For Quick Alerts
ALLOW NOTIFICATIONS  
For Daily Alerts

ಉದ್ದನೆಯ ಕೂದಲಿಗೆ ಕರಿಬೇವಿನ ಹೇರ್ ಪ್ಯಾಕ್

ನಮ್ಮ ಪರಿಸರದಲ್ಲೇ ಸಿಗುವಂತಹ ಕೆಲವೊಂದು ಗಿಡಮೂಲಿಕೆಗಳು ಬಳಸಿಕೊಂಡು ಕೂದಲಿನ ಆರೈಕೆಯನ್ನು ಮಾಡಿದರೆ ಹೊಳೆಯುವ ಕೂದಲು ಪಡೆಯಬಹುದು. ಅದರಲ್ಲೂ ಒಗ್ಗರಣೆಗೆ ಬಳಸುವಂತಹ ಕರಿಬೇವಿನಿಂದ ಕೂದಲಿನ ಆರೈಕೆ ಮಾಡಬಹುದು.....

By Manu
|

ಉದ್ದಗಿನ ರೇಷ್ಮೆಯಂತಹ ಕೂದಲನ್ನು ಪಡೆಯುವುದು ಪ್ರತಿಯೊಬ್ಬರಿಗೂ ಅಷ್ಟೊಂದು ಸುಲಭದ ಕೆಲಸವಲ್ಲ. ಕೆಲವರಿಗೆ ನೈಸರ್ಗಿಕವಾಗಿ ಉದ್ದಗಿನ ಹಾಗೂ ರೇಷ್ಮೆಯಂತೆ ಹೊಳೆಯುವ ಕೂದಲು ಬರುತ್ತದೆ. ಆದರೆ ಇನ್ನು ಕೆಲವರು ಕೂದಲಿನ ಆರೈಕೆಗೆ ಹಲವಾರು ಕ್ರಮಗಳನ್ನು ಅಳವಡಿಸಿಕೊಂಡರೂ ಅವರಿಗೆ ಇಂತಹ ಕೂದಲು ಲಭ್ಯವಾಗುವುದಿಲ್ಲ. ಕರಿಬೇವಿನಿಂದ ದೇಹದ ತೂಕ ಕಡಿಮೆಯಾಗುವುದೆ?

ಉದ್ದಗಿನ ಹಾಗೂ ಕಾಂತಿಯುತ ಕೂದಲು ಬೇಕೆಂದು ಮಾರುಕಟ್ಟೆಗೆ ಬರುವ ಹೊಸ ಹೊಸ ಉತ್ಪನ್ನಗಳೆಲ್ಲವನ್ನೂ ನಾವು ಪ್ರಯೋಗಿಸಿರುತ್ತೇವೆ. ಆದರೆ ಇದರಿಂದ ಯಾವುದೇ ಲಾಭವಾಗುವುದಿಲ್ಲ. ಯಾಕೆಂದರೆ ಕೆಲವು ದಿನಗಳ ಕಾಲ ಈ ಉತ್ಪನ್ನಗಳು ಕೂದಲಿಗೆ ಕಾಂತಿಯನ್ನು ನೀಡಿದರೂ ಮತ್ತೆ ಅದೇ ಸ್ಥಿತಿಗೆ ಬರುತ್ತದೆ. ಹಾಲು, ಕರಿಬೇವು, ತುಳಸಿ ಎಲೆಗಳ ನೈಸರ್ಗಿಕ ಫೇಸ್ ಪ್ಯಾಕ್

ಇದಕ್ಕಾಗಿ ನಮ್ಮ ಪರಿಸರದಲ್ಲೇ ಸಿಗುವಂತಹ ಕೆಲವೊಂದು ಗಿಡಮೂಲಿಕೆಗಳು ಅಥವಾ ಸಾಮಗ್ರಿಗಳನ್ನು ಬಳಸಿಕೊಂಡು ಕೂದಲಿನ ಆರೈಕೆಯನ್ನು ಮಾಡಿದರೆ ಹೊಳೆಯುವ ಕೂದಲು ಪಡೆಯಬಹುದು. ಅದರಲ್ಲೂ ಒಗ್ಗರಣೆಗೆ ಬಳಸುವಂತಹ ಕರಿಬೇವಿನಿಂದ ಕೂದಲಿನ ಆರೈಕೆ ಮಾಡುವುದು ಹೇಗೆ ಮತ್ತು ಅದರಿಂದ ಯಾವೆಲ್ಲಾ ಲಾಭಗಳು ಇವೆ ಎಂದು ತಿಳಿಯಿರಿ....


