For Quick Alerts
ALLOW NOTIFICATIONS  
For Daily Alerts

ಕಾಂತಿಯುತ ಕೂದಲಿಗಾಗಿ ಕ್ಯಾರೆಟ್ ಹೇರ್ ಮಾಸ್ಕ್ ಬಳಸಿ ನೋಡಿ

|

ಕ್ಯಾರೆಟ್ (ಗಜ್ಜರಿ) ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ನಮಗೆಲ್ಲ ತಿಳಿದೇ ಇದೆ. ಕಣ್ಣು ಹಾಗೂ ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗುವ ವಿಟಾಮಿನ್‌ಗಳು ಕ್ಯಾರೆಟ್‌ನಲ್ಲಿ ಯಥೇಚ್ಛವಾಗಿರುತ್ತವೆ. ಆದರೆ ನಮ್ಮ ಕೇಶರಾಶಿಯ ಆರೋಗ್ಯಕ್ಕೂ ಕ್ಯಾರೆಟ್ ತುಂಬಾ ಉಪಯೋಗಕಾರಿಯಾಗಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಕೂದಲ ಬೆಳವಣಿಗೆಗೆ ಅಗತ್ಯವಾಗಿರುವ ವಿಟಾಮಿನ್ ಹಾಗೂ ಖನಿಜದ ಅಂಶಗಳು ಸಹ ಕ್ಯಾರೆಟ್‌ನಲ್ಲಿ ಇವೆ ಎಂಬುದು ಗೊತ್ತಿರಲಿ.

ಕೂದಲು ಉದುರುವಿಕೆಯನ್ನು ತಡೆದು, ಒರಟು ಹಾಗೂ ಸೀಳು ಕೂದಲಿನ ಸಮಸ್ಯೆ ನಿವಾರಿಸಲು ಕ್ಯಾರೆಟ್ ಸಹಕಾರಿಯಾಗಿದೆ. ಕೂದಲು ಆರೋಗ್ಯಕರವಾಗಿದ್ದರೆ ಮಾತ್ರ ಅವು ಮೃದುವಾಗಿ ಹೊಳಪಿನಿಂದ ಕೂಡಿರಲು ಸಾಧ್ಯ. ಕ್ಯಾರೆಟ್‌ನಿಂದ ನಿಮ್ಮ ಕೂದಲು ಆರೋಗ್ಯವನ್ನು ಖಂಡಿತವಾಗಿಯೂ ವೃದ್ಧಿಸಿಕೊಳ್ಳಬಹುದು. ಯಾವ್ಯಾವ ಕ್ಯಾರೆಟ್ ಮಾಸ್ಕ್ ಗಳನ್ನು ಹಚ್ಚುವ ಮೂಲಕ, ಒರಟು ಕೂದಲಿನಿಂದ ಮುಕ್ತರಾಗಿ ಆರೋಗ್ಯಕರ ಕೇಶರಾಶಿ ನಮ್ಮದಾಗಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ.. ವಿವಿಧ ಕ್ಯಾರೆಟ್ ಮಾಸ್ಕ್ ತಯಾರಿಸುವ ವಿಧಾನಗಳು:

do carrot hair mask

ಕ್ಯಾರೆಟ್ ಹಾಗೂ ಅವೊಕ್ಯಾಡೊ ಹೇರ್ ಮಾಸ್ಕ್

ಹಾಳಾದ ಹಾಗೂ ಸೀಳು ಕೂದಲು ಆರೋಗ್ಯವಾಗಿಸಲು ಅಗತ್ಯವಾಗಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಅವೊಕ್ಯಾಡೊ ಹಣ್ಣಿನಲ್ಲಿರುತ್ತವೆ. ಇದನ್ನು ಕ್ಯಾರೆಟ್ ಜೊತೆ ಉಪಯೋಗಿಸುವುದರಿಂದ ಕೂದಲಿನ ಆರೋಗ್ಯ ಸುಧಾರಿಸಿ, ಮೃದುವಾದ ಕಾಂತಿಯುತ ಕೇಶರಾಶಿ ನಿಮ್ಮದಾಗುತ್ತದೆ.

ಬೇಕಾಗುವ ಸಾಮಗ್ರಿಗಳು :
*2ಕ್ಯಾರೆಟ್
*1 ಹಣ್ಣಾದ ಅವೊಕ್ಯಾಡೊ
*1 ಟೇಬಲ್ ಚಮಚೆ ಜೇನು
*2 ಟೇಬಲ್ ಚಮಚೆ ಆಲಿವ್ ಎಣ್ಣೆ

ಕ್ಯಾರೆಟ್ ಸೇವಿಸಿದರೆ ಈ 12 ಲಾಭಗಳು ಗ್ಯಾರಂಟಿ!

