For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಅಲೋವೆರಾದ ಪ್ರಯೋಜನಗಳು

By Divya
|
ಅಲೋವೆರಾದಿಂದ ನಿಮ್ಮ ಕೂದಲಿಗೆ ಸಿಗುವ ಪ್ರಯೋಜನಗಳು? | BoldSky Kannada

ಪತ್ರಿಕೆಯ ಮುಖ ಪುಟದಲ್ಲಿ ಶೋಭಿಸುವ ರೂಪದರ್ಶಿಗಳ ಕೇಶರಾಶಿಗಳನ್ನು ನೋಡಿದಾಗ ಮನಸ್ಸಿಗೆ ಒಂದು ಬಗೆಯ ಆಸೆ ಹಾಗೂ ಬೇಸರ ಉಂಟಾಗುವುದು ಸಹಜ. ಹೌದು, ಆ ರೂಪದರ್ಶಿಗಳ ಕೇಶರಾಶಿಯಂತೆಯೇ ನಮ್ಮ ಕೇಶರಾಶಿಯೂ ಕಂಗೊಳಿಸಬೇಕು ಎಂದು ನಾವು ಬಯಸುತ್ತೇವೆ. ಜೊತೆಗೆ ಅಂತಹ ಕೂದಲು ನಮಗಿಲ್ಲವಲ್ಲಾ... ಎನ್ನುವ ಬೇಸರ ಒಂದಿಷ್ಟು ನೋವನ್ನುಂಟು ಮಾಡುವುದು.

ಸುಂದರ ಕೇಶರಾಶಿಯನ್ನು ಕಂಡಾಗ ಉಂಟಾಗುವ ಆಶ್ಚರ್ಯ ಹಾಗೂ ಬೇಸರದಿಂದಾಗಿ ನಮ್ಮ ಕೂದಲ ಆರೈಕೆಗಾಗಿ ಒಂದಿಷ್ಟು ಔಷಧಗಳ ಹುಡುಕಾಟ ಹಾಗೂ ಆರೈಕೆಯ ವಿಧಾನಗಳನ್ನು ಹುಡುಕಲು ಮನಸ್ಸು ಬಯಸುವುದು. ನೀವು ಅಂತಹ ಹುಡುಕಾಟದಲ್ಲಿ ಇದ್ದೀರಿ ಎಂದಾದರೆ ನಿಮಗೆ ಅತ್ಯುತ್ತಮ ಆಯ್ಕೆ ಲೋಳೆಸರ/ಅಲೋವೆರಾ ಆಗುವುದು. ಏಕೆಂದರೆ ಅಲೋವೆರಾ ಅತ್ಯುತ್ತಮ ಔಷಧೀಯ ಗುಣಗಳನ್ನು ಒಳಗೊಂಡಿರುವುದಲ್ಲದೆ ಕೂದಲ ಆರೈಕೆಗೆ ಅತ್ಯುತ್ತಮ ಸಹಕಾರ ನೀಡುವುದು.

 ಕೂದಲಿಗೆ ಅಲೋವೆರಾ ಹಾಕುವ ವಿಧಾನ

ಅತ್ಯುತ್ತಮ ಪೌಷ್ಟಿಕಾಂಶದ ಗುಣವನ್ನು ಒಳಗೊಂಡಿರುವ ಇದನ್ನು ಕೂದಲ ಸಮಸ್ಯೆಯನ್ನು ಬಹುಬೇಗ ನಿವಾರಣೆ ಮಾಡಬಲ್ಲ ಮಾಂತ್ರಿಕ ಔಷಧೀಯ ಸಸ್ಯ ಎಂದು ಹೇಳಲಾಗುವುದು. ಅಲೋವೆರಾ ಅನ್ನು ನಿಮ್ಮ ಕೂದಲಿಗೆ ಅನ್ವಯಿಸಿಕೊಂಡರೆ ನಿಮ್ಮ ಕೇಶರಾಶಿಯ ಸಮಸ್ಯೆ ಬಹುಬೇಗ ನಿವಾರಣೆ ಹೊಂದುವುದು.

