For Quick Alerts
ALLOW NOTIFICATIONS  
For Daily Alerts

ನಯವಾದ ಮತ್ತು ಸುಂದರ ಕೂದಲಿಗಾಗಿ ಕುಂಬಳಕಾಯಿಯ ಹೇರ್ ಮಾಸ್ಕ್

|

ಸೂರ್ಯನ ಶಾಖ, ಮಾಲಿನ್ಯ ಮುಂತಾದ ವಿವಿಧ ಸಂಗತಿಗಳಿಂದ ನಿಮ್ಮ ಕೇಶರಾಶಿಗೆ ಉಂಟಾಗುವ ಕಠಿಣವಾದ ಹಾನಿಗಳಿಂದ ನಿಮ್ಮ ಕೂದಲನ್ನು ನೀವು ರಕ್ಷಿಸಿಕೊಳ್ಳಬೇಕು. ಕಳೆಗುಂದಿದ, ಸೀಳಿರುವ ಮತ್ತು ಒಣಗಿದ ಕೂದಲು ತಲೆಹೊಟ್ಟು, ಶುಷ್ಕವಾದ ನೆತ್ತಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಮ್ಮ ಕೂದಲನ್ನು ಮೊದಲಿನಂತೆ ಸುವಾಸನೆಯುಕ್ತವಾಗಿಯೂ ಮತ್ತು ಆರೋಗ್ಯಕರವಾಗಿಯೂ ಕಾಣುವಂತೆ ನಾವು ಸರಳವಾಗಿ ಮನೆಯಲ್ಲಿ ನೀವೇ ತಯಾರಿಸಿಕೊಳ್ಳಬಹುದಾದ ಒಂದು ಪರಿಹಾರದ ಬಗ್ಗೆ ತಿಳಿಸಿಕೊಡುತ್ತೇವೆ.

ನಿಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವಂತಹ ನೈಸರ್ಗಿಕ ಪದಾರ್ಥಗಳಿಂದ ಇದನ್ನು ತಯಾರಿಸಬಹುದು.ಈ ಹೇರ್ ಮಾಸ್ಕ್ ಅನ್ನು ಮುಖ್ಯವಾದ ಸಾಮಗ್ರಿ ಕುಂಬಳಕಾಯಿ. ತೆಂಗಿನ ಎಣ್ಣೆ ಮತ್ತು ಜೇನುತುಪ್ಪದಂತಹ ಇತರ ಪದಾರ್ಥಗಳನ್ನು ಕುಂಬಳಕಾಯಿಯೊಂದಿಗೆ ಬೆರೆಸಿದ ಹೇರ್ ಮಾಸ್ಕ್ ನಿಮ್ಮ ಕಳೆಗುಂದಿದ ಮತ್ತು ಹಾನಿಗೊಳಗಾದ ಕೂದಲಿಗೆ ಒಳ್ಳೆಯ ಪರಿಹಾರವನ್ನು ನೀಡುತ್ತದೆ. ನೀವೇ ತಯಾರಿಸಬಹುದಾದ ಈ ಕುಂಬಳಕಾಯಿಯ ಹೇರ್ ಮಾಸ್ಕ್ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.

DIY Pumpkin Hair Mask For Soft And Smooth Hair

ಬೇಕಾಗಿರುವ ಪದಾರ್ಥಗಳು:

*1½ಕಪ್ ಕುಂಬಳಕಾಯಿ ರಸ
*¼ ಕಪ್ ತೆಂಗಿನಕಾಯಿ ಎಣ್ಣೆ
*2 ಚಮಚ ಜೇನುತುಪ್ಪ

ಹೇಗೆ ತಯಾರಿಸುವುದು?

1.ಕುಂಬಳಕಾಯಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ಅದರ ರಸವನ್ನು ಹಿಸುಕಿ ತೆಗೆದಿಟ್ಟುಕೊಳ್ಳಿ.
2.ತೆಂಗಿನಕಾಯಿಯ ಎಣ್ಣೆಯನ್ನು ಕುಂಬಳಕಾಯಿಯ ಸಾರಕ್ಕೆ ಸೇರಿಸಿ.ತೆಂಗಿನೆಣ್ಣೆ ಘನವಾದ ರೂಪದಲ್ಲಿದ್ದರೆ ಕುಂಬಳಕಾಯಿಯ ಸಾರಕ್ಕೆ ಸೇರಿಸುವ ಮೊದಲು ಅದನ್ನು ಬೆಚ್ಚಗೆ ಮಾಡಿ.
3.ಕೊನೆಗೆ ಜೇನುತುಪ್ಪವನ್ನು ಈ ಮಿಶ್ರಣಕ್ಕೆ ಸೇರಿಸಿ.
4.ಬ್ಲೆಂಡರ್ ಅಥವಾ ಎಗ್ ಬೀಟರ್ ನ ಸಹಾಯದಿಂದ ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ.
5.ಈ ಮಿಶ್ರಣ/ಹೇರ್ ಮಾಸ್ಕ್ ಅನ್ನು ಗಾಳಿ ಹೋಗದಂತಹ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿ ಅದನ್ನು ನಿಮಗೆ ಬೇಕಾದಾಗ ಬಳಸಬಹುದು.
6.ತಂಪಾದ ಸ್ಥಳದಲ್ಲಿ ನೀವು ಇದನ್ನು ಶೇಖರಿಸಿ ಇಟ್ಟರೆ ಎರಡರಿಂದ ಮೂರು ದಿನಗಳವರೆಗೆ ಅದನ್ನು ಬಳಸಬಹುದು.

ಕುಂಬಳಕಾಯಿ ಫೇಸ್ ಮಾಸ್ಕ್- ಸೌಂದರ್ಯದ ಕೀಲಿಕೈ

ಹೇಗೆ ಬಳಸಬೇಕು?

1.ನಿಮ್ಮ ಕೂದಲನ್ನು ನಾಲ್ಕರಿಂದ ಐದು ವಿಭಾಗಗಳಾಗಿ ವಿಂಗಡಿಸಿ.
2.ಒದ್ದೆಯಾದ ಕೂದಲಿಗೆ ಹೇರ್ ಮಾಸ್ಕ್ ಅನ್ನು ಹಚ್ಚಲು ಪ್ರಾರಂಭಿಸಿ.ಕೂದಲು ಹಸಿಯಾಗಿದ್ದರೆ ಇದನ್ನು ಹಚ್ಚಲು ಸುಲಭವಾಗುತ್ತದೆ.
3.ಹೇರ್ ಬ್ರಷ್ ನ ಸಹಾಯದಿಂದ ಇದನ್ನು ನಿಮ್ಮ ಕೂದಲಿನ ತುದಿಯಿಂದ ಬುಡದವರೆಗೆ ಹಚ್ಚುತ್ತಾ ಬನ್ನಿ.
4.ನಿಮ್ಮ ಕೂದಲಿಗೆ ಮೇಲಿಂದ ಗಂಟನ್ನು ಹಾಕಿ ಮತ್ತು ಶವರ್ ಕ್ಯಾಪ್ನೊಂದಿಗೆ ಅದನ್ನು ಮುಚ್ಚಿರಿ.
5.ಇದನ್ನು 20-30 ನಿಮಿಷಗಳ ಕಾಲ ಒಣಗಲು ಬಿಡಿ.
6.30 ನಿಮಿಷಗಳ ನಂತರ ಇದನ್ನು ಸಾಮಾನ್ಯವಾದ ಶಾಂಪೂವಿನಿಂದ ತೊಳೆಯಿರಿ ನಂತರ ಎಂದಿನಂತೆ ಕಂಡೀಷನರ್ ಹಚ್ಚಿರಿ.ಮೃದುವಾದ, ನಯವಾದ ಮತ್ತು ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ.

