For Quick Alerts
ALLOW NOTIFICATIONS  
For Daily Alerts

ಒರಟು ಹಾಗೂ ಗುಂಗುರು ಕೂದಲಿಗೆ ಮೊಸರಿನ ಚಿಕಿತ್ಸೆ

By Hemanth
|

ಗುಂಗುರು ಕೂದಲು ಕೆಲವರಿಗೆ ತುಂಬಾ ಸುಂದರವಾಗಿ ಕಾಣಿಸುವುದು ಇದೆ. ಆದರೆ ಸಾಮಾನ್ಯ ಕೂದಲಿಗಿಂತ ಗುಂಗುರು ಕೂದಲು ಸಮಸ್ಯೆಯುಂಟು ಮಾಡುವುದು ಹೆಚ್ಚು. ಯಾಕೆಂದರೆ ಗುಂಗುರು ಕೂದಲು ಯಾವಾಗಲೂ ಒರಟಾಗಿರುವುದು. ಇದರ ಒರಟುತನ ನಿವಾರಣೆ ಮಾಡಲು ಹಲವಾರು ರೀತಿಯ ರೆಡಿಮೇಟ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ನೈಸರ್ಗಿಕ ಮನೆಮದ್ದಿನಷ್ಟು ಇವುಗಳು ನಿಮಗೆ ತೃಪ್ತಿ ನೀಡದು.

ಈ ಲೇಖನದಲ್ಲಿ ಮನೆಯಲ್ಲಿ ತಯಾರಿಸಬಹುದಾದ ಅತೀ ಸರಳ ಮನೆಮದ್ದಿನ ಬಗ್ಗೆ ಬಗ್ಗೆ ತಿಳಿಸಿಕೊಡಲಿದ್ದೇವೆ. ಮೊಸರನ್ನು ಬಳಸಿಕೊಂಡು ಒರಟು ಗುಂಗುರು ಕೂದಲಿನ ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯಬಹುದು. ಮೊಸರು ಕೂದಲಿಗೆ ಕಂಡೀಷನರ್ ಆಗಿ ಕೆಲಸ ಮಾಡುವುದು ಎಂದು ಎಲ್ಲರಿಗೂ ತಿಳಿದಿದೆ. ಮೊಸರಿನಲ್ಲಿ ಇರುವಂತಹ ವಿಟಮಿನ್ ಬಿ5 ಮತ್ತು ಡಿ ಕೂದಲನ್ನು ಬಲಪಡಿಸುವುದು.

Curd Remedies For Frizzy Hair

ಗುಂಗುರು ಕೂದಲಿನ ಸಮಸ್ಯೆಗೆ ಪರಿಹಾರಗಳು

ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ತಲೆಹೊಟ್ಟು ಮತ್ತು ಇತರ ಕೆಲವೊಂದು ಉರಿಯೂತ ನಿವಾರಣೆ ಮಾಡುವುದು. ಇದರಿಂದ ಕೂದಲು ನಯ ಹಾಗೂ ಮೃಧುವಾಗುವುದು. ಮನೆಯಲ್ಲೇ ಮೊಸರನ್ನು ಬಳಸಿಕೊಂಡು ಸರಳವಾಗಿರುವ ಕೆಲವು ಹೇರ್ ಮಾಸ್ಕ್ ನ್ನು ತಯಾರಿಸಿಕೊಳ್ಳಬಹುದು. ಇದು ಕೂದಲನ್ನು ನಯಗೊಳಿಸಿ, ಕಾಂತಿ ನೀಡುವುದು.

