For Quick Alerts
ALLOW NOTIFICATIONS  
For Daily Alerts

ಒಂದೇ ಒಂದು 'ಟೊಮೆಟೊ' ಕೂದಲಿನ ಅಂದ-ಚೆಂದ ಹೆಚ್ಚಿಸುತ್ತದೆ!

|

ನೀಲ ಕೇಶ ಮಹಿಳೆಯ ಸೌಂದರ್ಯ ಮತ್ತಷ್ಟು ಹೆಚ್ಚಿಸುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಕೂದಲು ದಷ್ಟಪುಷ್ಟವಾಗಿದ್ದು, ಕಪ್ಪಾಗಿದ್ದರೆ, ನೋಡುಗರು ನೋಡುತ್ತಲೇ ಇರುವರು. ಇಂತಹ ಕೂದಲು ಪಡೆಯಲು ತುಂಬಾ ಪರಿಶ್ರಮ ಕೂಡ ಅಗತ್ಯವಿದೆಯೆನ್ನುವ ಮಾತು ಕೇಳಿಬರುವುದು. ಕೆಲವರು ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ದುಬಾರಿ ಮೊತ್ತ ತೆತ್ತು ಕೂದಲಿನ ಆರೈಕೆ ಮಾಡಿಕೊಳ್ಳುವರು. ಆದರೆ ಕೆಲವೊಂದು ರಾಸಾಯನಿಕ ಗಳಿಂದಾಗಿ ಕೂದಲಿಗೆ ಹಾನಿಯಾಗುವುದು ಖಚಿತ. ಇದಕ್ಕೆ ನೀವು ಮನೆಯಲ್ಲೇ ಸಿಗುವಂತಹ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಬಹುದು. ಇದು ಯಾವುದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಕೂದಲಿನ ಆರೈಕೆಗೆ ಕೆಲವು ಮನೆಮದ್ದುಗಳು

ಕೂದಲಿನ ಕೆಲವೊಂದು ಸಮಸ್ಯೆಗಳಿಗೆ ಮನೆಮದ್ದು ತುಂಬಾ ಪರಿಣಾಮಕಾರಿ ಪರಿಹಾರ. ಯಾಕೆಂದರೆ ಇದು ತುಂಬಾ ಅಗ್ಗ ಮತ್ತು ಯಾವುದೇ ರಾಸಾಯನಿಕಗಳು ಇದರಲ್ಲಿ ಸೇರಿರುವುದಿಲ್ಲ. ಬಳಸಲು ಇದು ತುಂಬಾ ಸುರಕ್ಷಿತ ಮತ್ತು ಮನೆಯಲ್ಲೇ ಇದನ್ನು ತಯಾರಿಸಿಕೊಳ್ಳಬಹುದು. ಇಂತಹ ಮನೆಮದ್ದಿನಲ್ಲಿ ಏನಿದೆ ಎಂದು ನಿಮಗೆ ಅಚ್ಚರಿಯಾಗಬಹುದು? ಹೆಚ್ಚಾಗಿ ಮನೆಗಳಲ್ಲಿ ತಯಾರಿಸುವಂತಹ ಮನೆಮದ್ದುಗಳಲ್ಲಿ ತರಕಾರಿಗಳು ಮತ್ತು ಹಣ್ಣುಗಳು ಇರುವುದು. ಇದು ಕೂದಲು ಮತ್ತು ಅದರ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ. ಟೊಮೇಟೊ ಬಳಸಿಕೊಂಡು ಕೂದಲಿಗೆ ಆರೈಕೆ ಮಾಡಿಕೊಳ್ಳುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯುವ.

Ever Tried Using Tomato For Thicker & Stronger Hair?

MOst Read: ಅಕಾಲಿಕ ಕೂದಲು ಬಿಳಿಯಾಗುವುದಕ್ಕೆ ಕರ್ಪೂರದ ಚಿಕಿತ್ಸೆ

ಕೂದಲಿಗೆ ಟೊಮೇಟೊ ಹೇಗೆ ಪರಿಣಾಮಕಾರಿ?

