೆಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಕೂದಲನ್ನು ಹಾಳು ಮಾಡುವ ಫ್ರೀ ರ್ಯಾಡಿಕಲ್ಸ್ ಗಳ ವಿರುದ್ಧ ಹೋರಾಡುತ್ತೆ ಮತ್ತು ಕೂದಲಿಗೆ ಹೊಳಪನ್ನು ನೀಡುತ್ತೆ. ಕೂದಲುದುರುವಿಕೆಯನ್ನು ನಿಯಂತ್ರಿಸಲು ಬಾಳೆಹಣ್ಣು ನೆರವು ನೀಡುತ್ತೆ ಯಾಕೆಂದರೆ ಬಾಳೆಹಣ್ಣಿನಲ್ಲಿರುವ ಪೊಟಾಷಿಯಂ ಅಂಶವಿದ್ದು ಇದರಲ್ಲಿರುವ ಫ್ಯಾಟಿ ಆಯಿಲ್ಸ್ ಗಳು ಮಾಯ್ಚಿರ್ ಕಡಿಮೆಯುವುದನ್ನು ತಡೆಯುತ್ತೆ.ಡ್ರೈ ಮತ್ತು ಡ್ಯಾಮೇಜ್ ಆಗಿರುವ ಕೂದಲಿಗೆ ಈ ಹೇರ್ ಮಾಸ್ಕ್ ಬಹಳ ಉತ್ತಮವಾದದ್ದು.

. ಬೇಕಾಗುವ ಸಾಮಗ್ರಿಗಳು :

• 1 ಟೇಬಲ್ ಸ್ಪೂನ್ ಆಲಿವ್ ಆಯಿಲ್
• 1 ಸಿಪ್ಪೆ ಸುಲಿದ ಬಾಳೆಹಣ್ಣು

ಮಾಡುವ ವಿಧಾನ:

• ಒಂದು ಸಿಪ್ಪೆ ತೆಗೆದ ಬಾಳೆಹಣ್ಣನ್ನು ಫೋರ್ಕ್ ಬಳಸಿ ಇಲ್ಲವೇ ಬ್ಲೆಂಡರ್ ಬಳಸಿ ಪೇಸ್ಟ್ ಮಾಡಿಕೊಳ್ಳಿ.
• ಅದಕ್ಕೆ 1 ಟೇಬಲ್ ಸ್ಪೂನ್ ಆಲಿವ್ ಎಣ್ಣೆಯನ್ನು ಸೇರಿಸಿ, ಚೆನ್ನಾಗಿ ಎರಡೂ ಕೂಡಿಕೊಳ್ಳುವಂತೆ ಬೆರೆಸಿ

. ಬಳಸುವ ವಿಧಾನ :

• ನಿಮ್ಮ ಕೂದಲನ್ನು ಶಾಂಪೂವಿನಿಂದ ತೊಳೆಯಿರಿ ಮತ್ತು ಅದನ್ನು ಡ್ರೈ ಆಗಲು ಬಿಡಬೇಡಿ.
• ಹೇರ್ ಮಾಸ್ಕ್ ನ್ನು ಹಚ್ಚಿಕೊಳ್ಳಿ ಮತ್ತು ಶವರ್ ಕ್ಯಾಪ್ ನಿಂದ ಕವರ್ ಮಾಡಿಕೊಳ್ಳಿ.
• 30 ನಿಮಿಷ ನಿಮ್ಮ ಕೂದಲಿನಲ್ಲಿ ಈ ಹೇರ್ ಮಾಸ್ಕ್ ಹಾಗೆಯೇ ಇರಲಿ.
• ಪುನಃ ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ
• ವಾರಕ್ಕೆ ಒಮ್ಮೆ ಈ ಹೇರ್ ಮಾಸ್ಕ್ ನ್ನು ಬಳಕೆ ಮಾಡಿ ಇದರಿಂದ ಮೃದುವಾದ ಮತ್ತು ಮೆತ್ತನೆಯ ಕೂದಲನ್ನು ಪಡೆಯಲು ಸಾಧ್ಯವಾಗುತ್ತೆ.

ನೆನಪಿನಲ್ಲಿಡಬೇಕಾದ ಸಲಹೆಗಳು: ಯಾವಾಗಲೂ ಸಲ್ಪೇಟ್ ನಿಂದ ಮುಕ್ತವಾಗಿರುವ ಶಾಂಪೂವನ್ನೇ ಬಳಕೆ ಮಾಡಿ ಮತ್ತು ಅದರಿಂದ ಸ್ಕ್ಯಾಲ್ಪ್ ಮತ್ತು ಕೂದಲನ್ನು ತುಂಬಾ ಮೃದುವಾಗಿ ತಿಕ್ಕಿಕೊಳ್ಳಿ. ಯಾವಾಗಲೂ ತಣ್ಣನೆಯ ನೀರನ್ನೇ ಕೂದಲು ತೊಳೆಯಲು ಬಳಸಿ. ಕೂದಲನ್ನು ಡ್ರೈ ಆಗಲು ಗಾಳಿಗೆ ಬಿಡಿ. ಡ್ರೈಯರ್ ಬಳಸಬೇಡಿ ಒಂದು ವೇಳೆ ಬಳಸುತ್ತೀರಾದರೆ ಕೂಲ್ ಡ್ರೈಯರ್ ನ್ನು ಬಳಸಿ. ಟಬೆಲ್ ಡ್ರೈ ಮಾಡುವುದು ಕೂಡ ಅಷ್ಟು ಸೂಕ್ತವಲ್ಲ. ಹೇರ್ ಮಾಸ್ಕ್ ಯಾವುದೇ ಇರಲಿ, ಅದನ್ನು ಅಪ್ಲೈ ಮಾಡುವ ಮುನ್ನ ಒಮ್ಮೆ ಕೂದಲನ್ನು ತೊಳೆಯುವುದನ್ನು ಮರೆಯಬೇಡಿ. ಇದು ನಿಮ್ಮ ಕೂದಲಿನ ಕೊಳೆಯನ್ನು ತೆಗೆಯಲು ಮತ್ತು ಸ್ಕಾಲ್ಪ್ ಮತ್ತು ಕೂದಲಿನಲ್ಲಿ ಯಾವುದೇ ಮಾಸ್ಕ್ ನ ಅಂಶಗಳು ಅಂಟದಂತೆ ರಕ್ಷಿಸಲು ನೆರವಾಗುತ್ತೆ.

English summary

Homemade Olive Oil Masks For Soft Hair

Olive oil is known as "Liquid Gold," and whoever coined that name surely chose the perfect name for it. Olive oil has a lot of benefits, both internally and externally. If consumed, it helps to prevent heart stroke, maintains healthy cholesterol level, protects the liver, etc. This oil is used in medicine, cooking, cosmetics, soaps, fuels for traditional lamps and other purposes. Olive oil is good for the skin and hair as well. This magical oil helps to remove dandruff, controls split ends, softens the hair, detangles the hair, accelerates hair growth, removes frizz, treats irritable scalp and adds shine and volume to the hair.
X
Desktop Bottom Promotion