For Quick Alerts
ALLOW NOTIFICATIONS  
For Daily Alerts

ಬರೀ ಹದಿನೈದೇ ದಿನಗಳಲ್ಲಿ ಬಿಳಿ ಕೂದಲನ್ನು ಕಪ್ಪು ಮಾಡುವ ಮನೆಮದ್ದುಗಳು

|

ಕಡುಕಪ್ಪಗಿನ ಕೂದಲಿನ ಮಧ್ಯೆ ಕೆಲವು ಬಿಳಿ ಕೂದಲು ಕಾಣಿಸಿಕೊಂಡರೆ ಆಗ ಅದು ತುಂಬಾ ಕಿರಿಕಿರಿ ಅನಿಸುವುದು. ಇಂತಹ ಸಮಸ್ಯೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ನಮ್ಮ ಜೀವನ ಶೈಲಿಯು ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಕೂದಲು ಬಿಳಿಯಾಗಲು ಕೂದಲಿನ ಕಿರುಚೀಲಗಳ ಸುತ್ತಲು ಇರುವಂತಹ ಮೆಲನೊಸೈಟ್ಸ್ ಕಡಿಮೆಯಾದಾಗ ಅಥವಾ ಮೆಲನಿನ್ ಉತ್ಪತ್ತಿಯನ್ನು ನಿಲ್ಲಿಸಿದಾಗ ಕೂದಲು ಬಿಳಿಯಾಗುವುದು.

ಕೆರಟಿನ್ ಕೂದಲಿನ ಬೆಳವಣಿಗೆಗೆ ಬೇಕಾಗಿರುವಂತಹ ಪ್ರಮುಖ ಪ್ರೋಟೀನ್. ಕೆರಟಿನ್ ನಲ್ಲಿ ಮೆಲನಿನ್ ಕೊರತೆ ಅಥವಾ ಇಲ್ಲದೆ ಇರುವ ಕಾರಣದಿಂದ ಕೂದಲು ಬಿಳಿಯಾಗಬಹುದು. ಅನುವಂಶೀಯತೆ, ವಯಸ್ಸು ಮತ್ತು ದೇಹದಲ್ಲಿ ಆಗುವಂತಹ ಹಾರ್ಮೋನು ಅಸಮತೋಲನದಿಂದಾಗಿ ಮೆಲನಿನ್ ಕೊರತೆ ಉಂಟಾಗಬಹುದು. ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವು ರಾಸಾಯನಿಕಗಳು ಕೂದಲನ್ನು ಬಿಳಿಯಾಗಿಸಿ, ನಿಮಗೆ ಕಾಂತಿಯುತ ಕೂದಲು ನೀಡಬಹುದು. ಆದರೆ ಇದು ದೀರ್ಘಕಾಲಕ್ಕೆ ತುಂಬಾ ಹಾನಿಯುಂಟು ಮಾಡುವುದು. ಈ ಲೇಖನದಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯಲು ಕೆಲವು ಮನೆಮದ್ದುಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಬ್ಲ್ಯಾಕ್ ಟೀ

ಬ್ಲ್ಯಾಕ್ ಟೀ

ಬ್ಲ್ಯಾಕ್ ಟೀಯನ್ನು ಕೂದಲಿಗೆ ಹಚ್ಚಿಕೊಂಡರೆ ಕೂದಲು ಕಪ್ಪಾಗುವುದು. ಇದು ಕೂದಲು ದಪ್ಪವಾಗಿ ಬೆಳೆದು ಕಾಂತಿಯುತವಾಗುವಂತೆ ಮಾಡುವುದು. ಬ್ಲ್ಯಾಕ್ ಟೀ ಮಾಸ್ಕ್ ನ್ನು ವಾರದಲ್ಲಿ ಎರಡು ಸಲ ಬಳಸಿ ಮತ್ತು ಇದರ ಬಳಿಕ ಶಾಂಪೂ ಬಲಸಬೇಡಿ.

ತೆಂಗಿನೆಣ್ಣೆ ಮತ್ತು ಲಿಂಬೆ

ತೆಂಗಿನೆಣ್ಣೆ ಮತ್ತು ಲಿಂಬೆ

ತೆಂಗಿನೆಣ್ಣೆ ಮತ್ತು ಲಿಂಬೆಯು ಕೂದಲಿಗೆ ತುಂಬಾ ಒಳ್ಳೆಯದು. ಇದು ಕೂದಲಿನ ಕಿರುಚೀಲದ ಕೋಶಗಳು ವರ್ಣಕಳೆದುಕೊಳ್ಳದಂತೆ ತಡೆಯುವುದು ಮತ್ತು ದಿನಕಳೆದಂತೆ ಕೂದಲು ಕಪ್ಪಾಗುವಂತೆ ಮಾಡುವುದು. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ದಿನ ಇದನ್ನು ಬಳಸಿಕೊಳ್ಳಿ.