1. ಲೋಳೆಸರ/ಅಲೋವೆರಾದಲ್ಲಿ ಪ್ರೋಟಿಯೋಲೈಟಿಕ್ ಕಿಣ್ವಗಳಿವೆ. ಇದು ನೆತ್ತಿಯ ಭಾಗದಲ್ಲಿ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತವೆ. ಕೋಶದ ಆರೋಗ್ಯವನ್ನು ಸುಧಾರಿಸುವುದಲ್ಲದೆ ಆರೋಗ್ಯಕರವಾದ ಕೂದಲು ಬಹುಬೇಗ ಹುಟ್ಟುವಂತೆ ಉತ್ತೇಜಿಸುತ್ತದೆ.
2. ಅಲೋವೆರಾ ಅನ್ವಯಿಸಿಕೊಳ್ಳುವುದರಿಂದ ಕೇಶರಾಶಿಯು ಬಹುಬೇಗ ಮೃದು ಹಾಗೂ ರೇಷ್ಮೆಯಂತೆ ಮಾಡುವುದು. ಕೇಶರಾಶಿಯು ಈ ಬದಲಾವಣೆಯನ್ನು ಪಡೆದುಕೊಂಡರೆ ನಿಮ್ಮ ಇಷ್ಟದಂತಹ ಕೇಶವಿನ್ಯಾಸಗಳನ್ನು ಸರಾಗವಾಗಿ ಮಾಡಿಕೊಳ್ಳಬಹುದು.
3. ಅಲೋವೆರಾ ಅನ್ವಯಿಸಿಕೊಳ್ಳುವುದರಿಂದ ಕೂದಲುದುರುವುದನ್ನು ತಡೆಯಬಹುದು. ಜೊತೆಗೆ ನೈಸರ್ಗಿಕವಾಗಿ ದಪ್ಪವಾದ ಹಾಗೂ ಅಧಿಕ ಕೂದಲು ಬೆಳೆಯುವಂತೆ ಉತ್ತೇಜಿಸುವುದು.
4. ನೆತ್ತಿಯಲ್ಲಿ ಕಾಣಿಸಿಕೊಳ್ಳುವ ಉರಿಯೂತ, ತುರಿಕೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡುವುದು.
5. ಅಲೋವೆರಾದಲ್ಲಿ ಇರುವ ಪ್ರತಿರೋಧಕ ಗುಣವು ತಲೆಹೊಟ್ಟು ಮತ್ತು ಕೂದಲು ಒಡೆಯುವ ಸಮಸ್ಯೆಗಳನ್ನು ಅದ್ಭುತ ರೀತಿಯಲ್ಲಿ ನಿವಾರಿಸುವುದು.
6. ಅಲೋವೆರಾದಲ್ಲಿರುವ ಪ್ರೋಟಿಯೋಲೈಟಿಕ್ ಕಿಣ್ವಗಳು, ಪ್ರೋಟೀನ್, ಜೀವಸತ್ವಗಳು, ಖನಿಜಗಳು ಕೂದಲುಗಳ ಕಿರುಚೀಲಗಳಿಗೆ ಅಥವಾ ಬೇರುಗಳಿಗೆ ಪರಿಣಾಮಕಾರಿಯ ರೀತಿಯಲ್ಲಿ ಪೋಷಣೆ ನೀಡುತ್ತದೆ.
7. ಅಲೋವೆರಾ ಕೂದಲಿಗೆ ಸಂಪೂರ್ಣ ಪೋಷಕಾಂಶ ಮತ್ತು ನೀರಿನಂಶದಿಂದ ಕೂಡಿರುವಂತೆ ಮಾಡುತ್ತದೆ.

ಅಲೋವೆರಾದ ಇತರ ಒಳ್ಳೆಯ ಗುಣ:

ಲೋಳೆಸರ ಅಥವಾ ಅಲೋವೆರಾ ಎಂದು ಕರೆಯಲ್ಪಡುವ ಈ ಸಸ್ಯ ಅದ್ಭುತ ಶಕ್ತಿಯನ್ನು ಪಡೆದುಕೊಂಡಿದೆ. ಇದನ್ನು ಅಡುಗೆಮನೆಯ ಕಿಟಕಿ, ಬಾಲ್ಕನಿ ಅಥವಾ ಕೈತೋಟ ಹೀಗೆ ಕೆಲವು ಪ್ರಮುಖ ಸ್ಥಳಗಳಲ್ಲಿ ಇಟ್ಟು ಬೆಳೆಸುವುದರಿಂದ ಅನೇಕ ಬಗೆಯ ರಾಸಾಯನಿಕ ವಸ್ತುಗಳನ್ನು ನಿವಾರಿಸುತ್ತದೆ.

ನಿತ್ಯವೂ ಅಲೋವೆರಾವನ್ನು ಹೇಗೆ ಅನ್ವಯಿಸಿಕೊಳ್ಳುವುದು? ಅವುಗಳ ಪ್ರಯೋಜನ ಪಡೆದುಕೊಳ್ಳುವುದು ಹೇಗೆ ಎನ್ನುವ ಹೊಸ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ...

