For Quick Alerts
ALLOW NOTIFICATIONS  
For Daily Alerts

ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ!

By Sushma Charhra
|

ನೇರವಾಗಿರುವ ಕೂದಲು ಅಂದ್ರೆ ಈಗಿನವರಿಗೆ ಒಂದು ಟ್ರೆಂಡ್. ಹಾಗಾಗಿ ಅದೆಷ್ಟೋ ಮಂದಿ ದುಬಾರಿ ಚಿಕಿತ್ಸೆಗಳ ಮೊರೆ ಹೋಗಿ ಕೂದಲನ್ನು ನೇರವಾಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಸಾಕಷ್ಟು ಪ್ರೊಡಕ್ಟ್ ಇಂದಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಲಭ್ಯವಿದ್ದು, ಅವುಗಳು ನಿಮ್ಮ ಕೂದಲಿನ ಸ್ವರೂಪದ ಬದಲಾವಣೆಯನ್ನು ಭಾರೀ ಮಟ್ಟದಲ್ಲಿ ಮಾಡುತ್ತವೆ ಎಂದು ಹೇಳಲಾಗುತ್ತೆ

ಯಾರು ನೈಸರ್ಗಿಕವಾಗಿ ನೇರ ಕೂದಲನ್ನು ಪಡೆದಿರುವುದಿಲ್ಲವೋ ಅಂತವರಲ್ಲಿ ಹೆಚ್ಚಿನವರು ತಮ್ಮ ಗುಂಗುರು ಕೂದಲನ್ನು ಹೋಗಲಾಡಿಸಿಕೊಂಡು, ನೇರ ಕೂದಲನ್ನು ಪಡೆಯುವ ನಿಟ್ಟಿನಲ್ಲಿ ಕೆಮಿಕಲ್ ಮಯ ಟ್ರೀಟ್ ಮೆಂಟ್ ಗಳ ಮೊರೆ ಹೋಗುತ್ತಾರೆ. ಹಾಗಾಗಿ ಸಾಕಷ್ಟು ಬ್ಯೂಟಿ ಪಾರ್ಲರ್ ಗಳೂ ಕೂಡ ಇಂತಹ ಹೇರ್ ಸ್ಟ್ರೈಟನಿಂಗ್ ಚಿಕಿತ್ಸೆಗಳನ್ನು ನೀಡಿ ಕ್ಷಣಮಾತ್ರದಲ್ಲಿ ನಿಮ್ಮ ಕೂದಲನ್ನು ನೇರವಾಗಿಸಿ ಬಿಡುತ್ತಾರೆ. ಆದರೆ ಇವು ಶಾಶ್ವತ ಅಲ್ಲ ಅಂದರೆ ಹೆಚ್ಚು ದಿನ ಇರುವುದಿಲ್ಲ.

Straightening Your Hair

ಇಂತಹ ಪ್ರೊಡಕ್ಟ್ ಗಳ ಒಂದು ದೊಡ್ಡ ಸಮಸ್ಯೆಯೆಂದರೆ ಅವುಗಳಲ್ಲಿ ಅತಿಯಾಗಿ ರಾಸಾಯನಿಕ ಪದಾರ್ಥಗಳನ್ನು ಒಳಗೊಂಡಿದ್ದು ಅವು ನಿಮ್ಮ ಕೂದಲಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ. ಕೆಲವೇ ದಿನದಲ್ಲಿ ನೀವು ಸಲೂನ್ ನಲ್ಲಿ ಸ್ಟ್ರೈಟ್ ಮಾಡಿಸಿಕೊಂಡ ಕೂದಲು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗೆ ಕೂದಲನ್ನು ನೇರವಾಗಿಸಲು ಕೆಲವು ರಾಸಾಯನಿಕ ರಹಿತ ನೈಸರ್ಗಿಕ ಮಾರ್ಗಗಳಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವಾ? ಎಸ್ , ಇಂತಹ ಕೆಲವು ಮಾರ್ಗಗಳಿವೆ....

