ರಾತ್ರಿ ಬೆಳಗಾಗುವುದರೊಳಗೆ ರೇಷ್ಮೆಯಂತಹ ಮೃದು ಕೂದಲು!

By: Jayasubramanya
Subscribe to Boldsky

ಸುಂದರವಾದ ಕೂದಲು ಪ್ರತಿಯೊಬ್ಬ ಹೆಣ್ಣಿನ ಮನದಾಸೆಯಾಗಿರುತ್ತದೆ. ದಪ್ಪನೆಯ ಕಾಂತಿಯುಕ್ತ ಕೂದಲು ಪಡೆದುಕೊಳ್ಳುವುದಕ್ಕಾಗಿಯೇ ಪ್ರತಿಯೊಬ್ಬ ಹುಡುಗಿಯೂ ನಾನಾ ಬಗೆಯ ಕೂದಲಿನ ಆರೈಕೆಗಳನ್ನು ಮಾಡುತ್ತಿರುತ್ತಾಳೆ. ಜಾಹೀರಾತಿನಲ್ಲಿ ಬರುವ ಪ್ರತಿ ಶಾಂಪೂ ಜಾಹೀರಾತನ್ನು ಹಾಗೆಯೇ ಅನುಸರಿಸುತ್ತಾ ಅವರಂತೆಯೇ ತನ್ನ ಕೂದಲನ್ನು ಪಡೆದುಕೊಳ್ಳುವ ಆಸೆಯಲ್ಲಿರುತ್ತಾಳೆ. ಕೂದಲಿಗೆ ಶಾಂಪೂ ಹಾಗೂ ಕಂಡೀಷನರ್ ಹೇಗೆ ಹಾಕಬೇಕು?

ಆದರೆ ಇದೇ ತಪ್ಪನ್ನೇ ಹೆಚ್ಚಿನ ಮಹಿಳೆಯರು ಮಾಡಿ ತಮ್ಮ ಅಂದವಾದ ಕೂದಲನ್ನು ಇನ್ನಷ್ಟು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬುದಂತೂ ಸತ್ಯ.ನೀವು ಕೂದಲನ್ನು ಸೊಗಸಾಗಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ರಾಸಾಯನಿಕಗಳನ್ನೇ ದೇಹಕ್ಕೆ ಉಣಬಡಿಸುತ್ತಿದ್ದೀರಿ ಎಂಬುದು ನಿಮಗೆ ಗೊತ್ತೇ?

ಹಿಂದಿನ ಕಾಲದಲ್ಲಿ ನಮ್ಮ ತಾಯಿ ಅಜ್ಜಿ ಮುತ್ತಜ್ಜಿಯರು ಈ ಬಗೆಯ ಶಾಂಪೂಗಳು ಮತ್ತು ಕಂಡೀಷನರ್‌ಗಳನ್ನು ಬಳಸುತ್ತಲೇ ಇರಲಿಲ್ಲ, ಅಂತೆಯೇ ಆ ಕಾಲದಲ್ಲಿ ಇದೆಲ್ಲಾ ದೊರಕುವುದು ದುಸ್ಸಾಧ್ಯವಾಗಿತ್ತು. ದಿನನಿತ್ಯ ಶಾಂಪೂ ಬಳಕೆಯ ಹಿಂದಿರುವ ಕರಾಳ ಸತ್ಯ!

ಆದರೂ ಅವರ ಕೂದಲು ಇಂದಿಗೂ ಕೋಮಲ ಮತ್ತು ದಷ್ಟಪುಷ್ಟವಾಗಿದೆ. ಏಕೆಂದರೆ ಅವರು ನೈಸರ್ಗಿಕ ಕೊಡುಗೆಗಳನ್ನು ತಮ್ಮ ಕೂದಲಿನ ಸಂರಕ್ಷಣೆಯಲ್ಲಿ ಬಳಸುತ್ತಿದ್ದಾರೆ ಅದಕ್ಕಾಗಿ ಅವರ ಕೂದಲು ಕೂಡ ಸುಂದರವಾಗಿದೆ.