Most Read: ಮುಖದಲ್ಲಿ ಮೂಡುವ ನೆರಿಗೆಯ ಸಮಸ್ಯೆಗೆ-ಒಂದೆರಡು ಚಮಚ ಲಿಂಬೆ ರಸ ಸಾಕು!

ಆಲೂಗಡ್ಡೆ

ಆಲೂಗಡ್ಡೆ

ಕೂದಲನ್ನು ಕಪ್ಪು ಮಾಡಲು ಬಟಾಟೆ ಬಳಸಿಕೊಂಡು ನೀವು ಮನೆಯಲ್ಲೇ ಮಾಸ್ಕ್ ತಯಾರಿಸಿಕೊಳ್ಳಬಹುದು. ನೀವು ಆಲೂಗಡ್ಡೆಯನ್ನು ಚೆನ್ನಾಗಿ ಕುದಿಸಿ, ಪಿಷ್ಠದ ಸೊಲ್ಯೂಷನ್ ಉತ್ಪತ್ತಿಯಾಗುವಂತೆ ಮಾಡಬೇಕು. ಇದರ ಬಳಿಕ ಸೋಸಿಕೊಂಡ ದ್ರವನ್ನು ಪಡೆದುಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ಪಿಷ್ಠದ ಸೊಲ್ಯೂಷನ್ ವರ್ಣವನ್ನು ಕಾಪಾಡುವುದು ಮತ್ತು ಬಿಳಿಯಾಗದಂತೆ ತಡೆಯುವುದು.

ಓಟ್ಸ್

ಓಟ್ಸ್

ಓಟ್ಸ್ ನಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ನಿಮಗೆ ತಿಳಿದಿದೆ. ಆದರೆ ಇದರಿಂದ ಕೂದಲು ಕಪ್ಪಾಗಿಸಬಹುದು ಎಂದು ತಿಳಿದಿದೆಯಾ? ಇದನ್ನು ನೀವು ಉಪಾಹಾರಕ್ಕೆ ಸೇವಿಸಬಹುದು ಅಥವಾ ಬಾದಾಮಿ ಎಣ್ಣೆಯ ಜತೆಗೆ ಬೆರೆಸಿಕೊಂಡು ಪೇಸ್ಟ್ ಮಾಡಬಹುದು. ಓಟ್ಸ್ ನಲ್ಲಿ ಇರುವಂತಹ ಬಿಯೊಟಿನ್ ಎನ್ನುವ ಅಂಶವು ಬಿಳಿ ಕೂದಲನ್ನು ನಿವಾರಣೆ ಮಾಡುವುದು. ಬಿಯೊಟಿನ್ ಕೂದಲನ್ನು ಕಪ್ಪಾಗಿಸುವುದು ಮತ್ತು ಪೋಷಣೆ ನೀಡುವುದು. ಓಟ್ಸ್ ಪೇಸ್ಟ್ ನ್ನು ನೀವು ನೈಸರ್ಗಿಕ ಕಂಡೀಷನರ್ ಆಗಿಯೂ ಬಳಸಬಹುದು. ವಾರದಲ್ಲಿ ಒಂದು ಸಲ ಈ ಪೇಸ್ಟ್ ಬಳಸಿ.

ಈರುಳ್ಳಿ ರಸ

ಈರುಳ್ಳಿ ರಸ

ಕೂದಲನ್ನು ಬುಡದಿಂದಲೇ ಕಪ್ಪಾಗಿಸುವ ಕಿಣ್ವ ಕ್ಯಾಟಲಸೆ ಎನ್ನುವುದು ಈರುಳ್ಳಿಯಲ್ಲಿದೆ. ಈರುಳ್ಳಿ ರಸದಲ್ಲಿ ಬಿಯೊಟಿನ್, ಮೆಗ್ನಿಶಿಯಂ, ತಾಮ್ರ, ವಿಟಮಿನ್ ಸಿ, ಫೋಸ್ಪರಸ್, ಸಲ್ಫರ್, ವಿಟಮಿನ್ ಬಿ1 ಮತ್ತು ಬಿ6 ಹಾಗೂ ಫಾಲಟೆ ಇದೆ. ಇವುಗಳು ಕೂದಲನ್ನು ಕಪ್ಪಾಗಿಸುವುದು ಮತ್ತು ಕೂದಲು ಉದುರುವುದನ್ನು ತಡೆಯುವುದು. ಒಂದು ಈರುಳ್ಳಿಯಿಂದ ರಸ ತೆಗೆದು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಅದರಲ್ಲೂ ಬುಡಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. 40 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಪರಿಣಾಮಕಾರಿ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಬಳಸಿ.

