For Quick Alerts
ALLOW NOTIFICATIONS  
For Daily Alerts

ತಲೆ ಕೂದಲಿಗೆ ಬಿಯರ್‌‌ನಿಂದ ಆರೈಕೆ ಮಾಡಿದರೆ, ಕೂದಲು ಬೆಳೆಯುತ್ತದೆ!

By Prabha Bhat
|

ಮಹಿಳೆಯರು ಸದಾ ಸೌಂದರ್ಯ ಪ್ರಿಯರು. ತಮ್ಮ ಸೌಂದರ್ಯವನ್ನು ವರ್ಧಿಸುವಂತಹ ಮಾರ್ಗಗಳನ್ನು ಸದಾ ಹುಡುಕುತ್ತಿರುವವರು. ಅದರಲ್ಲಿಯೂ ಇಂದು ಹೆಚ್ಚುತ್ತಿರುವ ಪ್ರದೂಷಣೆಯ ಫಲವಾಗಿ ಕೂದಲನ್ನು ಮತ್ತಷ್ಟು ಆರೈಕೆ ಮಾಡುವ ಅವಶ್ಯಕತೆಯಿದೆ. ಬ್ಯೂಟಿಪಾರ್ಲರುಗಳಲ್ಲಿ ಕೂದಲಿಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ಪಡೆಯುವ ನಾವು ಅದೆಷ್ಟೋ ಹಣವನ್ನು ಅದಕ್ಕಾಗಿ ವ್ಯಯಿಸುತ್ತೇವೆ. ಬದಲಿಗೆ ಮನೆಯಲ್ಲಿಯೇ ಸುಲಭ ವಿಧಾನ ಮತ್ತು ಕಡಿಮೆ ಖರ್ಚಿನಲ್ಲಿ ಕೂದಲನ್ನು ಆರೈಕೆ ಮಾಡಿಕೊಳ್ಳಬಹುದು. ನಾವು ದಿನವೂ ನಮ್ಮ ಕೂದಲಿನ ಅಂದವನ್ನು ಆರೋಗ್ಯವನ್ನು ಹೆಚ್ಚಿಸುವ ಮನೆ ಔಷಧಗಳ ಅಥವ ಮನೆಮದ್ದುಗಳ ಹುಡುಕಾಟದಲ್ಲಿರುತ್ತೇವೆ. ಅಂಥವರಿಗೆ ಇಲ್ಲಿದೆ ಬಹಳ ಅಮೂಲ್ಯವಾದ ಮಾಹಿತಿ.

ಮಹಿಳೆಯರು ಕೇಶಪ್ರಿಯರು. ತಮ್ಮ ಕೂದಲು ಉದ್ದವಾಗಿ ಸೊಂಪಾಗಿರಬೇಕೆಂದು ಬಯಸುವುದು ಸರ್ವೇಸಾಮಾನ್ಯ. ಹಾಗೆ ಕೂದಲು ಆರೋಗ್ಯಯುತವಾಗಿಯೂ ಇರಬೇಕೆಂಬ ಬಯಕೆ ನಮ್ಮಿಂದ ಹಲವಾರು ಔಷಧಗಳನ್ನು, ಶಾಂಪೂಗಳನ್ನು ಬಳಸುವ ಮತ್ತು ಕ್ರೀಮುಗಳನ್ನು ಪ್ರಯೋಗಿಸುವಂತೆ ಪ್ರೇರೇಪಿಸುತ್ತವೆ. ಆದಾಗ್ಯೂ ಅದಕ್ಕೆ ತಕ್ಕುದಾದ ಯಾವುದೇ ಫಲವನ್ನು ಕಾಣದೆ ಬೇಸರಿಸಿ ಹೋದವರಿಗೆ ಇಲ್ಲಿದೆ ಸುಲಭ ಮತ್ತು ಕೂದಲಿಗೆ ಯಾವುದೇ ಹಾನಿಯನ್ನುಂಟುಮಾಡದ ಉತ್ತಮ ಪರಿಹಾರ.

ಕುಡಿಯುವ ಬಿಯರ್ ಯಾರಿಗೆ ಗೊತ್ತಿಲ್ಲ ಹೇಳಿ? ಆದರೆ ಬಿಯರ್ ಅನ್ನು ಬಳಸಿಕೊಂಡು ನಿಮ್ಮ ಕೂದಲಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದೆಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ! ಹೌದು ಆಶ್ಚರ್ಯಕರ ಸಂಗತಿಯಾದರೂ ಇದು ಸತ್ಯ. ಹಾಟ್ ಡ್ರಿಂಕ್ಸ್ ಎನಿಸಿರುವ ಬಿಯರನ್ನು ಬಳಸಿ ನಿಮ್ಮ ಕೂದಲಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಬಿಯರ್ ಕುಡಿದು ಹೊಟ್ಟೆಯ ಬೊಜ್ಜು ಬಂದಿದ್ದರೆ ಈ ಟಿಪ್ಸ್ ಅನುಸರಿಸಿ

