For Quick Alerts
ALLOW NOTIFICATIONS  
For Daily Alerts

ಹರಳೆಣ್ಣೆ ಮತ್ತು ಎಳ್ಳೆಣ್ಣೆಯಿಂದ ಕೂದಲಿನ ಆರೈಕೆ

By Hemanth
|

ಯಾರಿಗೆ ಹೇಳೋಣ ಈ ಪ್ರಾಬ್ಲಂ...ಕೂದಲು ಉದುರುವ ಸಮಸ್ಯೆಗಿಲ್ಲ ಸರಿಯಾದ ಮದ್ದು ಎನ್ನುವ ಹಾಡು ಸ್ನಾನಗೃಹದಿಂದ ಬರುತ್ತಲಿದ್ದರೆ ಅದಕ್ಕೆ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆಯೆಂದರೆ ಕೂದಲು ಉದುರುವಿಕೆ ಮತ್ತು ಕೂದಲು ತೆಳ್ಳಗೆ ಆಗುವುದು. ಇದಕ್ಕೆ ನಮ್ಮ ಜೀವನಶೈಲಿ ನೇರ ಹೊಣೆಯಾಗಿದೆ. ಒತ್ತಡ ಹಾಗೂ ಬಿಡುವಿಲ್ಲದ ಕೆಲಸಕಾರ್ಯಗಳಿಂದ ಕೂದಲಿನ ಆರೈಕೆ ಮಾಡಲು ಸಮಯವೇ ಇಲ್ಲದಂತಾಗಿದೆ.

ಇದರಿಂದ ನೇರವಾಗಿ ಹೋಗಿ ಕೆಲವು ಶಾಂಪೂ ಹಾಗೂ ಕಂಡೀಷನರ್ ತಂದು ಬಳಸುತ್ತಾ ಇರುತ್ತೇವೆ. ಆದರೆ ಇದಕ್ಕಿಂತ ಒಳ್ಳೆಯದಾದ ಮನೆಮದ್ದುಗಳು ಕೂದಲು ಉದುರುವ ಸಮಸ್ಯೆ ನಿವಾರಣೆ ಮಾಡುವಂತಹ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಹರಳೆಣ್ಣೆ ಮತ್ತು ಎಳ್ಳೆಣ್ಣೆ.

ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?

ಹರಳೆಣ್ಣೆಯಲ್ಲಿ ಇರುವಂತಹ ಪ್ರೋಟೀನ್ ನಿಮ್ಮ ಕೂದಲನ್ನು ಆರೋಗ್ಯವಾಗಿಡುವುದು. ಅದೇ ಎಳ್ಳೆಣ್ಣೆಯು ತಲೆಬುರುಡೆಯಲ್ಲಿ ರಕ್ತಸಂಚಾರ ಉತ್ತಮಪಡಿಸಿ ಕೂದಲಿನ ಕೋಶಗಳ ಆಂತರಿಕ ಆರೋಗ್ಯ ಕಾಪಾಡುವುದು. ಎರಡನ್ನು ಜತೆಯಾಗಿ ಬಳಕೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆಯು ನಿವಾರಿಸಲು ಸಾಧ್ಯವಿದೆ. ಇದರ ಅದ್ಭುತ ಫಲಿತಾಂಶವು ನಿಮಗೆ ಅಚ್ಚರಿ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರ ಅದ್ಭುತ ಲಾಭಗಳನ್ನು ಪಡೆಯಬೇಕೆಂದು ನಿಮಗೆ ಅನಿಸುತ್ತಾ ಇದೆಯಾ? ಹಾಗಾದರೆ ನೀವು ಮುಂದಕ್ಕೆ ಓದುತ್ತಾ ಹೋಗಿ.

castor-oil-sesame-oil

ಹರಳೆಣ್ಣೆಯಿಂದ ಕೂದಲಿಗೆ ಆಗುವ ಲಾಭಗಳು
ಹಿಂದಿನಿಂದಲೂ ಮಹಿಳೆಯರು ತಮ್ಮ ಕೂದಲ ಬೆಳವಣಿಗೆಗಾಗಿ ಹರಳೆಣ್ಣೆಯನ್ನು ಬಳಸಿಕೊಂಡು ಬರುತ್ತಿದ್ದಾರೆ. ಇದು ತಲೆಬುರುಡೆಯ ಸಮಸ್ಯೆ ವಿರುದ್ಧ ಹೋರಾಡಿ, ಕೂದಲಿನ ವಿನ್ಯಾಸ ಸುಧಾರಿಸುವುದು. ಹರಳೆಣ್ಣೆಯಲ್ಲಿ ವೈರಲ್ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದರಿಂದಾಗಿ ಇದು ತಲೆಬುರುಡೆಯ ಸೋಂಕಿಗೆ ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಅಧಿಕ ಮಟ್ಟದ ಪ್ರೋಟೀನ್ ಕೂದಲನ್ನು ದಪ್ಪ ಮಾಡುವುದು. ಇದರಿಂದಾಗಿ ಪ್ರೋಟೀನ್ ಕೊರತೆ ಇರುವ ಕೂದಲಿಗೆ ಸಹಕಾರಿ.