ಹಾಲು ...
ಹಾಲು ಕೂದಲನ್ನು ಮೃದುವಾಗಿ ಮತ್ತು ಗಂಟುಗಂಟಾಗದಂತೆ ನೋಡಿಕೊಳ್ಳುತ್ತೆ. ಯಾಕೆಂದರೆ ಇದರಲ್ಲಿ ಪ್ರೋಟೀನ್ ಅಂಶವಿರುತ್ತೆ. ಇದು ನಿಮ್ಮ ಕರ್ಲಿ ಹೇರನ್ನು ನೇರವಾಗಿಸಲು ಸಹಾಯ ಮಾಡುತ್ತೆ.
ವಿಧಾನ 1:
1. ಒಂದು ಕಪ್ ಹಾಲು ಮತ್ತು ನೀರನ್ನು ಮಿಕ್ಸ್ ಮಾಡಿಕೊಳ್ಳಿ. ಒಂದು ಸ್ಪ್ರೇ ಬಾಟಲ್ ನಲ್ಲಿ ಅದನ್ನು ಸ್ಟೋರ್ ಮಾಡಿ. ಇದನ್ನು ಅಪ್ಲೈ ಮಾಡಿಕೊಳ್ಳುವ ಮುನ್ನ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ ಮತ್ತು ಸಿಕ್ಕುಗಳಿದ್ದಲ್ಲಿ ಬಿಡಿಸಿಕೊಳ್ಳಿ. ನಂತರ ನಿಮ್ಮ ಕೂದಲಿಗೆ ಅಪ್ಲೈ ಮಾಡಿ..ಮತ್ತೆ ಕೂದಲನ್ನು ಬಾಚಿಕೊಳ್ಳಿ
2. 30 ನಿಮಿಷ ಹಾಗೆಯೇ ಬಿಡಿ. ಹಾಲನ್ನು ನಿಮ್ಮ ಕೂದಲು ಹೀರಿಕೊಳ್ಳಲಿ. ನಂತರ ಕೂದಲನ್ನು ಶಾಂಪೂ ಮತ್ತು ಕಂಡೀಷನರ್ ಬಳಸಿ ವಾಷ್ ಮಾಡಿ.

ವಿಧಾನ-2:
ಬೇಕಾಗುವ ಸಾಮಗ್ರಿಗಳು :
1 ಕಪ್ ಹಾಲು
2-3 ಟೇಬಲ್ ಸ್ಪೂನ್ ಜೇನುತುಪ್ಪ
2-3 ಟೇಬಲ್ ಸ್ಪೂನ್ ಬಾಳೆಹಣ್ಣು
ಇದನ್ನು ಬಳಸುವ ವಿಧಾನ ಹೇಗೆ ?
1. ಒಂದು ಕಪ್ ನಷ್ಟು ಹಾಲಿಗೆ ಜೇನುತುಪ್ಪವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ.
2. ಅದಕ್ಕೆ ಬಾಳೆಹಣ್ಣನ್ನು ಸೇರಿಸಿ ಮತ್ತಷ್ಟು ಗಟ್ಟಿ ಪೇಸ್ಟ್ ತಯಾರಿಸಿ. ಬಾಳೆಹಣ್ಣು ಕೂದಲಿಗೆ ಉತ್ತಮ ಮಾಯ್ಚಿರೈಸರ್ ಆಗಬಲ್ಲವು
3. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ಒಂದು ಗಂಟೆ ಇಲ್ಲವೇ ಅದಕ್ಕಿಂತ ಹೆಚ್ಚು ಸಮಯ ಕೂದಲಿನಲ್ಲೇ ಬಿಡಿ. ಸರಿಯಾಗಿ ಒಣಗುವ ವರೆಗೆ ಕಾಯಿರಿ.
4. ನಂತರ ಶಾಂಪೂ ಬಳಸಿ ವಾಷ್ ಮಾಡಿ.

