For Quick Alerts
ALLOW NOTIFICATIONS  
For Daily Alerts

ಮೆಹಂದಿ ಆಹಾ...ಮೆಹಂದಿ... ಕೇಶ ಸೌಂದರ್ಯಕ್ಕೆ ಹೇಗೆಲ್ಲಾ ಸಹಕಾರಿ ಗೊತ್ತಾ?

|

ಮದರಂಗಿ, ಮೆಹಂದಿ, ಗೋರಂಟಿ ಎಂದೆಲ್ಲ ಕರೆಯಲಾಗುವ ಹೆನ್ನಾ ಬಹು ಉಪಯೋಗಿ ಆಯುರ್ವೇದಿಕ ಸಾಧನವಾಗಿದೆ. ಕೂದಲುಗಳಿಗೆ ಸಹಜ ಹಾಗೂ ನೈಸರ್ಗಿಕ ರೀತಿಯಲ್ಲಿ ಬಣ್ಣ ಮೂಡಿಸಲು ಹೆನ್ನಾ ಉಪಯೋಗಿಸುವುದು ನಮಗೆಲ್ಲ ತಿಳಿದೇ ಇದೆ. ಆದರೆ ಕೂದಲುಗಳ ಆರೋಗ್ಯ ಕಾಪಾಡಲು ಹೆನ್ನಾ ಇನ್ನೂ ಹಲವಾರು ರೀತಿ ಪ್ರಯೋಜನಕಾರಿಯಾಗಿದೆ. ಕೇವಲ ಕಲರ್ ಮಾಡಲು ಅಷ್ಟೇ ಅಲ್ಲ ಕೂದಲು ಆರೋಗ್ಯಕ್ಕೆ ಇನ್ನೂ ಅನೇಕ ರೀತಿಯಲ್ಲಿ ಇದನ್ನು ಬಳಸಬಹುದಾಗಿದೆ.

ಹೆನ್ನಾದಲ್ಲಿರುವ ನೈಸರ್ಗಿಕ ಅಂಶಗಳು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿವೆ. ಹೆನ್ನಾದಿಂದ ಕೂದಲಿಗೆ ಹಚ್ಚುವ ಎಣ್ಣೆಯನ್ನು ಸಹ ತಯಾರಿಸಬಹುದು. ನೆತ್ತಿಗೆ ನೇರವಾಗಿ ತಲುಪುವ ಹೆನ್ನಾ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

ಎಲ್ಲೆಡೆ ಕಾಣುವ ವಾಯು ಮಾಲಿನ್ಯ ಹಾಗೂ ಇನ್ನಿತರ ಕಾರಣಗಳಿಂದ ನಮ್ಮ ಕೂದಲು ಧೂಳಿನಿಂದ ಆವರಿಸಿ ಬಹು ಬೇಗನೆ ಜಿಡ್ಡುಗಟ್ಟುತ್ತವೆ. ಕೂದಲುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗುವ ಧೂಳಿನಿಂದ ನವೆ ಹಾಗೂ ತಲೆಯಲ್ಲಿ ಹೊಟ್ಟು ಹೆಚ್ಚಾಗುತ್ತದೆ. ಇದನ್ನು ನಿವಾರಿಸಲು ಹೆನ್ನಾ ಬಹು ಉಪಯೋಗಿಯಾಗಿದೆ. ಕೂದಲುಗಳಿಗೆ ಆಳವಾಗಿ ಪೋಷಕಾಂಶ ಒದಗಿಸಿ, ಒಣ ಹಾಗೂ ಹಾಳಾದ ಕೇಶರಾಶಿಯನ್ನು ಇದು ಸೊಂಪಾಗಿಸುತ್ತದೆ.

ಮನೆಯಲ್ಲೇ ಮೆಹಂದಿಯಿಂದ ಮಾಡಬಹುದಾದ ವಿವಿಧ ಮಾಸ್ಕ್ ಗಳು

ಮಾರುಕಟ್ಟೆಯಲ್ಲಿ ಎಲ್ಲ ಕಡೆಯೂ ಸುಲಭವಾಗಿ ಸಿಗುವ ಹೆನ್ನಾವನ್ನು ಎಲ್ಲರೂ ಬಳಸಬಹುದು. ಮನೆಯಲ್ಲೇ ಹೆನ್ನಾದಿಂದ ವಿವಿಧ ಮಾಸ್ಕ್ ಗಳನ್ನು ತಯಾರಿಸಿ ಬಳಸಲು ಅವಕಾಶವಿರುವಾಗ ಬ್ಯೂಟಿ ಪಾರ್ಲರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ. ಹಾಗಾದರೆ ಹೆನ್ನಾದಿಂದ ಯಾವೆಲ್ಲ ಮಾಸ್ಕ್ ಗಳನ್ನು ಮನೆಯಲ್ಲಿ ತಯಾರಿಸಬಹುದು ಹಾಗೂ ಅವುಗಳನ್ನು ತಯಾರಿಸಿ ಬಳಸುವುದು ಹೇಗೆ ಎಂಬ ವಿಧಾನಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

