For Quick Alerts
ALLOW NOTIFICATIONS  
For Daily Alerts

ಹೌದು!! ಕರಿಬೇವಿನ ಎಲೆಗಳ ಉಪಯೋಗ ತಿಳಿದರೆ ಅಚ್ಚರಿಗೊಳ್ಳುವಿರಿ!

|

ಹೆಣ್ಣು ಸೌಂದರ್ಯಕ್ಕೆ ವಿಷಯಕ್ಕೆ ಬಂದಾಗ ಹೆಚ್ಚಿನ ಅಸ್ಥೆ ಮತ್ತು ಕಾಳಜಿಯನ್ನು ತೋರುತ್ತಾರೆ. ತಮ್ಮ ತ್ವಚೆ ಮತ್ತು ಕೂದಲಿನ ಸ್ವಾಸ್ಥ್ಯಕ್ಕಾಗಿ ಹೆಚ್ಚಿನ ಹಣ ವಿನಯೋಗ ಮತ್ತು ಬ್ಯೂಟಿಪಾರ್ಲರ್‌ಗಳಿಗೆ ಭೇಟಿ, ಜಾಹೀರಾತುಗಳಲ್ಲಿ ಬರುವ ವಿಧ ವಿಧದ ಉತ್ಪನ್ನಗಳನ್ನು ಬಳಸುವುದು ಇವೇ ಮೊದಲಾದ ಚಟುವಟಿಕೆಗಳನ್ನು ಅವಲಂಬಿಸುತ್ತಾರೆ. ಆದರೆ ಯಾರೂ ಕೂಡ ಮನೆಯಲ್ಲೇ ಸುಲಭವಾಗಿ ದೊರೆಯುವ ಮತ್ತು ಯಾವುದೇ ಹಾನಿಗಳಿಲ್ಲದ ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಗೊಡವೆಗೇ ಹೋಗುವುದಿಲ್ಲ. ಹೇಳಿ ಕೇಳಿ ಇದು ಬೇಸಿಗೆ ಕಾಲ ಈ ಸಮಯದಲ್ಲಿ ನೀವು ಕೂದಲು ಮತ್ತು ತ್ವಚೆಯ ಕಾಳಜಿಯನ್ನು ಉತ್ತಮವಾಗಿ ಮಾಡಬೇಕಾಗುತ್ತದೆ.

ಅದರಲ್ಲೂ ರಾಸಾಯನಿಕಗಳಿಗಿಂತಲೂ ನೈಸರ್ಗಿಕ ಉತ್ಪನ್ನಗಳಿಂದ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಬೇಕಾಗಿದೆ. ನಮ್ಮ ಇಂದಿನ ಲೇಖನದಲ್ಲಿ ನಾವು ಕರಿಬೇವನ್ನು ಬಳಸಿಕೊಂಡು ಕೂದಲಿನ ಸಮೃದ್ಧಿಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ದಟ್ಟವಾದ ಹೊಳೆಯುವ ಕೇಶರಾಶಿಯನ್ನು ಪಡೆಯುವ ಹಂಬಲ ಯಾವ ಹುಡುಗಿಗೆ ತಾನೇ ಇರುವುದಿಲ್ಲ ಹೇಳಿ? ಆದರೆ ಇಂತಹ ಸುಂದರ ಕೂದಲನ್ನು ನೀವು ಕೂಡ ಪಡೆಯಬಹುದಾಗಿದೆ ಅದಕ್ಕಾಗಿ ನೀವು ನಿಮ್ಮ ಸ್ವಲ್ಪ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಿದರೆ ಸಾಕು ಅಷ್ಟೇ.

ಅಡುಗೆಗೆ ಪ್ರಧಾನವಾಗಿ ಬಳಸುವ ಕರಿಬೇವು ನಿಮ್ಮ ಕೂದಲಿನ ಸ್ವಾಸ್ಥ್ಯದಲ್ಲಿ ಕಮಾಲನ್ನೇ ಮಾಡುತ್ತದೆ. ಅಂತೆಯೇ ತ್ವಚೆಯ ಸಂಕ್ಷಣೆಗೂ ಇದನ್ನು ಬಳಸಬಹುದಾಗಿದೆ. ಇದು ಹೆಚ್ಚು ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್‌ಗಳನ್ನು ತನ್ನಲ್ಲಿ ಒಳಗೊಂಡಿದ್ದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಹಾನಿಗೊಳಗಾದ ಕೂದಲಿಗೆ ಮರುಜೀವ ನೀಡುತ್ತದೆ. ಕರಿಬೇವಿನಲ್ಲಿ ಉತ್ಕರ್ಷಣ ನಿರೋಧಿ ಅಂಶಗಳಿದ್ದು ಇದು ಅಮಿನೋ ಆಸಿಡ್ ಅನ್ನು ಒಳಗೊಂಡಿದೆ. ಇದು ಕೂದಲು ಉದುರುವುದನ್ನು ತಡೆಯುತ್ತದೆ. ಹಾಗಿದ್ದರೆ ಕೆಳಗಿನ ಅಂಶಗಳ ಮೂಲಕ ಕರಿಬೇವು ನಿಮ್ಮ ಕೂದಲಿಗೆ ಹೇಗೆ ಕಮಾಲನ್ನು ಮಾಡುತ್ತದೆ ಎಂಬುದನ್ನು ಅರಿಯೋಣ....