ಬಾಳೆಹಣ್ಣು ಮತ್ತು ಮೊಸರು

ಬಾಳೆಹಣ್ಣು ಮತ್ತು ಮೊಸರು

ಬಾಳೆಹಣ್ಣಿನಲ್ಲಿ ಇರುವಂತಹ ನೈಸರ್ಗಿಕ ತೈಲವು ಕೂದಲಿಗೆ ಮೊಶ್ಚಿರೈಸ್ ಮಾಡುವುದು ಮತ್ತು ಕೂದಲು ತುಂಡಾಗುವುದನ್ನು ತಡೆಯುವುದು. ಇದನ್ನು ಮೊಸರಿನ ಜತೆಗೆ ಬೆರೆಸಿಕೊಂಡರೆ ಅದು ನಯವಾಗುವುದು.

ಬೇಕಾಗುವ ಸಾಮಗ್ರಿಗಳು

  • 1 ಬಾಳೆಹಣ್ಣು
  • 1 ಕಪ್ ಮೊಸರು
  • ತಯಾರಿಸುವುದು ಹೇಗೆ

    ಬಾಳೆಹಣ್ಣಿನ ಸಿಪ್ಪೆ ತೆಗೆಯಿರಿ ಮತ್ತು ಅದನ್ನು ಮಿಕ್ಸಿಗೆ ಹಾಕಿಕೊಂಡು ನಯವಾದ ಪೇಸ್ಟ್ ಮಾಡಿ. ಇದರ ಬಳಿಕ ಮೊಸರು ಸೇರಿಸಿಕೊಂಡು ಎರಡನ್ನು ಜತೆಯಾಗಿ ಮಿಶ್ರಣ ಮಾಡಿ. ಇದನ್ನು ಕೂದಲಿಗೆ ಹಚ್ಚಿಕೊಂಡು 30 ನಿಮಿಷದಿಂದ ಒಂದು ಗಂಟೆ ಕಾಲ ಹಾಗೆ ಬಿಡಿ. ಕೂದಲಿಗೆ ಶಾವರ್ ಕ್ಯಾಪ್ ಧರಿಸಿ. ಇದರ ಬಳಿಕ ಸಾಮಾನ್ಯ ನೀರಿನಿಂದ ಸಲ್ಫರ್ ಮುಕ್ತ ಶಾಂಪೂವಿನಿಂದ ಕೂದಲು ತೊಳೆಯಿರಿ.

    ಮೊಸರು ಮತ್ತು ಅಲೋವೆರಾ

    ಮೊಸರು ಮತ್ತು ಅಲೋವೆರಾ

    ಅಲೋವೆರಾವು ತಲೆಬುರುಡೆಯಲ್ಲಿ ಜಮೆಯಾಗಿರುವ ಕಲ್ಮಷವನ್ನು ತೆಗೆದು ಸ್ವಚ್ಛಗೊಳಿಸುವುದು. ಇದನ್ನು ಮೊಸರಿನ ಜತೆಗೆ ಬೆರೆಸಿ ಸೇರಿಸಿಕೊಂಡಾಗ, ತಲೆಬುರುಡೆ ಮತ್ತು ಕೂದಲಿಗೆ ಆಳವಾದ ಕಂಡೀಷನಿಂಗ್ ಸಿಗುವುದು.

    ಬೇಕಾಗುವ ಸಾಮಗ್ರಿಗಳು

    • 1 ತಾಜಾ ಅಲೋವೆರಾ ಎಲೆ
    • 1 ಕಪ್ ಮೊಸರು
    • ತಯಾರಿಸುವ ವಿಧಾನ

      ಅಲೋವೆರಾ ಎಲೆಯಿಂದ ಲೋಳೆ ತೆಗೆಯಿರಿ ಮತ್ತು ಇದಕ್ಕೆ ನೀವು ತಾಜಾ ಮೊಸರನ್ನು ಬೆರೆಸಿಕೊಳ್ಳಿ. ಈಗ ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಕೂದಲನ್ನು ವಿಂಗಡಣೆ ಮಾಡಿಕೊಂಡು ಒಂದು ಬ್ರಷ್ ಬಳಸಿಕೊಂಡು ಕೂದಲು ಮತ್ತು ತಲೆಬುರುಡೆಗೆ ಬುಡದಿಂದ ತುದಿವರೆಗೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ.

