For Quick Alerts
ALLOW NOTIFICATIONS  
For Daily Alerts

ಡ್ಯಾಂಡ್ರಫ್ ನಿವಾರಣೆಗೆ ಕೆಲವು ತುಳಸಿ ಎಲೆಗಳು ಸಾಕು

By Hemanth
|

ಕಾಂತಿಯುತ, ರೇಷ್ಮೆಯಂತೆ ಹೊಳೆಯುವ, ಉದ್ದ ಹಾಗೂ ದಪ್ಪಗಿನ ಕೂದಲು ಮಹಿಳೆಯ ನಿಜವಾದ ಸೌಂದರ್ಯದ ಆಸ್ತಿ. ನಿಸ್ತೇಜ, ತೆಳು ಕೂದಲು ಮಹಿಳೆಯರ ಸೌಂದರ್ಯವನ್ನು ಅರ್ಧದಷ್ಟು ಕೆಡಿಸುವುದು ಎಂದರೆ ಸುಳ್ಳಾಗದು. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಕಲುಷಿತ ವಾತಾವರಣದ ಸಮಸ್ಯೆಯಿರಲಿಲ್ಲ ಮತ್ತು ನೈಸರ್ಗಿಕದತ್ತವಾಗಿರುವಂತಹ ಸಾಮಗ್ರಿಗಳನ್ನೇ ಬಳಸಿಕೊಳ್ಳುತ್ತಿದ್ದರು.

Does Tulsi Help In Reducing Dandruff?

ಇದರಿಂದ ಮಹಿಳೆಯರ ಕೂದಲು ಉದ್ದ, ದಪ್ಪ ಹಾಗೂ ಕಾಂತಿಯುತವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ವ್ಯಸ್ತ ಜೀವನ ಹಾಗೂ ಕಲುಷಿತವಾಗಿರುವಂತಹ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಇದರಿಂದ ಸುಂದರ ಹಾಗೂ ಆರೋಗ್ಯಕರ ಕೂದಲು ಎನ್ನುವುದು ಕನಸಿನ ಮಾತಾಗಿದೆ. ಕೂದಲಿನ ಆರೋಗ್ಯಕ್ಕೆ ಸ್ವಲ್ಪ ಸಮಯ ಮತ್ತು ಶ್ರಮ ವಹಿಸಲೇಬೇಕು.

ಕೂದಲಿನ ಆರೈಕೆ ಮಾಡುವ ವೇಳೆ ನೀವು ಪ್ರಮುಖವಾಗಿ

ಕೂದಲಿನ ಆರೈಕೆ ಮಾಡುವ ವೇಳೆ ನೀವು ಪ್ರಮುಖವಾಗಿ

ಗಮನಹರಿಸಲೇಬೇಕಾದ ವಿಷಯವೆಂದರೆ ಅದು ತಲೆಹೊಟ್ಟು. ಯಾಕೆಂದರೆ ಕೂದಲು ಉದುರುವಿಕೆಗೆ ತಲೆಹೊಟ್ಟು ಪ್ರಮುಖ ಕಾರಣವಾಗಿದೆ. ತಲೆಹೊಟ್ಟು ನಿವಾರಣೆ ಮಾಡಲು ನೀವು ಮನೆಯಲ್ಲೇ ಹಲವಾರು ರೀತಿಯ ಮನೆಮದ್ದನ್ನು ತಯಾರಿಸಿಕೊಳ್ಳಬಹುದು. ಇದಕ್ಕೆ ಮೊದಲು ತಲೆಹೊಟ್ಟು ಬರಲು ಮೂಲ ಕಾರಣವೇನೆಂದು ತಿಳಿಯುವುದು ಅಗತ್ಯ.

ತಲೆಹೊಟ್ಟಿಗೆ ಕಾರಣವೇನು?

ತಲೆಹೊಟ್ಟಿಗೆ ಕಾರಣವೇನು?