1. ಮೆಹಂದಿ ಹಾಗೂ ಬಾಳೆ ಹಣ್ಣು ಹೇರ್ ಮಾಸ್ಕ್

1. ಮೆಹಂದಿ ಹಾಗೂ ಬಾಳೆ ಹಣ್ಣು ಹೇರ್ ಮಾಸ್ಕ್

ಬೇಕಾಗುವ ಸಾಮಗ್ರಿಗಳು :

೨ ಟೇಬಲ್ ಚಮಚೆ ಹೆನ್ನಾ

೧ ಹಣ್ಣಾಗಿರುವ ಬಾಳೆ

ತಯಾರಿಸುವ ವಿಧಾನ :

೧. ಹೆನ್ನಾಗೆ ಸ್ವಲ್ಪ ನೀರು ಬೆರೆಸಿ ರಾತ್ರಿಯೆಲ್ಲ ನೆನೆಸಿಡಿ. ಇದರಿಂದ ದಟ್ಟವಾದ ಹೆನ್ನಾ ಪೇಸ್ಟ್ ರೆಡಿ ಆಗುತ್ತದೆ.

೨. ಮರುದಿನ ಬೆಳಗ್ಗೆ ಕಳಿತ ಬಾಳೆ ಹಣ್ಣೊಂದನ್ನು ನುಣ್ಣಗೆ ಅರೆದು ಹೆನ್ನಾ ಪೇಸ್ಟ್ ಗೆ ಸೇರಿಸಿ ಮಿಕ್ಸ್ ಮಾಡಿ.

೩. ಮಾಸ್ಕ್ ಅನ್ನು ಕೂದಲಿಗೆ ಹಚ್ಚಿಕೊಳ್ಳುವ ಮೊದಲು ಮೃದುವಾದ ಶಾಂಪೂ ಬಳಸಿ ತಲೆ ಸ್ನಾನ ಮಾಡಿ.

೪. ಸ್ನಾನದ ನಂತರ ಕೂದಲಿನ ಬುಡದಿಂದ ತುದಿಯವರೆಗೂ ಹೆನ್ನಾ ಪೇಸ್ಟ್ ಅನ್ನು ಹಚ್ಚಿಕೊಳ್ಳಿ.

೫. ಐದು ನಿಮಿಷ ಬಿಟ್ಟು ತೊಳೆದುಕೊಳ್ಳಿ.

ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿದರೆ ಮೃದು, ರೇಷ್ಮೆಯಂತೆ ನುಣುಪಾದ ಕೇಶರಾಶಿ ನಿಮ್ಮದಾಗುವುದು.

2. ಮೆಹಂದಿ ಹಾಗೂ ಯೋಗರ್ಟ್ ಮಾಸ್ಕ್

2. ಮೆಹಂದಿ ಹಾಗೂ ಯೋಗರ್ಟ್ ಮಾಸ್ಕ್

ಬೇಕಾಗುವ ಸಾಮಗ್ರಿಗಳು :

೨ ಟೇಬಲ್ ಚಮಚೆ ಹೆನ್ನಾ

೧ ಟೇಬಲ್ ಚಮಚೆ ಮೊಸರು

೧ ಮೊಟ್ಟೆ

ತಯಾರಿಸುವ ವಿಧಾನ :

೧. ಹೆನ್ನಾದಲ್ಲಿ ಸ್ವಲ್ಪ ನೀರು ಹಾಕಿ ರಾತ್ರಿಯಿಡೀ ನೆನೆಸಿಟ್ಟು ಪೇಸ್ಟ್ ಮಾಡಿಕೊಳ್ಳಿ.

೨. ಮರುದಿನ ಬೆಳಗ್ಗೆ ಒಂದು ಮೊಟ್ಟೆಯನ್ನು ಒಡೆದು ಅದರಲ್ಲಿ ಸೇರಿಸಿ ಮಿಶ್ರಣ ಮಾಡಿ.

೩. ಕೊನೆಗೆ ಎರಡು ಚಮಚದಷ್ಟು ಯಾವುದೇ ಸುಗಂಧ ಬೆರೆಸದ ಶುದ್ಧ ಮೊಸರನ್ನು ಹಾಕಿ ಚೆನ್ನಾಗಿ ಕಲಕಿ.