ಹರಳೆಣ್ಣೆಯಲ್ಲಿ ರಿಸಿನೊಲೆಕ್ ಆಮ್ಲವಿದ್ದು, ಇದು ತಲೆಬುರುಡೆಯಲ್ಲಿ ರಕ್ತಸಂಚಾರ ಉತ್ತಮವಾಗಲು ನೆರವಾಗುವುದು. ಇದರಿಂದ ಕೂದಲು ಆರೋಗ್ಯಕಾರಿಯಾಗಿ ಬೆಳೆಯುವುದು. ಹರಳೆಣ್ಣೆಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಇರುವುದರಿಂದ ಇದು ಕೂದಲಿಗೆ ಪೋಷಣೆ ನೀಡಿ, ಕಾಂತಿ ಹಾಗೂ ರೇಷ್ಮೆಯಂತೆ ಹೊಳೆಯುವಂತೆ ಮಾಡುವುದು.

ಕೂದಲಿಗೆ ಎಳ್ಳೆಣ್ಣೆಯ ಲಾಭಗಳು
ಎಳ್ಳೆಣ್ಣೆಯು ತುಂಬಾ ಒಣ ಹಾಗೂ ಸತ್ತಂತೆ ಇರುವ ತಲೆಬುರುಡೆ ಇರುವ ಮಹಿಳೆಯರಿಗೆ ತುಂಬಾ ಪರಿಣಾಮಕಾರಿ. ಯಾಕೆಂದರೆ ಇದು ಪೋಷಣೆ ನೀಡಿ ನಿಸ್ತೇಜವಾಗಿರುವ ಕೂದಲಿಗೆ ಜೀವ ತುಂಬುವುದು. ಎಳ್ಳೆಣ್ಣೆಯಲ್ಲಿ ಪ್ರೋಟೀನ್, ವಿಟಮಿನ್ ಇ ಮತ್ತು ಬಿ ಇದೆ. ಇದುರಲ್ಲಿ ಖನಿಜಾಂಶಗಳಾದ ಮೆಗ್ನಿಶಿಯಂ, ಪೋಸ್ಪರಸ್ ಮತ್ತು ಕ್ಯಾಲ್ಸಿಯಂ ಕೂಡ ಇದೆ. ಇದನ್ನು ಚರ್ಮವು ಸುಲಭವಾಗಿ ಹೀರಿಕೊಳ್ಳುವುದು ಮತ್ತು ಒಣ ತಲೆಬುರುಡೆಯನ್ನು ಆಳವಾಗಿ ಮೊಶ್ಚಿರೈಸ್ ಮಾಡುವುದು. ಇದು ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯುವುದು ಮತ್ತು ಸತ್ತ ಕೂದಲ ಬುಡವನ್ನು ಪುನಶ್ಚೇತನಗೊಳಿಸುವುದು. ಎಳ್ಳೆಣ್ಣೆಯು ಕೂದಲಿನ ಆರೋಗ್ಯ ಸುಧಾರಣೆ ಮಾಡುವುದು ಮತ್ತು ಇದರಿಂದ ಕೂದಲು ಉದುರುವುದು ತಪ್ಪುವುದು.

