For Quick Alerts
ALLOW NOTIFICATIONS  
For Daily Alerts

ಪುರುಷರ ಬೊಕ್ಕತಲೆ ಸಮಸ್ಯೆಗೆ ಸ್ಟೆಪ್ ಬೈ ಸ್ಟೆಪ್ ಸರಳ ಟಿಪ್ಸ್

By Deepu
|

ಯಾವ ಪುರುಷನಿಗೂ ತನ್ನನ್ನು ಜನರು ಮೊಟ್ಟೆ ಎಂದು ಕರೆಯುವುದನ್ನು ಇಷ್ಟಪಡಲಾರ. ಯಾಕೆಂದರೆ ಬೊಕ್ಕ ತಲೆಯು ಪುರುಷರ ಸೌಂದರ್ಯವನ್ನು ಕಸಿಯುವುದು. ಪ್ರತಿಯೊಬ್ಬ ಪುರುಷನಿಗೂ ತನಗೆ ಸುಂದರ ಹಾಗೂ ತಲೆತುಂಬಾ ಕೂದಲು ಬೇಕೆಂಬ ಕನಸು ಇದ್ದೇ ಇರುತ್ತದೆ. ಆದರೆ ಇಂದಿನ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ಪುರುಷರಲ್ಲಿ ಕೂದಲು ಉದುರುವಂತಹ ಸಮಸ್ಯೆಯು ಹೆಚ್ಚಾಗುತ್ತಿದೆ.

ಇದರಿಂದ ಬೊಕ್ಕತಲೆಯವರು ಪ್ರತಿಯೊಂದು ಕಡೆಯಲ್ಲೂ ಕಾಣಸಿಗುವರು. ಇದು ಹೆಚ್ಚಿನವರಿಗೆ ತುಂಬಾ ಬೇಸರ ಉಂಟು ಮಾಡುವುದು ಮತ್ತು ಅವರು ಹೆಚ್ಚಾಗಿ ಯಾವುದೇ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ. ಇಂತಹ ಸಮಸ್ಯೆಗೆ ವಯಸ್ಸು, ಆರೋಗ್ಯ ಸಮಸ್ಯೆ, ಗುಣಮಟ್ಟವಿಲ್ಲದ ನೀರಿನ ಬಳಕೆ, ಶುಚಿತ್ವವಿಲ್ಲದೆ ಇರುವುದು ಇತ್ಯಾದಿಗಳು.

ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಪರಿಹಾರವಿರುವ ಕಾರಣದಿಂದಾಗಿ ಬೊಕ್ಕ ತಲೆಯಲ್ಲೂ ಕೂದಲು ಎಬ್ಬಿಸುವಂತಹ ಚಿಕಿತ್ಸೆಗಳು ಇವೆ. ಆದರೆ ಇದಕ್ಕೆ ನಿಯಮಿತವಾಗಿ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆಗೆ ಒಳಗಾಗಿ ತುಂಬಾ ಹಣ ಖರ್ಚು ಮಾಡಬೇಕಾಗುತ್ತದೆ. ನಾವು ಸೇವಿಸುವಂತಹ ಆಹಾರವು ನಮ್ಮ ಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದು. ಅನಾರೋಗ್ಯಕರ ಮತ್ತು ಫಾಸ್ಟ್ ಫುಡ್ ಸೇವನೆಯಿಂದಾಗಿ ಕೂದಲು ಉದುರುವ ಸಮಸ್ಯೆ ಬರಬಹುದು. ಹೆಚ್ಚು ಹಣ ಖರ್ಚು ಮಾಡದೆ ಕೂದಲು ಬೆಳೆಸುವ ಬಗ್ಗೆ ನೀವು ಯೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿ ಕೆಲವೊಂದು ಮನೆಮದ್ದುಗಳು ನಿಮಗಾಗಿ ಕಾಯುತ್ತಿದೆ. ಇದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಿ, ಕೂದಲಿನ ಬೆಳವಣಿಗೆ ಹೆಚ್ಚಿಸಬಹುದು....

ಬೀಟ್ ರೂಟ್ ಮತ್ತು ಮದರಂಗಿ ಹೇರ್ ಪ್ಯಾಕ್

ಬೀಟ್ ರೂಟ್ ಮತ್ತು ಮದರಂಗಿ ಹೇರ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು

ಬೀಟ್ ರೂಟ್ ಎಲೆಗಳು: 2-3

ಬೀಟ್ ರೂಟ್ :1/2

ಮದರಂಗಿ ಎಲೆಗಳು2-3

ವಿಧಾನ

ಬೀಟ್ ರೂಟ್ ಎಲೆಗಳು ಮತ್ತು ಮದರಂಗಿ ಎಲೆಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದಕ್ಕೆ ½ ಬೀಟ್ ರೂಟ್ ಹಾಕಿಕೊಂಡು ರುಬ್ಬಿ. ಇದಕ್ಕೆ ನೀರು ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಂಡು ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ನೀರು ಮತ್ತು ಶಾಂಪೂ ಬಳಸಿ ಕೂದಲು ತೊಳೆಯಿರಿ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಬೇಕಾಗುವ ಸಾಮಗ್ರಿಗಳು(ಯಾವುದಾದರೂ ಒಂದನ್ನು ಬಳಸಿ)