ತಲೆಬುರುಡೆಯ ತೀವ್ರವಾಗಿರುವ ಸಮಸ್ಯೆಯೇ ತಲೆಹೊಟ್ಟು ಮತ್ತು ಇದು ಯಾವುದೇ ಹಾನಿಯುಂಟು ಮಾಡದೆ ಇದ್ದರೂ ಕಿರಿಕಿರಿ, ತುರಿಕೆ ಉಂಟುಮಾಡುವುದು. ಇದರಿಂದ ಕೂದಲು ಉದುರುವುದು. ತಲೆಬುರುಡೆಯು ತುಂಬಾ ಒಣಗಿದಾಗ ಮತ್ತು ಜಿಡ್ಡಿನಾಂಶವು ಹೆಚ್ಚಾಗಿದ್ದಾಗ ತಲೆಹೊಟ್ಟು ಕಾಣಿಸಿಕೊಳ್ಳುವುದು. ಇದರಿಂದಾಗಿ ಸತ್ತಚರ್ಮದ ತಲೆಯಲ್ಲಿ ಬಿಳಿ ತೊಗಲು ಕಾಣಿಸಿಕೊಳ್ಳುವುದು. ಇದು ನಿಮ್ಮ ಭುಜದ ಮೇಲೆ ಬೀಳಬಹುದು.

ಚರ್ಮದ ಹೊಸ ಕೋಶಗಳು ಇಲ್ಲಿ ನಿರಂತರವಾಗಿ ರೂಪುಗೊಳ್ಳುತ್ತಾ ಇರುವುದು ಮತ್ತು ಸತ್ತ ಚರ್ಮದ ಕೋಶಗಳು ಕಿತ್ತುಹೋಗುತ್ತಲಿರುವುದು. ಸಾಮಾನ್ಯಕ್ಕಿಂತ ವೇಗವಾಗಿ ಸತ್ತ ಚರ್ಮದ ಕೋಶಗಳು ವೇಗವಾಗಿ ಹೋದಾಗ ಚರ್ಮದ ಕೋಶದಲ್ಲಿನ ಎಣ್ಣೆಯು ಗುಂಪಾಗಿ ಬಿಳಿ ತೊಗಲು ಕಾಣಿಸುವುದು.

ಒಣ, ಜಿಡ್ಡಿನಾಂಶವಿರುವ, ಕೂದಲಿನ ಉತ್ಪನ್ನಗಳಿಗೆ ಸೂಕ್ಷ್ಮತೆ, ಕೆಲವೊಂದು ತಲೆಯ ಪರಿಸ್ಥಿತಿಗಳಾದ ಇಸುಬು, ಸೆಬೊರ್ಹೆಕ್ ಡರ್ಮಟೈಟಿಸ್ ಮತ್ತು ಯೀಸ್ಟ್ ನಂತಹ ಶಿಲೀಂಧ್ರಗಳು ಅತಿಯಾಗಿ ಬೆಳವಣಿಗೆಯಾಗುವುದರಿಂದ ತಲೆಹೊಟ್ಟು ಉಂಟಾಗಬಹುದು. ಹಾರ್ಮೋನು ಅಸಮತೋಲನ, ಒತ್ತಡ ಅಥವಾ ಪ್ರತಿರೋಧಕ ಸಮಸ್ಯೆಯ ಸಮಸ್ಯೆಯು ತಲೆಹೊಟ್ಟಿಗೆ ಕಾರಣವಾಗಿರಬಹುದು.

ತಲೆಹೊಟ್ಟಿನ ನಿವಾರಣೆಗೆ ಮನೆಮದ್ದು ನೆರವಾಗುವುದೇ?

ತಲೆಹೊಟ್ಟಿನ ನಿವಾರಣೆಗೆ ಮನೆಮದ್ದು ನೆರವಾಗುವುದೇ?