ಕುಂಬಳಕಾಯಿಯ ಪ್ರಯೋಜನಗಳು

ಬಳ್ಳಿಯಲ್ಲಿ ಬೆಳೆಯುವ ದೊಡ್ಡ ಗಾತ್ರದ ತರಕಾರಿ ಕುಂಬಳಕಾಯಿ. ಪ್ರಾಚೀನ ಕಾಲದ ವಿಶೇಷ ಅಡುಗೆಯನ್ನು ಇದರ ಸಹಾಯದಿಂದ ತಯಾರಿಸಬಹುದು. ಅತ್ಯುತ್ತಮ ಪೋಷಕಾಂಶಗಳನ್ನು ಒಳಗೊಂಡಿದ್ದು ವಿವಿಧ ಆರೋಗ್ಯ ಸಮಸ್ಯೆಗೆ ದಿವ್ಯ ಔಷಧಿಯಾಗಿ ನಿಲ್ಲುತ್ತದೆ. ಇದಕ್ಕೆ ಆಯುರ್ವೇದದಲ್ಲಿ ಉತ್ತಮ ಸ್ಥಾನ ನೀಡಿರುವುದು ಗಮನಾರ್ಹವಾದುದ್ದು. ಕೆಲ ಸಮುದಾಯದವರು ಕುಂಬಳಕಾಯಿಯ ಅಡುಗೆ ತಯಾರಿಸಲು ನಿಷೇದಿಸಿ, ಕೇವಲ ಅಲಂಕಾರಿ ವಸ್ತುಗಳ ರೂಪದಲ್ಲಿ ನೋಡುವುದು ಉಂಟು. ಪುರಾತನ ಕಾಲದಿಂದಲೂ ಕುಂಬಳಕಾಯಿಯನ್ನು ಸೌಂದರ್ಯದ ಆರೈಕೆಯಲ್ಲಿ ಬಳಸುತ್ತಾ ಬಂದಿದ್ದಾರೆ. ಇದರಲ್ಲಿರುವ ಆಲ್ಫಾ ಹೈಡ್ರೋಕ್ಸಿ ಆಸಿಡ್ ಚರ್ಮದ ಆರೈಕೆಗೆ ಅತ್ಯುತ್ತಮ ಸಹಕಾರವನ್ನು ನೀಡುತ್ತದೆ. ಚರ್ಮವನ್ನು ಪುನರುಜ್ಜೀವನ ಗೊಳಿಸುತ್ತದೆ. ಕೂದಲಿನ ಹೊಳಪಿಗೆ ಹಾಗೂ ಕಾಂತಿಯಿಂದ ಕೂಡಿರಲು ನಿತ್ಯವೂ ನಿಯಮಿತವಾಗಿ ಬಳಸಬಹುದು. ಕುಂಬಳಕಾಯಿ ವಿವಿಧವಾದ ಗುಣಗಳನ್ನು ಹೊಂದಿದೆ ಮತ್ತು ಅದು ಕೂದಲಿನ ಸೌಂದರ್ಯವನ್ನು ಹೆಚ್ಚಿಸುವಂತಹ ಉತ್ತಮವಾದ ಪದಾರ್ಥವಾಗಿದೆ.ಕುಂಬಳಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು,ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಪ್ರಮುಖ ಜೀವಸತ್ವಗಳು ಇದಕ್ಕೆ ಸಹಕಾರಿಯಾಗಿವೆ.ಇದರಲ್ಲಿರುವ ವಿಟಮಿನ್ ಸಿ,ಬಿಸಿಲಿಗೆ ಹಾಳಾಗಿರುವ ಕೂದಲನ್ನು ಸರಿ ಮಾಡುವುದರಲ್ಲಿ ಸಹಾಯ ಮಾಡುತ್ತದೆ ಹಾಗೂ ಕುಂಬಳಕಾಯಿಯಲ್ಲಿರುವ ಬಿ ವಿಟಮಿನ್‌ಗಳು ಕೂದಲಿನ ಆದ್ರತೆಯನ್ನು ಕಾಪಾಡುತ್ತವೆ.