೪. ಈಗ ತಯಾರಾದ ಮಾಸ್ಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿಕೊಳ್ಳಿ.

೫. ಇದನ್ನು ಹೀಗೆಯೇ ೪೫ ನಿಮಿಷಗಳವರೆಗೆ ಇರಲು ಬಿಡಿ. ನಂತರ ಸಲ್ಫೇಟ್ ಇಲ್ಲದ ಶಾಂಪೂ ಬಳಸಿ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಬಿಸಿ ಅಥವಾ ಉಗುರು ಬೆಚ್ಚನೆಯ ನೀರು ಬಳಸುವುದು ಬೇಡ. ಬಿಸಿ ನೀರಿನಿಂದ ಮಾಸ್ಕ್ ನಲ್ಲಿರುವ ಮೊಟ್ಟೆಯ ಅಂಶ ಬೆಂದು ಹೋಗಬಹುದು.

3. ಮೆಹಂದಿ ಹಾಗೂ ಮುಲ್ತಾನಿ ಮಿಟ್ಟಿ (ಮುಲ್ತಾನಿ ಮಣ್ಣು) ಮಾಸ್ಕ್

3. ಮೆಹಂದಿ ಹಾಗೂ ಮುಲ್ತಾನಿ ಮಿಟ್ಟಿ (ಮುಲ್ತಾನಿ ಮಣ್ಣು) ಮಾಸ್ಕ್

ಬೇಕಾಗುವ ಸಾಮಗ್ರಿಗಳು :

೨ ಟೇಬಲ್ ಚಮಚೆ ಹೆನ್ನಾ

೨ ಟೇಬಲ್ ಚಮಚೆ ಮುಲ್ತಾನಿ ಮಣ್ಣು

ತಯಾರಿಸುವ ವಿಧಾನ :

೧. ಒಂದು ಪಾತ್ರೆಯಲ್ಲಿ ೨ ಟೇಬಲ್ ಚಮಚೆ ಹೆನ್ನಾ ಹಾಗೂ ೨ ಟೇಬಲ್ ಚಮಚೆ ಮುಲ್ತಾನಿ ಮಣ್ಣು ಹಾಕಿ.

೨. ಇದಕ್ಕೆ ಸ್ವಲ್ಪ ನೀರು ಸೇರಿಸಿ ದಟ್ಟನೆಯ ಪೇಸ್ಟ್ ಮಾಡಿಕೊಳ್ಳಿ.

೩. ಮಲಗುವ ಮುಂಚೆ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿಕೊಳ್ಳಿ. ಕಲೆಗಳು ಆಗದಂತೆ ಸಂಪೂರ್ಣ ಕೂದಲು ಹಾಗೂ ತಲೆಯನ್ನು ಟವೆಲ್ ನಿಂದ ಕಟ್ಟಿಕೊಳ್ಳಿ.

೪. ರಾತ್ರಿಯೆಲ್ಲ ಹೆನ್ನಾ ಪ್ಯಾಕ್ ಇರಲು ಬಿಟ್ಟು, ಬೆಳಗ್ಗೆ ಸಲ್ಪೇಟ್ ರಹಿತ ಶಾಂಪೂವಿನಿಂದ ತಲೆ ತೊಳೆದುಕೊಳ್ಳಿ.

4. ಮೆಹಂದಿ ಹಾಗೂ ಕಾಫಿ ಹೇರ್ ಮಾಸ್ಕ್

4. ಮೆಹಂದಿ ಹಾಗೂ ಕಾಫಿ ಹೇರ್ ಮಾಸ್ಕ್

ಬೇಕಾಗುವ ಸಾಮಗ್ರಿಗಳು :

೫ ಟೇಬಲ್ ಚಮಚೆ ಹೆನ್ನಾ

೧ ಟೇಬಲ್ ಚಮಚೆ ಕಾಫಿ ಪುಡಿ

೧ ಕಪ್ ನೀರು

ತಯಾರಿಸುವ ವಿಧಾನ :

೧. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ಇನ್ಸಂಟ್ ಕಾಫಿ ಪುಡಿ ಸೇರಿಸಿ. ನಂತರ ಕೆಲ ನಿಮಿಷ ಕುದಿಸಿ.

೨. ಇದನ್ನು ಚಿಕ್ಕ ಬಟ್ಟಲಿಗೆ ಹಾಕಿ ಅದರಲ್ಲಿ ೫ ಟೇಬಲ್ ಚಮಚೆ ಹೆನ್ನಾ ಸೇರಿಸಿ ಮಿಕ್ಸ್ ಮಾಡಿ.

