For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ ಬೆಳ್ಳುಳ್ಳಿ ಪರ್ಫೆಕ್ಟ್ ಮನೆಮದ್ದುಗಳು

By Hemanth
|

ಪ್ರತೀ ಅಡುಗೆ ಮನೆಯಲ್ಲಿ ಕಂಡುಬರುವಂತಹ ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಹೊಂದಿದ್ದು, ಇದು ನಿಮ್ಮ ಆಹಾರದ ರುಚಿ ಹಾಗೂ ಸುವಾಸನೆ ಹೆಚ್ಚಿಸುವ ಜತೆಗೆ ದೇಹಕ್ಕೂ ಹಲವಾರು ಲಾಭಗಳನ್ನು ನೀಡುವುದು. ಬೆಳ್ಳುಳ್ಳಿಯ ಆರೋಗ್ಯ ಗುಣಗಳ ಬಗ್ಗೆ ನೀವು ಕೇಳಿರಬಹುದು. ಆದರೆ ಇದನ್ನು ಸೌಂದರ್ಯವರ್ಧಕವಾಗಿ ಹೇಗೆ ಬಳಸಿಕೊಳ್ಳುವುದು ಎಂದು ತಿಳಿಯಬೇಕಾಗಿದೆ. ಬೆಳ್ಳುಳ್ಳಿಯನ್ನು ಕೂದಲಿನ ಬೆಳವಣಿಗೆಗೂ ಬಲಸಬಹುದು. ಹಸಿ ಬೆಳ್ಳುಳ್ಳಿಯಲ್ಲಿ ಸತು, ಕ್ಯಾಲ್ಸಿಯಂ, ಸಲ್ಫರ್ ಇತ್ಯಾದಿಗಳು ಇವೆ. ಇದು ಕೂದಲಿಗೆ ಅದ್ಭುತವನ್ನೇ ಉಂಟು ಮಾಡಲಿದೆ. ಬೆಳ್ಳುಳ್ಳಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಕೂದಲು ಉದುರುವುದನ್ನು ತಪ್ಪಿಸುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಬೆಳ್ಳುಳ್ಳಿಯಲ್ಲಿ ಇರುವಂತಹ ವಿಟಮಿನ್ ಸಿ ಕಾಲಜನ್ ಬಿಡುಗಡೆ ಹೆಚ್ಚಿಸಲು ನೆರವಾಗುವುದು ಮತ್ತು ಕೂದಲನ್ನು ಆರೋಗ್ಯವಾಗಿಟ್ಟು, ಅದರ ಬೆಳವಣಿಗೆಗೆ ನೆರವಾಗುವುದು. ಇದರಲ್ಲಿ ಇರುವಂತಹ ಸೂಕ್ಷ್ಮಾಣು ವಿರೋಧಿ ಗುಣಗಳು ಕೀಟಾಣು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು. ಇದರಿಂದ ತಲೆಬುರುಡೆಗೆ ಹಾನಿಯಾಗುವುದು ತಪ್ಪುವುದು. ಕೂದಲು ಉದುರುವಿಕೆಗೆ ತಡೆಯಲು ನೀವು ಸಾಕಷ್ಟು ಹಣ ವ್ಯಯಿಸಿರಬಹುದು. ಇದನ್ನು ತಡೆಯಲು ಬೆಳ್ಳುಳ್ಳಿಯಿಂದ ಸಾಧ್ಯವಿದೆ. ಇದು ಖರ್ಚು ಕೂಡ ತುಂಬಾ ಕಡಿಮೆ. ಈ ಲೇಖನದಲ್ಲಿ ಬೆಳ್ಳುಳ್ಳಿಯಿಂದ ಕೂದಲಿಗೆ ಆಗುವ ಲಾಭಗಳು ಮತ್ತು ಅದನ್ನು ಹೇಗೆ ಮಾಸ್ಕ್ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ತಿಳಿಯಿರಿ.