ಟೊಮೆಟೊ ದಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇದ್ದು, ಇದು ಕೋಶಗಳನ್ನು ಪರಿಣಾಮಕಾರಿಯಾಗಿ ಸರಿಪಡಿಸುವುದು. ತಲೆಬುರುಡೆಯಲ್ಲಿ ಇರುವಂತಹ ಕಲ್ಮಷವನ್ನು ತೆಗೆದು, ಕೂದಲನ್ನು ಬುಡದಿಂದಲೇ ಬಲಪಡಿಸಿ, ಗುಣಮಟ್ಟವನ್ನು ಉತ್ತಪಡಿಸುವುದು. ಟೊಮೆಟೋದಿಂದ ಸಿಗುವಂತಹ ಇತರ ಕೆಲವೊಂದು ಲಾಭಗಳು ಈ ಕೆಳಗಿನಂತಿವೆ.

• ಕೂದಲು ರೇಷ್ಮೆಯಂತೆ ಹೊಳೆಯಲು ನೆರವಾಗುವುದು.
• ಇದರಲ್ಲಿ ಇರುವಂತಹ ವಿಟಮಿನ್ ಕೂದಲು ಉದುರುವಿಕೆಗೆ ನೆರವಾಗುವುದು.
• ತುರಿಕೆಯುಂಟು ಮಾಡಲು ತಲೆಬುರುಡೆ ಸಮಸ್ಯೆ ನಿವಾರಿಸುವುದು.
• ತಲೆಹೊಟ್ಟನ್ನು ಪರಿಣಾಮಕಾರಿಯಾಗಿ ನಿವಾರಿಸುವುದು.
• ಕೂದಲನ್ನು ಕಂಡೀಷನ್ ಮಾಡಿ ತುಂಬಾ ನಯ ಮಾಡುವುದು.
• ಒಣ ಕೂದಲಿಗೆ ನೆರವಾಗುವುದು ಮತ್ತು ಕೂದಲಿಗೆ ಕಾಂತಿ ತರುವುದು.
• ಕೂದಲಿನ ವಾಸನೆ ನಿವಾರಣೆ ಮಾಡುವುದು.

Most Read: ನಿಮ್ಮ ಮೈ ಮೇಲೆ ಹಲ್ಲಿ ಬಿದ್ದರೆ ಅಪಶಕುನವೇ? ಅದೃಷ್ಟವೇ?

ತುರಿಕೆಯುಂಟು ಮಾಡುವ ತಲೆಬುರುಡೆ ಮತ್ತು ತಲೆಹೊಟ್ಟಿಗೆ

ಬೇಕಾಗುವ ಸಾಮಗ್ರಿಗಳು

  • 3 ಹಣ್ಣಾದ ಟೊಮೆಟೋ
  • 2 ಚಮಚ ಲಿಂಬೆರಸ

ತಯಾರಿಸುವ ವಿಧಾನ

• ಒಂದು ಪಾತ್ರೆಯಲ್ಲಿ ಲಿಂಬೆರಸ ಹಾಕಿ.
• ಈಗ ಟೊಮೆಟೋದ ತಿರುಳು ತೆಗೆಯಿರಿ ಮತ್ತು ಇದನ್ನು ಪಾತ್ರೆಗೆ ಹಾಕಿ.
• ಟೊಮೇಟೊತಿರುಳು ಮತ್ತು ಲಿಂಬೆರಸವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ.
• ಕೈಗಳನ್ನು ಬಳಸಿಕೊಂಡು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಈ ಪೇಸ್ಟ್ ಹಚ್ಚಿಕೊಳ್ಳುವಾಗ ಉಗುರಿನಿಂದ ತಲೆಬುರುಡೆ ಕೆರೆದುಕೊಳ್ಳಬೇಡಿ.
• 30ನಿಮಿಷ ಕಾಲ ಹಾಗೆ ಬಿಟ್ಟ ಬಳಿಕ ತಣ್ಣೀರಿನಿಂದ ತೊಳೆಯಿರಿ. ಕೂದಲು ತೊಳೆದ ಬಳಿಕ ಒಣಗಿಸಿ. ಪೇಸ್ಟ್ ಹಚ್ಚಿಕೊಂಡ ಬಳಿಕ ಶಾಂಪೂ ಬಳಸುವ ಅಗತ್ಯವಿಲ್ಲ.
• ಪರಿಣಾಮಕಾರಿ ಫಲಿತಾಂಶಕ್ಕಾಗಿ ನೀವು ಇದನ್ನ ವಾರದಲ್ಲಿ ಎರಡು ಸಲ ಬಳಸಿ.