ಹಾಗಿದ್ದರೆ ನಾವು ನಿಮಗೂ ನೈಸರ್ಗಿಕ ವಿಧಾನಗಳನ್ನೇ ಕೂದಲಿನ ಆರೈಕೆಯಲ್ಲಿ ಬಳಸಿ ಎಂಬುದಾಗಿ ಕಿವಿಮಾತುಗಳನ್ನು ಹೇಳುತ್ತಿದ್ದು, ಮನೆಯಲ್ಲೇ ಕೂದಲಿನ ಆರೈಕೆಗಾಗಿ ಇಲ್ಲೊಂದು ಅದ್ಭುತ ಕೂದಲಿನ ರೆಸಿಪಿಯನ್ನು ತಿಳಿಸುತ್ತಿದ್ದೇವೆ. ಹಂತ ಹಂತವಾಗಿ ಈ ವಿಧಾನವನ್ನು ತಿಳಿಸುತ್ತಿದ್ದು ಇದರಿಂದ ಉತ್ತಮ ಪ್ರಯೋಜನ ದೊರೆಯುವುದಂತೂ ಖಂಡಿತ.

ಹಂತ 1

ಹಂತ 1

ಒಂದು ಕಪ್‌ನಷ್ಟು ತೆಂಗಿನ ಹಾಲು, ಕೆಲವು ಚಮಚಗಳಷ್ಟು ಆರ್ಗನ್ ಎಣ್ಣೆಯನ್ನು ನಿಮ್ಮ ಕೂದಲಿನ ಉದ್ದಕ್ಕೆ ತಕ್ಕಂತೆ ತೆಗೆದುಕೊಳ್ಳಿ. ಮಿಕ್ಸಿಂಗ್ ಬೌಲ್‌ನಲ್ಲಿ ಇದೆಲ್ಲವನ್ನೂ ಹಾಕಿ ಮಿಶ್ರ ಮಾಡಿಕೊಳ್ಳಿ.

ಹಂತ 2

ಹಂತ 2

ಮಿಶ್ರ ಮಾಡುವ ಬೌಲ್‌ನಲ್ಲಿ ತೆಂಗಿನ ಹಾಲು ಮತ್ತು ಆರ್ಗನ್ ಎಣ್ಣೆಯನ್ನು ಜೊತೆಯಾಗಿ ಸೇರಿಸಿ ಮಿಶ್ರ ಮಾಡಿಕೊಳ್ಳಿ. ಹಾಲು ಒಡೆದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ಇಲ್ಲದಿದ್ದರೆ ಕೂದಲಿನಿಂದ ಕೆಟ್ಟ ವಾಸನೆ ಹೊಮ್ಮಬಹುದು.

ಹಂತ 3

ಹಂತ 3

ಮಾಸ್ಕ್ ಅನ್ನು ಸಂಪೂರ್ಣವಾಗಿ ಕೂದಲಿಗೆ ಹಚ್ಚಿಕೊಳ್ಳಿ. ಕೂದಲಿನಿಂದ ಹಾಲಿನ ಹನಿ ಬೀಳುವುದನ್ನು ತಪ್ಪಿಸಲು ಶವರ್ ಕ್ಯಾಪ್ ಅನ್ನು ಧರಿಸಿ.

ಹಂತ 4

ಹಂತ 4

ಒಂದು ಗಂಟೆಯಷ್ಟು ಕಾಲ ಬೇಕಾದರೂ ಮಾಸ್ಕ್ ಅನ್ನು ಕೂದಲಿನಲ್ಲಿ ಹಾಗೆಯೇ ಇರಿಸಿ. ನಿಮಗೆ ಉತ್ತಮ ಫಲಿತಾಂಶ ಬೇಕು ಎಂದಾದಲ್ಲಿ ರಾತ್ರಿ ಪೂರ್ತಿ ಮಾಸ್ಕ್ ಅನ್ನು ಕೂದಲಿನಲ್ಲಿ ಹಾಗೆಯೇ ಬಿಡಿ. ಇದರಿಂದ ಮೃದುವಾದ ಹೊಳೆಯುವ ಕೂದಲನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಹಂತ 5

ಹಂತ 5

ನಿಮ್ಮ ಕೂದಲನ್ನು ಎಂದಿನ ಶಾಂಪೂ ಬಳಸಿ ತೊಳೆದುಕೊಳ್ಳಿ. ಕಂಡೀಷನರ್ ಬೇಕಾದರೂ ನಿಮಗೆ ಬಳಸಿಕೊಳ್ಳಬಹುದಾಗಿದೆ. ಕೂದಲು ಒಣಗಿದ ನಂತರ ಮೃದುತ್ವ ಮತ್ತು ಹೊಳಪನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ

English summary

Homemade Overnight Treatment For Soft Hair

This homemade overnight hair treatment aims at making your hair soft and shiny like never before.These treatments are really good for the hair, as the hair needs a bit of pampering every now and then, but not everyone has the funds or the time to go sit in a salon for hours. But does it mean that you don't get to pamper your hair?
Story first published: Thursday, January 5, 2017, 13:00 [IST]
Subscribe Newsletter