ತೆಂಗಿನಕಾಯಿ ಎಣ್ಣೆಯ ಪ್ರಯೋಜನಗಳು

ತೆಂಗಿನಕಾಯಿಯ ಎಣ್ಣೆಯು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ನಿಸ್ಸಂದೇಹವಾಗಿ ಅತ್ಯುತ್ತಮವಾದ ಪರಿಹಾರವಾಗಿದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ತೆಂಗಿನೆಣ್ಣೆಯು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿದೆ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿ ನಿಮ್ಮ ಕೂದಲು ದಟ್ಟವಾಗಿ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ.ಹಾಗೆಯೆ ಕೂದಲಿನ ತೇವಾಂಶವನ್ನು ಕಾಪಾಡುವುದರಲ್ಲಿಯೂ ಸಹ ಇದು ನೆರವಾಗುತ್ತದೆ. ಇದು ನಿಮ್ಮ ಕೂದಲು ನಯವಾಗಿಯೂ ಮತ್ತು ಸುರಕ್ಷಿತವಾಗಿಯೂ ಕಾಣುವಂತೆ ಮಾಡುತ್ತದೆ. ಇನ್ನು ತೆಂಗಿನಕಾಯಿ ಎಣ್ಣೆ ಕೂದಲಿಗೆ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ, ಮಳೆಗಾಲದಲ್ಲಿ ಕಂಡುಬರುವ ಕೂದಲಿನ ಸಮಸ್ಯೆಗೆ ಸೂಕ್ತ ಮನೆಮದ್ದಾಗಿದೆ. ಹಾಗಾಗಿ ಮಳೆಗಾಲದಲ್ಲಿ ವಾರಕ್ಕೆ ಒಮ್ಮೆಯಾದರೂ ತೆಂಗಿನ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವುದನ್ನು ಮರೆಯಬೇಡಿ, ಇದು ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಯುತ್ತದೆ, ಹಾಗೂ ಹಾನಿಗೊಳಗಾದ ಕೂದಲನ್ನು ತೆಗೆಯುತ್ತದ.

ಜೇನುತುಪ್ಪದ ಪ್ರಯೋಜನಗಳು

ನೈಸರ್ಗಿಕದತ್ತವಾಗಿ ಸಿಗುವಂತಹ ಪ್ರತಿಯೊಂದು ನಮ್ಮ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿರುತ್ತದೆ. ಅದರಲ್ಲೂ ಜೇನುತುಪ್ಪದಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಜೇನುತುಪ್ಪ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯವನ್ನು ಅದರಿಂದ ವೃದ್ಧಿಸಬಹುದು. ಜೇನುತುಪ್ಪದಿಂದ ಕಾಂತಿಯುತ ಮೈಕಾಂತಿ ಹಾಗೂ ರೇಷ್ಮೆಯಂತಹ ಕೂದಲನ್ನು ಪಡೆಯಬಹುದು. ಜೇನುತುಪ್ಪ ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಆದ್ರತೆಯಿಂದ ಕೂಡಿರುವಂತೆ ಮತ್ತು ಒಣಗಿರುವ ಹಾಳಾದ ಕೂದಲನ್ನು ಮೊದಲಿನಂತೆ ಮಾಡುವ ಗುಣವನ್ನು ಹೊಂದಿದೆ. ಜೇನುತುಪ್ಪದಲ್ಲಿನ ಉತ್ಕರ್ಷಣ ನಿರೋಧಕ ಶಕ್ತಿಯು ನಿಮ್ಮ ಕೂದಲನ್ನು ಮತ್ತು ನೆತ್ತಿಯನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಸಹಾಯ ಮಾಡುತ್ತವೆ.ಅಲ್ಲದೆ ತಲೆಹೊಟ್ಟು ಮತ್ತು ಒಣ ನೆತ್ತಿಯ ಸಮಸ್ಯೆಗಳನ್ನು ತಡೆಗಟ್ಟಲು ಜೇನುತುಪ್ಪದಲ್ಲಿರುವ ನಂಜುನಿರೋಧಕ ಮತ್ತು ಜೀವಿರೋಧಿ ಅಂಶಗಳು ಸಹಾಯವನ್ನು ಮಾಡುತ್ತವೆ.

ನೈಸರ್ಗಿಕ ಹೇರ್ ಪ್ಯಾಕ್ - ಕೂದಲಿಗೆ ಯಾವುದೇ ಸಮಸ್ಯೆ ಬರಲ್ಲ...

English summary

DIY Pumpkin Hair Mask For Smooth Hair

Here we'll be discussing a simple homemade DIY remedy to make your hair look as luscious and healthy as before. This DIY remedy contains all natural ingredients that are easily available in your kitchen. The main ingredient of this mask is nothing but pumpkin. Pumpkin mixed with other ingredients like coconut oil and honey makes for a perfect mask to repair your dull and damaged hair.Let us see how to make this DIY pumpkin hair mask below.
X
Desktop Bottom Promotion