ಅಕ್ಕಿ ತೊಳೆದ ನೀರಿನಲ್ಲಿದೆ ಸೌಂದರ್ಯದ ಗುಟ್ಟು...

By: Jaya subramanya
Subscribe to Boldsky

ಇತ್ತೀಚಿನ ದಿನಗಳಲ್ಲಿ ಕೂದಲು ಮತ್ತು ತ್ವಚೆಯ ಕಾಳಜಿಗಾಗಿ ನಾವು ಹೆಚ್ಚು ಹಣವನ್ನು ವ್ಯಯಿಸುತ್ತೇವೆ. ಆಗಾಗ್ಗೆ ಶಾಂಪೂಗಳನ್ನು ಬದಲಾಯಿಸುವುದು, ಜಾಹೀರಾತುಗಳಲ್ಲಿ ಬರುವ ಕ್ರಮಗಳನ್ನು ಅನುಸರಿಸುವುದು ಮೊದಲಾದವುಗಳನ್ನು ತಪ್ಪದೇ ಅನ್ವಯಿಸುತ್ತೇವೆ. ಆದರೆ ನಿಸರ್ಗದಲ್ಲೇ ದೊರೆಯುವ ಅತ್ಯದ್ಭುತ ಕ್ರಮಗಳನ್ನು ನಾವು ಒಮ್ಮೆ ಕೂಡ ಪ್ರಯತ್ನಿಸಲು ಮುಂದಾಗುವುದೇ ಇಲ್ಲ. ತ್ವಚೆ ಮತ್ತು ಕೂದಲಿಗೆ ಅಕ್ಕಿ ನೀರಿನಿಂದಾಗುವ ಪ್ರಯೋಜನಗಳೇನು? 

ಹೌದು ನೈಸರ್ಗಿಕ ವಿಧಾನವೆಂದರೆ ಇದಕ್ಕೇನೂ ಹೆಚ್ಚು ಹಣ ವ್ಯಯವಾಗುವುದಿಲ್ಲ ಬದಲಿಗೆ ಸ್ವಲ್ಪ ಸಮಯವನ್ನು ನೀವು ಮೀಸಲಿರಿಸಬೇಕಾಗುತ್ತದೆ ಅಷ್ಟೇ. ಅಕ್ಕಿ ತೊಳೆದ ನೀರನ್ನು ನೀವು ಎಷ್ಟು ಜನ ಕೂದಲು ಇಲ್ಲವೇ ತ್ವಚೆಯ ಸಂರಕ್ಷಣೆಗಾಗಿ ಬಳಸುತ್ತೀರಾ? ಹೌದು ಒಮ್ಮೆ ನೀವಿದನ್ನು ಬಳಕೆ ಮಾಡಿ ನೋಡಿ ಈ ನೀರಿನಿಂದ ಉಂಟಾಗುವ ಅದ್ಭುತ ಪ್ರಯೋಜನಗಳನ್ನು ನೀವು ಸ್ವಯಂ ಬಳಸಿಯೇ ತಿಳಿದುಕೊಳ್ಳಬೇಕು.   ಆರೋಗ್ಯಕಾರಿ ಟಿಪ್ಸ್: ಕಾಡುವ ಮೈ ಕೈ ನೋವಿಗೆ ಅಕ್ಕಿ ರೆಸಿಪಿ!

ಚೀನಾದಲ್ಲಿ ಒಂದು ಹಳ್ಳಿಯಿದೆ. ಹೆಸರು ಹಾಂಗ್ ಗ್ಲೂ (Huang luo) ಅಂತ. ಈ ಹಳ್ಳಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದೆ. ಯಾಕೆ ಅಂತ ಕೇಳ್ತಾ ಇದ್ದೀರಾ? ಹೇಳ್ತೀವಿ ಕೇಳಿ. ಈ ಹಳ್ಳಿಯಲ್ಲಿರುವ ಎಲ್ಲಾ ಮಹಿಳೆಯರ ಕೂದಲು 6 ಫೀಟ್ ನಷ್ಟು ಉದ್ದವಿದ್ಯಂತೆ. ಅಷ್ಟೇ ಅಲ್ಲ ಇದಕ್ಕಿಂತ ಆಶ್ಚರ್ಯ ಅನ್ನಿಸುವ ವಿಚಾರ ಏನು ಅಂದ್ರೆ ಅವ್ರಿಗೆ 80 ವರ್ಷ ವಯಸ್ಸಾಗುವವರೆಗೂ ಅವ್ರ ಕೂದಲು ಬಿಳಿಯಾಗುವುದೇ ಇಲ್ಲವಂತೆ. ನಂತ್ರ ಅಲ್ಲಿ ಇಲ್ಲಿ ಸ್ವಲ್ಪ ಹಣ್ಣು ಕೂದಲು ಕಾಣಿಸುವುದಿದ್ಯಂತೆ. ಅಷ್ಟಕ್ಕೂ ಅವರ ಕೂದಲು ಇಷ್ಟು ಆರೋಗ್ಯಪೂರ್ಣವಾಗಿ ಇರಲು ಕಾರಣ ಏನು ಅನ್ನೋದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ಉತ್ತರ ಅಕ್ಕಿ ತೊಳೆದ ನೀರು..!