ತಲೆಹೊಟ್ಟಿನ ನಿವಾರಣೆ ಮಾಡಲು ಮನೆಮದ್ದು ತುಂಬಾ ಸುರಕ್ಷಿತ ಮತ್ತು ಪರಿಣಾಮಕಾರಿ. ಇದು ನಿಮ್ಮ ಅಡುಗೆ ಮನೆಯಲ್ಲಿ ತುಂಬಾ ಸುಲಭವಾಗಿ ಸಿಗುವ ಮತ್ತು ಸರಳವಾದ ಮನೆಮದ್ದು. ತಲೆಹೊಟ್ಟಿನ ನಿವಾರಣೆ ಮಾಡಲು ಲಿಂಬೆ, ಕಹಿಬೇವು, ಮೆಂತ್ಯೆ ಇತ್ಯಾದಿಗಳನ್ನು ನೀವು ಬಳಸಬಹುದು. ಕೆಲವೊಂದು ತೈಲಗಳು ಕೂಡ ತಲೆಹೊಟ್ಟು ನಿವಾರಣೆ ಮಾಡಬಹುದು. ಇದರಲ್ಲಿ ಪ್ರಮುಖವಾಗಿ ತೆಂಗಿನೆಣ್ಣೆ, ಚಾ ಮರದ ಎಣ್ಣೆ ಮತ್ತು ಆಲಿವ್ ತೈಲವು ತುಂಬಾ ಪರಿಣಾಮಕಾರಿ. ಯಾಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಮೊಶ್ಚಿರೈಸ್ ಮಾಡುವಂತಹ ಗುಣಗಳು ಇವೆ. ಆದರೆ ತುಂಬಾ ಪರಿಣಾಮಕಾರಿಯಾಗಿ ತಲೆಹೊಟ್ಟನ್ನು ನಿವಾರಿಸುವಂತಹ ಗಿಡಮೂಲಿಕೆಯೆಂದರೆ ಅದು ತುಳಸಿ. ಸಾವಿರಾರು ವರ್ಷಗಳಿಂದಲೂ ಭಾರತದಲ್ಲಿ ತುಳಸಿಯನ್ನು ಮನೆಮದ್ದಾಗಿ ಬಳಸಿಕೊಂಡು ಬರಲಾಗುತ್ತಾ ಇದೆ. ಇದರಲ್ಲಿ ಹಲವಾರು ರೀತಿಯ ಆರೋಗ್ಯ, ಚರ್ಮ ಮತ್ತು ಕೂದಲಿಗೆ ಲಾಭವಾಗುವ ಗುಣಗಳು ಇವೆ. ಹೆಚ್ಚಿನ ಆಯುರ್ವೇದ ಔಷಧಿಗಳಲ್ಲಿ ತುಳಸಿ ಬಳಸಲಾಗುತ್ತದೆ.

ತಲೆಹೊಟ್ಟು ನಿವಾರಣೆಗೆ ತುಳಸಿ ನೆರವಾಗುವುದೇ?

ತಲೆಹೊಟ್ಟು ನಿವಾರಣೆಗೆ ತುಳಸಿ ನೆರವಾಗುವುದೇ?

ತುಳಸಿಯಿಂದ ನೀವು ಆರೋಗ್ಯಕರ ಮತ್ತು ಕಾಂತಿಯುತ ಕೂದಲು ಪಡೆಯಬಹುದು. ಇದು ತಲೆಹೊಟ್ಟು, ತುರಿಕೆ ಉಂಟುಮಾಡುವ ತಲೆಬುರುಡೆ ನಿವಾರಣೆ ಮತ್ತು ಕೂದಲಿನ ಚೀಲಗಳನ್ನು ಬಲಗೊಳಿಸಲು ನೆರವಾಗುವುದು. ಇದು ಕೂದಲಿಗೆ ತೇವಾಂಶ ನೀಡಿ, ರಕ್ತಸಂಚಾರವನ್ನು ಸುಧಾರಣೆ ಮಾಡುವುದು.