ಕರಿಬೇವಿನ ಎಲೆ

ಕರಿಬೇವಿನ ಎಲೆ

ಚಿಕ್ಕ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕೆಲವು ಕರಿಬೇವಿನ ಎಲೆಗಳನ್ನು ಬೇಯಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ. ಈ ಎಣ್ಣೆಗೆ ಕೊಂಚ ಮೊಸರನ್ನು ಅಥವಾ ಮಜ್ಜಿಗೆಯನ್ನು ಸೇರಿಸಿಯೂ ಬಳಸಬಹುದು.

ಮೆಹೆಂದಿ ಮತ್ತು ಮೊಸರು

ಮೆಹೆಂದಿ ಮತ್ತು ಮೊಸರು

ಪರಿಶುದ್ಧವಾದ ಮೆಹೆಂದಿಯನ್ನು ಇದಕ್ಕೆ ಬಳಸಿ. ಪ್ಯಾಕ್‌ ಮಾಡಿರುವ ಮೆಹಂದಿಯನ್ನು ಬಳಸಬೇಡಿ. ರಾಸಾಯನಿಕಗಳಿಂದ ಮುಕ್ತವಾದ ಮೆಹಂದಿಯು ಇದಕ್ಕೆ ಒಳ್ಳೆಯದು. ಇದನ್ನು ಮಾಡಲು ಮೆಹಂದಿಯನ್ನು ನೀರಿನ ಬದಲಿಗೆ ಬ್ಲಾಕ್ ಟೀಯಲ್ಲಿ ನೆನೆಸಿ. ರಾತ್ರಿಯಿಡೀ ಇದನ್ನು ನೆನೆಯಲು ಬಿಟ್ಟು, ಬೆಳಗ್ಗೆ ಇದಕ್ಕೆ ಒಂದು ಟೇಬಲ್ ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ.

ನಂತರ ಅರ್ಧ ಕಪ್ ಮೊಸರು ಅಥವಾ ಒಂದು ಮೊಟ್ಟೆಯನ್ನು ಬೆರೆಸಿಕೊಳ್ಳಿ. ಆಮೇಲೆ ಇದನ್ನು ನಿಮ್ಮ ಕೂದಲಿಗೆ ಲೇಪಿಸಿ. 30 ನಿಮಿಷ ಬಿಟ್ಟು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ, ಹೀಗೆ ವಾರದಲ್ಲಿ ಎರಡು ಮೂರು ದಿನ ಮಾಡುವುದರಿಂದ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.

Most Read: ಹಿಮ್ಮಡಿ ಕಾಲು ಒಡೆದಿದ್ರೆ-ಪುದೀನಾ ಎಲೆಗಳ ಫೂಟ್ ಮಸಾಜ್ ಮಾಡಿ!

ಸೀಗೆಕಾಯಿ

ಸೀಗೆಕಾಯಿ

ಮೂರರಿಂದ ನಾಲ್ಕು ಸೀಗೆಕಾಯಿಯ ಕೋಡು ಹಾಗೂ ಹತ್ತರಿಂದ ಹನ್ನೆರಡು ಅಂಟುವಾಳದ ಬೀಜ (soap nut seeds) ಗಳನ್ನು ಒಂದು ಜಗ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಬೇಕು. ಬೆಳಿಗ್ಗೆ ಇದನ್ನು ಕುದಿಸಿ ತಣಿದ ಬಳಿಕ ಒಂದು ಬಾಟಲಿಯಲ್ಲಿ ಶೇಖರಿಸಿಡಬೇಕು. ಇದು ಪ್ರತಿದಿನ ಉಪಯೋಗಿಸುವ ಶಾಂಪೂವಿನಂತೆ ಉಪಯೋಗಿಸಬೇಕು. ಕೆಲವು ನೆಲ್ಲಿಕಾಯಿಗಳನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಕುದಿಸಿ ತಣಿಸಿದ ಬಳಿಕ ನೆಲ್ಲಿಕಾಯಿಯನ್ನು ಕಿವುಚಿ ತೆಗೆದ ನೀರು ಕಂಡೀಶನರ್ ನಂತೆ ಬಳಸಬಹುದು. ಈ ಜೋಡಿ ಕೂದಲು ಬೆಳ್ಳಗಾಗುವುದನ್ನು ತಡೆಯುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯಿಂದ, ಕೂದಲಿನ ಹೊಳಪನ್ನು ಕಾಪಾಡುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

English summary

Home Remedies To Cover Your Grey Hair Naturally

Grey strands of hair are really a person's most devastating nightmare. Hair primarily turns grey when melanocytes around hair follicle decrease or stops production of melanin. Keratin is the main protein which builds up hair. Absence or deficiency of melanin in keratin causes hair greying. Deficiency of melanin can be caused because of genetics, age and hormonal changes in the body. Chemical dyes to blacken hair and redeem hair's lustre and shine may have harmful effects on in the long run. So, in this article, we talk about some natural remedies which can help turning grey hair into black. Keep reading...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more