For Quick Alerts
ALLOW NOTIFICATIONS  
For Daily Alerts

ಹುಬ್ಬುಗಳ ಕೂದಲು ಉದುರುವಿಕೆಗೆ ಮನೆಮದ್ದುಗಳು

By Hemanth
|

ಮುಖದ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶವೆಂದರೆ ಅದು ಹುಬ್ಬುಗಳು. ದಪ್ಪ ಹಾಗೂ ಒಳ್ಳೆಯ ರೀತಿ ವಿನ್ಯಾಸ ಮಾಡಿಕೊಂಡಿರುವ ಹುಬ್ಬುಗಳು ಮುಖದ ಸೌಂದರ್ಯ ಮತ್ತಷ್ಟು ಹೆಚ್ಚಿಸುವುದು. ಇದನ್ನು ಕತ್ತರಿಸಿಕೊಂಡು ಸರಿಯಾಗಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಆದರೆ ಕೆಲವರಿಗೆ ಹುಬ್ಬಿನ ಕೂದಲುಗಳು ಉದುರುವ ಮೂಲಕ ಸಮಸ್ಯೆ ಕಾಣಿಸಿಕೊಳ್ಳುವುದು.

ಇದರ ಬಗ್ಗೆ ತಕ್ಷಣ ಕ್ರಮ ತೆಗೆದುಕೊಂಡು ಚಿಕಿತ್ಸೆ ನೀಡದೆ ಇದ್ದರೆ ಆಗ ನಿಮ್ಮ ಮುಖದ ಸೌಂದರ್ಯ ಕೆಡಬಹುದು. ಹುಬ್ಬುಗಳ ಕೂದಲು ಉದುರುವಿಕೆಗೆ ಕಾರಣವೇನು ಮತ್ತು ಇದಕ್ಕೆ ಚಿಕಿತ್ಸೆ ಇದೆಯಾ? ಈ ಲೇಖನದಲ್ಲಿ ಹುಬ್ಬುಗಳು ಕೂದಲು ಉದುರಲು ಕಾರಣ ಮತ್ತು ಅದಕ್ಕೆ ಕೆಲವೊಂದು ಮನೆಮದ್ದುಗಳನ್ನು ಹೇಳಿಕೊಡಲಿದ್ದೇವೆ. ಇದನ್ನು ತಿಳಿಯಿರಿ.

ಹುಬ್ಬುಗಳ ಕೂದಲು ಉದುರುವಿಕೆಗೆ ಕಾರಣವೇನು?

ಹುಬ್ಬುಗಳು ನಮ್ಮ ಮುಖದ ಪ್ರಮುಖ ಭಾಗವಾಗಿದೆ ಮತ್ತು ಕೂದಲು ಉದುರಿದರೆ ಆಗ ನಿಮ್ಮ ಮುಖದಲ್ಲಿ ಭಾರೀ ಬದಲಾವಣೆ ಕಂಡುಬರಬಹುದು. ಹುಬ್ಬಿನ ಕೂದಲು ಉದುರಲು ಕಾರಣವೇನೆಂದು ತಿಳಿಯಲು ನೀವು ಮುಂದೆ ಓದುತ್ತಾ ಸಾಗಿ.

Eyebrow

1. ಒತ್ತಡ

ಒತ್ತಡದಿಂದಾಗಿ ತಲೆ ಕೂದಲು ಉದುರುವಂತೆ ಹುಬ್ಬುಗಳ ಕೂದಲು ಕೂಡ ಉದುರಲು ಆರಂಭವಾಗುವುದು. ಮಾನಸಿಕ ಅಥವಾ ದೈಹಿಕ ಒತ್ತಡ ಏನೇ ಆಗಿದ್ದರೂ ಹುಬ್ಬುಗಳ ಕೂದಲು ಉದುರುವುದು.

2. ಕೀಳುವುದು

ಹುಬ್ಬುಗಳ ವಿನ್ಯಾಸವನ್ನು ಸರಿಯಾಗಿ ಇಟ್ಟುಕೊಳ್ಳಲು ಕೂದಲು ಕೀಳುವುದು ಅಗತ್ಯವಾಗಿರುವುದು. ಆದರೆ ಇದನ್ನು ಅತಿಯಾಗಿ ಮಾಡಿದರೆ ಆಗ ಕೂದಲು ಉದುರುವಿಕೆ ಸಮಸ್ಯೆ ಬರಬಹುದು. ನೋವಿನ ಕಾರಣದಿಂದಾಗಿ ಥ್ರೆಡಿಂಗ್ ಬದಲಿಗೆ ಹೆಚ್ಚಿನವರು ಕೀಳುವುದಕ್ಕೆ ಮಹತ್ವ ನೀಡುವರು. ಇದರಿಂದ ಕೂದಲು ಉದುರಬಹುದು.