೩. ಯಾವುದೇ ಗಂಟುಗಳು ಉಳಿಯದ ಹಾಗೆ ಸರಿಯಾಗಿ ಮಿಕ್ಸ್ ಮಾಡಿ.

೪. ನಿಮ್ಮ ತಲೆಗೂದಲುಗಳನ್ನು ವಿಭಾಗವಾಗಿ ಮಾಡಿ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ. ಕೂದಲುಗಳ ಬುಡಕ್ಕೂ ಪೇಸ್ಟ್ ಕವರ್ ಆಗುವಂತೆ ನೋಡಿಕೊಳ್ಳಿ.

೫. ಇದನ್ನು ೩ ರಿಂದ ೪ ತಾಸು ಹಾಗೆಯೇ ಇರಲು ಬಿಡಿ.

೬. ಟವೆಲ್ ಅಥವಾ ಶವರ್ ಕ್ಯಾಪ್ ನಿಂದ ತಲೆಯನ್ನು ಮುಚ್ಚಿಕೊಳ್ಳಿ.

೭. ೩ ರಿಂದ ೪ ಗಂಟೆಗಳ ನಂತರ ಸಲ್ಫೇಟ್ ರಹಿತ ಶಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ.

ಮೆಹಂದಿ ಹಾಗೂ ತೆಂಗಿನ ಕಾಯಿ ಹಾಲು ಮಾಸ್ಕ್

ಮೆಹಂದಿ ಹಾಗೂ ತೆಂಗಿನ ಕಾಯಿ ಹಾಲು ಮಾಸ್ಕ್

ಬೇಕಾಗುವ ಸಾಮಗ್ರಿಗಳು :

೮ ರಿಂದ ೧೦ ಚಮಚೆ ಹೆನ್ನಾ ಪೌಡರ್

೧ ಕಪ್ ತೆಂಗಿನ ಕಾಯಿ ಹಾಲು

೩-೪ ಟೇಬಲ್ ಚಮಚೆ ಆಲಿವ್ ಎಣ್ಣೆ

ತಯಾರಿಸುವ ವಿಧಾನ :

೧. ಮೊದಲಿಗೆ ತೆಂಗಿನ ಕಾಯಿ ಹಾಲನ್ನು ಸ್ವಲ್ಪ ಬಿಸಿ ಮಾಡಿ.

೨. ಬೆಚ್ಚಗಿನ ಕಾಯಿ ಹಾಲಿಗೆ ೧೦ ಟೇಬಲ್ ಚಮಚೆ ಹೆನ್ನಾ ಪೌಡರ್ ಹಾಗೂ ೪ ಟೇಬಲ್ ಚಮಚೆ ಆಲಿವ್ ಎಣ್ಣೆ ಸೇರಿಸಿ.

೩. ಗಂಟುಗಳು ಕರಗಿ ಸಮನಾದ ಮೃದು ಪೇಸ್ಟ್ ತಯಾರಾಗುವವರೆಗೂ ಮಿಕ್ಸ್ ಮಾಡಿ.

೪. ಈ ಪೇಸ್ಟ್ ಅನ್ನು ನೆತ್ತಿ ಹಾಗೂ ಕೂದಲೂ ಎರಡಕ್ಕೂ ಹಚ್ಚಿಕೊಳ್ಳಿ.

೫. ಒಂದು ಗಂಟೆ ಇರಲು ಬಿಟ್ಟು ಸಾಧಾರಣ ಶಾಂಪೂ ಬಳಸಿ ತಲೆ ತೊಳೆದುಕೊಳ್ಳಿ.

ವಾರಕ್ಕೊಮ್ಮೆ ಈ ವಿಧಾನ ಬಳಸುವುದರಿಂದ ಉತ್ತಮ ಫಲಿತಾಂಶ ದೊರಕುತ್ತದೆ.

ಆರೋಗ್ಯಕರ ಹಾಗೂ ಕಾಂತಿಯುತ ಕೇಶರಾಶಿಗೆ ಮೇಲೆ ತಿಳಿಸಿದ ವಿಧಾನಗಳನ್ನು ಮನೆಯಲ್ಲೇ ಅನುಸರಿಸಿ ಹಾಗೂ ಹೆನ್ನಾದ ಉತ್ತಮ ಗುಣಗಳ ಲಾಭ ಪಡೆದುಕೊಳ್ಳಿ.

Read more about: hair care
English summary

HENNA MASKS THAT YOU MUST TRY AT HOME

Due to pollution and a lot many other reasons, our hair becomes greasy faster due to excess of dirt. This accumulation of excess dirt can lead to itchy scalp and dandruff. Henna plays a vital role in curing this. Henna also helps in conditioning and nourishing the hair deeply and is an effective remedy for dry and damaged hair
X
Desktop Bottom Promotion