      ಮೊಸರು ಮತ್ತು ಮೊಟ್ಟೆ

      ಮೊಸರು ಮತ್ತು ಮೊಟ್ಟೆ

      ಮೊಟ್ಟೆಯಲ್ಲಿ ಇರುವಂತಹ ಪ್ರೋಟೀನ್ ಕೂದಲನ್ನು ಬಲಗೊಳಿಸುವುದು. ಮೊಸರು ಮತ್ತು ಮೊಟ್ಟೆಯು ಕೂದಲನ್ನು ನಯ ಮತ್ತು ರೇಷ್ಮೆಯಂತೆ ಮಾಡಲು ಅತ್ಯುತ್ತಮ ಮಾಸ್ಕ್. ಮೊಟ್ಟೆಯ ವಾಸನೆ ಬರದಂತೆ ನೀವು ಯಾವುದಾದರೂ ಸಾರಭೂತ ತೈಲವನ್ನು ಇದಕ್ಕೆ ಸೇರಿಸಬಹುದು.

      ಬೇಕಾಗುವ ಸಾಮಗ್ರಿಗಳು

      • 1 ಮೊಟ್ಟೆ
      • 1 ಕಪ್ ಮೊಸರು
      • ಕೆಲವು ಹನಿ ರೋಸ್ಮೆರಿ ತೈಲ
      • ತಯಾರಿಸುವ ವಿಧಾನ

        ಒಂದು ಪಿಂಗಾಣಿಗೆ ಹಾಕಿಕೊಂಡು ಮೊಟ್ಟೆಯನ್ನು ಕಲಸಿ, ಮೆತ್ತಗೆ ಮಾಡಿ. ಇದಕ್ಕೆ ಮೊಸರು ಮತ್ತು ಕೆಲವು ಹನಿ ರೋಸ್ಮೆರಿ ತೈಲ ಹಾಕಿ. ಎಲ್ಲವನ್ನು ಸರಿಯಾಗಿ ಬೆರೆಸಿಕೊಳ್ಳಿ. ಬ್ರಷ್ ನ ನೆರವಿನಿಂದ ನೀವು ಇದನ್ನು ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಶಾವರ್ ಕ್ಯಾಪ್ ಧರಿಸಿ ಒಂದು ಗಂಟೆ ಕಾಲ ಹಾಗೆ ಬಿಡಿ. ಇದರ ಬಳಿಕ ನೀವು ಶಾಂಪೂ ಬಳಿಕ ಕಂಡೀಷನರ್ ಬಳಸಿಕೊಂಡು ತೊಳೆಯಿರಿ.

        ಮೊಸರು ಮತ್ತು ಆಲಿವ್ ತೈಲ

        ಮೊಸರು ಮತ್ತು ಆಲಿವ್ ತೈಲ

        ಆಲಿವ್ ತೈಲದಲ್ಲಿ ಇರುವಂತಹ ವಿಟಮಿನ್ ಗಳು ಒರಟು ಮತ್ತು ಒಣ ಗುಂಗುರು ಕೂದಲಿನ ನಿವಾರಣೆ ಮಾಡಲು ನೆರವಾಗುವುದು. ಆಲಿವ್ ತೈಲ್ ಮತ್ತು ಮೊಸರನ್ನು ಬೆರೆಸಿಕೊಂಡರೆ ಆಗ ಒಣ ಮತ್ತು ಹಾನಿಗೊಳಗಾದ ಕೂದಲನ್ನು ಕಾಪಾಡಲು ನೆರವಾಗುವುದು.