3. ಚರ್ಮದ ಕಿರಿಕಿರಿ

ಸೆಬೊರ್ಹೆರಿಕ್ ಡರ್ಮಟೈಟಿಸ್, ಸೋರಿಯಾಸಿಸ್ ಇತ್ಯಾದಿ ಚರ್ಮ ಸಂಬಂಧಿ ಕಾಯಿಲೆಗಳು ತುರಿಕೆ ಮತ್ತು ಹುಬ್ಬುಗಳ ಭಾಗದಲ್ಲಿ ಚರ್ಮ ಕೆಂಪಾಗುವ ಸಮಸ್ಯೆ ಉಂಟು ಮಾಡಬಹುದು. ಪದೇ ಪದೇ ಉಜ್ಜುವಿಕೆ ಮತ್ತು ತುರಿಕೆಯಿಂದಾಗಿ ಹುಬ್ಬುಗಳ ಕೂದಲು ಉದುರಬಹುದು.

4. ಪೋಷಕಾಂಶಗಳ ಕೊರತೆ

ಪೋಷಕಾಂಶಗಳ ಕೊರತೆಯು ಕೇವಲ ತಲೆಬುರುಡೆಯಲ್ಲಿ ಮಾತ್ರ ಕಾಣಿಸಿಕೊಳ್ಳಲ್ಲ. ಇದು ಹುಬ್ಬುಗಳಲ್ಲಿಯೂ ಕಾಣಿಸುವುದು. ಪ್ರಮುಖ ಪೋಷಕಾಂಶಗಳು ಮತ್ತು ವಿಟಮಿನ್ ಗಳಾದ ಸತು, ವಿಟಮಿನ್ ಡಿ, ವಿಟಮಿನ್ ಬಿ12 ಇತ್ಯಾದಿಗಳು ಹುಬ್ಬುಗಳು ಕೂದಲು ಉದುರುವಿಕೆಗೆ ನೆರವಾಗುವುದು.

5. ವಯಸ್ಸು

ಹುಬ್ಬುಗಳ ಕೂದಲು ಉದುರಲು ನಿಮಗೆ ವಯಸ್ಸಾಗುವುದು ಕೂಡ ಕಾರಣವಾಗಿರಬಹುದು. ಮೇಲಿನ ಯಾವುದೇ ಕಾರಣಗಳು ಅಲ್ಲದೇ ಇದ್ದರೆ, ವಯಸ್ಸು ಇದಕ್ಕೆ ಕಾರಣವಾಗಿರಬಹುದು.

ಹುಬ್ಬುಗಳ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಹೇಗೆ?

ಆಲಿವ್ ತೈಲ

ಆಲಿವ್ ತೈಲದಲ್ಲಿ ವಿಟಮಿನ್ ಇ ಇದೆ ಮತ್ತು ಇದು ಕೂದಲು ಉದುರುವಿಕೆ ತಡೆಯಲು ನೆರವಾಗುವುದು. ಒಂದು ಚಮಚ ಬಿಸಿ ಆಲಿವ್ ತೈಲವನ್ನು ತೆಗೆದುಕೊಂಡು ಹುಬ್ಬುಗಳಿಗೆ ವೃತ್ತಾಕಾರದಲ್ಲಿ ನಿಧಾನವಾಗಿ ಮಸಾಜ್ ಮಾಡಿ. 30 ನಿಮಿಷ ಹಾಗೆ ಬಿಡಿ ಮತ್ತು ಇದರ ಬಳಿಕ ಬಿಸಿ ನೀರಿನಿಂದ ತೊಳೆಯಿರಿ.