ಸುಳಿವು ನೀಡದೇ ಕಾಡುವ ರೋಗಕ್ಕೆ ರಾಮಬಾಣ-ಬೆಳ್ಳುಳ್ಳಿ

hair care tips in kannada

ಬೆಳ್ಳುಳ್ಳಿ ಮತ್ತು ಜೇನುತುಪ್ಪ

ಬೇಕಾಗುವ ಸಾಮಗ್ರಿಗಳು
8 ಬೆಳ್ಳುಳ್ಳಿ ಎಸಲುಗಳು
1 ಚಮಚ ಜೇನುತುಪ್ಪ

ವಿಧಾನ
ಎಂಟು ಬೆಳ್ಳುಳ್ಳಿ ಎಸಲುಗಳಿಂದ ರಸ ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ತಾಜಾ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಿಟ್ಟು ಶಾಂಪೂ ಹಾಕಿ ತೊಳೆಯಿರಿ. ವಾರದಲ್ಲಿ ಎರಡು ಅಥವಾ ಮೂರು ಸಲ ಹೀಗೆ ಮಾಡಿ.

ಬೆಳ್ಳುಳ್ಳಿ ಎಣ್ಣೆ

ಬೇಕಾಗುವ ಸಾಮಗ್ರಿಗಳು
ಬೆಳ್ಳುಳ್ಳಿ ಎಸಲುಗಳು 8
½ ಕಪ್ ತೆಂಗಿನ/ಆಲಿವ್ ತೈಲ
1 ಈರುಳ್ಳಿ

ವಿಧಾನ
ಈರುಳ್ಳಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಮಿಕ್ಸಿಗೆ ಹಾಕಿ. ಇದಕ್ಕೆ ಬೆಳ್ಳುಳ್ಳಿ ಕೂಡ ಸೇರಿಸಿ ಮತ್ತೆ ರುಬ್ಬಿ ಪೇಸ್ಟ್ ಮಾಡಿ. ½ ಕಪ್ ಎಣ್ಣೆಯನ್ನು ತವಾಗೆ ಹಾಕಿ ಕುದಿಸಿ ಮತ್ತು ಇದಕ್ಕೆ ಬೆಳ್ಳುಳ್ಳಿ-ಈರುಳ್ಳಿ ಪೇಸ್ಟ್ ಹಾಕಿ. ಇದು ಕಂದು ಬಣ್ಣಕ್ಕೆ ಬರುವ ತನಕ ಬಿಸಿ ಮಾಡಿ. ಇದು ಕೋಣೆಯ ತಾಪಮಾನಕ್ಕೆ ಬರಲಿ. ಇದು ತಣ್ಣಗಾದ ಬಳಿಕ ಸರಿಯಾಗಿ ಸೋಸಿಕೊಳ್ಳಿ. ಇದನ್ನು ಕೂದಲು ಮತ್ತು ತಲೆಬುರುಡೆಗೆ ಹಾಕಿ ವೃತ್ತಾಕಾರದಲ್ಲಿ 15 ನಿಮಿಷ ಕಾಲ ಸರಿಯಾಗಿ ಮಸಾಜ್ ಮಾಡಿ. ಶಾವರ್ ಕ್ಯಾಪ್ ಧರಿಸಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ಇದನ್ನು ಲಘುವಾದ ಶಾಂಪೂ ಮತ್ತು ಕಂಡೀಷನರ್ ಹಾಕಿ 30 ನಿಮಿಷ ಬಿಟ್ಟು ತೊಳೆಯಿರಿ. ವಾರದಲ್ಲಿ ಮೂರು ಸಲ ಇದನ್ನು ಬಳಸಿ.