ಬಿಯರಿನಲ್ಲಿರುವ ಆಲ್ಕೋಹಾಲನ್ನು ಹೊರತುಪಡಿಸಿ, ಇದರಲ್ಲಿರುವ ಪ್ರೋಟೀನ್ ಅಂಶವು ಕೂದಲಿನ ಆಂತರಿಕ ಹಾನಿ(ಡ್ಯಾಮೇಜ್) ಯನ್ನು ಸರಿಪಡಿಸುತ್ತದೆ ಮತ್ತು ಕೂದಲಿನ ಮೂಲ ರಚನೆಯನ್ನು ಕಾಪಾಡುತ್ತದೆ. ವಿಟಮಿನ್ ಬಿ ಜೀವಸತ್ವವು ಕೂದಲಿನ ಬೆಳವಣಿಗೆಗೆ, ಹಾಗೂ ಮಾಲ್ಟೋಸ್ ಕೂದಲನ್ನು ಬಲಿಷ್ಟಗೊಳಿಸುವಲ್ಲಿ ಅತ್ಯಂತ ಸಹಾಯಕವಾಗುತ್ತದೆ. ಅಷ್ಟೇ ಅಲ್ಲದೆ ವಿಟಮಿನುಗಳಲ್ಲಿಯೇ ಮುಖ್ಯವಾದ ಬಿಯೋಟಿನ್ ವಿಟಮಿನನ್ನು ಹೊಂದಿರುವ ಬಿಯರ್ ಆರೋಗ್ಯಕರವಾದ ಕೂದಲ ಬೆಳವಣಿಗೆಯನ್ನು ಪೋಷಿಸುವುದಲ್ಲದೆ ಕೂದಲುದುರುವ ಸಮಸ್ಯೆಯನ್ನೂ ನಿವಾರಿಸುತ್ತದೆ, ಮತ್ತು ಹೊಟ್ಟಿನ ಸಮಸ್ಯೆಯನ್ನೂ ಕಡಿತಗೊಳಿಸಬಲ್ಲುದಾಗಿದೆ. ಇಂತಹ ಔಷಧೀಯ ಗುಣವನ್ನು ಹೊಂದಿರುವ ಬೀಯರನ್ನು ಬಳಸಿ ಕೂದಲ ಬೆಳವಣಿಗೆಗೆ ಸಹಾಯಕವಾಗುವ ಮನೆಮದ್ದನ್ನು ತಯಾರಿಸುವ ವಿಧಾನಗಳ ಬಗೆಗಳನ್ನು ತಿಳಿದುಕೊಳ್ಳೋಣ.

ಬಿಯರ್ ಮತ್ತು ಮೊಟ್ಟೆ

ಬಿಯರ್ ಮತ್ತು ಮೊಟ್ಟೆ

ಸಾಮಗ್ರಿಗಳು:

1/2- ಕಪ್ ಬಿಯರ್

1 -ಮೊಟ್ಟೆ

1-ಟೀ ಚಮಚ ಅವಕಾಡೋ ತೈಲ(ಬಟರ್ ಫ್ರುಟ್)

ವಿಧಾನ:

ಒಂದು ಬೌಲಿನಲ್ಲಿ ಬಿಯರ್ ಮತ್ತು ಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ನಂತರ 1 ಟೀ ಚಮಚ ಅವಕಾಡೋ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕೂದಲುಗಳಿಗೆ ಹಾಕಿಕೊಂಡು ಕೂದಲಿನ ಬೇರಿನಿಂದ ಹಿಡಿದು ತುದಿಯವರೆಗೂ ಮಸ್ಸಾಜ್ ಮಾಡಿ. ನಂತರ ನಿಮ್ಮ ಕೂದಲನ್ನು ಶವರ್ ಕ್ಯಾಪಿನಿಂದ ಕವರ್ ಮಾಡಿಕೊಂಡು ಮೂವತ್ತು ನಿಮಿಷಗಳ ಕಾಲ ನೆನೆಯಲು ಬಿಡಿ. ಮೂವತ್ತು ನಿಮಿಷಗಳ ನಂತರ ಸಾಧಾರಣ ಶಾಂಪುವಿನಿಂದ ಕೂದಲನ್ನು ತೊಳೆದು ಕಂಡಿಶನಿಂಗ್ ಮಾಡಿಕೊಳ್ಳಿ. ವಾರಕ್ಕೆ ಒಮ್ಮೆ ಈ ವಿಧಾನವನ್ನು ಅನುಸರಿಸುವುದರ ಮೂಲಕ ಕೂದಲಿನ ಪೋಷಣೆ ಮಾಡಿಕೊಳ್ಳಬಹುದು.