ತಯಾರಿಸಿ ಬಳಸುವ ವಿಧಾನ :
* ಕ್ಯಾರೆಟ್ ಮೇಲಿನ ಸಿಪ್ಪೆ ಸುಲಿದು ಅದನ್ನು ಒಂದು ಹಣ್ಣಾದ ಅವೊಕ್ಯಾಡೊದೊಂದಿಗೆ ಮಿಕ್ಸಿ ಮಾಡಿಕೊಳ್ಳಿ.
* ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ.
* ಮಿಶ್ರಣಕ್ಕೆ ಒಂದು ಟೇಬಲ್ ಚಮಚೆ ಜೇನು ತುಪ್ಪ, ಟೇಬಲ್ ಚಮಚೆ ಆಲಿವ್ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
*ಈ ಮಿಶ್ರಣವನ್ನು ಕೂದಲು ಹಾಗೂ ನೆತ್ತಿಗೆ ಹಚ್ಚಿ ಬೆರಳುಗಳಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ.
* ಸುಮಾರು 3೦ ನಿಮಿಷ ಹಾಗೆಯೇ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ಸಲ್ಫೇಟ್ ರಹಿತ ಶಾಂಪೂ ಬಳಸಿ ತೊಳೆದುಕೊಳ್ಳಿ.
* ಉತ್ತಮ ಫಲಿತಾಂಶ ಪಡೆಯಲು ತಿಂಗಳಿಗೆ ಎರಡು ಬಾರಿ ಈ ಮಾಸ್ಕ್ ಬಳಸಿ.

ಕ್ಯಾರೆಟ್ ಹಾಗೂ ತೆಂಗಿನೆಣ್ಣೆ ಮಾಸ್ಕ್

ಕೂದಲು ಹಾಗೂ ನೆತ್ತಿಗೆ ತೇವಾಂಶ ಒದಗಿಸುವ ಅಂಶಗಳು ತೆಂಗಿನೆಣ್ಣೆಯಲ್ಲಿವೆ. ಈ ಮಾಸ್ಕ್ ಬಳಕೆಯಿಂದ ಒಣ ನೆತ್ತಿ ಸಮಸ್ಯೆ ಹಾಗೂ ನೆತ್ತಿಯ ಕೆರೆತವನ್ನು ಗುಣಪಡಿಸಬಹುದಾಗಿದೆ.

ಬೇಕಾಗುವ ಸಾಮಗ್ರಿಗಳು :
* ಕ್ಯಾರೆಟ್
*ಟೇಬಲ್ ಚಮಚೆ ತೆಂಗಿನೆಣ್ಣೆ

ತಯಾರಿಸಿ ಬಳಸುವ ವಿಧಾನ :
* ಒಂದು ಮಧ್ಯಮ ಗಾತ್ರದ ಕ್ಯಾರೆಟ್ ಅನ್ನು ನುಣ್ಣಗೆ ಮಿಕ್ಸಿ ಮಾಡಿ ಪೇಸ್ಟ್ ಮಾಡಿಟ್ಟುಕೊಳ್ಳಿ.
* ಇದನ್ನು ಬ್ಲೆಂಡರ್‌ಗೆ ಹಾಕಿ ೨ ಟೇಬಲ್ ಚಮಚೆ ತೆಂಗಿನೆಣ್ಣೆ ಹಾಕಿ.
* ತೆಂಗಿನೆಣ್ಣೆ ಚಳಿಗೆ ಗಟ್ಟಿಯಾಗಿದ್ದರೆ ಬಳಸುವ ಮೊದಲು ಬಿಸಿ ಮಾಡಿ.
* ಕ್ಯಾರೆಟ್ ಹಾಗೂ ತೆಂಗಿನೆಣ್ಣೆ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ.
*ಇದನ್ನು ಕೂದಲು ಹಾಗೂ ನೆತ್ತಿಗೆ ಹಚ್ಚಿಕೊಂಡು ಕೆಲ ನಿಮಿಷಗಳವರೆಗೆ ನಿಧಾನವಾಗಿ ಮಸಾಜ್ ಮಾಡಿ.
*20 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ.
* ವಾರಕ್ಕೊಮ್ಮೆ ಈ ಮಾಸ್ಕ್ ಅನ್ನು ಬಳಸುವುದು ಉತ್ತಮ.

ಕ್ಯಾರೆಟ್ ಹಾಗೂ ಮೊಸರಿನ ಮಾಸ್ಕ್

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ನಿಂದ ನೆತ್ತಿಯ ಮೇಲಿನ ಹೆಚ್ಚುವರಿ ಜಿಡ್ಡು ಹಾಗೂ ಧೂಳು ನಿವಾರಣೆಯಾಗುತ್ತದೆ. ಅಲ್ಲದೆ ಇದರಿಂದ ನಿಷ್ಕ್ರಿಯ ಜೀವಕೋಶಗಳು ಪುನಶ್ಚೇತನಗೊಳ್ಳುತ್ತವೆ.