ಬೆಳ್ಳುಳ್ಳಿ ಮತ್ತು ಶುಂಠಿ

ಬೇಕಾಗುವ ಸಾಮಗ್ರಿಗಳು
ಒಂದು ತುಂಡು ಶುಂಠಿ
8 ಬೆಳ್ಳುಳ್ಳಿ ಎಸಲುಗಳು
½ ಕಪ್ ಎಣ್ಣೆ

ವಿಧಾನ
ಮಿಕ್ಸಿಗೆ ಹಾಕಿ ಬೆಳ್ಳುಳ್ಳಿ ಮತ್ತು ಶುಂಠೀ ರುಬ್ಬಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಒಂದು ತವಾಗೆ ½ ಕಪ್ ಎಣ್ಣೆ ಹಾಕಿ ಬಿಸಿ ಮಾಡಿ. ಆಲಿವ್ ತೈಲ, ತೆಂಗಿನೆಣ್ಣೆ, ಹರಳೆಣ್ಣೆ ಇತ್ಯಾದಿ ಬಳಸಬಹುದು. ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ನ್ನು ಎಣ್ಣೆಗೆ ಹಾಕಿ ಮತ್ತು ಇದು ಕಂದು ಬಣ್ಣಕ್ಕೆ ಬರಲಿ. ಎಣ್ಣೆ ಸ್ವಲ್ಪ ತಣ್ಣಗಾದ ಬಳಿಕ ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ನಿಧಾನವಾಗಿ ಮಸಾಜ್ ಮಾಡಿ. 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಸಿ ಲಘು ಶಾಂಪೂ ಹಾಕಿ ತೊಳೆಯಿರಿ.

ಬೆಳ್ಳುಳ್ಳಿ ಶಾಂಪೂ

ಬೇಕಾಗುವ ಸಾಮಗ್ರಿಗಳು
12-15 ಬೆಳ್ಳುಳ್ಳಿ ಎಸಲುಗಳು
5-10 ಹನಿ ಪುದೀನಾ ಎಣ್ಣೆ

ತಯಾರಿ ವಿಧಾನ
ಬೆಳ್ಳುಳ್ಳಿಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ರುಬ್ಬಿಕೊಳ್ಳಿ. ಇದು ದಪ್ಪಗಿನ ಪೇಸ್ಟ್ ಮಾಡಿ. ಇದಕ್ಕೆ ಹತ್ತು ಹನಿಯಷ್ಟು ಪುದೀನಾ ಎಣ್ಣೆ ಹಾಕಿ ಮತ್ತು ಸರಿಯಾಗಿ ಎರಡು ಮಿಶ್ರಣ ಮಾಡಿ. ಹಗುರ ಶಾಂಪೂ ಇರುವಂತಹ ಬಾಟಲಿಗೆ ಈ ಮಿಶ್ರಣವನ್ನು ಹಾಕಿಡಿ. ಈ ಶಾಂಪೂವನ್ನು ಕೂದಲು ತೊಳೆಯಲು ಬಳಸಿಕೊಳ್ಳಿ. ವಾರದಲ್ಲಿ ಮೂರಕ್ಕಿಂತ ಹೆಚ್ಚು ಸಲ ಇದನ್ನು ಬಳಸಬೇಡಿ.

ಬೆಳ್ಳುಳ್ಳಿ ಮತ್ತು ದಾಲ್ಚಿನ್ನಿ

ಬೇಕಾಗುವ ಸಾಮಗ್ರಿಗಳು
3 ಬೆಳ್ಳುಳ್ಳಿ ಎಸಲುಗಳು
1 ದಾಲ್ಚಿನ್ನಿ ಚಕ್ಕೆ
1 ಮಧ್ಯಮ ಗಾತ್ರದ ಈರುಳ್ಳಿ
ನೀರು