        ಬೇಕಾಗುವ ಸಾಮಗ್ರಿಗಳು

        • 3 ಚಮಚ ಆಲಿವ್ ತೈಲ
        • 1 ಚಮಚ ಮೊಸರು
        • ತಯಾರಿಸುವ ವಿಧಾಣ

          ಮೊಸರು ಮತ್ತು ಆಲಿವ್ ತೈಲವನ್ನು ಬೆರೆಸಿಕೊಳ್ಳಿ. ಇದಕ್ಕೆ ಕೆಲವು ಹನಿ ರೋಸ್ ವಾಟರ್ ಹಾಕಿ. ಅದಾಗ್ಯೂ, ಇದು ನಿಮ್ಮ ಆಯ್ಕೆಗೆ ಬಿಟ್ಟಿರುವುದು. ಈ ಮಿಶ್ರಣವನ್ನು ಕೂದಲಿಗೆ ಬುಡದಿಂದ ತುದಿ ತನಕ ಹಚ್ಚಿಕೊಳ್ಳಿ. 40-45 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸಲ್ಫೇಟ್ ಮುಕ್ತ ಶಾಂಪೂವಿನಿಂದ ಕೂದಲು ತೊಳೆಯಿರಿ.

          ಮೊಸರು ಮತ್ತು ಮೆಂತೆ ಹುಡಿ

          ಮೊಸರು ಮತ್ತು ಮೆಂತೆ ಹುಡಿ

          ನೀರಿನಲ್ಲಿ ಒಣಗಿಸಿಟ್ಟ ಮೆಂತೆಯಲ್ಲಿರುವ ಲೆಕ್ಟಿನ್ ಆಮ್ಲವು ಕೂದಲನ್ನು ನಯವಾಗಿಸುವುದು. ಈ ಮಾಸ್ಕ್ ನಿಂದ ರೇಷ್ಮೆಯಂತಹ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.

          ಬೇಕಾಗುವ ಸಾಮಗ್ರಿಗಳು

          • ½ ಕಪ್ ಮೆಂತ್ಯೆ ಹುಡಿ/ಕಾಳು
          • 1 ಕಪ್ ಮೊಸರು
          • ತಯಾರಿಸುವ ವಿಧಾನ

            ಮೆಂತ್ಯೆ ಕಾಳುಗಳನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ ಮತ್ತು ಬೆಳಗ್ಗೆ ಅದನ್ನು ಮೊಸರಿನ ಜತೆಗೆ ಮಿಶ್ರಣ ಮಾಡಿಕೊಳ್ಳಿ. ಮೆಂತ್ಯೆ ಕಾಳು ಬಳಸುತ್ತಿದ್ದರೆ ಆಗ ನೀವು ಮಿಕ್ಸಿಗೆ ಹಾಕಿ ರುಬ್ಬಿ ಪೇಸ್ಟ್ ಮಾಡಿ. ಕೂದಲಿಗೆ ಮೆಂತ್ಯೆ ಕಾಳು ಮತ್ತು ಮೊಸರಿನ ಮಿಶ್ರಣ ಹಾಕಿಕೊಂಡು, 30 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ಶಾಂಪೂವಿನಿಂದ ತೊಳೆಯಿರಿ.

            ಸಲಹೆಗಳು-

            *ಸರಿಯಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳೋದ್ರಿಂದ ರಕ್ತಸಂಚಾರವೂ ಅಧಿಕವಾಗಿ ಕೂದಲಿನ ಬೆಳವಣಿಗೆಗೂ ನೆರವಾಗುತ್ತೆ. ಇನ್ನು ಗುಂಗುರು ಕೂದಲಿರುವವರಿಗೆ ಸ್ವಲ್ಪ ಹೆಚ್ಚೇ ಎಣ್ಣೆ ಬೇಕಾಗುತ್ತೆ. ಆದ್ರೆ ಕರ್ಲಿ ಹೇರ್ ಇರುವವರು ಸರಿಯಾಗಿ ಆಯಿಲ್ ಮಸಾಜ್ ಮಾಡಿಕೊಳ್ಳದ ಪರಿಣಾಮ ಕೂದಲು ಗಂಟು ಹಾಕಿಕೊಂಡಂತಾಗಿ ಅಂದ ಕೆಟ್ಟಿರುತ್ತೆ. ಇಂತಹ ತಪ್ಪನ್ನು ನೀವು ಮಾಡದೇ ನಿಮ್ಮ ಕೂದಲಿನ ರಕ್ಷಣೆ ಮಾಡಿಕೊಳ್ಳಿ. ಅಟ್ ಲೀಸ್ಟ್ ವಾರಕ್ಕೆ ಎರಡರಿಂದ ಮೂರು ಬಾರಿಯಾದ್ರೂ ಆಯಿಲ್ ಮಸಾಜ್ ಮಾಡ್ಕೊಳ್ಳಿ.