ಅಲೋವೆರಾ

ಅಲೋವೆರಾವು ಕೂದಲಿನ ಕಿರುಚೀಲಗಳನ್ನು ಉತ್ತೇಜಿಸುವುದು ಮತ್ತು ಕೂದಲಿಗೆ ಮೊಶ್ಚಿರೈಸ್ ಮಾಡಲು ನೆರವಾಗುವುದು. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗುವುದು.
ಒಂದು ಅಲೋವೆರಾ ಎಲೆ ತಗೆದುಕೊಳ್ಳಿ ಮತ್ತು ಇದನ್ನು ಕತ್ತರಿಸಿಕೊಂಡು ಅದರಿಂದ ಲೋಳೆ ತೆಗೆಯಿರಿ. ತಾಜಾ ಲೋಳೆಯನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳಿ ಮತ್ತು ನಿಧಾನವಾಗಿ ಮಸಾಜ್ ಮಾಡಿ. 30 ನಿಮಿಷ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

ಹಾಲು

ಹಾಲಿನಲ್ಲಿ ಪ್ರೋಟೀನ್ ಅಂಶಗಳು ಇವೆ ಮತ್ತು ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಹತ್ತಿಉಂಡೆ ತೆಗೆದುಕೊಂಡು ಹಸಿ ಹಾಲನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳಿ. ಕೆಲವು ಒಣಗುವ ತನಕ ಕೆಲವು ನಿಮಿಷ ತನಕ ಹಾಗೆ ಬಿಡಿ. 20 ನಿಮಿಷ ಬಳಿಕ ತೊಳೆಯಿರಿ. ವೇಗ ಮತ್ತು ಉತ್ತಮ ಫಲಿತಾಂಶಕ್ಕಾಗಿ ಪ್ರತಿನಿತ್ಯ ಇದನ್ನು ಬಳಸಿ.

ಮೊಟ್ಟೆಯ ಲೋಳೆ

ಮೊಟ್ಟೆಯು ಕೂದಲನ್ನು ಕಂಡೀಷನ್ ಮಾಡಲು, ನಯ ಹಾಗೂ ಆರೋಗ್ಯವಾಗಿಡಲು ನೆರವಾಗುವುದು. ಇದರಲ್ಲಿ ಇರುವ ವಿಟಮಿನ್ ಡಿ ಮತ್ತು ಪ್ರೋಟೀನ್ ಕೂದಲಿನ ಬೆಳವಣಿಗೆಗೆ ನೆರವಾಗುವುದು.
ಒಂದು ಮೊಟ್ಟೆ ತೆಗೆದುಕೊಲ್ಳಿ ಮತ್ತು ಅದರಿಂದ ಲೋಳೆಯನ್ನು ಬೇರ್ಪಡಿಸಿಕೊಳ್ಳಿ. ಲೋಳೆಯನ್ನು ಸರಿಯಾಗಿ ಕಲಸಿಕೊಳ್ಳಿ. ಹತ್ತಿಉಂಡೆ ಬಲಸಿಕೊಂಡು ಹುಬ್ಬುಗಳಿಗೆ ಇದನ್ನು ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಪಾಲಿಸಬೇಕಾದ ಕೆಲವು ಕ್ರಮಗಳು

1. ಕೂದಲು ಕೀಳುವುದುನ್ನು ಆದಷ್ಟು ಕಡಿಮೆ ಮಾಡಿ. ಇದರಿಂದ ಕೂದಲು ಉದುರುವುದು ಮಾತ್ರವಲ್ಲದೆ, ಬೆಳವಣಿಗೆಗೆ ಕೂಡ ಅಡ್ಡಿಯಾಗುವುದು.
2. ಆಹಾರದಲ್ಲಿ ಸತು, ಕಬ್ಬಿನಾಂಶ ಇತ್ಯಾದಿಗಳಿಂದ ಕೂಡಿರುವ ಪೋಷಕಾಂಶ ಹಾಗೂ ಪ್ರೋಟೀನ್ ಇರುವ ಆಹಾರ ಸೇವನೆ ಮಾಡಿ. ಕೂದಲಿನ ಬೆಳವಣಿಗೆ ಹೆಚ್ಚಿಸಲು ನೀವು ಮಾಂಸ, ತರಕಾರಿ, ಬೀಜಗಳು, ಮೊಟ್ಟೆ, ಮೀನು ಇತ್ಯಾದಿಗಳನ್ನು ಆಹಾರದಲ್ಲಿ ಬಳಸಿಕೊಳ್ಳಿ.