ದಪ್ಪಗಿನ ಕೂದಲಿಗೆ

ಬೇಕಾಗುವ ಸಾಮಗ್ರಿಗಳು

  • ಎರಡು ಚಮಚ ಹರಳೆಣ್ಣೆ
  • 1 ಹಣ್ಣಾದ ಟೊಮೆಟೊ

ತಯಾರಿಸುವ ವಿಧಾನ

• ಟೊಮೇಟೊ ತಿರುಳು ಹಾಕಿ, ಅದಕ್ಕೆ ಹರಳೆಣ್ಣೆ ಹಾಕಿಕೊಂಡು ಮಿಶ್ರಣ ಮಾಡಿಕೊಂಡು ನಯವಾದ ಪೇಸ್ಟ್ ಮಾಡಿಕೊಳ್ಳಿ.
• ಇದನ್ನು ಮಿಶ್ರಣ ಮಾಡಿ. ಆದರೆ ತಲೆಗೆ ಹಚ್ಚಿಕೊಳ್ಳುವ ವೇಳೆ ಇದು ಅಷ್ಟು ಬಿಸಿಯಾಗಿರುವುದು ಬೇಡ.
• ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ.
• 1-2 ಗಂಟೆಗಳ ಕಾಲ ಹಾಗೆ ಬಿಡಿ.
• ಶಾಂಪೂ ಅಥವಾ ಕಂಡಿಷನರ್ ಹಾಕಿ ತೊಳೆಯಿರಿ.
• ವಾರದಲ್ಲಿ ಎರಡು ಸಲ ಬಳಸಿದರೆ ಫಲಿತಾಂಶ ಸಿಗುವುದು.

ಕೂದಲನ್ನು ಕಂಡೀಷನ್ ಮಾಡಲು

ಬೇಕಾಗುವ ಸಾಮಗ್ರಿಗಳು

  • 2 ಚಮಚ ಜೇನುತುಪ್ಪ
  • 2 ಹಣ್ಣಾಗಿರುವ ಟೊಮೆಟೊ

Most Read: ಹಲ್ಲು ನೋವಿಗೆ ಆಯುರ್ವೇದ ಚಿಕಿತ್ಸೆ-ಒಂದೆರಡು ಗಂಟೆಯಲ್ಲಿಯೇ ನಿಯಂತ್ರಣಕ್ಕೆ!

ತಯಾರಿಸುವ ವಿಧಾನ

• ಒಂದು ಪಾತ್ರೆಯಲ್ಲಿ ಹಣ್ಣಾದ ಟೊಮೇಟೊತೆಗೆದುಕೊಂಡು ಅದನ್ನು ಸರಿಯಾಗಿ ಹಿಸುಕಿಕೊಳ್ಳಿ.
• ಇದಕ್ಕೆ ಜೇನುತುಪ್ಪ ಬೆರೆಸಿಕೊಂಡು, ನಯವಾದ ಪೇಸ್ಟ್ ಆಗುವ ತನಕ ರುಬ್ಬಿಕೊಳ್ಳಿ.
• ತಲೆಬುರುಡೆ ಮತ್ತು ಕೂದಲಿಗೆ ಇದನ್ನು ಹಚ್ಚಿಕೊಳ್ಳುವ ಮೊದಲು ಸ್ವಲ್ಪ ಸಮಯ ಹಾಗೆ ಬಿಡಿ.
• ಹಚ್ಚಿಕೊಂಡ ಬಳಿಕ ಶಾವರ ಕ್ಯಾಪ್ ಧರಿಸಿ.
• ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಒಂದು ಸಲ ಇದನ್ನು ಬಳಸಿ.
ಟೊಮೆಟೋದ ಈ ಹೇರ್ ಪ್ಯಾಕ್ ಗಳನ್ನು ಬಳಸಿಕೊಂಡು ನಿಸ್ತೇಜ, ಒಣ ಮತ್ತು ಹಾನಿಗೀಡಾಗಿರುವ ಕೂದಲನ್ನು ದೂರಮಾಡಿ. ಕೂದಲಿಗೆ ಟೊಮೇಟೊ ಹಚ್ಚುವುದರಿಂದ ಕಾಂತಿ ಸಿಗುವುದು.

English summary

Ever Tried Using Tomato For Thicker & Stronger Hair?

Home remedies are the perfect solution to all your hair care problems. Why? Because they are cost-effective and have zero chemicals. They are completely safe to use and can be easily tried at home. One such home remedy is tomato. Tomato contains a lot of antioxidants which are effective cell-repairing agents. They help to remove impurities and toxins from your scalp.
X
Desktop Bottom Promotion