            *ಕೂದಲಿನ ಎಲ್ಲಾ ಭಾಗಕ್ಕೆ ಶಾಂಪೂ, ಕಂಡೀಷನರ್ ಬಳಸೋದು ಮತ್ತು ಸರಿಯಾಗಿ ಅದನ್ನು ನೀರಿನಿಂದ ತೊಳೆಯುವುದು ತುಂಬಾ ಇಂಪಾರ್ಟೆಂಟ್. ಸರಿಯಾಗಿ ವಾಷ್ ಮಾಡದೇ ಇದ್ರೆ, ಕೂದಲು ವಾಸನೆ ಬರುವ ಮತ್ತು ಸ್ಕಾಲ್ಪ್ ನಲ್ಲಿ ಇನ್ಫೆಕ್ಷನ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತೆ. ವಾರಕ್ಕೆ ಅಟ್ ಲೀಸ್ಟ್ ಮೂರು ಬಾರಿಯಾದ್ರೂ ಕೂದಲನ್ನು ತೊಳೆಯಲೇ ಬೇಕು.

            *ಗುಂಗುರು ಕೂದಲಿರುವವರು ತಮ್ಮ ಕರ್ಲಿ ಸೆಟ್ ಆಗಿ ಕೂರಬೇಕು ಅನ್ನೋ ಕಾರಣಕ್ಕೆ ಕೆಲವೊಮ್ಮೆ ಸರಿಯಾಗಿ ತಲೆಯನ್ನು ಬಾಚಿಕೊಳ್ಳೋದೆ ಇಲ್ಲ. ಕೆಲವೊಮ್ಮೆ ಕರ್ಲಿ ಹೇರ್ ಬಾಚಿದಾಗ ಅದು ಹರಡಿಕೊಂಡಂತೆ ಕಾಣುತ್ತೆ ನಿಜ. ಆದ್ರೆ ಬಾಚಿಕೊಳ್ಳದೇ ಇದ್ರೆ ಕೂದಲಿನ ಬುಡಕ್ಕೆ ಪೆಟ್ಟು ಬಿದ್ದು, ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತೆ. ಸರಿಯಾಗಿ ತಲೆಯಲ್ಲಿ ಬ್ಲಡ್ ಸರ್ಕ್ಯುಲೇಷನ್ ಆಗ್ಬೇಕು ಅಂದ್ರೆ ನೀವು ಪ್ರತಿದಿನ ಗುಂಗುರು ಕೂದಲಿನ ಸಿಕ್ಕು ಬಿಡಿಸಿ ಸರಿಯಾದ ಕ್ರಮದಲ್ಲಿ ಕೂದಲು ಬಾಚಿಕೊಳ್ಳೋದು ಕೂಡ ಇಂಪಾರ್ಟೆಂಟ್..

English summary

DIY Homemade Curd Remedies For Frizzy Hair

Curd acts as a natural and excellent conditioner for the hair. Curd has vitamins B5 and D that help in strengthening the hair from within. Also, the antibacterial and antifungal properties that it possesses will help you in treating dandruff and other inflammations on the scalp, thus leaving your mane smooth and soft.
X
Desktop Bottom Promotion