ಕಿತ್ತಳೆ: 1

ಲಿಂಬೆ: 2-3

ಕಿವಿ:1

ವಿಧಾನ

ಹಣ್ಣಿನಿಂದ ಅದರ ರಸ ತೆಗೆಯಿರಿ ಮತ್ತು ಒಂದು ಪಾತ್ರೆಗೆ ಹಾಕಿ.

ಇದನ್ನು ತಲೆಬುರುಡೆಗೆ ಹಚ್ಚಿಕೊಂಡು 15-20 ನಿಮಿಷ ಕಾಲ ಏನೂ ಮಾಡದೆ ಹಾಗೆ ಬಿಡಿ. ಬಳಿಕ ಶಾಂಪೂ ಹಾಕಿ ತೊಳೆಯಿರಿ.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

ಅಮೈನೋ ಆಸಿಡ್ ಮತ್ತು ವಿಟಮಿನ್ ಸಿಗಳನ್ನು ನೀಡಿ ದಾಸವಾಳವು ನಿಮ್ಮ ಕೂದಲುದುರುವಿಕೆ ಮತ್ತು ಕೂದಲಿನ ಸಮಸ್ಯೆಯನ್ನು ನಿವಾರಿಸಿ ಕೂದಲು ಆರೋಗ್ಯವಾಗಿ ಬೆಳೆಯಲು ನೆರವಾಗುತ್ತೆ. ಅಷ್ಟೇ ಅಲ್ಲ, ನಿಮ್ಮ ಕೂದಲು ಶುಷ್ಕವಾಗಿದ್ದರೆ ಇದೊಂದು ಬೆಸ್ಟ್ ಕಂಡೀಷನರ್ ನಂತೆ ಕೆಲಸ ನಿರ್ವಹಿಸುತ್ತೆ.

ಬೇಕಾಗುವ ಸಾಮಗ್ರಿಗಳು

ದಾಸವಾಳದ ಹೂವುಗಳು:1-2

ವಿಧಾನ

ದಾಸವಾಳದ ಹೂವುಗಳನ್ನು ನೀರು ಹಾಕಿ ರುಬ್ಬಿಕೊಂಡು ಪೇಸ್ಟ್ ಮಾಡಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡ ಬಳಿಕ 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಅದು ಒಣಗಲಿ. ಶುದ್ಧ ನೀರಿನಿಂದ ತೊಳೆಯಿರಿ.

ಈರುಳ್ಳಿ ರಸ

ಈರುಳ್ಳಿ ರಸ

ಬೇಕಾಗುವ ಸಾಮಗ್ರಿ

ಈರುಳ್ಳಿ: 1

ವಿಧಾನ:

ಈರುಳ್ಳಿ ಸಿಪ್ಪೆ ತೆಗೆದು ಅದನ್ನು ನಾಲ್ಕು ತುಂಡುಳನ್ನಾಗಿ ಮಾಡಿ. ಇದಕ್ಕೆ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿ. ಮಿಶ್ರಣವನ್ನು ಸೋಸಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ಶಾಂಪೂವಿನಿಂದ ತೊಳೆಯಿರಿ.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ದೇಹಕ್ಕೆ ಮತ್ತು ಕೂದಲಿಗೆ ಎರಡಕ್ಕೂ ಬಹಳ ಒಳ್ಳೆಯದು.ಆಂಟಿ ಇನ್ ಫ್ಲಮೇಟರಿ ಗುಣಗಳು ಇದರಲ್ಲಿದ್ದು, ನೆತ್ತಿಯಲ್ಲಿ ವಾಸಿಸುವ ಪರಾವಲಂಬಿಗಳ ನಾಶಕ್ಕೆ ಇದು ಸಹಕಾರಿ. ನೆತ್ತಿಯಲ್ಲಿ ಇದು ರಕ್ತಸಂಚಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಗ್ರೀನ್ ಟೀ ನೀವು ಕುಡಿಯಲೂ ಬಹುದು ಮತ್ತು ಅದನ್ನೂ ಕೂದಲಿಗೂ ಅಪ್ಲೈ ಮಾಡಬಹುದು.