ವಿಧಾನ
*2-3 ಕಪ್ ನೀರಿನಲ್ಲಿ ಬೆಳ್ಳುಳ್ಳಿ, ದಾಲ್ಚಿನ್ನಿ ಮತ್ತು ಈರುಳ್ಳಿಯನ್ನು ಕುದಿಸಿ. ಎಲ್ಲಾ ಸಾಮಗ್ರಿಗಳನ್ನು ನೀರು ಸರಿಯಾಗಿ ಹೀರಿಕೊಳ್ಳುವ ತನಕ ಕುದಿಸಿ. ಇದನ್ನು ಕೆಳಗಿಳಿಸಿ *ಅದು ಕೋಣೆಯ ತಾಪಮಾನಕ್ಕೆ ಬರುವಂತೆ ನೋಡಿಕೊಳ್ಳಿ. ಇದು ತಣ್ಣಗಾದ ಬಳಿಕ ಈ ಮಿಶ್ರಣವನ್ನು ಸೋಸಿಕೊಳ್ಳಿ. ಇದರಿಂದ ನೀವು ಕೂದಲು ತೊಳೆಯಬಹುದು ಮತ್ತು ಬಳಿಕ ತಣ್ಣೀರಿನಿಂದ ಸ್ನಾನ ಮಾಡಿ.
*ವೇಗ ಮತ್ತು ಉತ್ತಮ ಫಲಿತಾಂಶಕ್ಕಾಗಿ ಒಂದು ವಾರ ಕಾಲ ಪ್ರತಿನಿತ್ಯ ಇದನ್ನು ಬಳಸಿ.

ಬೆಳ್ಳುಳ್ಳಿ ಮತ್ತು ರೋಸ್ಮೆರಿ

ಬೇಕಾಗುವ ಸಾಮಗ್ರಿಗಳು
*ಐದು ಚಮಚ ಬೆಳ್ಳುಳ್ಳಿ ಎಣ್ಣೆ
*1 ಚಮಚ ಹರಳೆಣ್ಣೆ
*½ ಚಮಚ ರೋಸ್ಮೆರಿ ಎಣ್ಣೆ
*1 ಚಮಚ ತೆಂಗಿನೆಣ್ಣೆ

ವಿಧಾನ
*ಎಲ್ಲವನ್ನು ಒಂದು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿ. ಇದರಿಂದ ಒಂದು ಚಮಚ ಎಣ್ಣೆ ತೆಗೆದುಕೊಂಡು ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿ. ನಿಧಾನವಾಗಿ ವೃತ್ತಾಕಾರದಲ್ಲಿ 5-10 ನಿಮಿಷ ಕಾಲ ಮಸಾಜ್ ಮಾಡಿ.
*30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಸಲ್ಫೇಟ್ ಇಲ್ಲದೆ ಇರುವ ಶಾಂಪೂ ಬಳಸಿ ಕೂದಲು ತೊಳೆಯಿರಿ. *ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಮೂರು ಸಲ ಇದನ್ನು ಬಳಸಿ.

ಬೆಳ್ಳುಳ್ಳಿಯ ಇತರ ಪ್ರಯೋಜನಗಳು

*ಬೆಳ್ಳುಳ್ಳಿ ಬೆರೆತ ಎಣ್ಣೆ
*ಬೆಳ್ಳುಳ್ಳಿಯನ್ನು ಬೆರೆಸಿಕೊಂಡ ಎಣ್ಣೆಯನ್ನು ತಲೆಗೂದಲಿಗೆ ಹಚ್ಚಿಕೊಳ್ಳುವುದು ತಲೆಬುಡದಲ್ಲಿನ ಸೋಂಕನ್ನು ನಿವಾರಿಸಿ ನೆರೆಗೂದಲನ್ನು ತಡೆಗಟ್ಟುತ್ತದೆ. ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ.

ಎಣ್ಣೆ ತಯಾರಿಸುವುದು ಹೇಗೆ?

ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ರಸ ಸಿದ್ಧಪಡಿಸಿ. ಅರ್ಧ ಕಪ್ ತೆಂಗಿನೆಣ್ಣೆಗೆ 1 ಚಮಚದಷ್ಟು ಬೆಳ್ಳುಳ್ಳಿ ರಸವನ್ನು ಮಿಶ್ರಮಾಡಿಕೊಳ್ಳಿ.
*ಮಂದ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಿಮ್ಮ ತಲೆಬುಡಕ್ಕೆ ಎಣ್ಣೆಯನ್ನು ಮಸಾಜ್ ಮಾಡಿ.
*ನಿಮ್ಮ ತಲೆಬುಡ ಬೆಚ್ಚಗಾಗುವರೆಗೆ ಮಸಾಜ್ ಕ್ರಿಯೆಯನ್ನು ಮುಂದುವರಿಸಿ. ಗಂಟೆಗಳಷ್ಟು ಕಾಲ ಹಾಗೆಯೇ ಬಿಡಿ. ನಂತರ ಶಾಂಪೂ ಬಳಸಿ ಕಂಡೀಶನ್ ಮಾಡಿಕೊಳ್ಳಿ.

ಬೆಳ್ಳುಳ್ಳಿ ಮಾಸ್ಕ್

ವಿಟಮಿನ್ ಇ ಯೊಂದಿಗೆ ಬೆಳ್ಳುಳ್ಳಿಯಲ್ಲಿ ಸೆಲೇನಿಯಮ್ ಇದ್ದು ಆಲೀವ್ ಆಯಿಲ್ ಮತ್ತು ಮೊಟ್ಟೆಯೊಂದಿಗೆ ಇದನ್ನು ಬೆರೆಸಿಕೊಂಡು ನಿಮ್ಮ ಕೂದಲಿಗೆ ನೈಸರ್ಗಿಕ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆ. ಹೇರ್ ಮಾಸ್ಕ್ ಅನ್ನು ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸುತ್ತಿದ್ದೇವೆ

ಸಾಮಾಗ್ರಿಗಳು

*1 ಮೊಟ್ಟೆಯ ಬಿಳಿ ಭಾಗ
*1 ಚಮಚ ಆಲೀವ್ ಆಯಿಲ್
*1 ಚಮಚ ಬೆಳ್ಳುಳ್ಳಿ ಎಣ್ಣೆ

ಮಾಡುವ ವಿಧಾನ
*ಪಾತ್ರೆಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಹಾಕಿ. ಪ್ಯಾಕ್ ಚೆನ್ನಾಗಿ ಮಿಶ್ರಗೊಳ್ಳುವರೆಗೆ ಕಲಸಿಕೊಳ್ಳಿ.
* ಇನ್ನು ತಲೆಗೂದಲು ಮತ್ತು ಬುಡಕ್ಕೆ ಈ ಮಾಸ್ಕ್ ಅನ್ನು ಹಚ್ಚಿಕೊಂಡು, 30 ನಿಮಿಷಗಳ ಕಾಲ ಹಾಗೆಯೇ ಬಿಡಿ.
* ಇವೆಲ್ಲಾ ಮುಗಿದ ದೈನಂದಿನ ಶಾಂಪೂ ಮತ್ತು ಕಂಡೀಶನರ್ ಬಳಸಿಕೊಂಡು ಕೂದಲು ತೊಳೆದುಕೊಳ್ಳಿ.

English summary

did-you-know-these-diy-garlic-remedies-can-stop-hair-loss

Garlic being an ingredient that provides flavour to the food also has many other benefits. This common yet important ingredient plays a vital role in our health and also in enhancing our beauty. In case of beauty, garlic is something that works incredibly on hair growth. Raw garlic contains all the required zinc, calcium, sulphur, etc., which can do wonders to your hair. The antioxidants contained in garlic can prevent hair fall and increase hair growth to a great extent. This article will give you an insight on how garlic benefits your hair and how you can use it as a mask for solving hair loss. Let us see what they are.
Story first published: Friday, June 8, 2018, 17:08 [IST]
X
Desktop Bottom Promotion