ಆಲಿವ್ ಆಯಿಲ್ ಮತ್ತು ಮೊಟ್ಟೆ
ಆಲಿವ್ ಆಯಿಲ್ ಕೂದಲನ್ನು ಮಾಯ್ಚಿರೈಸ್ ಆಗಿರುವಂತೆ ನೋಡಿಕೊಳ್ಳುತ್ತೆ ಮತ್ತು ಮೊಟ್ಟೆಯು ನಿಮ್ಮ ಕೂದಲನ್ನು ಸ್ಟ್ರಾಂಗ್ ಆಗಿ ಮತ್ತು ಹೊಳೆಯುವಂತೆ ಮಾಡಲು ನೆರವಾಗುತ್ತೆ.

ಬೇಕಾಗುವ ಸಾಮಗ್ರಿಗಳು -
ಎರಡು ಮೊಟ್ಟೆಗಳು
4 ಟೇಬಲ್ ಸ್ಪೂನ್ ಆಲಿವ್ ಆಯಿಲ್
ಮಾಡುವ ವಿಧಾನ -
1. ಎರಡು ಮೊಟ್ಟೆಯನ್ನು ಚೆನ್ನಾಗಿ ಬೀಟ್ ಮಾಡಿ ಅದನ್ನು ಆಲಿವ್ ಆಯಿಲ್ ನೊಂದಿಗೆ ಮಿಕ್ಸ್ ಮಾಡಿ
2. ಇದನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಿ, ನಂತರ ನಿಮ್ಮ ಕೂದಲನ್ನು ಬಾಚಿಕೊಳ್ಳಿ
3. ನಂತರ ಶವರ್ ಕ್ಯಾಪ್ ಧರಿಸಿ. ಸುಮಾರು 30 ರಿಂದ 45 ನಿಮಿಷ ಹಾಗೆಯೇ ಇರಲಿ. ನಂತರ ಕೂದಲನ್ನು ಮೃದುವಾದ ಶಾಂಪೂ ಬಳಸಿ ತೊಳೆಯಿರಿ

ಮುಲ್ತಾನಿ ಮಿಟ್ಟಿ
ಮುಲ್ತಾನಿ ಮಿಟ್ಟಿಯನ್ನು ಬೆಸ್ಟ್ ಕ್ಲೆನ್ಸಿಂಗ್ ಏಜೆಂಟ್ ಎಂದು ಪರಿಗಣಿಸಲಾಗುತ್ತೆ. ಕೂದಲನ್ನು ಸ್ಟ್ರೈಟ್ ಮಾಡುವುದರ ಜೊತೆಗೆ ಇದು ಡ್ಯಾಮೇಜ್ ಕಂಟ್ರೋಲ್ ನಂತೆ ವರ್ತಿಸುತ್ತೆ.

ಬೇಕಾಗುವ ಸಾಮಗ್ರಿಗಳು
ಒಂದು ಕಪ್ ಮುಲ್ತಾನಿ ಮಿಟ್ಟಿ
1 ಮೊಟ್ಟೆಯ ಬಿಳಿಯ ಭಾಗ
2 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು
ಮಾಡುವ ವಿಧಾನ ಹೇಗೆ ಗೊತ್ತಾ?
1. ಒಂದು ಕಪ್ ಮುಲ್ತಾನಿ ಮಿಟ್ಟಿ,ಒಂದು ಮೊಟ್ಟೆಯ ಬಿಳಿಭಾಗ ಮತ್ತು ಎರಡು ಟೇಬಲ್ ಸ್ಪೂನ್ ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಗಟ್ಟಿ ಪೇಸ್ಟ್ ನಂತಾಗಲು ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ
2. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ ಮತ್ತು ನಂತರ ದಪ್ಪ ಹಲ್ಲಿನ ಬಾಚಣಿಗೆ ಬಳಸಿ ಕೂದಲನ್ನು ಬಾಚಿಕೊಳ್ಳಿ
3. ಒಂದು ಗಂಟೆ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆಯರಿ.ನಂತರ ಹಾಲನ್ನು ನಿಮ್ಮ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ.
4. 15 ನಿಮಿಷ ಹಾಗೆಯೇ ಬಿಟ್ಟು ನಂತರ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲನ್ನು ತೊಳೆಯಿರಿ.