ಮಾಂತ್ರಿಕ ಲೇಪನ:

ತೆಂಗಿನ ಎಣ್ಣೆ ಮತ್ತು ಅಲೋವೆರಾ ಜೆಲ್ ಅನ್ನು ಸಮ ಪ್ರಮಾಣದಲ್ಲಿ ಬೆರೆಸಿದಾಗ, ಅಲೋವೆರಾದ ಶಕ್ತಿಯು ದ್ವಿಗುಣಗೊಳ್ಳುವುದು. ಈ ಮಿಶ್ರಣವನ್ನು ನಿತ್ಯವೂ ಗಣನೀಯವಾಗಿ ಅನ್ವಯಿಸುವುದರಿಂದ ನಯವಾದ ಹಾಗೂ ಕಾಂತಿಯಿಂದ ಕೂಡಿದ ಕೇಶರಾಶಿಯನ್ನು ಪಡೆದುಕೊಳ್ಳಬಹುದು. ಈ ಮಿಶ್ರಣವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಅಥವಾ ವಾರದಲ್ಲಿ ಎರಡು ಬಾರಿ ಅನ್ವಯಿಸಬಹುದು.

ಈ ಮಿಶ್ರಣವನ್ನು ನೆತ್ತಿಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಬಹುದು. ಹೀಗೆ ಮಾಡುವುದರಿಂದ ಹಾನಿಗೊಳಗಾದ ಕೂದಲು ಸೂಕ್ತ ಆರೈಕೆಗೆ ಒಳಗಾಗುವುದು. ಜೊತೆಗೆ ಸೋಂಕುಗಳು ನಿವಾರಣೆ ಹೊಂದುವವು. ಇದನ್ನು ಅನ್ವಯಿಸಿ ಒಂದು ಶವರ್ ಕ್ಯಾಪ ಧರಿಸಬೇಕು. ಬಳಿಕ ಒಂದು ಗಂಟೆಗಳ ಕಾಲ ಆರಲು ಬಿಟ್ಟು ಸ್ವಚ್ಛಗೊಳಿಸಬಹುದು.

ಈ ಮಿಶ್ರಣ ಅನ್ವಯಿಸುವುದರಿಂದ ನೆತ್ತಿಯ ಮೇಲೆ ಸಾಕಷ್ಟು ತೇವಾಂಶ ಇರುವಂತೆ ನೋಡಿಕೊಳ್ಳಬಹುದು. ಕೂದಲು ಆರೋಗ್ಯಕರವಾಗಿ ಹಾಗೂ ಸಮೃದ್ಧವಾಗಿ ಬೆಳೆಯುವುದು. ಈ ಮಿಶ್ರಣಗಳ ಅನ್ವಯವನ್ನು ಗಣನೀಯವಾಗಿ ಮಾಡುತ್ತಿದ್ದರೆ ಪದೇ ಪದೇ ಕೇಶಗಳನ್ನು ಟ್ರಿಮ್ ಮಾಡಿಸುವ ಅಗತ್ಯ ಇರುವುದಿಲ್ಲ.

ಅನೇಕರು ಸೂರ್ಯನ ಕಿರಣದಿಂದ ತ್ವಚೆ ಸುಡುವುದಕ್ಕೆ ಆರೈಕೆಯಾಗಿ ಅಲೋವೆರಾದ ಮೊರೆ ಹೋಗುತ್ತಾರೆ. ಅದೇ ಆರೋಗ್ಯಕರವಾದ ಅಲೋವೆರಾವನ್ನು ಕೂದಲ ಸಂರಕ್ಷಣೆಗೆ ಸಹಾಯ ಮಾಡುವುದು ಹೇಗೆ? ಎನ್ನುವುದನ್ನು ಇಂದು ಬೋಲ್ಡ್ ಸ್ಕೈ ತಿಳಿಸಿಕೊಟ್ಟಿದೆ.

ಕೂದಲ ಆರೋಗ್ಯ ಕಾಪಾಡುವ ದಿವ್ಯ ಔಷಧಿಯಾದ ಅಲೋವೆರಾ ಹೆಚ್ಚಿನ ಪೋಷಣೆ ನೀಡುವುದು. ನಿಜ, ರಾಸಾಯನಿಕ ಪದಾರ್ಥಗಳಿಂದ ನೆತ್ತಿಯ ಆರೋಗ್ಯ ಹಾಗೂ ಕೂದಲ ಆರೋಗ್ಯ ಹದಗೆಟ್ಟಾಗ ಆರೈಕೆ ಮಾಡಬಹುದಾದ ಎರಡು ನೈಸರ್ಗಿಕ ಉತ್ಪನ್ನವೆಂದರೆ ಅಲೋವೆರಾ ಮತ್ತು ತೆಂಗಿನೆಣ್ಣೆ ಎನ್ನುವುದನ್ನು ನೆನಪಿಡಿ.

English summary

Benefits Of Aloe Vera For Hair

Aloe vera essentially helps fight countless hair issues, that too without costing a lot. Although the known nutritional benefits of Aloe Vera for hair is limited to 75, it is hypothesized that the plant contains over 100 traceable nutrients.
X
Desktop Bottom Promotion