ಕೂದಲು ಬೆಳೆಯಲು ಸಹಕಾರಿ

ಕೂದಲು ಬೆಳೆಯಲು ಸಹಕಾರಿ

ಕರಿಬೇವನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಉದ್ದಗೆ ಬೆಳೆಯುವುದು. ಸ್ವಲ್ಪ ಕರಿಬೇವನ್ನು ತೆಗೆದುಕೊಂಡು ಅದನ್ನು ಬಿಸಿಲಿನಲ್ಲಿ ಒಣಗಿಸಿ, ಚೆನ್ನಾಗಿ ಹುಡಿ ಮಾಡಿಟ್ಟುಕೊಳ್ಳಿ. ತದನಂತರ ಒಂದು ಚಮಚ ಮೊಸರಿಗೆ ಬೆರೆಸಿಕೊಂಡು ಈ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ.

ಕೂದಲು ಉದುರುವುದನ್ನು ಕಡಿಮೆ ಮಾಡುವುದು

ಕೂದಲು ಉದುರುವುದನ್ನು ಕಡಿಮೆ ಮಾಡುವುದು

ಕೂದಲು ಉದುರುವ ಸಮಸ್ಯೆಯನ್ನು ಪ್ರತಿಯೊಬ್ಬರು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಯ ನಿವಾರಣೆಗೆ ಕರಿಬೇವು ಒಳ್ಳೆಯ ಮದ್ದು. 2-3 ಕರಿಬೇವನ್ನು ಹಾಲಿಗೆ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೆ ಬಿಟ್ಟುಬಿಡಿ. ಅಗತ್ಯಬಿದ್ದರೆ ತಲೆಗೆ ಶವರ್ ಕ್ಯಾಪ್ ಧರಿಸಿ.

ಕೂದಲು ಉದುರುವ ಸಮಸ್ಯೆಗೆ

ಕೂದಲು ಉದುರುವ ಸಮಸ್ಯೆಗೆ

ಕರಿಬೇವು ತಲೆಬುರುಡೆಗೆ ತೇವಾಂಶ ನೀಡುವುದು ಮತ್ತು ತಲೆಬುರುಡೆಗೆ ಮಾಯಿಶ್ಚರೈಸ್ ನೀಡುವ ಕಾರಣದಿಂದ ಇದು ಕೂದಲಿಗೆ ಶಕ್ತಿಯನ್ನು ನೀಡುವುದು. ಒಂದು ಹಿಡಿ ಕರಿಬೇವನ್ನು ತೆಗೆದುಕೊಂಡು 2-3 ಚಮಚ ತೆಂಗಿನಎಣ್ಣೆಯೊಂದಿಗೆ ಅದನ್ನು ಬೇಯಿಸಿ. ಇದು ಕೆಲವು ನಿಮಿಷ ಬೇಯಲು ಬಿಡಿ ಮತ್ತು ತಂಪಾದ ಬಳಿಕ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಕರಿಬೇವಿನಲ್ಲಿರುವಂತಹ ವಿಟಮಿನ್ ಬಿ6 ಕೂದಲಿನ ಬುಡಕ್ಕೆ ಶಕ್ತಿಯನ್ನು ನೀಡಿ ಕೂದಲು ಉದುರುವ ಸಮಸ್ಯೆಯನ್ನು ನಿವಾರಣೆ ಮಾಡುವುದು.

ನೈಸರ್ಗಿಕವಾದ ಕೂದಲ ಟಾನಿಕ್

ನೈಸರ್ಗಿಕವಾದ ಕೂದಲ ಟಾನಿಕ್

ನೈಸರ್ಗಿಕವಾದ ಕೂದಲ ಟಾನಿಕ್ ಅನ್ನು ತಯಾರಿಸಿಕೊಳ್ಳುವುದಕ್ಕಾಗಿ, ಯಾವುದೇ ಕೇಶರಾಶಿಯ ತೈಲದಲ್ಲಿ (ಕೂದಲಿಗೆ ಹಚ್ಚಿಕೊಳ್ಳಲು ಬಳಸುವ) ಕರಿಬೇವಿನ ಎಲೆಗಳನ್ನು ಕುದಿಸಿರಿ ಹಾಗೂ ತದನ೦ತರ ಅದನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿರಿ. ರಕ್ತಪರಿಚಲನೆಯನ್ನು ಉತ್ತಮಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನೆತ್ತಿಯನ್ನು ಚೆನ್ನಾಗಿ ಮಾಲೀಸು ಮಾಡಿಕೊಳ್ಳಿರಿ.ಕೇಶರಾಶಿಯ ಸಮೃದ್ಧ ಬೆಳವಣಿಗೆಗಾಗಿ ಈ ಕ್ರಮವನ್ನು ವಾರಕ್ಕೆರಡು ಬಾರಿ ಕೈಗೊಳ್ಳಿರಿ.

English summary

Benefits Of Curry Leaves For Hair Care

We all know curry leaves are great ingredients to use for hair care, this article speaks about the benefits curry leaves have for hair and why we should use them often.
X
Desktop Bottom Promotion