ಕೂದಲಿನ ಬೆಳವಣಿಗೆಗೆ ಸಹಾಯಕ

ಕೂದಲಿನ ಬೆಳವಣಿಗೆಗೆ ಸಹಾಯಕ

ಕರಿಬೇವು ಕೂದಲಿನ ಬೆಳವಣಿಗೆಗೆ ಕಾರಣವಾಗಿರುವ ನ್ಯೂಟ್ರಿನ್ ಮತ್ತು ಪ್ರೊಟೀನ್ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ಕೂದಲು ಉದುರುವುದನ್ನು ತಡೆಯುತ್ತದೆ. ಸ್ವಲ್ಪ ಕರಿಬೇವು ಮತ್ತು ಮೊಸರನ್ನು ತೆಗೆದುಕೊಳ್ಳಿ ನಂತರ ಮೊಸರಿನೊಂದಿಗೆ ಅದನ್ನು ಪೇಸ್ಟ್ ರೂಪದಲ್ಲಿ ತಯಾರಿಸಿ. ನಿಮ್ಮ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ ಅಂತೆಯೇ ಕೂದಲಿನ ಬುಡವನ್ನು ಕವರ್ ಮಾಡಿ. ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ.

ಕೂದಲುದುರುವುದನ್ನು ತಡೆಯುತ್ತದೆ

ಕೂದಲುದುರುವುದನ್ನು ತಡೆಯುತ್ತದೆ

ಕೂದಲು ತೆಳ್ಳಗಾಗುವುದನ್ನು ತಪ್ಪಿಸಿ ಕೂದಲುದುರುವುದನ್ನು ತಡೆಗಟ್ಟಲು ಕರಿಬೇವು ಸಹಕಾರಿ. ಕೆಲವು ಕರಿಬೇವನ್ನು ಹಾಲಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ನಿಮ್ಮ ಕೂದಲಿಗೆ ಇದನ್ನು ಹಚ್ಚಿ ಮತ್ತು ಎರಡು ಗಂಟೆ ಹಾಗೆಯೇ ಬಿಡಿ. ಇದು ಕೂದಲುದುರುವುದನ್ನು ತಡೆಗಟ್ಟುತ್ತದೆ.

ಕೂದಲುದುರುವುದನ್ನು ತಡೆಯುತ್ತದೆ

ಕೂದಲುದುರುವುದನ್ನು ತಡೆಯುತ್ತದೆ

ವೈದ್ಯಕೀಯ ಕಾರಣಗಳಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತದೆ. ಹೆಚ್ಚಿನ ರಾಸಾಯನಿಕವನ್ನು ಕೂದಲಿಗೆ ಬಳಸುವುದರಿಂದ ಕೂಡ ನರೆಗೂದಲು ಕಾಣಿಸಿಕೊಳ್ಳಬಹುದು. ಕರಿಬೇವು ನಿಮ್ಮ ಕೂದಲಿನ ಬೆಳ್ಳಗಾಗುವಿಕೆಯನ್ನು ತಡೆಗಟ್ಟಿ ಕಪ್ಪಗಿನ ಕೂದಲನ್ನು ಬೆಳೆಸುತ್ತದೆ. ಸ್ವಲ್ಪ ಆಲೀವ್ ಆಯಿಲ್ ಅನ್ನು ಬೆಚ್ಚಗಾಗಿಸಿ ಮತ್ತು ಇದಕ್ಕೆ ಕರಿಬೇವನ್ನು ಹಾಕಿ. ಈ ಎಣ್ಣೆ ಹಸಿರು ಬಣ್ಣಕ್ಕೆ ತಿರುಗಿದ ನಂತರ ನಿಮ್ಮ ಕೂದಲು ಮತ್ತು ಬುಡಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಹಾಗೆಯೇ ಬಿಟ್ಟು ನಂತರ ಕೂದಲನ್ನು ತೊಳೆದುಕೊಳ್ಳಿ.