ತಲೆಹೊಟ್ಟಿನ ನಿವಾರಣೆ ಮಾಡುವಲ್ಲಿ ತುಳಸಿಯು ತುಂಬಾ ಪರಿಣಾಮಕಾರಿಯಾಗಿದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಈ ಗುಣಗಳಿಂದಾಗಿ ಇದು ತಲೆಬುರುಡೆಯಲ್ಲಿ ಇರುವ ಎಲ್ಲಾ ಕಲ್ಮಷಗಳನ್ನು ನಿವಾರಣೆ ಮಾಡುವುದು. ಬಿಳಿತೊಗಲನ್ನು ನಿವಾರಿಸುವುದು ಮತ್ತು ತಲೆಬುರುಡೆಯಲ್ಲಿ ಪಿಎಚ್ ಮಟ್ಟ ಕಾಪಾಡುವುದು. ಸೋಂಕು ಉಂಟು ಮಾಡುವಂತಹ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು.

ಕೂದಲಿಗೆ ತುಳಸಿ ಲಾಭಗಳು

ಕೂದಲಿಗೆ ತುಳಸಿ ಲಾಭಗಳು

ತಲೆಹೊಟ್ಟು ಸಮಸ್ಯೆ ನಿವಾರಣೆ ಮಾಡುವುದರೊಂದಿಗೆ ತುಳಸಿಯು ಕೂದಲು ಉದುರದಂತೆ ತಡೆಯುವುದು. ಯಾಕೆಂದರೆ ತುಳಸಿಯಲ್ಲಿ ವಿಟಮಿನ್ ಎ, ಸಿ, ಕೆ ಮತ್ತು ಇ ಶಕ್ತಿಶಾಲಿ ವಿಟಮಿನ್ ಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಹಾನಿಗೊಳಗಾಗಿರುವಂತಹ ಕೂದಲಿನ ಚೀಲಗಳನ್ನು ಇದು ಸರಿಪಡಿಸುವುದು. ಕೂದಲನ್ನು ಬುಡದಿಂದ ಬಲಪಡಿಸಿ, ಕೂದಲು ಉದುರದಂತೆ ತಡೆಯುವುದು.

ತುಳಸಿಯಲ್ಲಿ ಇರುವಂತಹ ಕಬ್ಬಿನಾಂಶ, ಸಿಯಾಸಿನ್ ಮತ್ತು ಪ್ರೋಟೀನ್

ತುಳಸಿಯಲ್ಲಿ ಇರುವಂತಹ ಕಬ್ಬಿನಾಂಶ, ಸಿಯಾಸಿನ್ ಮತ್ತು ಪ್ರೋಟೀನ್

ತಲೆಬುರುಡೆಗೆ ಸರಿಯಾಗಿ ರಕ್ತಸಂಚಾರವಾಗುವಂತೆ ಉತ್ತೇಜಿಸುವುದು. ಇದರಿಂದ ಕೂದಲಿನ ಬುಡವು ಸರಿಯಾಗಿ ಆಮ್ಲಜನಕ ಪಡೆದುಕೊಂಡು ಅದರಿಂದ ಸರಿಯಾಗಿ ಪೋಷಕಾಂಶಗಳನ್ನು ಹೀರಿಕೊಂಡು ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಇದರಲ್ಲಿ ಇರುವಂತಹ ಖನಿಜಾಂಶಗಳು ಮತ್ತು ಕರೊಟೆನ್ ಕೂದಲನ್ನು ಬಲಪಡಿಸುವುದು ಮತ್ತು ತುಂಡಾಗದಂತೆ ತಡೆಯುವುದು. ತಲೆಹೊಟ್ಟು, ಕೂದಲು ತೆಳ್ಳಗಾಗುವುದು, ಅನಾರೋಗ್ಯಕರ ತಲೆಬುರುಡೆ ಮತ್ತು ಕೂದಲು ಬಿಳಿಯಾಗುವ ಸಮಸ್ಯೆಯಿದ್ದರೆ ತುಳಸಿ ಇದಕ್ಕೆ ಪರಿಣಾಮಕಾರಿ. ತುಳಸಿಯಿಂದ ಕೂದಲಿಗೆ ಯಾವೆಲ್ಲಾ ರೀತಿಯ ಲಾಭಗಳು ಇದೆ ಎಂದು ಅರ್ಥಮಾಡಿಕೊಂಡ ಬಳಿಕ ತಲೆಹೊಟ್ಟು ನಿವಾರಣೆಗೆ ತುಳಸಿ ಹೇಗೆ ನೆರವಾಗುವುದು ಎಂದು ತಿಳಿಯಿರಿ.