ಕಣ್ಣಿನ ಹುಬ್ಬುಗಳ ಅಂದ-ಚೆಂದ ಹೆಚ್ಚಿಸಲು ಸರಳ ಮನೆಮದ್ದುಗಳು

ಹರಳೆಣ್ಣೆ

*ಹರಳೆಣ್ಣೆಯಲ್ಲಿ ಕ್ಯೂ ಟಿಪ್ ನ್ನು ಮುಳುಗಿಸಿ *ಈ ನೈಸರ್ಗಿಕ ಎಣ್ಣೆಯನ್ನು ನಿಮ್ಮ ಕಣ್ಣುಗಳ ಹುಬ್ಬಿನ ಸುತ್ತಲು ಹಚ್ಚಿ. *40-45 ನಿಮಿಷ ಕಾಲ ಹಾಗೆ ಬಿಡಿ. *ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ.
*ದಿನದಲ್ಲಿ ಒಂದು ಸಲ ಬಳಸಿದರೆ ಹುಬ್ಬಿನ ಕೂದಲು ಬೆಳೆಯುವುದು.

ಮೆಂತೆ ಕಾಳುಗಳು

* 1/2 ಚಮಚ ಮೆಂತೆ ಕಾಳುಗಳನ್ನು ಹುಡಿ ಮಾಡಿ 2 ಚಮಚ ನೀರು ಹಾಕಿ ಅದರ ಪೇಸ್ಟ್ ಮಾಡಿಕೊಳ್ಳಿ. *ಈ ಪೇಸ್ಟ್ ನ್ನು ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ.
*40-45 ನಿಮಿಷ ಕಾಲ ಹಾಗೆ ಬಿಡಿ.
*ಬಳಿಕ ಉಗುರುಬೆಚ್ಚಗಿನ ನೀರು ಮತ್ತು ಕ್ಲೆನ್ಸರ್ ಬಳಸಿ ಮುಖ ತೊಳೆಯಿರಿ.
* ವಾರದಲ್ಲಿ 3-4 ಸಲ ಇದನ್ನು ಬಳಸಿದರೆ ಫಲಿತಾಂಶ ಖಚಿತ.

ಹಾಲು

*ಹಸಿ ಹಾಲಿನಲ್ಲಿ ಹತ್ತಿ ಉಂಡೆ ಅದ್ದಿಕೊಳ್ಳಿ.
*ಇದನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳಿ.
*20-25 ನಿಮಿಷ ಕಾಲ ಇದನ್ನು ಹಾಗೆ ಬಿಡಿ.
*ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಪರಿಣಾಮಕಾರಿ ಫಲಿತಾಂಶಕ್ಕಾಗಿ ದಿನದಲ್ಲಿ 2-3 ಸಲ ಹೀಗೆ ಮಾಡಿ.

ಈರುಳ್ಳಿ ರಸ

*ಒಂದು ಈರುಳ್ಳಿ ರಸ ತೆಗೆಯಿರಿ. *ಈ ರಸದಲ್ಲಿ ಕ್ಯೂ ಟಿಪ್ ಮುಳುಗಿಸಿ
* ಹುಬ್ಬುಗಳಿಗೆ ಸರಿಯಾಗಿ ಈ ರಸ ಹಚ್ಚಿಕೊಳ್ಳಿ.
*20 ನಿಮಿಷ ಕಾಲ ಇದನ್ನು ಹಾಗೆ ಬಿಡಿ. *ಉಗುರುಬೆಚ್ಚಗಿನ ನೀರು ಮತ್ತು ಕ್ಲೆನ್ಸರ್ ಬಳಸಿ ತೊಳೆಯಿರಿ.
*ಹುಬ್ಬಿನ ಕೂದಲು ಬೇಗನೆ ಬೆಳೆಯಬೇಕು ಎಂದಾದರೆ ವಾರದಲ್ಲಿ 4-5 ಸಲ ಇದನ್ನು ಬಳಸಲು ಮರೆಯಬೇಡಿ

English summary

Causes Of Eyebrow Hair Loss And How To Treat Them?

The trend of thick and well-shaped eyebrows never goes out. Since eyebrows is one of the most highlighted feature of your face, it is important to keep it groomed always. So when the trend of thick and sharp eyebrows are going on it might not be good for some of you who are losing out hair on your eyebrows. Hair fall on eyebrows is a serious issue that needs to be given attention and treated at the right time.
X
Desktop Bottom Promotion