ಬಿಯರ್ ಮತ್ತು ಜೇನು ತುಪ್ಪ

ಬಿಯರ್ ಮತ್ತು ಜೇನು ತುಪ್ಪ

ಸಾಮಗ್ರಿಗಳು

1/2 ಕಪ್ ಬಿಯರ್

1 ಟೀ ಚಮಚ ಜೇನುತುಪ್ಪ

1 ಮೊಟ್ಟೆ

1 ಬಾಳೆಹಣ್ಣು

ವಿಧಾನ:

ಮೇಲಿನ ಎಲ್ಲಾ ಸಾಮಗ್ರಿಗಳನ್ನು ಒಂದು ಬೌಲಿನಲ್ಲಿ ಹಾಕಿ ಚೆನ್ನಾಗಿ ಸಂಮಿಶ್ರ ಮಾಡಿ ದಪ್ಪದ ಪೇಸ್ಟ್ ಮಾಡಿಕೊಳ್ಳಿ. ಕೂದಲನ್ನು ವಿಭಾಗ ಮಾಡಿಕೊಂಡು ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಕೂದಲನ್ನು ಶವರ್ ಕ್ಯಾಪಿನ ಸಹಾಯದಿಂದ ಕವರ್ ಮಾಡಿಕೊಂಡು ಒಂದರಿಂದ ಎರಡು ತಾಸುಗಳವರೆಗೆ ನೆನೆಯಲು ಬಿಡಿ. ನಂತರ ಸಾಧಾರಣ ಶಾಂಪುವಿನಿಂದ ಕೂದಲನ್ನು ತೊಳೆದು ಕಂಡಿಶನಿಂಗ್ ಮಾಡಿಕೊಳ್ಳಿ. ಈ ವಿಧಾನವನ್ನು ವಾರಕ್ಕೆ ಒಮ್ಮೆ ಅನುಸರಿಸಿದರೆ ಉತ್ತಮ ದಟ್ಟ ಕೂದಲು ನಿಮ್ಮದಾಗುವುದು.

ಸೇಬಿನ ಮದ್ಯದ ವಿನೆಗರ್ ಮತ್ತು ಬಿಯರ್

ಸೇಬಿನ ಮದ್ಯದ ವಿನೆಗರ್ ಮತ್ತು ಬಿಯರ್

1/4 ಕಪ್ ಸೇಬಿನ ಮದ್ಯದ ವಿನೆಗರ್(ಆಪಲ್ ಸೈಡರ್ ವಿನೆಗರ್)

1ಕಪ್ ಬಿಯರ್

ವಿಧಾನ:

ಮೊದಲಿಗೆ ಬಿಯರನ್ನು ತೆಗೆದಿಟ್ಟು ಕೆಲವು ಕಾಲ ಅಥವಾ ಒಂದು ರಾತ್ರಿ ಗಾಳಿಗೆ ತೆರೆದಿಡಿ. ಬಿಯರಿನಲ್ಲಿರುವ ಆಲ್ಕೋಹಾಲ್ ಪೂರ್ತಿಯಾಗಿ ಕಡಿಮೆಯಾದ ನಂತರ 1/4 ಕಪ್ ಸೇಬಿನ ರಸದ ವಿನೆಗರನ್ನು ಹಾಕಿ ಮಿಕ್ಸ್ ಮಾಡಿ. ಮೊದಲಿಗೆ ಕೂದಲನ್ನು ಶಾಂಪೂವಿನಿಂದ ಚೆನ್ನಾಗಿ ತೊಳೆದುಕೊಂಡು ಕಂಡಿಶನಿಂಗ್ ಮಾಡಿಕೊಳ್ಳಿ. ಕಂಡಿಶನರ್ ಹಾಕಿದ ನಂತರ ತಯಾರಿಸಿಟ್ಟ ಮಿಶ್ರಣವನ್ನು ಕೂದಲಿಗೆ ಹಾಕಿಕೊಳ್ಳಿರಿ. ಮಿಶ್ರಣವನ್ನು ಕೂದಲಿಗೆ ಹಾಕಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಂಡು ಹೀಗೆ 15 ನಿಮಿಷಗಳ ಕಾಲ ನೆನೆಯಲು ಬಿಡಿ. 15 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ.

