ಅಯ್ಯೋ! ಈ ತಲೆ ತುರಿಕೆಯಿಂದ ತಪ್ಪಿಸಿಕೊಳ್ಳೋದು ಹೇಗೆ?

By: Arshad
Subscribe to Boldsky

ತಲೆತುರಿಕೆ ಇದ್ದಾಗ ನಾಲ್ಕು ಜನರ ನಡುವೆ ತುರಿಸಿಕೊಳ್ಳಲು ಅತೀವ ಮುಜುಗರವನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಕೆಲವೊಮ್ಮೆ ಇದರಿಂದ ಹೊಮ್ಮುವ ದುರ್ವಾಸನೆ ಇನ್ನಷ್ಟು ಮುಜುಗರಕ್ಕೆ ಕಾರಣವಾಗುತ್ತದೆ. ತಲೆಯಲ್ಲಿ ತುರಿಕೆಯೇ? ಕರಿಬೇವಿನ ಹೇರ್ ಪ್ಯಾಕ್ ಪ್ರಯತ್ನಿಸಿ

ತಲೆತುರಿಕೆಗೆ ಹೇನು, ಸೀರು, ತಲೆಹೊಟ್ಟು, ತಲೆಯನ್ನು ಸರಿಯಾಗಿ ತೊಳೆದುಕೊಳ್ಳದಿರುವುದು, ಶಿಲೀಂಧ್ರದ ಸೋಂಕು ಅಥವಾ ಬೇರಾವುದೋ ಕಾರಣದಿಂದ ತಲೆಯ ಚರ್ಮದಲ್ಲಿ ಉಂಟಾಗುವ ಸೋಂಕು ಮೊದಲಾದ ಕಾರಣಗಳಿವೆ. ತಲೆ ತುರಿಕೆಗೆ ದಾಸವಾಳ ಸಮರ್ಪಕ ಉತ್ತರವಾಗಬಲ್ಲುದೇ?

ಈ ತೊಂದರೆಗೆ ಕೆಲವಾರು ಮನೆಮದ್ದುಗಳಿದ್ದು ಇದುವರೆಗೂ ತಲೆತುರಿಕೆಯನ್ನು ನಿವಾರಿಸಲು ಎತ್ತಿದ ಕೈ ಎನ್ನಿಸಿಕೊಂಡಿವೆ. ತಲೆತುರಿಕೆಗೆ ಕಾರಣವೇನೇ ಇರಲಿ, ಸುಲಭವಾಗಿ ಅನುಸರಿಸಲು ಸಾಧ್ಯವಾದ ಈ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಇದಕ್ಕೆ ಶಮನ ಪಡೆಯಬಹುದು....  

ಅಡುಗೆ ಸೋಡಾ

ಅಡುಗೆ ಸೋಡಾ

ಸುಮಾರು ನಾಲ್ಕೈದು ಚಿಕ್ಕಚಮಚ ಅಡುಗೆ ಸೋಡಾವನ್ನು ಒಂದು ಬಟ್ಟಲಿನಲ್ಲಿ ಹಾಕಿ ಇದಕ್ಕೆ ಕೊಂಚ ನೀರು ಸೇರಿಸಿ ಮಿಶ್ರಣ ಮಾಡಿ. ಇದು ತೀರಾ ತೆಳುವಾಗಿಯೂ ಇರಬಾರದು, ತೀರಾ ದಪ್ಪನಾಗಿಯೂ ಇರಬಾರದು ಆ ಹದಕ್ಕೆ ಬೆರೆಸಿಕೊಳ್ಳಿ. ಈ ಲೇಪನವನ್ನು ತಲೆಯ ಚರ್ಮಕ್ಕೆ ನೇರವಾಗಿ ಹಚ್ಚಿ ಕೊಂಚ ಕಾಲ ಒಣಗಲು ಬಿಡಿ.

ಅಡುಗೆ ಸೋಡಾ

ಅಡುಗೆ ಸೋಡಾ

ಸುಮಾರು ಇಪ್ಪತ್ತು ಇಪ್ಪತ್ತೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ದಿನ ಬಿಟ್ಟು ದಿನದಂತೆ ಈ ಕ್ರಮವನ್ನು ಅನುಸರಿಸಿದರೆ ಕೆಲವೇ ದಿನಗಳಲ್ಲಿ ತಲೆತುರಿಕೆ ಸಂಪೂರ್ಣವಾಗಿ ಗುಣವಾಗುತ್ತದೆ.ಅಡುಗೆ ಸೋಡಾ ನೀಡುತ್ತೆ ಅಂದದ ತ್ವಚೆ

ಲಿಂಬೆ ರಸ

ಲಿಂಬೆ ರಸ

ಸುಮಾರು ಎರಡರಿಂದ ಮೂರು ಲಿಂಬೆಹಣ್ಣುಗಳ ಅಡ್ಡಲಾಗಿ ಕತ್ತರಿಸಿ ರಸ ಹಿಂಡಿ ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ. ಬಳಿಕ ಈ ರಸವರನ್ನು ನೇರವಾಗಿ ತಲೆಯ ಚರ್ಮಕ್ಕೆ ಹತ್ತಿಯುಂಡೆಯೊಂದರ ನೆರವಿನಿಂದ ಹಚ್ಚಿಕೊಳ್ಳಿ.