ಹಾಟ್ ಆಯಿಲ್ ಮಸಾಜ್
ಹೇಗೆ ಬಳಸುವುದು ಗೊತ್ತಾ?
1. ಸ್ವಲ್ಪ ಹದ ಬೆಚ್ಚಗಿರುವ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನೀವು ಯಾವುದೇ ನಿಮ್ಮ ಇಚ್ಛೆಯ ಎಣ್ಣೆಯನ್ನು ಆಯ್ದುಕೊಳ್ಳಬಹುದು.
2. ಎಣ್ಣೆಯು ಪ್ರತಿ ಕೂದಲಿನ ಬುಡಕ್ಕೂ ಸಮನಾಗಿ ಹಂಚಿಕೆಯಾಗಬೇಕು ಎಂದರೆ ನೀವು ದಪ್ಪ ಹಲ್ಲಿನ ಬಾಚಣಿಗೆ ತೆಗೆದುಕೊಂಡು ಕೂದಲನ್ನು ಬಾಚಿಕೊಳ್ಳಬೇಕು. ಇದು ನೀವು ಕೂದಲು ತೊಳೆಯುವಾಗ ಆಗುವ ಬ್ರೇಕೇಜನ್ನು ಕೂಡ ನಿವಾರಿಸುತ್ತೆ.
3. ನಂತ್ರ ಬಿಸಿಯಾದ, ಮತ್ತು ಒದ್ದೆಯಾದ ಟವೆಲ್ ನಿಂದ 30 ರಿಂದ 40 ನಿಮಿಷ ನಿಮ್ಮ ಕೂದಲನ್ನು ಸುತ್ತಿಕೊಳ್ಳಿ.
4. 40 ನಿಮಿಷದ ನಂತರ ಕೂದಲನ್ನು ಮೃದುವಾದ ಶಾಂಪೂ ಬಳಸಿ ವಾಷ್ ಮಾಡಿ. ನಂತರ ನಿಮ್ಮ ಕೂದಲನ್ನು ಒದ್ದೆ ಇರುವಾಗಲೇ ಬಾಚಿಕೊಳ್ಳಿ.ನಂತರ ಡ್ರೈ ಆಗಲು ಬಿಡಿ.

ಹರಳೆಣ್ಣೆ
ಹರಳೆಣ್ಣೆಯು ನಿಮ್ಮ ಕೂದಲನ್ನು ಸ್ಟ್ರೈಟ್ ಮಾಡುವಲ್ಲಿ ಭಾರೀ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೆ.
ಬಳಸುವ ವಿಧಾನ ಹೇಗೆ?
1. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ. ನಿಮ್ಮ ಕೂದಲಿಗೆ ಅದರಿಂದ ಮಸಾಜ್ ಮಾಡಿ.
2. ಸ್ವಲ್ಪ ಬಿಸಿಯಾಗಿರುವ ಟಬೆಲ್ ಬಳಸಿ ಕೂದಲನ್ನು ಕವರ್ ಮಾಡಿ ಮುಚ್ಚಿಕೊಳ್ಳಿ. ಸುಮಾರು 30 ನಿಮಿಷ ಹಾಗೆಯೇ ಇರಲಿ
3. ನಂತರ, ಕೂದಲನ್ನು ಮೃದುವಾದ ಶಾಂಪೂ ಬಳಸಿ ತೊಳೆಯಿರಿ.
4. ಇದನ್ನು ನೀವು ವಾರಕ್ಕೆ ಎರಡು ಬಾರಿ ಮಾಡುವುದರಿಂದ ಉತ್ತಮವಾದ ಮತ್ತು ವೇಗವಾದ ಫಲಿತಾಂಶ ಪಡೆಯಲು ಸಾಧ್ಯವಿದೆ.