ರಾಸಾಯನಿಕದಿಂದ ಕೂದಲನ್ನು ಸಂರಕ್ಷಿಸಲು

ರಾಸಾಯನಿಕದಿಂದ ಕೂದಲನ್ನು ಸಂರಕ್ಷಿಸಲು

ಹೆಚ್ಚಿನ ರಾಸಾಯನಿಕ ಬಳಕೆಯಿಂದ ಕೂದಲು ಹಾನಿಗೊಳಗಾಗುತ್ತದೆ ಮತ್ತು ಕೂದಲು ಉದುರಲು ಆರಂಭಗೊಳ್ಳುತ್ತದೆ. ಆದ್ದರಿಂದ ನಿಮ್ಮ ಕೂದಲಿಗೆ ನೈಸರ್ಗಿಕ ರೀತಿಯಲ್ಲಿ ನೀವು ಪೋಷಣೆ ಮಾಡಬೇಕಾಗುತ್ತದೆ. ತೆಂಗಿನೆಣ್ಣೆಗೆ ಕರಿಬೇವಿನ ಸೊಪ್ಪನ್ನು ಸೇರಿಸಿ ಮತ್ತು ಅದನ್ನು ಬಿಸಿ ಮಾಡಿಕೊಳ್ಳಿ. ಕರಿಬೇವು ಚೆನ್ನಾಗಿ ಎಣ್ಣೆಯಲ್ಲಿ ಬೆರೆತುಕೊಳ್ಳಲಿ. ನಿಮ್ಮ ಕೂದಲಿಗೆ ಈ ಎಣ್ಣೆಯನ್ನು ಹಚ್ಚಿಕೊಂಡು ಕೂದಲನ್ನು ತೊಳೆದುಕೊಳ್ಳಿ.

ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ

ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ

ನೀವು ಕರಿಬೇವನ್ನು ಬರಿಯ ನಿಮ್ಮ ಕೂದಲಿಗೆ ಮಾತ್ರ ಹಚ್ಚಿಕೊಳ್ಳುವುದರಿಂದ ಉತ್ತಮ ಫಲಿತಾಂಶ ದೊರೆಯುವುದಿಲ್ಲ ಜೊತೆಗೆ ನಿಮ್ಮ ಆಹಾರದಲ್ಲಿ ಕೂಡ ನೀವು ಕರಿಬೇವಿನ ಬಳಕೆಯನ್ನು ಮಾಡಬೇಕು. ಹೊರಗೆ ಕಾಳಜಿ ಮಾಡಿದಂತೆ ನೀವು ನಿಮ್ಮ ದೇಹದ ಒಳಗೂ ಕರಿಬೇವಿನ ಸೇವನೆಯನ್ನು ಮಾಡಬೇಕು. ಕರಿಬೇವಿನ ಸೊಪ್ಪು ಬಳಸಿ ಕುದಿಸಿದ ನೀರನ್ನು ಸೇವಿಸಿ. ಜೊತೆಗೆ ಪುದೀನಾ ಎಲೆಗಳನ್ನು ಸೇರಿಸಿ.

ಕೂದಲ ಹೊಟ್ಟನ್ನು ನಿವಾರಿಸುತ್ತದೆ

ಕೂದಲ ಹೊಟ್ಟನ್ನು ನಿವಾರಿಸುತ್ತದೆ

ಒಂದು ವೇಳೆ ತಲೆಯ ಚರ್ಮದಲ್ಲಿ ವಿಪರೀತ ಧೂಳು, ಕೊಳೆ, ಎಣ್ಣೆಯ ಜಿಡ್ಡು ತುಂಬಿದ್ದು ಸುಲಭವಾಗಿ ನಿವಾರಣೆಯಾಗಲು ಸಾಧ್ಯವಾಗದೇ ಇದ್ದಾಗ ಈ ಲೇಪನದೊಂದಿಗೆ ಕೊಂಚ ಲಿಂಬೆಯ ರಸವನ್ನೂ ಬೆರೆಸಿ ಕೂದಲಿಗೆ ಹಚ್ಚಿಕೊಂಡು ಸ್ನಾನ ಮಾಡುವ ಮೂಲಕ ಹಠಮಾರಿ ಜಿಡ್ಡು ಸಹಾ ಸಡಿಲಗೊಂಡು ತಲೆಯನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ.

ಕೂದಲು ತುಂಡಾಗುವುದನ್ನ ತಡೆಯುತ್ತದೆ

ಕೂದಲು ತುಂಡಾಗುವುದನ್ನ ತಡೆಯುತ್ತದೆ

ಕೂದಲಿಗೆ ಪೋಷಣೆಯ ಜೊತೆಗೇ ದೃಢತೆಯೂ ಸಿಗುವ ಮೂಲಕ ಕೂದಲು ನಡುವಿನಲ್ಲಿ ತುಂಡಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ತುದಿಯವರೆಗೂ ಒಂದೇ ಬಗೆಯ ದಪ್ಪನೆಯ ಕೂದಲು ಹೊಂದಲು ಸಾಧ್ಯವಾಗುತ್ತದೆ.

English summary

Home Remedies Using Curry Leaves For Hair Care

Used as an ingredient in cooking usually curry leaves are known for their medicinal values from centuries. Curry leaves are used as an agent for hair and skin protection. It has the required amount of nutrients and vitamins in order to stimulate hair growth and protect our hair from other hair-related problems. Moreover, curry leaves have antioxidants and amino acids that reduce hair fall to a great extent.Let us see the five positive effects of using curry leaves in hair care.
X
Desktop Bottom Promotion