ಬೇಕಾಗುವ ಸಾಮಗ್ರಿಗಳು :
*2 ಕ್ಯಾರೆಟ್
*2 ಟೇಬಲ್ ಚಮಚ ಮೊಸರು

ತಯಾರಿಸಿ ಬಳಸುವ ವಿಧಾನ
* ಕ್ಯಾರೆಟ್ ಸಿಪ್ಪೆ ತೆಗೆದು ಚಿಕ್ಕ ತುಂಡುಗಳಾಗಿ ಕತ್ತರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
*ಈ ಕ್ಯಾರೆಟ್ ಪೇಸ್ಟ್ ಅನ್ನು ಒಂದು ಬಟ್ಟಲಿಗೆ ವರ್ಗಾಯಿಸಿ.
* ಕ್ಯಾರೆಟ್ ಪೇಸ್ಟ್‌ಗೆ ೨ ಟೇಬಲ್ ಚಮಚೆ ಸುಗಂಧಿತವಲ್ಲದ ಸಾದಾ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ತಯಾರಿಸಿದ ಕ್ಯಾರೆಟ್-ಮೊಸರು ಮಾಸ್ಕ್ ಅನ್ನು ಕೂದಲು ಹಾಗೂ ನೆತ್ತಿಗೆ ಹಚ್ಚಿಕೊಂಡು ಬೆರಳುಗಳಿಂದ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ.
*ಇದನ್ನು ಅರ್ಧ ಗಂಟೆ ಇರಲು ಬಿಟ್ಟು ನಂತರ ಉಗುರು ಬೆಚ್ಚನೆಯ ನೀರಿನಿಂದ ಸಾಮಾನ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
* ಶೀಘ್ರ ಹಾಗೂ ಪರಿಣಾಮಕಾರಿ ಫಲಿತಾಂಶಕ್ಕಾಗಿ ವಾರಕ್ಕೊಮ್ಮೆ ಈ ಮಾಸ್ಕ್ ಉಪಯೋಗಿಸಬಹುದು.

ಕ್ಯಾರೆಟ್, ಲಿಂಬೆ ಹಾಗೂ ಈರುಳ್ಳಿ ಜ್ಯೂಸ್ ಹೇರ್ ಮಾಸ್ಕ್

ಕೂದಲುದುರುವಿಕೆ ತಡೆಗಟ್ಟಿ, ಕೂದಲನ್ನು ಸೊಂಪಾಗಿಸಲು ಈರುಳ್ಳಿ ಜ್ಯೂಸ್ ಸಹಕಾರಿಯಾಗಿದೆ. ಲಿಂಬೆ ರಸವು ಹೊಟ್ಟು ನಿವಾರಿಸಿ, ನೆತ್ತಿಗೆ ತಗಲಿರಬಹುದಾದ ಸೋಂಕನ್ನು ತಡೆಗಟ್ಟುತ್ತದೆ.

ಬೇಕಾಗುವ ಸಾಮಗ್ರಿಗಳು
*1ಕ್ಯಾರೆಟ್
*1 ಈರುಳ್ಳಿ
*2 ರಿಂದ 3 ಟೇಬಲ್ ಚಮಚೆ ಲಿಂಬೆ ರಸ
*2 ಟೇಬಲ್ ಚಮಚೆ ಆಲಿವ್ ಎಣ್ಣೆ

ತಯಾರಿಸಿ ಬಳಸುವ ವಿಧಾನ
* ಕ್ಯಾರೆಟ್ ಹಾಗೂ ಈರುಳ್ಳಿಗಳನ್ನು ಚಿಕ್ಕ ತುಂಡುಗಳಾಗಿ ಹೆಚ್ಚಿ ಮಿಕ್ಸಿಗೆ ಹಾಕಿ ನುಣ್ಣನೆಯ ಪೇಸ್ಟ್ ಮಾಡಿಕೊಳ್ಳಿ.
* ಲಿಂಬೆ ಹಣ್ಣು ಕತ್ತರಿಸಿ ಕೆಲ ಹನಿ ಲಿಂಬೆ ರಸ ಹಾಗೂ ೨ ಟೇಬಲ್ ಚಮಚೆ ಆಲಿವ್ ಎಣ್ಣೆಯನ್ನು ಕ್ಯಾರೆಟ್ ಪೇಸ್ಟ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಬೆರಳುಗಳಿಂದ ಕೂದಲು ಹಾಗೂ ನೆತ್ತಿಗೆ ಈ ಮಾಸ್ಕ್ ಅನ್ನು ಹಚ್ಚಿಕೊಳ್ಳಿ.
* 20 ನಿಮಿಷಗಳ ನಂತರ ನೀರಿನಿಂದ ತೊಳೆದುಕೊಳ್ಳಿ.
* ಈ ವಿಧಾನವನ್ನು ವಾರಕ್ಕೆರಡು ಬಾರಿ ಬಳಸಬಹುದು. ಈ ಮಾಸ್ಕ್ ನಿಂದ ಕೂದಲು ಸೊಂಪಾಗುವುದಷ್ಟೇ ಅಲ್ಲದೆ ಕೂದಲುದುರುವಿಕೆ ಸಹ ಕಡಿಮೆಯಾಗುತ್ತದೆ.

English summary

Homemade Carrot hair Masks For Smooth Hair

We all know the health and skin benefits that carrots offer. But did you know that carrots can also do wonders for your hair? The essential vitamins and minerals that carrots contain boost hair growth. Apart from reducing hair fall it also helps in getting rid of any kind of damage like frizzy hair and split ends. Your hair becomes soft and smooth only if it is healthy and carrots make this job easier.
X
Desktop Bottom Promotion