ಬಿಯರ್ ಶಾಂಪು

ಬಿಯರ್ ಶಾಂಪು

ಸಾಮಗ್ರಿಗಳು:

ಒಂದೂವರೆ ಕಪ್ ಬಿಯರ್

1ಕಪ್ ಶಾಂಪೂ

ವಿಧಾನ:

ಒಂದು ಪಾತ್ರೆಗೆ ಬಿಯರನ್ನು ಹಾಕಿ ೧೫ ನಿಮಿಷಗಳ ಕಾಲ ಕುದಿಸಿರಿ. ಬಿಯರ್ ಸಂಪೂರ್ಣವಾಗಿ ಕೊಠಡಿ ಉಷ್ಣತೆಗೆ ತಗ್ಗಿದ ನಂತರ 1 ಕಪ್ ಶಾಂಪೂವನ್ನು ಬೆರೆಸಿ. ಈ ಬಿಯರ್ ಶಾಂಪೂವನ್ನು ನಿಮ್ಮ ಪ್ರತಿನಿತ್ಯದ ಬಳಕೆಯ ಶಾಂಪೂವಿನ ಬದಲು ಬಳಸಿ ಕೂದಲನ್ನು ತಣ್ಣನೆಯ ನೀರಿನಿಂದ ತೊಳೆಯಿರಿ. ನೀವು ತಲೆ ಸ್ನಾನ ಮಾಡುವಾಗಲೆಲ್ಲ ಈ ಶಾಂಪೂವನ್ನು ಬಳಸಬಹುದು.

ಬಿಯರ್ ಮತ್ತು ಸ್ಟ್ರಾಬೆರಿ ಹೈ ಮಾಸ್ಕ್

ಬಿಯರ್ ಮತ್ತು ಸ್ಟ್ರಾಬೆರಿ ಹೈ ಮಾಸ್ಕ್

ಸಾಮಗ್ರಿಗಳು:

1 ಕಪ್ ಬಿಯರ್

3 ರಿಂದ 4 ಕಳಿತ ಸ್ಟ್ರಾಬೆರಿಗಳು

ವಿಧಾನ:

ಸ್ಟ್ರಾಬೆರಿಗಳನ್ನು ಹಿಚಿಕಿ ಅದಕ್ಕೆ 1 ಕಪ್ ಬಿಯರ್ ಅನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಸ್ಕಾಲ್ಪಿಗೆ ಈ ಮಿಶ್ರಣವನ್ನು ಹಾಕಿಕೊಂಡು ವೃತ್ತಾಕಾರ ಚಲನೆಯಲ್ಲಿ ಮಸಾಜ್ ಮಾಡಿಕೊಳ್ಳಿ. ಈ ಮಾಸ್ಕನ್ನು ಸುಮಾರು ೨೦ ನಿಮಿಷಗಳ ಕಾಲ ಹಾಗೆಯೇ ಬಿಡಿ. ನಿಮ್ಮ ರೆಗ್ಯುಲರ್ ಶಾಂಪೂವಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಉತ್ತಮ ಪರಿಣಾಮಕ್ಕಾಗಿ ವಾರದಲ್ಲಿ ಒಮ್ಮೆ ಈ ಮನೆಮದ್ದನ್ನು ಬಳಸಿಕೊಳ್ಳಬಹುದು. ಈ ಮೇಲೆ ಹೇಳಲ್ಪಟ್ಟ ಬಿಯರಿನಿಂದ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಮನೆಮದ್ದುಗಳನ್ನು ಸತತವಾಗಿ ಬಳಸುವುದರ ಮೂಲಕ ನಿಮ್ಮ ಕೂದಲಿನ ಆರೈಕೆ ಮಾಡಿಕೊಳ್ಳಿ. ಇದರಿಂದ ಕೂದಲುದುರುವಿಕೆ ಇನ್ನಿತರ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳಬಹುದು. ಕೇಶಶೃಂಗಾರಕ್ಕೆ ತಲೆಕೆಡಿಸಿಕೊಳ್ಳದೆ ಇವನ್ನು ಬಳಸಿ ನೀವೇ ಸ್ವತಃ ಆರೈಕೆ ಮಾಡಿಕೊಳ್ಳಿ. ಆರೋಗ್ಯಯುತವಾದ ಕೂದಲಿನಿಂದ ಸೌಂದರ್ಯವಷ್ಟೇ ಹೆಚ್ಚುವುದಲ್ಲದೇ ಮನವೂ ಕೂಡ ಉಲ್ಲಸಿತವಾಗಿರುತ್ತದೆ.

English summary

Grow Your Hair Faster With Beer! Hair Care Benefits Of Beer

Did you know that beer can do wonders to your hair? Surprised? Yes, most of us search for remedies for our hair to grow longer. We try different medicines, chemical treatments, several shampoos and creams and other hair care products to grow our hair. How to grow hair faster is the common question we all have on our mind. The answer for this question is right here. Beer! So, let's see how you can use beer to grow your hair with some homemade remedies.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more