ವಿನೆಗರ್
ವಿನೆಗರ್ ನಿಮ್ಮ ಕೂದಲಿಗೆ ರೇಷ್ಮೆಯಂತ ಕಾಂತಿ ಮತ್ತು ಹೊಳಪು ನೀಡಲು ನೆರವಾಗುತ್ತೆ
ಬಳಸುವ ವಿಧಾನ ಹೇಗೆ?
1. ಕೂದಲಿಗೆ ಶಾಂಪೂ, ಕಂಡೀಷನರ್ ಹಾಕಿ ಮೊದಲು ತೊಳೆದು ತೆಗೆಯಿರಿ
2. ಕೊನೆಯಲ್ಲಿ ಒಂದು ಚೊಂಬು ನೀರಿಗೆ ಒಂದಷ್ಟು ಹನಿ ವಿನೆಗರ್ ನ್ನು ಸೇರಿಸಿ. ಅದರಿಂದ ನಿಮ್ಮ ಕೂದಲನ್ನು ಕೊನೆಯ ಬಾರಿ ತೊಳೆಯಿರಿ,

ಬಾಳೆಹಣ್ಣು ಮತ್ತು ಜೇನುತುಪ್ಪ
ಈ ಮಿಶ್ರಣದ ಹೇರ್ ಮಾಸ್ಕ್ ಕೇವಲ ನಿಮ್ಮ ಕೂದಲನ್ನು ಸ್ಟ್ರೈಟ್ ಮಾಡುವುದು ಮಾತ್ರವಲ್ಲ ಬದಲಾಗಿ ಸ್ಕಾಲ್ಪ್ ಭಾಗವನ್ನು ಹೈಡ್ರೇಟ್ ಮಾಡುವಂತೆಯೂ ನೋಡಿಕೊಳ್ಳುತ್ತೆ.
ಬೇಕಾಗುವ ಸಾಮಗ್ರಿಗಳು
2 ಬಾಳೆಹಣ್ಣು
2 ಟೇಬಲ್ ಸ್ಪೂನ್ ಜೇನು ತುಪ್ಪ
2 ಟೇಬಲ್ ಸ್ಪೂನ್ ಮೊಸರು
2 ಟೇಬಲ್ ಸ್ಪೂನ್ ಆಲಿವ್ ಆಯಿಲ್

ಬಳಸುವ ವಿಧಾನ ಹೇಗೆ?
1. ಎರಡು ಸಿಪ್ಪೆ ತೆಗೆದ ಬಾಳೆಹಣ್ಣನ್ನು ತೆಗೆದುಕೊಳ್ಳಿ. ಅದಕ್ಕೆ ಎರಡು ಟೇಬಲ್ ಸ್ಪೂನ್ ಹನಿಯನ್ನು ಸೇರಿಸಿ, ಆಲಿವ್ ಆಯಿಲ್ ಮತ್ತು ಮೊಸರನ್ನೂ ಸೇರಿಸಿ.. ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ.
2. ಇದನ್ನು ನಿಮ್ಮ ಕೂದಲಿಗೆ ಹಚ್ಚಿ ಮಾಸ್ಕ್ ಮಾಡಿ. ಶವರ್ ಕ್ಯಾಪ್ ಬಳಸಿ ಸೋರದಂತೆ ಜಾಗೃತೆ ವಹಿಸಬಹುದು.
3. ಅರ್ಧ ಗಂಟೆ ಬಿಟ್ಟು ಕೂದಲನ್ನು ಚೆನ್ನಾಗಿ ತೊಳೆಯಿರಿ.

English summary

Does Milk Help In Straightening Your Hair?

Straight hair has always been a trend. Nowadays, people go for expensive treatments to straighten their hair. Also, there are many products available today that could change the texture of your hair to a great extent. People who are not blessed with naturally straight hair often turn to chemical treatments to get rid of unruly waves and curls. there are some natural ways to straighten your hair without undergoing the harsh effects of chemical treatments. Let us see what they are.
X
Desktop Bottom Promotion