ಮುಖದ ಸ್ವಚ್ಛಕ

ಮುಖದ ಸ್ವಚ್ಛಕ

ಅಕ್ಕಿ ತೊಳೆದ ನೀರನ್ನು ಮುಖವನ್ನು ತೊಳೆಯುವ ಕ್ಲೆನ್ಸರ್‌ನಂತೆ ಕೂಡ ಬಳಸಬಹುದಾಗಿದೆ. ತ್ವಚೆಯಲ್ಲಿರುವ ಕೊಳಕನ್ನು ಹೊರತೆಗೆಯಲು ಇದು ಸಹಾಯಕ. ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅಕ್ಕಿ ತೊಳೆದ ನೀರಿನಲ್ಲಿ ಅದ್ದಿರಿ ಮತ್ತು ವೃತ್ತಾಕಾರವಾಗಿ ಇದರಿಂದ ಮಸಾಜ್ ಮಾಡಿಕೊಳ್ಳಿ. ಈ ನೀರು ಮುಖದಲ್ಲಿ ಹಾಗೆಯೇ ಒಣಗಲು ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ತ್ವಚೆಯನ್ನು ಇನ್ನಷ್ಟು ಮೃದುವಾಗಿಸಲು ಇದು ನೆರವನ್ನು ನೀಡಲಿದ್ದು ಹೊಳೆಯುವ ಕಾಂತಿಯನ್ನು ಒದಗಿಸಲಿದೆ. ನಿತ್ಯವೂ ಈ ನೀರಿನಲ್ಲಿ ಮುಖವನ್ನು ತೊಳೆದುಕೊಂಡು ಪ್ರಯೋಜನವನ್ನು ಪಡೆದುಕೊಳ್ಳಿ.

ಮೊಡವೆಯ ಉಪಚಾರಕ್ಕಾಗಿ

ಮೊಡವೆಯ ಉಪಚಾರಕ್ಕಾಗಿ

ಮುಖದಲ್ಲಿನ ಮೊಡವೆಗಳ ನಿವಾರಣೆಗಾಗಿ ಕೂಡ ಅಕ್ಕಿ ತೊಳೆದ ನೀರನ್ನು ಬಳಸಬಹುದಾಗಿದೆ. ಮೊಡವೆಯನ್ನು ನಿವಾರಿಸುವುದು ಮಾತ್ರವಲ್ಲದೆ ಕಪ್ಪು ಕಲೆಗಳನ್ನು ಹೋಗಲಾಡಿಸಲಿದೆ. ರಂಧ್ರಗಳನ್ನು ಬಿಗಿಗೊಳಿಸಿ ಮೊಡವೆಗಳು ಮುಖದಲ್ಲಿ ಉಂಟಾಗದಂತೆ ಇದು ತಡೆಯುತ್ತದೆ.

ತುರಿಕೆ ನಿವಾರಣೆ

ತುರಿಕೆ ನಿವಾರಣೆ

ತ್ವಚೆಯಲ್ಲಿ ಕೆರೆತದಂತ ಸಮಸ್ಯೆಗಳಿದ್ದಲ್ಲಿ ಕೂಡ ಅಕ್ಕಿ ತೊಳೆದ ನೀರು ಉತ್ತಮ ಪರಿಹಾರವನ್ನು ನೀಡುತ್ತದೆ. ಮುಖದಲ್ಲಿ ಕೆಂಪು ಗುಳ್ಳೆಗಳಾಗುವುದು ಮತ್ತು ಉರಿತ, ತುರಿಕೆಯನ್ನು ಈ ನೀರು ಶಮನಗೊಳಿಸುತ್ತದೆ. ತ್ವಚೆಯ ರೋಗಗಳಿಂದ ಬಳಲುತ್ತಿರುವವರು 15 ನಿಮಿಷಗಳ ಕಾಲ ಎರಡು ದಿನಕ್ಕೊಮ್ಮೆ ಅಕ್ಕಿ ತೊಳೆದ ನೀರಿನಲ್ಲಿ ಸ್ನಾನ ಮಾಡುವುದರಿಂದ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಬಹುದಾಗಿದೆ.

ಹೊಳೆಯುವ ತ್ವಚೆಯ ಕಾಂತಿಗೆ

ಹೊಳೆಯುವ ತ್ವಚೆಯ ಕಾಂತಿಗೆ

ಹೊಳೆಯುವ ಶುಭ್ರ ತ್ವಚೆಯನ್ನು ನೀಡುವಲ್ಲಿ ಅಕ್ಕಿ ತೊಳೆದ ನೀರು ಕಮಾಲಿನದ್ದಾಗಿದೆ. ಇದರಲ್ಲಿ ಸಾಕಷ್ಟು ಉತ್ತಮ ಪ್ರೊಟೀನ್ ಮತ್ತು ವಿಟಮಿನ್‌ಗಳಿದ್ದು ದೇಹದಲ್ಲಿರುವ ಕಲ್ಮಶವನ್ನು ನಿವಾರಿಸುವಲ್ಲಿ ಅಕ್ಕಿ ತೊಳೆದ ನೀರು ಸಹಾಯಕ ಎಂದೆನಿಸಲಿದೆ.

ಸನ್ ಬರ್ನ್‌ಗೆ ಉತ್ತಮ ಮದ್ದು

ಸನ್ ಬರ್ನ್‌ಗೆ ಉತ್ತಮ ಮದ್ದು

ಬೇಸಿಗೆ ದಿನಗಳಲ್ಲಿ ಸೂರ್ಯನ ಸುಡುವ ತಾಪ ತ್ವಚೆಯನ್ನು ಸುಟ್ಟುಬಿಡುತ್ತದೆ. ಸನ್ ಸ್ಕ್ರೀನ್ ಅನ್ನು ನೀವು ಬಳಸಿದ ಮೇಲೂ ಕೂಡ ಸೂರ್ಯನ ಶಾಖ ನಿಮ್ಮನ್ನು ಸುಡುತ್ತದೆ. ನಿಮ್ಮ ತ್ವಚೆತಯ ಸನ್‌ ಬರ್ನ್‌ನಿಂದ ಹಾನಿಗೊಳಗಾದಲ್ಲಿ ಅಕ್ಕಿ ತೊಳೆದ ನೀರಿನಿಂದ ಉಪಚಾರವನ್ನು ಪಡೆದುಕೊಳ್ಳಬಹುದಾಗಿದೆ. ತಾಪಮಾನಕ್ಕೆ ಒಳಗಾದ ಭಾಗಕ್ಕೆ ಅಕ್ಕಿ ತೊಳೆದ ನೀರಿನಿಂದ ಉಪಚಾರವನ್ನು ಪಡೆದುಕೊಳ್ಳಿ ನಂತರ ತಣ್ಣೀರಿನಿಂದ ಸ್ನಾನ ಮಾಡಿ.

ಉತ್ತಮ ಹೇರ್ ಕಂಡೀಷನರ್

ಉತ್ತಮ ಹೇರ್ ಕಂಡೀಷನರ್

ಅಕ್ಕಿ ತೊಳೆದ ನೀರು ಕೂದಲಿಗೆ ಉತ್ತಮ ಕಂಡೀಷನರ್‌ ಕೂಡ ಆಗಿದೆ. ನಿಮ್ಮ ಕೂದಲಿಗೆ ಮೃದುವಾದ ಪೋಷಣೆಯನ್ನು ಇದು ಮಾಡುತ್ತದೆ ಅಂತೆಯೇ ಸುಂದರವಾದ ಕೇಶರಾಶಿಯನ್ನು ನೀವು ಪಡೆದುಕೊಳ್ಳುತ್ತೀರಿ. ಅಕ್ಕಿ ತೊಳೆದ ನೀರಿಗೆ ಕೆಲವು ಹನಿಗಳಷ್ಟು ಎಣ್ಣೆಯನ್ನು ಸೇರಿಸಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ ನಂತರ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.

ಕೂದಲನ್ನು ಶುಭ್ರಗೊಳಿಸುತ್ತದೆ

ಕೂದಲನ್ನು ಶುಭ್ರಗೊಳಿಸುತ್ತದೆ

ನಿಮ್ಮ ಕೂದಲಿಗೆ ಉತ್ತಮ ಕಾಂತಿ ಮತ್ತು ಮೃದುತ್ವವವನ್ನು ನೀಡುವುದರ ಮೂಲಕ ಅಕ್ಕಿ ತೊಳೆದ ನೀರು ಕೂದಲನ್ನು ಶುಭ್ರಗೊಳಿಸುತ್ತದೆ. ಕೂದಲನ್ನು ದೃಢಗೊಳಿಸುವಲ್ಲಿ ಕೂಡ ಇದು ಸಹಾಯಕ ಎಂದೆನಿಸಿದೆ. ಶಾಂಪೂನಿಂದ ಕೂದಲನ್ನು ತೊಳೆದ ನಂತರ ಅಕ್ಕಿ ತೊಳೆದ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ ಸ್ವಲ್ಪ ಸಮಯ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.

 
English summary

ways-you-did-not-know-rice-water-can-change-your-skin-hair

Rice water contains a high amount of vitamins and antioxidants that prove to be extremely beneficial for the skin and hair. Due to ferulic acid and allantoin, rice water is known for its anti-inflammatory properties. Here are some of the beauty benefits of rice water.
Subscribe Newsletter