ಲಿಂಬೆ ರಸ

ಲಿಂಬೆ ರಸ

ವಿಶೇಶವಾಗಿ ಕೂದಲ ಬುಡಕ್ಕೆ ಕೊಂಚವೇ ಒತ್ತಡದಿಂದ ಹೆಚ್ಚಿ. ಹತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ತಲೆಹೊಟ್ಟು ನಿವಾರಣೆಯಾಗಿ ತುರಿಕೆಯೂ ಇಲ್ಲವಾಗುತ್ತದೆ. ಅಲ್ಲದೇ ಲಿಂಬೆರಸ ಉತ್ತಮ ಕಂಡೀಶನರ್ ನಂತೆಯೂ ಕೆಲಸ ಮಾಡುತ್ತದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ ಕೂದಲಿಗೆ ಎಷ್ಟು ಉತ್ತಮವೋ, ತಲೆಯ ಚರ್ಮಕ್ಕೂ ಅಷ್ಟೇ ಉತ್ತಮವಾಗಿದೆ. ವಿಶೇಷವಾಗಿ ತಲೆಯ ತುರಿಕೆಗೆ ಕೊಬ್ಬರಿ ಎಣ್ಣೆ ಅತ್ಯುತ್ತಮವಾಗಿದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಪ್ರತಿ ಬಾರಿ ಶಾಂಪೂವಿನಿಂದ ತಲೆ ತೊಳೆದುಕೊಳ್ಳುವ ಮುನ್ನ ಎರಡು ಮೂರು ಹನಿ ಕೊಬ್ಬರಿ ಎಣ್ಣೆ ಬೆರೆಸಿ ಸ್ನಾನ ಮಾಡಿಕೊಳ್ಳಿ. ಇದಕ್ಕೂ ಉತ್ತಮ ವಿಧಾನವೆಂದರೆ ದಿನ ಬಿಟ್ಟು ದಿನ ಕೊಬ್ಬರಿ ಎಣ್ಣೆಯನ್ನು ಹಚ್ಚಿ ನಯವಾಗಿ ತಲೆಯನ್ನು ಮಸಾಜ್ ಮಾಡಿ.ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಈ ಎಣ್ಣೆಯಲ್ಲಿ ಜಾರುಕ ಮತ್ತು ಗುಣಪಡಿಸುವ ಗುಣಗಳಿವೆ. ತಲೆತುರಿಕೆಗೆ ಸಾಸಿವೆ ಎಣ್ಣೆಯೂ ಉತ್ತಮವಾಗಿದೆ. ಒಂದು ಚಿಕ್ಕ ಬಟ್ಟಲಿನಲ್ಲಿ ಕೊಂಚವೇ ಪ್ರಮಾಣದ ಸಾಸಿವೆ ಎಣ್ಣೆಯನ್ನು ಬಿಸಿಮಾಡಿ. ಈ ಎಣ್ಣೆ ಕೊಂಚ ತಣಿದ ಬಳಿಕ ಬೆರಳುಗಳಿಂದ ತಲೆಗೂದಲ ಬುಡಗಳಿಗೆ ತಾಕುವಂತೆ ನಯವಾಗಿ ಮಸಾಜ್ ಮಾಡಿಕೊಳ್ಳಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಮಸಾಜ್ ಮುಂದುವರೆಸಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತಲೆಯನ್ನು ತೊಳೆದುಕೊಳ್ಳಿ. ಸಾಧ್ಯವಾದರೆ ರಾತ್ರಿ ಮಲಗುವ ಮುನ್ನ ಸಾಸಿವೆ ಎಣ್ಣೆಯಿಂದ ತಲೆಯನ್ನು ಮಸಾಜ್ ಮಾಡಿಕೊಂಡು ಇಡಿಯ ರಾತ್ರಿ ಹಾಗೇ ಇರಲು ಬಿಟ್ಟು ಬೆಳಿಗ್ಗೆ ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ. ಈ ಮೂಲಕ ಸಾಸಿವೆ ಎಣ್ಣೆಗೆ ಚರ್ಮದ ಸೂಕ್ಷ್ಮರಂಧ್ರಗಳಿಂದ ಆಳಕ್ಕಿಳಿದು ತುರಿಕೆಗೆ ಕಾರಣವಾದ ಕ್ರಿಮಿಗಳನ್ನು ಪೂರ್ಣವಾಗಿ ನಾಶಪಡಿಸಲು ಸಾಧ್ಯವಾಗುತ್ತದೆ.ಸಾಸಿವೆ ಎಣ್ಣೆ- ಆರೋಗ್ಯಕ್ಕೂ ಸೈ, ಅಡುಗೆಗೂ ಜೈ

 
English summary

Amazing Home Remedies To Treat Itchy Scalp

Most probably itchy scalp is due to not washing your hair properly, dandruff, and fungus over scalp or may be due to other infections on the scalp. So, here are the best home remedies to treat itchy scalp. Take a look.
Subscribe Newsletter