ಕೂದಲು ಉದುರುವಿಕೆಗೆ ಹರಳೆಣ್ಣೆ ಮತ್ತು ಎಳ್ಳೆಣ್ಣೆ
ಎಳ್ಳೆಣ್ಣೆ ಮತ್ತು ಹರಳೆಣ್ಣೆಯಲ್ಲಿ ಉತ್ತಮ ಗುಣಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ಪ್ರೋಟೀನ್ ಇದೆ. ಒಣ ತಲೆಬುರುಡೆಗೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಇ ಮತ್ತು ಖನಿಜಾಂಶಗಳಾದ ಮೆಗ್ನಿಶಿಯಂ ಮತ್ತು ಪೋಸ್ಪರಸ್ ಇದೆ. ಇದು ಕೂದಲು ಉದುರುವಿಕೆಗೆ ಕಾರಣವಾಗುವಂತಹ ಖನಿಜಾಂಶದ ಕೊರತೆ ನೀಗಿಸುವುದು. ಎರಡು ಎಣ್ಣೆಗಳನ್ನು ತುಂಬಾ ಸರಳವಾಗಿ ಬಳಸಿಕೊಂಡು ನೈಸರ್ಗಿಕ ವಿಧಾನದಿಂದ ಕೂದಲು ಉದುರುವಿಕೆ ಹೇಗೆ ತಡೆಯಬಹುದು ಎಂದು ತಿಳಿದುಕೊಳ್ಳಿ.

*ಒಂದು ಸಣ್ಣ ಪಿಂಗಾಣಿ ತೆಗೆದುಕೊಂಡು ಅದಕ್ಕೆ ತಕಾ ಎರಡೆರಡು ಚಮಚ ಆಲಿವ್ ತೈಲ ಮತ್ತು ತೆಂಗಿನೆಣ್ಣೆ ಹಾಕಿ. ಇದನ್ನು ಕೆಲವು ನಿಮಿಷ ಕಾಲ ಮೈಕ್ರೋವೇವ್ ನಲ್ಲಿಡಿ.
*ಇದಕ್ಕೆ ತಲಾ ಒಂದೊಂದು ಚಮಚ ಎಳ್ಳೆಣ್ಣೆ ಮತ್ತು ಹರಳೆಣ್ಣೆ ಹಾಕಿ ಮಿಶ್ರಣ ಮಾಡಿ.
* ಕೂದಲು ಸ್ನಾನ ಮಾಡಿದ ಬಳಿಕ ಒದ್ದೆಯಾಗಿರುವ ಕೂದಲಿಗೆ ಇದನ್ನು ಹಚ್ಚಿಕೊಳ್ಳಿ.
*ಇದು ಸ್ವಲ್ಪ ಬಿಸಿಯಾಗಿರುವಾಗಲೇ ತಲೆಬುರುಡೆಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ.
*ಸುಮಾರು 5-10 ನಿಮಿಷ ಕಾಲ ಮಸಾಜ್ ಮಾಡಿದ ಬಳಿಕ ತಲೆಗೆ ಒಂದು ಟವೆಲ್ ಸುತ್ತಿಕೊಳ್ಳಿ.
*ಒಂದು ಅಥವಾ ಎರಡು ಗಂಟೆ ಕಾಲ ಹಾಗೆ ಬಿಡಿ. ರಾತ್ರಿ ಮಲಗುವ ಮೊದಲು ಇದನ್ನು ಹಚ್ಚಿಕೊಂಡರೆ ಒಳ್ಳೆಯದು.
*ಶಾಂಪೂವಿನಿಂದ ಕೂದಲು ತೊಳೆಯಿರಿ.
*ವಾರದಲ್ಲಿ ಎರಡು ಸಲ ಇದನ್ನು ಬಳಸಿ.
*ಕೆಲವು ಸಲ ಬಳಕೆ ಮಾಡಿದ ಬಳಿಕ ನಿಮ್ಮ ಕೂದಲು ದಪ್ಪಗೆ ಆಗಿರುವುದು ನಿಮಗೆ ಕಂಡುಬರುವುದು. ಕೂದಲು ನಿಧಾನವಾಗಿ ತನ್ನ ಆರೋಗ್ಯ ಸುಧಾರಿಸುವುದು ಮತ್ತು ಉದುರುವುದು ನಿಲ್ಲುವುದು. ಎಳ್ಳೆಣ್ಣೆ ಮತ್ತು ಹರಳೆಣ್ಣೆಯು ಕೂದಲಿಗೆ ಆರೋಗ್ಯ ನೀಡಿ ನಯವಾಗಿಸುವುದು.