ಬೇಕಾಗುವ ವಸ್ತುಗಳು :

ಗ್ರೀನ್ ಟೀ - 3 ರಿಂದ 4 ಟೀ ಬ್ಯಾಗ್ ನೀರು -ಅರ್ಧ ಲೀಟರ್

ಮಾಡುವ ವಿಧಾನ:

ಅರ್ಧ ಲೀಟರ್ ನೀರಿನಲ್ಲಿ ಮೂರರಿಂದ ನಾಲ್ಕು ಟೀ ಬ್ಯಾಗ್ ಗಳನ್ನು ಡಿಪ್ ಮಾಡಿ ನಂತರ ಅದನ್ನು ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ. 10 ನಿಮಿಷ ಹಾಗೆಯೇ ಬಿಟ್ಟು ನಂತರ ಸ್ವಚ್ಛ ನೀರಿನಿಂದ ಮತ್ತೆ ಕೂದಲನ್ನು ತೊಳೆಯರಿ

ಬೇವಿನ ನೀರು

ಬೇವಿನ ನೀರು

ಬೇವು ಭಾರತೀಯರ ಮೆಚ್ಚಿನ ಗಿಡವಾಗಿದ್ದು, ಇದು ಕೂದಲಿನ ಎಲ್ಲಾ ರೀತಿಯ ಸಮಸ್ಯೆಗೂ ಪರಿಹಾರ ನೀಡಬಲ್ಲದು. ಕೂದಲಿನ ಕೊಳೆ,ಜಿಡ್ಡಿನಂಶ, ಸೋಂಕು, ಮತ್ತು ನೆತ್ತಿಯಲ್ಲಿನ ಪದರಗಳನ್ನು ತೆಗೆಯಲು ಇದು ಸಹಕಾರಿ.ಇದು ರಂಧ್ರಗಳನ್ನು ತೆರೆಯುವಂತೆ ಮಾಡಿ, ಯಾವುದೇ ಅಡ್ಡಪರಿಣಾಮಗಳನ್ನು ಮಾಡದೆ ಕೂದಲಿನ ಬೆಳವಣಿಗೆಗೆ ಸಹಕರಿಸುತ್ತೆ

ಬೇಕಾಗುವ ವಸ್ತುಗಳು :

ಬೇವಿನ ಎಲೆಗಳು -12 ರಿಂದ 15

ಮಾಡುವ ವಿಧಾನ :

ಬೇವಿನ ಎಲೆಗಳನ್ನು ಹಾಕಿ ನೀರನ್ನು ಕಾಯಿಸಿ ನಂತರ ಅದು ತಣಿಯಲು ಬಿಡಿ. ಆ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ., 10 ನಿಮಿಷ ಕಾಯಿರಿ. ನಂತರ ಸ್ವಚ್ಛ

ನೀರಿನಿಂದ ಕೂದಲನ್ನು ತೊಳೆಯಿರಿ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಇದು ಪ್ರಯೋಗಿಸಿದ ಮತ್ತು ಪರಿಶೀಲಿಸಿದ ಒಂದು ಅತ್ಯುತ್ತಮ ವಿಧಾನವಾಗಿದೆ. ಪ್ರತಿಯೊಬ್ಬರೂ ಈ ಎಣ್ಣೆಯನ್ನು ಖಂಡಿತ ಒಂದಲ್ಲ ಒಂದು ಬಾರಿ ಕೂದಲಿಗೆ ಹಚ್ಚಿರುತ್ತಾರೆ. ತೆಂಗಿನ ಎಣ್ಣೆ ಮತ್ತು ಹಾಲು ಪ್ರೋಟೀನ್ ನಿಂದ ಕೂಡಿದೆ ಮತ್ತು ಇದು ಕೂದಲನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ.ಇದು ಕೂದಲನ್ನು ಹೊಳೆಯುವಂತೆ ಮಾಡುತ್ತೆ ಮತ್ತು ಬಲಿಷ್ಟಗೊಳಿಸುತ್ತೆ.

ಬೇಕಾಗುವ ಸಾಮಗ್ರಿಗಳು : ತೆಂಗಿನ ಎಣ್ಣೆ ಅಥವಾ ತೆಂಗಿನ ಹಾಲು -1 ಕಪ್

ಮಾಡುವ ವಿಧಾನ

ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚಿ ಸುಮಾರು 15 ನಿಮಿಷ ಮಸಾಜ್ ಮಾಡಿ. ಒಂದು ರಾತ್ರಿ ಹಾಗೆಯೇ ಕೂದಲಲ್ಲಿ ಇರಲು ಬಿಡಿ.ಬೆಳಿಗ್ಗೆ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ವಾರಕ್ಕೆ 3 ಬಾರಿ ಹೀಗೆ ಮಾಡಿ.

English summary

DIY Tips To Prevent Hair Fall & Baldness In Men

Every man wishes to have healthy hair and even the thought of having bald patches, receding hairline, etc., can frighten a man, as hair is the most important aspect of his look. Hair loss is one of the major hair-related problems that a lot of men face. This can be very embarrassing, as the men suffering from suchproblems tend to lose their hair continuously and it becomes very tough to grow new hair. This problem can occur because of various factors such as age, poor health, usage of poor quality water, bad hygiene, etc.
Story first published: Saturday, May 26, 2018, 11:58 [IST]
X
Desktop Bottom Promotion