ತಲೆಹೊಟ್ಟಿಗೆ ತುಳಸಿ ಬಳಸುವುದು ಹೇಗೆ?

ತಲೆಹೊಟ್ಟಿಗೆ ತುಳಸಿ ಬಳಸುವುದು ಹೇಗೆ?

ತಲೆಹೊಟ್ಟಿಗೆ ತುಳಸಿಯನ್ನು ಬಳಸುವುದು ಹೇಗೆ ಎಂದು ನೀವು ಇಲ್ಲಿ ತಿಳಿಯಬಹುದು.

ಬೇಕಾಗುವ ಸಾಮಗ್ರಿಗಳು

  • ತುಳಸಿ ಎಣ್ಣೆ
  • ತೆಂಗಿನೆಣ್ಣೆ
  • ವಿಧಾನ

    ಸ್ವಲ್ಪ ಪ್ರಮಾಣದ ತುಳಸಿ ಎಣ್ಣೆಯನ್ನು ತೆಂಗಿಣ್ಣೆ ಅಥವಾ ಬೇರೆ ಯಾವುದಾದರೂ ಎಣ್ಣೆಗೆ ಹಾಕಿಕೊಂಡು ತಲೆಬುರುಡೆಗೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ.

    ಒಂದು ಗಂಟೆಗಳ ಕಾಲ ಕೂದಲಿನಲ್ಲಿ ಎಣ್ಣೆಯು ಹಾಗೆ ಇರಲಿ ಮತ್ತು ಬಳಿಕ ಶಾಂಪೂ ಹಾಕಿ ತೊಳೆಯಿರಿ.

    ಇದು ಹೇಗೆ ಕೆಲಸ ಮಾಡುವುದು?

    ರಕ್ತಸಂಚಾರ ಸುಧಾರಣೆ ಮಾಡಲು ತುಳಸಿಯು ನೆರವಾಗುವುದು ಮತ್ತು ತಲೆಬುರುಡೆಯನ್ನು ತುಂಬಾ ತಂಪಾಗಿಟ್ಟು, ತುರಿಕೆ ಹಾಗೂ ತಲೆಹೊಟ್ಟು ನಿವಾರಿಸುವುದು. ಕೂದಲಿನ ಚೀಲಗಳಿಗೆ ರಕ್ತಸಂಚಾರವು ಉತ್ತವಾಗುವ ಕಾರಣದಿಂದ ಕೂದಲು ಬೆಳವಣಿಗೆಯಾಗುವುದು. ನಿಯಮಿತವಾಗಿ ಇದನ್ನು ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

    ತಲೆಹೊಟ್ಟು ನಿವಾರಣೆ ಮಾಡಲು ಕೆಲವು ವಿಧಾನಗಳು

    ತಲೆಹೊಟ್ಟು ನಿವಾರಣೆ ಮಾಡಲು ಕೆಲವು ವಿಧಾನಗಳು

    ತುಳಸಿ ಎಲೆಗಳ ಪೇಸ್ಟ್ ಮಾಡಿಕೊಳ್ಳಿ ಮತ್ತು ಅದನ್ನು ನೇರವಾಗಿ ತಲೆಬುರುಡೆ ಮತ್ತು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಶುದ್ಧೀಕರಿಸುವ ಗುಣ ಹೊಂದಿರುವ ತುಳಸಿಯು ತಲೆಹೊಟ್ಟನ್ನು ದೂರವಿಡಲು ನೆರವಾಗುವುದು.