ಕೂದಲು ಉದುರುವಿಕೆಗೆ ಎಳ್ಳೆಣ್ಣೆ ಮತ್ತು ಹರಳೆಣ್ಣೆ ಬಳಸಲು ಕೆಲವು ವಿಧಾನಗಳು
*ಹರಳೆಣ್ಣೆಯು ದೇಹದ ಹೊರಭಾಗಕ್ಕೆ ಹಚ್ಚಿಕೊಳ್ಳಲು ತುಂಬಾ ಸುರಕ್ಷಿತ. ಆದರೆ ಕೆಲವರಿಗೆ ಇದರ ವಾಸನೆಯಿಂದ ಅಲರ್ಜಿ ಉಂಟಾಗುವುದು, ಕಣ್ಣುಗಳು ಕೆಂಪಗಾಗುವುದು ಮತ್ತು ತಲೆತಿರುಗುವಿಕೆ ಇತ್ಯಾದಿ ಉಂಟಾಗುವುದು. ಇದರಿಂದ ಬಳಸುವ ಮೊದಲು ನಿಮ್ಮ ದೇಹಕ್ಕೆ ಇದು ಒಗ್ಗಿಕೊಳ್ಳುವುದೇ ಎಂದು ತಿಳಿಯಿರಿ.
*ಹರಳೆಣ್ಣೆ ಮತ್ತು ಎಳ್ಳೆಣ್ಣೆಯ ಮಿಶ್ರಣವು ನಿಸ್ತೇಜ ಕೂದಲಿಗೆ ಪರಿಣಾಮಕಾರಿಯಾಗಿರಲಿದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ಬಳಸಿಕೊಳ್ಳಲು ತಿಳಿಯಿರಿ.


*ದೈನಂದಿನ ಆಹಾರ ಕ್ರಮದಲ್ಲಿ ಹೆಚ್ಚಿನ ಪ್ರೋಟೀನ್, ನಾರಿನಾಂಶ, ಆರೋಗ್ಯಕಾರಿ ಕೊಬ್ಬುಗಳು ಮತ್ತು ವಿಟಮಿನ್ ಗಳನ್ನು ಸೇವಿಸಿ. ಪ್ರತಿನಿತ್ಯ ಯೋಗ ಮತ್ತು ಧ್ಯಾನ ಮಾಡಿ. ಇದರಿಂದ ಒತ್ತಡ ನಿವಾರಣೆಯಾಗಿ ನಿಮ್ಮ ತಲೆಯು ಯಾವಾಗಲೂ ತಂಪಾಗಿರುವುದು. ಹದಿಹರೆಯಲ್ಲಿ ಕೂದಲು ಉದುರುವಿಕೆಗೆ ಒತ್ತಡವು ಪ್ರಮುಖ ಕಾರಣವಾಗಿರುವ ಕಾರಣ ಯೋಗ ಮತ್ತು ಧ್ಯಾನ ನೆರವಾಗುವುದು.
*ನಿಮ್ಮ ಕೂದಲು ಯಾವ ರೀತಿಯದ್ದು ಎಂದು ತಿಳಿದು ಅದರಂತೆ ಶಾಂಪೂ ಬಳಸಿ. ನಿಮ್ಮ ಕೂದಲಿಗೆ ಕಠಿಣವಾಗಿರುವ ಶಾಂಪೂ ಅಥವಾ ಕಂಡೀಷನರ್ ಬಳಸಬೇಡಿ. ನೀವು ಕೂದಲಿನ ಮಾಹಿತಿ ಪಡೆದುಕೊಂಡು ಅದರಂತೆ ಆರೈಕೆ ಮಾಡಿ. ಅಮೋನಿಯಾ ಇರುವಂತಹ ಕೂದಲಿನ ಬಣ್ಣಗಳನ್ನು ಯಾವತ್ತೂ ಬಳಸಬೇಡಿ. ಇದರಿಂದ ಕೂದಲು ಒಣಗಬಹುದು.
*ಬಿಸಿಗೊಳಿಸುವಂತಹ ಸಾಧನಗಳ ಬಳಕೆ ಕಡೆಗಣಿಸಿ. ಇದು ಕೂದಲನ್ನು ಬೇಗನೆ ಒಣಗಿಸುವುದು. ತಿಂಗಳಲ್ಲಿ ಒಂದು ಸಲ ಮಾತ್ರ ಇದರ ಬಳಕೆ ಮಾಡಿ. ಕೂದಲಿಗೆ ಬಿಸಿಯಾಗಿರುವ ಸಾಧನಗಳನ್ನು ಇಡುವಾಗ ಅದಕ್ಕೆ ರಕ್ಷಣಾ ಕವಚ ಬಳಸಿ.
English summary

Advantages Of Using Castor Oil And Sesame Oil For Treating Hair Loss

While castor oil contains proteins that keep your hair healthy, sesame oil, on the other hand, improves the internal health of your hair follicles by improving the circulation of blood in your scalp. You can use these oils together for a natural remedy against hair fall. The amazing results will surprise you. So, want to know more on how to maximize their results and get the best out of these two oils? Read on to find out more.
X
Desktop Bottom Promotion