    ತುಳಸಿ ಎಲೆಗಳ ಪೇಸ್ಟ್, ಕರಿಬೇವಿನ ಎಲೆಗಳ ಪೇಸ್ಟ್ ಮತ್ತು ದಾಸವಾಳದ ಪೇಸ್ಟ್ ನ್ನು ಜತೆಯಾಗಿ ಮಿಶ್ರಣ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡರೆ ಆಗ ಆರೋಗ್ಯಕರ ಕೂದಲು ಮತ್ತು ತುರಿಕೆ ತಪ್ಪುವುದು.

    ತಲೆಹೊಟ್ಟು ದೂರವಿಡಲು ಇನ್ನು ಕೆಲವು ಸಲಹೆಗಳು

    ತಲೆಹೊಟ್ಟು ದೂರವಿಡಲು ಇನ್ನು ಕೆಲವು ಸಲಹೆಗಳು

    ತುಳಸಿ ಬಳಸುವಂತಹ ಮನೆಮದ್ದನ್ನು ತಲೆಹೊಟ್ಟಿಗೆ ಬಳಸುವಾಗ ನೀವು ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

    1. ಯಾವಾಗಲೂ ಕೂದಲು ಮತ್ತು ತಲೆಬುರುಡೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಕೊಳಕು ಕೈಗಳಿಂದ ತಲೆಬುರುಡೆ ಮುಟ್ಟಬೇಡಿ. ಬಿಸಿಲಿಗೆ ಹೋಗುವಾಗ ತಲೆಕೂದಲಿನ ರಕ್ಷಣೆಗೆ ಸ್ಕಾರ್ಪ್ ಧರಿಸಿ.

    2. ಒಮೆಗಾ3 ಕೊಬ್ಬಿನಾಮ್ಲ, ಬಿಯೊಟಿನ್ ಮತ್ತು ಪ್ರೋಟೀನ್ ಗಳು ಹೆಚ್ಚಾಗಿ ಇರುವಂತಹ ಆರೋಗ್ಯಕರ ಆಹಾರ ಸೇವನೆ ಮಾಡಿ. ತಲೆಹೊಟ್ಟು ಮತ್ತು ತಲೆಬುರುಡೆಯ ಸೋಂಕನ್ನು ದೂರವಿಡಲು ಹಸಿರೆಲೆ ತರಕಾರಿಗಳನ್ನು ಸೇವನೆ ಮಾಡಿ.

    3. ತಲೆಹೊಟ್ಟಿಗೆ ಮನೆಮದ್ದು ತುಂಬಾ ಪರಿಣಾಮಕಾರಿ. ಈ ಮನೆಮದ್ದನ್ನು ನಿಯಮಿತವಾಗಿ ಬಳಸಿಕೊಂಡು ಕೂದಲಿನ ಆರೈಕೆ ಮಾಡಿ.

    4. ತಲೆಬುರುಡೆ ಸಮಸ್ಯೆಯು ನಿಯಂತ್ರಣದಿಂದ ಹೊರಗಿದ್ದರೆ ಆಗ ನೀವು ಒಬ್ಬ ಚರ್ಮರೋಗ ವೈದ್ಯರನ್ನು ಭೇಟಿಯಾಗಿ.

English summary

Does Tulsi Help In Reducing Dandruff?

Dandruff is a chronic condition of the scalp, and though it may appear harmless, it causes itchy, flaky scalp and is the prime reason for hair fall. Tulsi can help you in gaining healthy, lustrous hair. It is the ideal treatment for various hair issues such as dandruff and itchy scalp and strengthening of hair follicles.
Story first published: Monday, August 27, 2018, 15:20 [IST]
X
Desktop Bottom Promotion